ಭಾರತ್ ಮಾತಾ ಕಿ ಜೈ
ಭಾರತ್ ಮಾತಾ ಕಿ ಜೈ
ಭಾರತ್ ಮಾತಾ ಕಿ ಜೈ
ವೇದಿಕೆಯಲ್ಲಿರುವ ಅಸ್ಸಾಂನ ರಾಜ್ಯಪಾಲರೇ, ಸಂಸತ್ತಿನ ನನ್ನ ಸಹೋದ್ಯೋಗಿಗಳೇ, ವಿವಿಧ ಮಂಡಳಿಗಳ ಮತ್ತು ಸಂಘಟನೆಗಳ ನಾಯಕರೇ, ಎನ್.ಡಿ.ಎಫ್.ಬಿ.ಯ ವಿವಿಧ ಘಟಕಗಳ ನಾಯಕರೇ, ಇತರ ಗಣ್ಯರೇ ಮತ್ತು ಇಲ್ಲಿಗೆ ನನ್ನನ್ನು ಆಶೀರ್ವದಿಸಲು ಬಹಳ ದೊಡ್ದ ಸಂಖ್ಯೆಯಲ್ಲಿ ಬಂದಿರುವ ನನ್ನ ಸಹೋದರ ಹಾಗು ಸಹೋದರಿಯರೇ
ನಾನು ಅಸ್ಸಾಂಗೆ ಅನೇಕ ಬಾರಿ ಬಂದಿದ್ದೇನೆ. ನಾನು ಈ ಸ್ಥಳಕ್ಕೂ ಭೇಟಿ ನೀಡಿದ್ದೇನೆ. ನಾನು ಈ ವಲಯಕ್ಕೆ ಹಲವು ವರ್ಷಗಳಿಂದ ಮತ್ತು ದಶಕಗಳಿಂದ ಭೇಟಿ ನೀಡುತ್ತಾ ಬಂದಿದ್ದೇನೆ.ಪ್ರಧಾನ ಮಂತ್ರಿಯಾದ ಬಳಿಕವೂ ನಾನು ನಿಮ್ಮನ್ನು ನೋಡಲು ಮತ್ತೆ ಮತ್ತೆ ಬರುತ್ತಿದ್ದೇನೆ. ಆದರೆ ಇಂದು ನಿಮ್ಮ ಮುಖದಲ್ಲಿ ಕಾಣುತ್ತಿರುವ ಉತ್ಸಾಹ ವರ್ಣರಂಜಿತ ’ಅರೋನೈ’ ಮತ್ತು ’ಡೋಖೋನಾ’ ಕ್ಕಿಂತಲೂ ಹೆಚ್ಚು ತೃಪ್ತಿದಾಯಕವಾಗಿದೆ.
ನಾನು ಸಾರ್ವಜನಿಕ ಮತ್ತು ರಾಜಕೀಯ ಜೀವನದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೋಡಿದ್ದೇನೆ ಮತ್ತು ಅವುಗಳಲ್ಲಿ ಭಾಷಣ ಮಾಡಿದ್ದೇನೆ, ಆದರೆ ನನ್ನ ಜೀವನದಲ್ಲೆಂದೂ ಇಂತಹ ಜನಸಾಗರವನ್ನು ಹಿಂದೆಂದೂ ನೋಡಿರಲಿಲ್ಲ. ರಾಜಕೀಯ ತಜ್ಞರಾದವರು ಖಂಡಿತವಾಗಿಯೂ ಹೇಳಬಹುದು, ವಿಕ್ರಂ ಅವರಿಂದು ಆಯೋಜಿಸಿದ ಈ ಕಾರ್ಯಕ್ರಮ ಸ್ವಾತಂತ್ರ್ಯೋತ್ತರದ ಅತ್ಯಂತ ದೊಡ್ಡ ಕಾರ್ಯಕ್ರಮ ಎಂಬುದಾಗಿ. ಮತು ಇದು ಸಾಧ್ಯವಾಗಿರುವುದು ನಿಮ್ಮಿಂದಾಗಿ. ನಾನು ಹೆಲಿಕಾಪ್ಟರಿನಿಂದ ಜನಸಾಗರವನ್ನು ನೋಡಿದೆ. ಸೇತುವೆಯ ಮೇಲೆ ನೂರಾರು ಜನರು ನಿಂತಿರುವುದನ್ನು ನೋಡಿದೆ ಮತ್ತು ಯಾರಾದರೂ ಬೀಳಬಹುದು ಎಂದು ಆತಂಕವನ್ನೂ ಅನುಭವಿಸಿದೆ.
ಸಹೋದರರೇ ಮತ್ತು ಸಹೋದರಿಯರೇ
ನೀವೆಲ್ಲರೂ ಮತ್ತು ತಾಯಂದಿರು ಮತ್ತು ಸಹೋದರಿಯರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನನ್ನನ್ನು ಆಶೀರ್ವದಿಸಲು ಬಂದಿದ್ದೀರಿ. ಹೀಗಾಗಿ ನನ್ನ ಆತ್ಮವಿಶ್ವಾಸ ಇನ್ನೂ ಸ್ವಲ್ಪ ಹೆಚ್ಚಾಗಿದೆ. ಕೆಲವೊಮ್ಮೆ ಜನರು ಕೋಲಿನಿಂದ ಹೊಡೆಯುವ ಮಾತುಗಳನ್ನು ಆಡುತ್ತಾರೆ; ಆದರೆ ಮೋದಿಯನ್ನು ಯಾವುದೂ ಘಾಸಿಗೊಳಿಸದು. ಯಾಕೆಂದರೆ ಮೋದಿಗೆ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದದ ಬೃಹತ್ ರಕ್ಷಣಾ ಕವಚವಿದೆ. ನಾನು ನಿಮ್ಮೆಲ್ಲರಿಗೂ ವಂದಿಸುತ್ತೇನೆ. ತಾಯಂದಿರೇ ಮತ್ತು ಸಹೋದರಿಯರೇ, ನನ್ನ ಸಹೋದರರೇ ಮತ್ತು ಸಹೋದರಿಯರೇ , ನನ್ನ ಯುವ ಸ್ನೇಹಿತರೇ, ಇಂದು ನಾನು ಇಲ್ಲಿಗೆ ಬಂದಿರುವುದು ನನ್ನ ಹೃದಯಾಂತರಾಳದಿಂದ ನಿಮ್ಮನ್ನು ಅಭಿನಂದಿಸಲು. ಅಸ್ಸಾಂನ ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರಿಗೆ ಹೊಸ ವಿಶ್ವಾಸ ಮೂಡಿಸಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ. ನಿನ್ನೆ ಇಡೀ ದೇಶ ನೀವು ಹೇಗೆ ಪ್ರತೀ ಗ್ರಾಮಗಳಲ್ಲಿ ಮೋಟಾರು ಸೈಕಲಿನಲ್ಲಿ ಮೆರವಣಿಗೆಗಳನ್ನು ಆಯೋಜಿಸಿದ್ದೀರಿ ಮತ್ತು ಇಡೀ ಪ್ರದೇಶವನ್ನು ದೀಪಗಳಿಂದ ಬೆಳಗಿದಿರಿ ಎಂಬುದನ್ನು ನೋಡಿದೆ. ಬಹುಷಃ ಅನೇಕ ದೀಪಾವಳಿಯಲ್ಲೂ ಬೆಳಗಿರಲಿಕ್ಕಿಲ್ಲ. ನಾನು ನಿನ್ನೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಟಿ.ವಿ.ಗಳಲ್ಲಿ ನೋಡಿದೆ, ಅಲ್ಲಿ ಎಲ್ಲೆಲ್ಲೂ ಹಚ್ಚಿದ ದೀಪಗಳ ದೃಶ್ಯಗಳಿದ್ದವು. ಇಡೀ ದೇಶ ಇದರ ಬಗ್ಗೆ ಮಾತನಾಡುತ್ತಿತ್ತು. ಸಹೋದರರೇ, ಮತ್ತು ಸಹೋದರಿಯರೇ, ಇದು ಸಾವಿರಾರು ಮತ್ತು ಲಕ್ಷಾಂತರ ದೀಪಗಳನ್ನು ಹಚ್ಚುವುದು ಮಾತ್ರವಲ್ಲ, ದೇಶದ ಬಹಳ ಪ್ರಮುಖ ಭಾಗವಾದ ಇಲ್ಲಿ ಹೊಸ ಶುಭೋದಯ.
ಸಹೋದರರೇ ಮತ್ತು ಸಹೋದರಿಯರೇ,
ತಮ್ಮ ಕರ್ತವ್ಯದ ಹಾದಿಯಲ್ಲಿ ದೇಶಕ್ಕಾಗಿ ಸಾವಿರಾರು ಹುತಾತ್ಮರು ತಮ್ಮ ಜೀವತ್ಯಾಗ ಮಾಡಿದನ್ನು ಸ್ಮರಿಸಬೇಕಾದ ದಿನ ಇಂದು . ಬೊಡೋಫಾ ಉಪೇಂದ್ರನಾಥ್ ಬ್ರಹ್ಮ ಮತ್ತು ರೂಪನಾಥ್ ಬ್ರಹ್ಮ ಅವರಂತಹ ದೊಡ್ಡ, ಶ್ರೇಷ್ಟ ನಾಯಕರು ನೀಡಿದ ಕೊಡುಗೆಯನ್ನು ಇಲ್ಲಿ ಸ್ಮರಿಸಬೇಕಾದ ದಿನ. ಇಂದು ನಾನು ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇನೆ. –ಅಖಿಲ ಬೋಡೋ ವಿದ್ಯಾರ್ಥಿ ಸಂಘಟನೆ ( ಎ.ಬಿ.ಎಸ್.ಯು.), ಬೋಡೋಲ್ಯಾಂಡಿನ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ (ಎನ್.ಡಿ.ಎಫ್.ಬಿ.) ಗಳು ಈ ಒಪ್ಪಂದಕ್ಕಾಗಿ ಬಹಳ ಪ್ರಮುಖವಾದ ಮತ್ತು ಬಹಳ ಧನಾತ್ಮಕವಾದ ಪಾತ್ರವನ್ನು ವಹಿಸಿವೆ. ಬಿ.ಟಿ.ಸಿ. ಮುಖ್ಯಸ್ಥ ಶ್ರೀ ಹಗ್ರಾಮ ಮಹಿಲಾರೆ ಮತ್ತು ಅಸ್ಸಾಂ ಸರಕಾರಗಳು ಇದರಲ್ಲಿ ಮುಂಚೂಣಿ ಪಾತ್ರವನ್ನು ವಹಿಸಿವೆ. ಇಡೀ ಭಾರತದ ಪರವಾಗಿ ನಾನವರನ್ನು ಅಭಿನಂದಿಸುತ್ತೇನೆ. ಇಂದು 130 ಕೋಟಿ ಭಾರತೀಯರು ನಿಮ್ಮನ್ನು ಅಭಿನಂದಿಸುತ್ತಿದ್ದಾರೆ ಮತ್ತು ಧನ್ಯವಾದ ಹೇಳುತ್ತಿದ್ದಾರೆ.
ಸ್ನೇಹಿತರೇ,
ಬೋಡೋ ಅನುಯಾಯಿಗಳಾದ ನೀವೆಲ್ಲರೂ ಮಾಡಿದ ಪ್ರಯತ್ನಗಳನ್ನು ಸಂಭ್ರಮಿಸಬೇಕಾದ ಸಂದರ್ಭವಿದು. ಇಡೀ ವಲಯ, ಸಮಾಜ, ಗುರುಗಳು, ಬುದ್ದಿ ಜೀವಿಗಳು ಈ ವಲಯದ ಕಲೆ ಮತ್ತು ಸಾಹಿತ್ಯ ಸಂಭ್ರಮ ಪಡುವ ಸಂದರ್ಭದ ದಿನವಿದು. ನಿಮ್ಮ ಬಗ್ಗೆ ಹೆಮ್ಮೆಪಡುವ ದಿನವಿದು. ನಿಮ್ಮೆಲ್ಲರ ಬೆಂಬಲದೊಂದಿಗೆ ಶಾಶ್ವತ ಶಾಂತಿಯ ಈ ಪಥವನ್ನು ಹುಡುಕಲಾಯಿತು. ಅಸ್ಸಾಂ ಸಹಿತ ಇಡೀ ಈಶಾನ್ಯಕ್ಕೆ 21 ನೇ ಶತಮಾನದಲ್ಲಿ ಹೊಸ ಆರಂಭವನ್ನು , ಹೊಸ ಅರುಣೋದಯವನ್ನು ಮತ್ತು ಹೊಸ ಪ್ರೇರಣೆಯನ್ನು ಸ್ವಾಗತಿಸಲು ಅವಕಾಶ ಒದಗಿಸಿದ ದಿನ ಇದು!. ಅಭಿವೃದ್ದಿ ಮತ್ತು ವಿಶ್ವಾಸದ ಮುಖ್ಯಭೂಮಿಕೆಯನ್ನು ಬಲಪಡಿಸಬೇಕಾದ ಮತ್ತು ನಿರ್ಧಾರಗಳನ್ನು ಮಾಡಬೇಕಾದ ದಿನವಿದು. ಈಗ ಹಿಂಸಾಚಾರದ ಕತ್ತಲೆ ಮತ್ತೆ ಈ ಭೂಮಿಗೆ ಮರಳಲು ಅವಕಾಶ ಕೊಡಬೇಡಿ. ಈಗ ಈ ಭೂಮಿಯ ಮೇಲೆ ಯಾವುದೇ ತಾಯಿಯ ಪುತ್ರ, ಪುತ್ರಿ ಅಥವಾ ಸಹೋದರಿಯ ಸಹೋದರ, ಅಥವಾ ಸಹೋದರನ ಸಹೋದರಿಯ ರಕ್ತ ಚೆಲ್ಲಬಾರದು. ಇನ್ನು ಇಲ್ಲಿ ಹಿಂಸಾಚಾರ ಇರಲಾರದು. ಗನ್ ಹಿಡಿದುಕೊಂಡು ಕಾಡುಗಳಲ್ಲಿ ಓಡಾಡುತ್ತಿದ್ದ ಮತ್ತು ನಿರಂತರ ಜೀವಾಪಾಯದಲ್ಲಿರುತ್ತಿದ್ದ ಪುತ್ರರ ತಾಯಂದಿರು ಮತ್ತು ಸಹೋದರಿಯರು ನನ್ನನ್ನು ಆಶೀರ್ವದಿಸುತ್ತಿದ್ದಾರೆ. ಇಂದು ಆ ಹುಡುಗರು ನೆಮ್ಮದಿಯಿಂದ ತಾಯಿಯ ಮಡಿಲಲ್ಲಿ ತಲೆ ಇಟ್ಟು ಮಲಗುವಂತಹ ಸ್ಥಿತಿ ಬಂದಿದೆ. ಆ ತಾಯಂದಿರು, ಸಹೋದರಿಯರು ನನ್ನನ್ನು ಆಶೀರ್ವಾದಿಸುತ್ತಿದ್ದಾರೆ. ಹಲವು ದಶಕಗಳಿಂದ ಹಗಲು ರಾತ್ರಿ ಗುಂಡುಗಳ ಬಳಕೆಯಾಗುತ್ತಿರುವುದನ್ನು ಕಲ್ಪಿಸಿಕೊಳ್ಳಿ. ಆ ರೀತಿಯ ಬದುಕಿನಿಂದ ಹೊರಬರಲು ಇಂದು ಹೊಸ ಹಾದಿಯನ್ನು ತೆರೆಯಲಾಗಿದೆ. ಶಾಂತಿ ಪ್ರೀತಿಸುವ ಅಸ್ಸಾಂ, ಶಾಂತಿ ಪ್ರೀತಿಸುವ ಮತ್ತು ಅಭಿವೃದ್ದಿ ಸ್ನೇಹಿ ಈಶಾನ್ಯವನ್ನು ನವಭಾರತದ ಹೊಸ ನಿರ್ಧಾರಗಳ ಭಾಗವಾಗಲು ನನ್ನ ಹೃದಯಾಂತರಾಳದಿಂದ ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ
ಸ್ನೇಹಿತರೇ,
ಈಶಾನ್ಯದಲ್ಲಿ ಶಾಂತಿಯ ಮತ್ತು ಅಭಿವೃದ್ದಿಯ ಹೊಸ ಅಧ್ಯಾಯ ಆರಂಭಗೊಂಡಿರುವುದು ಒಂದು ಚಾರಿತ್ರಿಕ ಸಂದರ್ಭ. ಮತ್ತು ಇದು ಮಹಾತ್ಮಾ ಗಾಂಧಿ ಅವರ 150 ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಆಗುತ್ತಿರುವುದೂ ಕಾಕತಾಳೀಯ. ಈ ಚಾರಿತ್ರಿಕ ಘಟನೆಯ ಪ್ರಸ್ತುತತೆ ಇದರಿಂದ ಇನ್ನೂ ಹೆಚ್ಚಾಗಿದೆ. ಮತ್ತು ಇದು ಭಾರತವಲ್ಲದೆ ಇಡೀ ವಿಶ್ವಕ್ಕೇ ಪ್ರೇರಣೆಯಾಗಿದೆ. ಇದು ಹಿಂಸೆಯ ಪಥವನ್ನು ತೊರೆದು ಅಹಿಂಸೆಯ ಪಥವನ್ನು ಅಂಗೀಕರಿಸಿದ ಸಂದೇಶವನ್ನು ನೀಡುತ್ತದೆ. ಮಹಾತ್ಮಾ ಗಾಂಧಿ ಹೇಳುತ್ತಿದ್ದರು-ನಾವು ಅಹಿಂಸೆಯಿಂದ ಏನೇನೆಲ್ಲಾ ಪಡೆಯುತ್ತೇವೋ ಅದು ಎಲ್ಲರಿಗೂ ಸಮ್ಮತವಾಗಿರುತ್ತದೆ ಎಂಬುದಾಗಿ. ಈಗ ಅಸ್ಸಾಂನಲ್ಲಿರುವ ಅನೇಕ ಗೆಳೆಯರು ಪ್ರಜಾಪ್ರಭುತ್ವವನ್ನು ಒಪ್ಪುವುದರ ಜೊತೆಗೆ ಶಾಂತಿಯ ಮತ್ತು ಅಹಿಂಸೆಯ ಪಥವನ್ನು ಅಂಗೀಕರಿಸಿದ್ದಾರೆ ಮತ್ತು ಭಾರತದ ಸಂವಿಧಾನವನ್ನು ಮುಂಚೂಣಿಯಲ್ಲಿ ಇಟ್ಟಿದ್ದಾರೆ.
ಸ್ನೇಹಿತರೇ,
ನಾವು ಈ ಚಾರಿತ್ರಿಕ ಒಪ್ಪಂದವನ್ನು ಕೋಕ್ರಾಜಹರ್ ನಲ್ಲಿ ಆಚರಿಸುತ್ತಿರಬೇಕಾದರೆ , ಗೋಲಾಘಾಟ್ ನಲ್ಲಿ ಶ್ರೀಮಂತ ಶಂಕರದೇವ ಸಂಘದ ವಾರ್ಷಿಕ ಸಮ್ಮೇಳನ ನಡೆಯುತ್ತಿರುವುದಾಗಿ ನನಗೆ ತಿಳಿಸಲಾಗಿದೆ.
मोई मोहापुरुख श्रीमंतो होंकोर देवोलोई गोभीर प्रोनिपात जासिसु।
मोई लोगोत ओधिबेखोन खोनोरु होफोलता कामना कोरिलों !!
ನಾನು ಶ್ರೇಷ್ಟ ದೇವ ಶಂಕರ ದೇವರಿಗೆ ಶಿರಬಾಗುತ್ತೇನೆ.
ಸಮಾವೇಶ ಎಲ್ಲಾ ರೀತಿಯಿಂದಲೂ ಯಶಸ್ವಿಯಾಗಲಿ.
ಸಹೋದರರೇ ಮತ್ತು ಸಹೋದರಿಯರೇ,
ಶ್ರೀಮಂತ್ ಶಂಕರ ದೇವ್ ಜೀ ಅವರು ಅಸ್ಸಾಂನ ಸಾಹಿತ್ಯ ಮತ್ತು ಭಾಷೆಯನ್ನು ಶ್ರೀಮಂತಗೊಳಿಸುವ ಹಾದಿಯನ್ನು ತೋರಿಸಿಕೊಟ್ಟರು ಜೊತೆಗೆ ಭಾರತವನ್ನು ಮತ್ತು ಇಡೀಯ ವಿಶ್ವವನ್ನು ಶ್ರೀಮಂತಗೊಳಿಸುವ ಹಾದಿಯನ್ನೂ ತೋರಿಸಿದರು. ಅಸ್ಸಾಂ ಸಹಿತ ಇಡೀ ವಿಶ್ವಕ್ಕೆ ಶಂಕರ ದೇವ್ ಜೀ ಅವರು ಮಾರ್ಗದರ್ಶನ ಮಾಡಿದರು.
सत्य शौच अहिंसा शिखिबे समदम।
सुख दुख शीत उष्ण आत हैब सम ।।
ಅಂದರೆ , ಸತ್ಯವನ್ನು, ಅಹಿಂಸೆಯನ್ನು, ಕ್ಷಮೆ ಇತ್ಯಾದಿಗಳ ಬಗ್ಗೆ ಅರಿತುಕೊಳ್ಳಿ. ಸಂತೋಷ, ದುಖಃ, ಉಷ್ಣ ಅಥವಾ ತಂಪು-ಈ ಎಲ್ಲದಕ್ಕೂ ಒಗ್ಗಿಕೊಳ್ಳುವಂತೆ ನಿಮ್ಮನ್ನು ನೀವು ತಯಾರು ಮಾಡಿಕೊಳ್ಳಿ. ಈ ಚಿಂತನೆಗಳಲ್ಲಿ ಸಮಾಜದ ಅಭಿವೃದ್ದಿಯು ವೈಯಕ್ತಿಕ ಅಭಿವೃದ್ದಿಯನ್ನು ಅವಲಂಬಿಸಿದೆ ಎಂಬ ಸಂದೇಶವಿದೆ. ಇಂದು, ದಶಕಗಳ ಬಳಿಕ ಈ ಹಾದಿಯನ್ನು ವೈಯಕ್ತಿಕ ಅಭಿವೃದ್ದಿ ಮತ್ತು ಈ ಇಡೀಯ ವಲಯದ ಸಮಾಜದ ಅಭಿವೃದ್ದಿಗಾಗಿ ಬಲಪಡಿಸಲಾಗಿದೆ.
ಸಹೋದರರೇ ಮತ್ತು ಸಹೋದರಿಯರೇ,
ಬೋಡೋ ಲ್ಯಾಂಡ್ ಚಳವಳಿಯ ಭಾಗವಾಗಿರುವರಿಗೆ ರಾಷ್ಟ್ರದ ಮುಖ್ಯವಾಹಿನಿಗೆ ಬರುವುದಕ್ಕೆ ನಾನು ಸ್ವಾಗತಿಸುತೇನೆ. ಬೋಡೋ ಲ್ಯಾಂಡ್ ಚಳವಳಿಯ ಭಾಗವಾಗಿದ್ದ ಎಲ್ಲರ ಆಶೋತ್ತರಗಳನ್ನು, ನಿರೀಕ್ಷೆಗಳನ್ನು ಐದು ದಶಕಗಳ ಬಳಿಕ ಸಲ್ಲಬೇಕಾದ ಗೌರವಗಳೊಂದಿಗೆ, ಸಂಪೂರ್ಣ ಸೌಹಾರ್ದತೆಯೊಂದಿಗೆ ಸ್ವೀಕರಿಸಲಾಗಿದೆ. ಎರಡೂ ಕಡೆಯವರು ಸಮೃದ್ದಿಗಾಗಿ ಮತ್ತು ಅಭಿವೃದ್ದಿಗಾಗಿ ಮತ್ತು ಶಾಂತಿಗಾಗಿ ಹಿಂಸಾಚಾರಕ್ಕೆ ಪೂರ್ಣವಿರಾಮ ಹಾಕಲು ಜಂಟಿಯಾಗಿ ಒಪ್ಪಿದ್ದಾರೆ. ನನ್ನ ಸಹೋದರರೇ ಮತ್ತು ಸಹೋದರಿಯರೇ, ಇಡೀ ದೇಶ ಇಂತಹ ಅವಕಾಶಕ್ಕಾಗಿ ಎದುರು ನೋಡುತ್ತಿತ್ತು. ಎಲ್ಲಾ ಟಿ.ವಿ. ಚಾನೆಲ್ ಗಳು ಇಂದು ನಿಮ್ಮನ್ನು ತೋರಿಸುತ್ತಿವೆ ಯಾಕೆಂದರೆ ನೀವು ಇತಿಹಾಸವನ್ನು ನಿರ್ಮಾಣ ಮಾಡಿದ್ದೀರಿ, ಭಾರತದಲ್ಲಿ ಹೊಸ ಪಂಥವನ್ನು ರಚಿಸಿದ್ದೀರಿ. ಶಾಂತಿಯ ಹಾದಿಗೆ ನೀವು ಹೊಸ ಶಕ್ತಿಯನ್ನು ಕೊಟ್ಟಿದ್ದೀರಿ.
ಸಹೋದರರೇ ಮತ್ತು ಸಹೋದರಿಯರೇ,
ಈ ಚಳವಳಿಗೆ ಸಂಬಂಧಿಸಿದ ಎಲ್ಲಾ ಬೇಡಿಕೆಗಳನ್ನು ಒಪ್ಪಲಾಗಿದೆ , ಅದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಈಗ ಅದು ಕೊನೆಗೊಂಡಿದೆ. 1993 ಮತ್ತು 2003 ರ ಒಪ್ಪಂದಗಳು ಸಂಪೂರ್ಣ ಶಾಂತಿಯನ್ನು ಸ್ಥಾಪಿಸಲಾಗಲಿಲ್ಲ. ಈಗ ಚಾರಿತ್ರಿಕ ಒಪ್ಪಂದದ ಬಳಿಕ ಕೇಂದ್ರ ಸರಕಾರ, ಅಸ್ಸಾಂ ಸರಕಾರ ಮತ್ತು ಬೋಡೋ ಚಳವಳಿಯಲ್ಲಿದ್ದ ಸಂಘಟನೆಗಳು ಒಪ್ಪಿಕೊಂಡಿವೆ, ಅಲ್ಲಿ ಯಾವುದೇ ಬೇಡಿಕೆ ಬಾಕಿಯಾಗುಳಿದಿಲ್ಲ ಮತ್ತು ಅಭಿವೃದ್ದಿಗೇ ಮೊದಲ ಹಾಗು ಕೊನೆಯ ಆದ್ಯತೆಯಾಗಿದೆ.
ಸ್ನೇಹಿತರೇ,
ನನ್ನನ್ನು ನಂಬಿ; ನಾನು ನಿಮಗಾಗಿ, ನಿಮ್ಮ ದುಖಃಗಳಿಗೆ ಸಂಬಂಧಿಸಿ, ನಿಮ್ಮ ಆಶೋತ್ತರಗಳು, ನಿಮ್ಮ ನಿರೀಕ್ಷೆಗಳು ಮತ್ತು ನಿಮ್ಮ ಮಕ್ಕಳ ಭವ್ಯ ಭವಿಷ್ಯಕ್ಕೆ ಸಂಬಂಧಿಸಿ ಅವಶ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಾನು ಹಿಂದೆ ಸರಿಯಲಾರೆ. ನೀವು ಬಂದೂಕುಗಳನ್ನು ಬಿಸಾಡಿ ಮರಳಿ ಬಂದಿರುವಾಗ, ಬಾಂಬ್ ಮತ್ತು ಪಿಸ್ತೂಲುಗಳ ಹಾದಿಯನ್ನು ಬಿಟ್ಟು ಬಂದಿರುವಾಗ , ನೀವು ಎಂತಹ ಸಂದರ್ಭದಲ್ಲಿ ಮರಳಿ ಬಂದಿದ್ದೀರಿ ಎಂಬುದು ನನಗೆ ಗೊತ್ತಿದೆ. ಅದನ್ನು ನಾನು ಊಹಿಸಬಲ್ಲೆ, ಈ ಶಾಂತಿ ಪ್ರಕ್ರಿಯೆಯ ಹಾದಿಯಲ್ಲಿ ಒಂದೇ ಒಂದು ಮುಳ್ಳು ಕೂಡಾ ನಿಮ್ಮನ್ನು ಚುಚ್ಚದಂತೆ ಸದಾ ನಾನು ಜಾಗೃತೆ ವಹಿಸಿ ನೋಡಿಕೊಳ್ಳುತೇನೆ. ಯಾಕೆಂದರೆ ಈ ಶಾಂತಿಯ ಹಾದಿ, ಗೌರವ, ಪ್ರೀತಿಯ ಮತ್ತು ಅಹಿಂಸೆಯ ಹಾದಿಯಿಂದಾಗಿ ನೀವು ನೋಡುತ್ತಿರಿ-ಇಡೀ ಅಸ್ಸಾಂ ನಿಮ್ಮ ಹೃದಯ ಗೆಲ್ಲಲಿದೆ, ಇಡೀಯ ಭಾರತ ನಿಮ್ಮ ಹೃದಯ ಗೆಲ್ಲಲಿದೆ, ಯಾಕೆಂದರೆ ನೀವು ಸರಿಯಾದ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ.
ಸ್ನೇಹಿತರೇ,
ಈ ಒಪ್ಪಂದದ ಪ್ರಯೋಜನ ಬೋಡೋ ಬುಡಕಟ್ಟಿನ ಸದಸ್ಯರಿಗೆ ಮಾತ್ರವಲ್ಲ ಇತರ ಸಮಾಜದ ಜನತೆಗೂ ವಿಸ್ತರಣೆಯಾಗಲಿದೆ. ಈ ಒಪ್ಪಂದದಡಿಯಲ್ಲಿ ಬೋಡೋ ಭೂಪ್ರದೇಶ ಮಂಡಳಿಯ ಅಧಿಕಾರವನ್ನು ವಿಸ್ತರಿಸಲಾಗಿದೆ ಮತ್ತು ಇನ್ನಷ್ಟು ಬಲಪಡಿಸಲಾಗಿದೆ. ಇದು ಎಲ್ಲರಿಗೂ ಗೆಲುವು ದಕ್ಕಿದಂತಹ ಅತ್ಯಂತ ದೊಡ್ಡ ಸಂಗತಿ ಎಂದರೆ ಶಾಂತಿಯು ಗೆದ್ದಿದೆ, ಮತ್ತು ಮಾನವತೆ ಗೆದ್ದಿದೆ. ನೀವು ಎದ್ದು ನಿಂತು ನನ್ನ ಗೌರವಾರ್ಥ ಚಪ್ಪಾಳೆ ತಟ್ಟಿದಿರಿ. ನೀವು ಮತ್ತೊಮ್ಮೆ ಎದ್ದು ನಿಂತು ಮಗದೊಮ್ಮೆ ಚಪ್ಪಾಳೆ ತಟ್ಟಬೇಕು ಎಂದು ಆಶಿಸುತ್ತೇನೆ-ನನಗಾಗಿ ಅಲ್ಲ, ಶಾಂತಿಗಾಗಿ; ನಾನು ಅದಕ್ಕಾಗಿ ನಿಮ್ಮೆಲ್ಲರಿಗೂ ಚಿರಋಣಿ.
ಒಪ್ಪಂದದ ಅನ್ವಯ ಬಿ.ಟಿ.ಎ.ಡಿ.ಅಡಿಯಲ್ಲಿ ಬರುವ ಭೂಪ್ರದೇಶದ ಗಡಿ ನಿಗದಿ ಮಾಡಲು ಆಯೋಗವನ್ನು ರಚಿಸಲಾಗುವುದು. ಈ ವಲಯಕ್ಕೆ ಅಭಿವೃದ್ದಿಗಾಗಿ 1500 ಕೋ.ರೂ.ಗಳ ವಿಶೇಷ ಅಭಿವೃದ್ದಿ ಪ್ಯಾಕೇಜ್ ನೀಡಲಾಗುವುದು, ಇದು ಕೋಕ್ರಾಜಹರ್, ಚಿರಾಂಗ್, ಬಕ್ಸಾ ಮತ್ತು ಉದಾಲ್ಗುರಿ ಜಿಲ್ಲೆಗಳಿಗೆ ಬಹಳ ಪ್ರಯೋಜನಗಳನ್ನು ತರಲಿದೆ. ಇದು ಬೋಡೋ ಬುಡಕಟ್ಟಿನ ಎಲ್ಲಾ ಹಕ್ಕುಗಳನ್ನು , ಬೋಡೋ ಸಂಸ್ಕೃತಿಯ ಎಲ್ಲಾ ಅಭಿವೃದ್ದಿ, ಮತ್ತು ಅವರ ರಕ್ಷಣೆ ಖಾತ್ರಿಪಡಿಸುವ ಕ್ರಮ . ಈ ಒಪ್ಪಂದದ ಬಳಿಕ ಈ ಪ್ರದೇಶದಲ್ಲಿ ಎಲ್ಲಾ ಪ್ರಗತಿ, ರಾಜಕೀಯ, ಆರ್ಥಿಕ ಮತ್ತು ಶಿಕ್ಷಣ ಸಹಿತ ಆಗಲಿದೆ.
ನನ್ನ ಸಹೋದರರೇ ಮತ್ತು ಸಹೋದರಿಯರೇ,
ಸರಕಾರ ಈಗ ಅಸ್ಸಾಂ ಒಪ್ಪಂದದ ಸೆಕ್ಷನ್ 6 ನ್ನು ಸಾಧ್ಯವಾದಷ್ಟು ಬೇಗ ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದ ಸಮಿತಿಯ ವರದಿ ಬರುತ್ತಲೇ, ಕೇಂದ್ರ ಸರಕಾರವು ಮುಂದಿನ ಕ್ರಮಗಳನ್ನು ತ್ವರಿತ ಗತಿಯಿಂದ ಕೈಗೊಳ್ಳುತ್ತದೆ ಎಂದು ನಾನು ಅಸ್ಸಾಂನ ಜನತೆಗೆ ಭರವಸೆ ನೀಡುತ್ತೇನೆ. ನಾವು ಸುಳ್ಳು ಭರವಸೆಗಳನ್ನು ನೀಡುವವರಲ್ಲ. ಜವಾಬ್ದಾರಿ ತೆಗೆದುಕೊಳ್ಳುವುದು ನಮ್ಮ ಸ್ವಭಾವ. ಆದುದರಿಂದ ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಅಸ್ಸಾಂ ವಿಷಯವನ್ನು ನಾವು ಬಗೆಹರಿಸಿದ್ದೆವೆ.
ಸ್ನೇಹಿತರೇ,
ಇಂದು ಬೋಡೋ ವಲಯದಲ್ಲಿ ಹೊಸ ನಿರೀಕ್ಷೆಗಳು, ಹೊಸ ಕನಸುಗಳು ಮತ್ತು ಹೊಸ ಉತ್ಸಾಹಗಳು ಅರಳಿವೆ, ನಿಮ್ಮೆಲ್ಲರ ಮೇಲಿನ ಜವಾಬ್ದಾರಿ ಹಲವು ಪಟ್ಟು ಹೆಚ್ಚಿದೆ. ಬೋಡೋ ಭೂಪ್ರದೇಶ ಮಂಡಳಿ ಈಗ ಪ್ರತಿಯೊಂದು ಸಮಾಜವನ್ನು ಗಮನದಲ್ಲಿಟ್ಟುಕೊಂಡು , ಯಾವುದೇ ತಾರತಮ್ಯ ಇಲ್ಲದೆ ಹೊಸ ಮಾದರಿಯ ಅಭಿವೃದ್ದಿ ಮಾದರಿಯನ್ನು ರೂಪಿಸುವ ಬಗ್ಗೆ ನನಗೆ ವಿಶ್ವಾಸವಿದೆ. ಅಸ್ಸಾಂ ಸರಕಾರ ಕೂಡಾ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿರುವುದಕ್ಕೆ ನಾನು ಸಂತೋಷಪಡುತ್ತೇನೆ. ಮತ್ತು ಬೋಡೋ ಭಾಷೆ, ಸಂಸ್ಕೃತಿಯ ಬಗ್ಗೆ ಪ್ರಮುಖ ಯೋಜನೆಗಳನ್ನು ಅದು ಕೈಗೆತ್ತಿಕೊಂಡಿದೆ. ನಾನು ಹೃದಯಪೂರ್ವಕವಾಗಿ ಅಸ್ಸಾಂ ರಾಜ್ಯ ಸರಕಾರವನ್ನು ಅಭಿನಂದಿಸುತ್ತೇನೆ. ಬೋಡೋ ಭೂಪ್ರದೇಶ ಮಂಡಳಿ , ಅಸ್ಸಾಂ ಸರಕಾರ ಮತ್ತು ಕೇಂದ್ರ ಸರಕಾರಗಳು ಈಗ ಒಗ್ಗೂಡಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಗೆ ಹೊಸ ಆಯಾಮ ನೀಡಲಿವೆ. ಸಹೋದರರೇ ಮತ್ತು ಸಹೋದರಿಯರೇ, ಇದು ಅಸ್ಸಾಂನ್ನು ಬಲಪಡಿಸಲಿದೆ ಮತ್ತು “ಏಕ್ ಭಾರತ್, ಶ್ರೇಷ್ಟ ಭಾರತ್ “ ಸ್ಪೂರ್ತಿಯನ್ನು ಬಲಿಷ್ಟಗೊಳಿಸಲಿದೆ.
ಸ್ನೇಹಿತರೇ,
21 ನೇ ಶತಮಾನದ ಭಾರತ ಹಿಂದಿನ ಸಮಸ್ಯೆಗಳ ಭಾರದಿಂದ ಕುಸಿಯಬೇಕಿಲ್ಲ. ಇಂದು ದೇಶವು ಕಠಿಣ ಸವಾಲುಗಳಿಗೆ ಪರಿಹಾರಗಳನ್ನು ಆಶಿಸುತ್ತಿದೆ. ದೇಶದೆದುರು ಹಲವು ಸವಾಲುಗಳಿವೆ, ಇವುಗಳನ್ನು ಕೆಲವೊಮ್ಮೆ ರಾಜಕೀಯ ಕಾರಣಗಳಿಗಾಗಿ ನಿರ್ಲಕ್ಷಿಸಲಾಗಿತ್ತು, ಕೆಲವೊಂದನ್ನು ಸಾಮಾಜಿಕ ಕಾರಣಗಳಿಗಾಗಿ ನಿರ್ಲಕ್ಷಿಸಲಾಗಿತ್ತು. ಈ ಸವಾಲುಗಳು ದೇಶದ ಒಳಗೆ ವಿವಿಧ ಪ್ರದೇಶಗಳಲ್ಲಿ ಹಿಂಸೆ, ಅಸ್ಥಿರತೆ ಮತ್ತು ಅಪನಂಬಿಕೆಗೆ ಕಾರಣವಾಗಿದ್ದವು. ಇದು ದೇಶದಲ್ಲಿ ದಶಕಗಳಿಂದ ನಡೆದು ಬಂದಿತ್ತು. ಈಶಾನ್ಯದ ವಿಷಯ ಯಾರೊಬ್ಬರೂ ಮಾತನಾಡಲು ಸಿದ್ದರಿರಲಿಲ್ಲ. ಯಾರೊಬ್ಬರೂ ಇಲ್ಲಿಯ ದಿಗ್ಬಂಧನ, ಚಳವಳಿಗಳ ಬಗ್ಗೆ ಮಾತನಾಡಲು ತಯಾರಿರಲಿಲ್ಲ. ಹಿಂಸಾಚಾರವಾದಾಗ ಅದನ್ನು ಹೇಗಾದರು ನಿಯಂತ್ರಿಸಿ ಬಳಿಕ ಮರೆತು ಬಿಡಲಾಗುತ್ತಿತ್ತು. ಈಶಾನ್ಯದಲ್ಲಿ ಇಂತಹ ಧೋರಣೆಯನ್ನು ಅನುಸರಿಸಲಾಗುತ್ತಿತ್ತು. ಈ ರೀತಿಯ ಧೋರಣೆ ಈಶಾನ್ಯದಲ್ಲಿ ನಮ್ಮ ಕೆಲವು ಸಹೋದರ ಮತ್ತು ಸಹೋದರಿಯರನ್ನು ದೂರ ಮಾಡಿತು ಎಂದು ನಾನು ಭಾವಿಸುತ್ತೇನೆ. ಅವರು ಸಂವಿಧಾನದಲ್ಲಿ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಿತು. ಕಳೆದ ದಶಕಗಳಲ್ಲಿ ಈಶಾನ್ಯದಲ್ಲಿ ಹಲವಾರು ಮುಗ್ಧರನ್ನು ಹತ್ಯೆ ಮಾಡಲಾಯಿತು. ಹಲವಾರು ಭದ್ರತಾ ಪಡೆ ಸಿಬ್ಬಂದಿಗಳೂ ಹುತಾತ್ಮರಾದರು, ಲಕ್ಷಾಂತರ ಮಂದಿ ಮನೆ ಕಳೆದುಕೊಂಡರು. ಲಕ್ಷಾಂತರ ಮಂದಿಗೆ ಅಭಿವೃದ್ದಿ ಎಂದರೆ ಎನು ಎಂಬುದೇ ಗೊತ್ತಾಗಲಿಲ್ಲ. ಹಿಂದಿನ ಸರಕಾರಗಳಿಗೆ ಈ ವಿಷಯ ಗೊತ್ತಿತ್ತು, ಅವರದನ್ನು ತಿಳಿದುಕೊಂಡಿದ್ದರು, ವಸ್ತುಸ್ಥಿತಿಯನ್ನು ಒಪ್ಪಿಕೊಂಡಿದ್ದರು, ಆದಾಗ್ಯೂ ಅವರದನ್ನು ಬದಲಾಯಿಸಲು ಕಠಿಣ ಶ್ರಮ ಹಾಕಲೇ ಇಲ್ಲ. ಇಂತಹ ದೊಡ್ದ ಗೊಂದಲದಲ್ಲಿ ಯಾಕೆ ಕೈ ಹಾಕಬೇಕು ಎಂದವರು ಯೋಚಿಸಿದರು. ಮತ್ತು ಅವರು ಎಲ್ಲವನ್ನೂ ಅದರಷ್ಟಕ್ಕೆ ನಡೆಯಲಿ ಎಂದು ಅದೃಷ್ಟಕ್ಕೆ ಬಿಟ್ಟುಕೊಟ್ಟರು.
ಸಹೋದರರೇ ಮತ್ತು ಸಹೋದರಿಯರೇ,
ರಾಷ್ಟ್ರೀಯ ಹಿತಾಸಕ್ತಿ ಗರಿಷ್ಟ ಆದ್ಯತೆಯಾದಾಗ , ಇಂತಹ ಪರಿಸ್ಥಿತಿಯನ್ನು ಅದರಷ್ಟಕ್ಕೆ ಇರಲಿ ಎಂದು ಬಿಡಲಾಗುವುದಿಲ್ಲ. ಈಶಾನ್ಯದ ಇಡೀ ವಿಷಯವೇ ಬಹಳ ಸೂಕ್ಷ್ಮವಾಗಿತ್ತು. ಇದರಿಂದಾಗಿ ನಾವು ಹೊಸ ಧೋರಣೆಯಿಂದ ಕಾರ್ಯೋನ್ಮುಖವಾದೆವು. ಈಶಾನ್ಯದ ವಿವಿಧ ವಲಯಗಳ ಭಾವನಾತ್ಮಕ ಅಂಶಗಳನ್ನು ತಿಳಿದುಕೊಂಡು, ಅವರ ನಿರೀಕ್ಷೆಗಳನ್ನು ಅರ್ಥೈಸಿಕೊಂಡೆವು. ಇಲ್ಲಿ ವಾಸವಾಗಿರುವ ಜನತೆಯ ಜೊತೆ ಸಂವಾದ ನಡೆಸಿದೆವು. ಅವರೊಂದಿಗಿರುವಂತೆ ವರ್ತಿಸಿದೆವು. ನಾವು ವಿಶ್ವಾಸ , ಭರವಸೆ ತುಂಬಿದೆವು. ನಾವು ಅವರು ಪ್ರತ್ಯೇಕಿಸಲ್ಪಟ್ಟಿದ್ದಾರೆ ಎಂಬ ಭಾವನೆಯನ್ನು ತೊಡೆದು ಹಾಕಲು ಪ್ರಯತ್ನಿಸಿದೆವು. ನಾವು ನಿಮ್ಮನ್ನು ಬೇರೆಯವರು ಎಂದು ಪರಿಗಣಿಸಲಿಲ್ಲ. ನಿಮ್ಮ ನಾಯಕರು ಬೇರೆಯವರು ಎಂಬಂತೆಯೂ ಪರಿಗಣಿಸಲಿಲ್ಲ. ಅದರ ಫಲಿತಾಂಶವಾಗಿ ಇಂದು , ಅದೇ ಈಶಾನ್ಯ, ವರ್ಷಕ್ಕೆ ಸರಾಸರಿ ಸಾವಿರಕ್ಕೂ ಅಧಿಕ ಮಂದಿ ಬಂಡುಕೋರ ಕೃತ್ಯಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದ ಈಶಾನ್ಯದಲ್ಲಿ ಬಹುತೇಕ ಸಂಪೂರ್ಣ ಶಾಂತಿ ನೆಲೆಸಿದೆ. ಮತ್ತು ತೀವ್ರಗಾಮಿತ್ವ ಕೊನೆಗೊಳ್ಳುತ್ತಿದೆ.
ಈಶಾನ್ಯದ ಬಹುತೇಕ ವಲಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಜಾರಿಯಲ್ಲಿದೆ; ಆದರೆ ನಾವು ಅಧಿಕಾರಕ್ಕೆ ಬಂದ ಬಳಿಕ ತ್ರಿಪುರಾ, ಮಿಜೋರಾಂ, ಮೇಘಾಲಯ, ಮತ್ತು ಅರುಣಾಚಲ ಪ್ರದೇಶಗಳನ್ನು ಇದರಿಂದ ಮುಕ್ತ ಮಾಡಲಾಯಿತು. ಉದ್ಯಮಪತಿಗಳು ಈಶಾನ್ಯದಲ್ಲಿ ಬಂಡವಾಳ ಹೂಡಲು ತಯಾರಿರಲಿಲ್ಲ. ಈಗ ಇಲ್ಲಿಗೆ ಬಂಡವಾಳ ಬರುತ್ತಿದೆ. ಹೊಸ ಉದ್ಯಮ ಸಾಹಸಗಳಿಗೆ ವೇದಿಕೆ ತೆರೆದುಕೊಂಡಿದೆ. .
ಹಿಂದೆ ಈಶಾನ್ಯದಲ್ಲಿ ಪ್ರತ್ಯೇಕ ತಾಯ್ನಾಡಿಗಾಗಿ ಹೋರಾಟಗಳು ನಡೆಯುತ್ತಿದ್ದವು, ಈಗ ’ಏಕ ಭಾರತ್ ಶ್ರೇಷ್ಟ ಭಾರತ್ ’ಸ್ಪೂರ್ತಿ ಇಲ್ಲಿ ಬಲಗೊಳ್ಳುತ್ತಿದೆ. ಈಶಾನ್ಯದಲ್ಲಿ ಸಾವಿರಾರು ಮಂದಿ ಹಿಂಸೆಯ ಕಾರಣಕ್ಕಾಗಿ ತಮ್ಮ ದೇಶದಲ್ಲಿಯೇ ನಿರಾಶ್ರಿತರಾಗಿ ಉಳಿದಿದ್ದರು. ಈಗವರಿಗೆ ಪೂರ್ಣ ಗೌರವ ಮತ್ತು ಘನತೆಯೊಂದಿಗೆ ಇಲ್ಲಿ ನೆಲೆಗೊಳ್ಳಲು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ದೇಶದ ಇತರ ಭಾಗಗಳಿಂದ ಜನತೆ ಈಶಾನ್ಯಕ್ಕೆ ಬರಲು ಹಿಂಜರಿಯುತ್ತಿದ್ದರು. ಈಗ ಅದು ಅವರ ಮುಂದಿನ ಪ್ರವಾಸೀ ತಾಣವಾಗುತ್ತಿದೆ.
ಸ್ನೇಹಿತರೇ,
ಈ ಬದಲಾವಣೆ ಹೇಗೆ ಬಂದಿತು ?. ಅದು ಬರೇ ಒಂದು ದಿನದಲ್ಲಿ ಬಂದಿತೇ ?. ಇಲ್ಲ. ಇದು ಐದು ವರ್ಷದ ಅವಿಶ್ರಾಂತ ದುಡಿಮೆಯ ಫಲ. ಹಿಂದೆ ಈಶಾನ್ಯದ ರಾಜ್ಯಗಳು ಪಡೆದುಕೊಳ್ಳುವವರೆಂಬ ಭಾವನೆಯಿಂದ ನೋಡಲಾಗುತ್ತಿತ್ತು. ಇಂದು ಅವುಗಳನ್ನು ಪ್ರಗತಿಯ ಇಂಜಿನುಗಳೆಂದು ಪರಿಗಣಿಸಲಾಗುತ್ತಿದೆ. ಹಿಂದೆ ಈಶಾನ್ಯದ ರಾಜ್ಯಗಳು ದಿಲ್ಲಿಯಿಂದ ಬಹಳ ದೂರ ಇವೆ ಎಂದು ಭಾವಿಸಲಾಗುತ್ತಿತ್ತು. ಇಂದು ದಿಲ್ಲಿ ನಿಮ್ಮ ಮನೆ ಬಾಗಿಲಿನಲ್ಲಿದೆ, ನಿಮ್ಮ ದುಖಃದ ಬಗ್ಗೆ ಕಾಳಜಿ ವಹಿಸುತ್ತಿದೆ, ನಿಮ್ಮ ಸಂತೋಷವನ್ನು ಎದುರು ನೋಡುತ್ತಿದೆ. ಮತ್ತು ನನ್ನತ್ತ ನೋಡಿ, ನಾನು ನನ್ನ ಬೋಡೋ ಮಿತ್ರರ ಜೊತೆ ಮಾತನಾಡಬೇಕಿತ್ತು, ಅಸ್ಸಾಂನ ಜನತೆಯ ಜೊತೆ ಮಾತನಾಡಬೇಕಿತ್ತು, ಅದಕ್ಕಾಗಿ ನಾನು ದಿಲ್ಲಿಯಿಂದ ಸಂದೇಶ ಕಳುಹಿಸಲಿಲ್ಲ, ಬದಲು ನಾನು ನಿಮ್ಮನ್ನು ಸೇರಿಕೊಂಡೆ, ನಿಮ್ಮ ಜೊತೆ ವೈಯಕ್ತಿಕವಾಗಿ ಮಾತನಾಡಿದೆ, ನಿಮ್ಮ ಆಶೀರ್ವಾದ ಕೋರಿದೆ ಮತ್ತು ಇಂದು ನಿಮ್ಮೊಂದಿಗೆ ಸಂಪರ್ಕಿಸಲ್ಪಟ್ಟೆ. ಪ್ರತೀ 10-15 ದಿನಗಳಿಗೊಮ್ಮೆ ಕೇಂದ್ರ ಸರಕಾರದ ಕೆಲವು ಸಚಿವರಾದರೂ ಈಶಾನ್ಯಕ್ಕೆ ಭೇಟಿ ನೀಡುವುದನ್ನು ಖಾತ್ರಿಪಡಿಸಿದೆ. ನಾನವರಿಗೆ ರೋಸ್ಟರ್ ಜಾರಿ ಮಾಡಿದೆ. ಅವರಿಲ್ಲಿ ರಾತ್ರಿ ಉಳಿದುಕೊಳ್ಳಬೇಕು, ಜನರನ್ನು ಭೇಟಿ ಮಾಡಬೇಕು ಮತ್ತು ಅವರ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದು ವಿಧಿಸಿದೆ. ನಾವು ಇಲ್ಲಿಗೆ ಬಂದು ಅದನ್ನು ಮಾಡುತ್ತೇವೆ. ನನ್ನ ಸಹೋದ್ಯೋಗಿಗಳು ಇಲ್ಲಿ ಹೆಚ್ಚು ಹೆಚ್ಚು ಸಮಯ ಕಳೆಯಲು ಪ್ರಯತ್ನ ಮಾಡಿದ್ದಾರೆ. ಹೆಚ್ಚು ಹೆಚ್ಚು ಜನರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾರೆ, ಅವರ ಸಮಸ್ಯೆಗಳನ್ನು ಅರಿತುಕೊಂಡಿದ್ದಾರೆ ಮತ್ತು ಅವುಗಳನ್ನು ಪರಿಹರಿಸಲು ಯತ್ನಿಸಿದ್ದಾರೆ. ನಾನು ಮತ್ತು ನನ್ನ ಸರಕಾರ ನಿಮ್ಮ ಸಮಸ್ಯೆಗಳ ಬಗ್ಗೆ ನಿರಂತರ ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಮತ್ತು ಅದಕ್ಕಾಗಿ ಸೂಕ್ತ ನೀತಿಗಳನ್ನು ನೇರ ನಿಮ್ಮಿಂದ ಹಿಮ್ಮಾಹಿತಿ ಪಡೆದುಕೊಂಡು ಕೇಂದ್ರವು ರೂಪಿಸಿದೆ.
ಸ್ನೇಹಿತರೇ,
13 ನೇ ಹಣಕಾಸು ಆಯೋಗದಲ್ಲಿ ಈಶಾನ್ಯದ 8 ರಾಜ್ಯಗಳು ಒಟ್ಟು 90 ಸಾವಿರ ಕೋಟಿಗೂ ಕಡಿಮೆ ಹಣ ಪಡೆದುಕೊಂಡಿವೆ.ನಾವು ಅಧಿಕಾರಕ್ಕೆ ಬಂದ ಬಳಿಕ , 14 ನೇ ಹಣಕಾಸು ಆಯೋಗದಲ್ಲಿ 3 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲು ನಿರ್ಧರಿಸಲಾಯಿತು. 90 ಸಾವಿರ ಕೋಟಿ ರೂಪಾಯಿಗಳನ್ನು 3 ಲಕ್ಷ ಕೋಟಿ ರೂಪಾಯಿಗಳ ಜೊತೆ ಹೋಲಿಸಿ!
ಈಶಾನ್ಯದಲ್ಲಿ 3000 ಕಿಲೋ ಮೀಟರಿಗೂ ಅಧಿಕ ರಸ್ತೆಗಳನ್ನು ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ನಿರ್ಮಿಸಲಾಗಿದೆ. ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ಮಂಜೂರು ಮಾಡಲಾಗಿದೆ. ಇಡೀಯ ಈಶಾನ್ಯ ರೈಲು ಜಾಲವನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸಲಾಗಿದೆ. ಈಶಾನ್ಯದಲ್ಲಿ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಮತ್ತು ಇರುವ ವಿಮಾನ ನಿಲ್ದಾಣಗಳ ಆಧುನೀಕರಣ ಕೂಡಾ ತ್ವರಿತಗತಿಯಲ್ಲಿದೆ.
ಈಶಾನ್ಯದಲ್ಲಿ ಹಲವಾರು ನದಿಗಳಿವೆ ಮತ್ತು ಜಲಸಂಪನ್ಮೂಲ ಯಥೇಚ್ಚವಾಗಿದೆ, ಆದರೆ 2014 ರವರೆಗೆ ಅಲ್ಲಿ ಬರೇ ಒಂದೇ ಒಂದು ಜಲ ಮಾರ್ಗವಿತ್ತು. 365 ದಿನವೂ ಹರಿಯುವ ಈ ನದಿಗಳ ಬಗ್ಗೆ ಯಾರೊಬ್ಬರೂ ಗಮನ ಹರಿಸಿರಲಿಲ್ಲ. ಈಗ ಒಂದು ಡಜನ್ನಿಗೂ ಅಧಿಕ ಜಲಮಾರ್ಗಗಳ ಕಾಮಗಾರಿ ನಡೆಯುತ್ತಿದೆ. ಈಶಾನ್ಯದ ಯುವಕರನ್ನು ಶಿಕ್ಷಣ, ಕೌಶಲ್ಯ, ಮತ್ತು ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ಈಶಾನ್ಯದ ವಿದ್ಯಾರ್ಥಿಗಳಿಗಾಗಿ ದಿಲ್ಲಿ ಮತ್ತು ಬೆಂಗಳೂರುಗಳಲ್ಲಿ ಹೊಸ ಹಾಸ್ಟೆಲುಗಳನ್ನು ಸ್ಥಾಪಿಸಲಾಗಿದೆ.
ಸ್ನೇಹಿತರೇ,
ಇಂದು ಮೂಲಸೌಕರ್ಯಗಳಾದ ರೈಲ್ವೇ ನಿಲ್ದಾಣಗಳು, ಹೊಸ ರೈಲ್ವೇ ಮಾರ್ಗಗಳು, ಹೊಸ ವಿಮಾನ ನಿಲ್ದಾಣಗಳು, ಹೊಸ ಜಲಮಾರ್ಗಗಳು ಅಥವಾ ಅಂತರ್ಜಾಲ ಸಂಪರ್ಕ ಕ್ಷೇತ್ರಗಳಲ್ಲಿ ಮಾಡಲಾಗಿರುವ ಕೆಲಸವನ್ನು ಹಿಂದೆಂದೂ ಮಾಡಿರಲಿಲ್ಲ. ನಾವು ಹೊಸ ಯೋಜನೆಗಳನ್ನು ತ್ವರಿತವಾಗಿ ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಬಾಕಿಯಾಗಿದ್ದ ದಶಕಗಳಷ್ಟು ಹಿಂದಿನ ಕಾಲದ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಂಡಿದ್ದೇವೆ. ಹೀಗೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳುತ್ತಿರುವ ಯೋಜನೆಗಳು ಈಶಾನ್ಯದಲ್ಲಿ ಸಂಪರ್ಕವನ್ನು ಸುಧಾರಿಸುತ್ತವೆ, ಪ್ರವಾಸೋದ್ಯಮವನ್ನು ಬಲಪಡಿಸುತ್ತವೆ. ಮತ್ತು ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡುತ್ತವೆ. ಕಳೆದ ತಿಂಗಳಷ್ಟೇ ಈಶಾನ್ಯದ ಎಂಟು ರಾಜ್ಯಗಳಿಗೆ ಅನಿಲ ಜಾಲ ಯೋಜನೆಗೆ 9 ಸಾವಿರ ಕೋಟಿ ರೂಪಾಯಿಯನ್ನು ಒದಗಿಸಲು ತೀರ್ಮಾನಿಸಲಾಗಿದೆ.
ಸ್ನೇಹಿತರೇ,
ಮೂಲಸೌಕರ್ಯ ಎಂದರೆ ಅದು ಬರೇ ಸಿಮೆಂಟ್ ಮತ್ತು ಕಾಂಕ್ರೀಟಿನ ಜಾಲವಲ್ಲ. ಅದು ಮಾನವ ಪರಿಣಾಮವನ್ನು ಒಳಗೊಂಡಿದೆ ಮತ್ತು ಯಾರೋ ಒಬ್ಬರು ತಮ್ಮ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂಬ ಭಾವನೆಯನ್ನು ಜನತೆಯಲ್ಲಿ ಮೂಡಿಸುತ್ತದೆ. ಬೋಗಿಬೀಲ್ ಸೇತುವೆಗಳಂತಹ ದಶಕಗಳಿಂದ ಬಾಕಿಯಾಗಿದ್ದ ಹಲವಾರು ಯೋಜನೆಗಳು ಪೂರ್ಣಗೊಂಡಾಗ ಲಕ್ಷಾಂತರ ಜನತೆಗೆ ಸಂಪರ್ಕ ಲಭ್ಯವಾಗುತ್ತದೆ. ಆಗ ಸರಕಾರದಲ್ಲಿ ಅವರ ವಿಶ್ವಾಸ ವೃದ್ದಿಯಾಗುತ್ತದೆ. ಇದರಿಂದಾಗಿಯೇ ಸರ್ವಾಂಗೀಣ ಪ್ರಗತಿಯು ವಿಭಜಿಸಿ ಹೋಗಿದ್ದವರನ್ನು ಒಗ್ಗೂಡಿಸುತ್ತದೆ.ಅಲ್ಲಿ ಇನ್ನು ಧೀರ್ಘ ಕಾಲ ಏಕಾಂಗಿತನದ ಭಾವನೆ ಇರಲಾರದು, ಮತ್ತು ಅಲ್ಲಿ ಸೌಹಾರ್ದತೆಯ ಭಾವನೆ ನೆಲೆಗೊಳ್ಳುತ್ತದೆ ಮತ್ತು ಯಾವಾಗ ಅಲ್ಲಿ ಸೌಹಾರ್ದತೆ ಮತ್ತು ಪರಸ್ಪರ ಸಂಬಂಧ ಇರುತ್ತದೆಯೋ, ಅಲ್ಲಿ ಪ್ರಗತಿಯು ಪ್ರತಿಯೊಬ್ಬರನ್ನೂ ಸಮಾನವಾಗಿ ತಲುಪಲು ಆರಂಭಿಸುತ್ತದೆ. ಜನತೆ ಕೂಡಾ ಒಗ್ಗೂಡಿ ಕೆಲಸ ಮಾಡಲು ತಯಾರಾಗುತ್ತಾರೆ, ಬಹಳ ದೊಡ್ದ , ಸಂಕೀರ್ಣ ವಿಷಯಗಳೂ ಬಗೆಹರಿಯಲ್ಪಡುತ್ತವೆ.
ಸ್ನೇಹಿತರೇ,
ಇಂತಹ ಒಂದು ವಿಷಯ ಬ್ರು-ರಿಯಾಂಗ್ ಬುಡಕಟ್ಟು ಜನರ ಪುನರ್ವಸತಿ.ಕೆಲವು ದಿನಗಳ ಹಿಂದೆ , ತ್ರಿಪುರಾ ಮತ್ತು ಮಿಜೋರಾಂ ನಡುವೆ ಬ್ರು-ರಿಯಾಂಗ್ ಬುಡಕಟ್ಟು ಜನರ ಪುನರ್ವಸತಿ ಬಗ್ಗೆ ಚಾರಿತ್ರಿಕ ಒಪ್ಪಂದ ಆಗಿದೆ. ಈ ಬುಡಕಟ್ಟು ಜನರು ನಿರಾಶ್ರಿತರಂತೆ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು. ಸಾವಿರಾರು ಕುಟುಂಬಗಳು ಈಗ ಈ ಒಪ್ಪಂದದಿಂದಾಗಿ ಖಾಯಂ ವಿಳಾಸ ಮತ್ತು ಖಾಯಂ ಮನೆಯನ್ನು ಪಡೆಯಲಿವೆ. ಈ ಬ್ರು-ರಿಯಾಂಗ್ ಬುಡಕಟ್ಟು ಸ್ನೇಹಿತರಿಗೆ ಸರಿಯಾದ ನೆಲೆ ಕಲ್ಪಿಸಲು ಸರಕಾರವು ವಿಶೇಷ ಪ್ಯಾಕೇಜ್ ನೀಡಲಿದೆ.
ಸ್ನೇಹಿತರೇ,
ಇಂದು ದೇಶದಲ್ಲಿ ನಮ್ಮ ಸರಕಾರದ ಪ್ರಾಮಾಣಿಕ ಪ್ರಯತ್ನಗಳ ಫಲವಾಗಿ ಒಗ್ಗೂಡಿದ ದೇಶವಿದ್ದರೆ ಅಭಿವೃದ್ದಿ ಸಾಧ್ಯ ಎಂಬ ಭಾವನೆ ಜನತೆಯಲ್ಲಿ ಮೂಡಿದೆ. ಇದೇ ಸ್ಪೂರ್ತಿಯೊಂದಿಗೆ ಕೆಲವು ದಿನಗಳ ಹಿಂದೆ ಗುವಾಹಟಿಯಲ್ಲಿ 8 ವಿವಿಧ ಬಣಗಳ 650 ಮಂದಿ ಹಿಂಸೆಯ ಪಥವನ್ನು ತೊರೆದು ಶಾಂತಿಯ ಪಥವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಜನರು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ , ಬಹಳ ದೊಡ್ದ ಪ್ರಮಾಣದ ಸ್ಪೋಟಕಗಳೊಂದಿಗೆ ಮತ್ತು ಗುಂಡುಗಳೊಂದಿಗೆ ಶರಣಾಗಿದ್ದಾರೆ. ಅವರು ಅಹಿಂಸೆಗೆ ಶರಣಾಗಿದ್ದಾರೆ. ಅವರಿಗೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆ ಅಡಿಯಲ್ಲಿ ಪುನರ್ವಸತಿ ಒದಗಿಸಲಾಗುತ್ತದೆ.
ಸ್ನೇಹಿತರೇ,
ಕಳೆದ ವರ್ಷ , ತ್ರಿಪುರಾದ ರಾಷ್ಟ್ರೀಯ ವಿಮೋಚನಾ ರಂಗ ಮತ್ತು ಸರಕಾರದ ನಡುವೆ ಒಪ್ಪಂದ ಆಗಿತ್ತು. ಈ ಒಪ್ಪಂದ ಒಂದು ಬಹಳ ಮುಖ್ಯವಾದ ಕ್ರಮ ಎಂದು ನಾನು ನಂಬುತ್ತೇನೆ. ಎನ್.ಎಲ್.ಎಫ್.ಟಿ.ಯನ್ನು 1997 ರಿಂದ ನಿಷೇಧಿಸಲಾಗಿತ್ತು. ಈ ಸಂಘಟನೆಯು ದಶಕಗಳಿಂದ ಹಿಂಸಾಚಾರದ ಪಥದಲ್ಲಿ ಸಾಗುತ್ತಿತ್ತು. ನಮ್ಮ ಸರಕಾರ 2015 ರಲ್ಲಿ ಎನ್.ಎಲ್.ಎಫ್.ಟಿ. ಜೊತೆ ಮಾತುಕತೆ ಆರಂಭಿಸಿತು. ಈ ಪ್ರಕ್ರಿಯೆಗಾಗಿ ನಾವು ಮಧ್ಯವರ್ತಿಗಳನ್ನು ಬಳಸಿದೆವು. ಅಲ್ಲಿಂದ ಸ್ವಲ್ಪ ಅವಧಿಯಲ್ಲಿ ಬಾಂಬುಗಳಲ್ಲಿ, ಗನ್ ಗಳಲ್ಲಿ ಮತ್ತು ಪಿಸ್ತೂಲುಗಳಲ್ಲಿ ನಂಬಿಕೆ ಇಟ್ಟಿದ್ದ ಈ ಜನರು ಎಲ್ಲವನ್ನೂ ಬಿಟ್ಟರು ಮತ್ತು ಹಿಂಸೆ ಪ್ರಸಾರಿಸುವುದನ್ನು ನಿಲ್ಲಿಸಿದರು. ಸತತ ಪ್ರಯತ್ನಗಳ ಬಳಿಕ ಕಳೆದ ವರ್ಷದ ಆಗಸ್ಟ್ 10 ರಂದು ಸಂಘಟನೆಯು ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಒಪ್ಪಿತು ಮತ್ತು ಮುಖ್ಯವಾಹಿನಿಗೆ ಬರುವ ಮೂಲಕ ಭಾರತದ ಸಂವಿಧಾನವನ್ನು ಅನುಸರಿಸಲು ಒಪ್ಪಿತು, ಎನ್.ಎಲ್.ಎಫ್.ಟಿ.ಯ ಡಜನ್ನುಗಳಷ್ಟು ಕೆಡರ್ ಗಳು ಶರಣಾದರು.
ಸಹೋದರರೇ ಮತ್ತು ಸಹೋದರಿಯರೇ,
ಅಸ್ಸಾಂ, ಈಶಾನ್ಯ ಮತ್ತು ಇಡೀಯ ದೇಶ ಬಹಳ ದೊಡ್ಡ ಹಾನಿ ಅನುಭವಿಸಿದೆ, ಯಾಕೆಂದರೆ ವಿವಿಧ ವಿಷಯಗಳನ್ನು ಮತ್ತು ಸಂಕಷ್ಟಗಳನ್ನು ಮತಗಳಿಕೆಗಾಗಿ ಮತ್ತು ರಾಜಕೀಯ ಲಾಭಗಳಿಗಾಗಿ ಬಾಕಿ ಇಡಲಾಗಿತ್ತು. ಸ್ನೇಹಿತರೇ,
ಈ ರಾಜಕೀಯದ ಮೂಲಕ ದೇಶದ ವಿರುದ್ದ ಕೆಲಸ ಮಾಡುವ ಮನಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತಿದೆ.ರಸ್ತೆ ತಡೆಗಳನ್ನು ಮಾಡಿ ತೊಂದರೆಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಇಂತಹ ಚಿಂತನೆಗಳನ್ನು , ಟ್ರೆಂಡ್ ಗಳನ್ನು , ರಾಜಕೀಯಗಳನ್ನು ಉತ್ತೇಜಿಸುತ್ತಿರುವವರಿಗೆ ಭಾರತವೆಂದರೆ ಏನು ಎಂಬುದೂ ಗೊತ್ತಿಲ್ಲ, ಅಸ್ಸಾಂ ಪರಿಸ್ಥಿತಿಯ ಬಗ್ಗೆಯೂ ತಿಳುವಳಿಕೆ ಇಲ್ಲ. ಭಾರತದೊಂದಿಗೆ ಅಸ್ಸಾಂನ ಸಂಬಂಧ ಹೃದಯ ಮತ್ತು ಆತ್ಮದಂತೆ. ಅಸ್ಸಾಂ ಶ್ರೀಮಂತ ಶಂಕರ ದೇವ ಅವರ ಮೌಲ್ಯಗಳೊಂದಿಗೆ ಬದುಕುತ್ತಿದೆ. ಶ್ರೀಮಂತ ಶಂಕರ ದೇವ ಜೀ ಹೇಳುತ್ತಾರೆ-
कोटि-कोटि जन्मांतरे जाहार, कोटि-कोटि जन्मांतरे जाहार
आसे महा पुण्य राशि, सि सि कदाचित मनुष्य होवय, भारत वरिषे आसि !!
ಅಂದರೆ , ಹಲವು ಜನ್ಮಗಳ ಸದ್ಗುಣಗಳನ್ನು ಗಳಿಸಿದ ಅದೇ ವ್ಯಕ್ತಿ ಭಾರತವೆಂಬ ಈ ದೇಶದಲ್ಲಿ ಜನಿಸುತ್ತಾನೆ. ಅಸ್ಸಾಂನ ಪ್ರತೀ ಮಗ್ಗುಲುಗಳಲ್ಲಿ ಇಂತಹ ಭಾವನೆ ಇದೆ, ಅಸ್ಸಾಂನ ಜನತೆಯಲ್ಲಿಯೂ ಇದೆ. ಈ ಸ್ಪೂರ್ತಿಯ ಹಿನ್ನೆಲೆಯಲ್ಲಿ ಅಸ್ಸಾಂ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದ ಹಿಡಿದು ಭಾರತದ ಮರುನಿರ್ಮಾಣದವರೆಗಿನ ಅವಧಿಯಲ್ಲಿ ತನ್ನ ರಕ್ತ ಮತ್ತು ಬೆವರನ್ನು ಹರಿಸಿದೆ. ನಮ್ಮ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದವರ ಭೂಮಿ ಇದು. ಇಂದು ನಾನು ಅಸ್ಸಾಂ ನ ಪ್ರತಿಯೊಬ್ಬ ಸ್ನೇಹಿತರಿಗೂ ಭರವಸೆ ನೀಡಲು ಇಲ್ಲಿಗೆ ಬಂದಿದ್ದೇನೆ, ಅದೆಂದರೆ ದೇಶವು ಅಸ್ಸಾಂ ವಿರೋಧಿ, ರಾಷ್ಟ್ರ ವಿರೋಧಿ ಮನಸ್ಥಿತಿಯನ್ನು ಮತ್ತು ಅದರ ಬೆಂಬಲಿಗರನ್ನು ಸುತಾರಾಂ ಸಹಿಸುವುದಿಲ್ಲ ಮತ್ತು ಕ್ಷಮಿಸುವುದಿಲ್ಲ.
ಸ್ನೇಹಿತರೇ,
ಪೌರತ್ವ ತಿದ್ದುಪಡಿ ಕಾಯ್ದೆ ಅಂದರೆ ಸಿ.ಎ.ಎ.ಯನ್ನು ಇಲ್ಲಿ ಜಾರಿಗೆ ತಂದ ಬಳಿಕ ಅಸ್ಸಾಂ ಮತ್ತು ಈಶಾನ್ಯದಲ್ಲಿ ಹೊರಗಿನ ಜನರು ಅಸ್ಸಾಂನಲ್ಲಿ ವಾಸ್ತವ್ಯ ಹೂಡಬಹುದು ಎಂಬ ಗಾಳಿ ಸುದ್ದಿಗಳನ್ನು ಬಹಳ ಪ್ರಬಲವಾಗಿ ಈ ಶಕ್ತಿಗಳು ಹರಡುತ್ತಿವೆ. ನಾನು ಅಸ್ಸಾಂನ ಜನತೆಗೆ ಭರವಸೆ ಕೊಡುತ್ತೇನೆ, ಅಂತಹದ್ದೇನೂ ನಡೆಯಲಾರದು ಎಂಬುದಾಗಿ.
ಸಹೋದರರೇ ಮತ್ತು ಸಹೋದರಿಯರೇ,
ನಾನು ಅಸ್ಸಾಂನ ಜನತೆಯಲ್ಲಿ ಒಬ್ಬನಾಗಿ ಬಹಳ ಧೀರ್ಘ ಕಾಲ ಬಿ.ಜೆ.ಪಿ.ಯ ಸಾಮಾನ್ಯ ಕಾರ್ಯಕರ್ತನಾಗಿ ದುಡಿದವನು. ನಾನು ಸಣ್ಣ ಸಣ್ಣ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದೇನೆ ಮತ್ತು ನನ್ನ ಇಲ್ಲಿನ ವಾಸ್ತವ್ಯದ ಅವಧಿಯಲ್ಲಿ ನನ್ನ ಇಲ್ಲಿನ ಸ್ನೇಹಿತರಿಂದ ಭಾರತ ರತ್ನ ಭುಪೇನ್ ಹಜಾರಿಕಾ ಜಿ ಅವರ ಜನಪ್ರಿಯ ಹಾಡುಗಳ ಚರಣಗಳನ್ನು ಸದಾ ಕೇಳುತ್ತಿದ್ದೆ. ಭೂಪೇನ್ ಹಜಾರಿಕಾ ಜೀ ಅವರ ಜೊತೆ ಒಂದು ವಿಶೇಷ ಬಾಂಧವ್ಯ ಬೆಳೆದಿತ್ತು. ಅದು ಯಾಕೆಂದರೆ ನಾನು ಗುಜರಾತಿನಲ್ಲಿ ಹುಟ್ಟಿದವನು. ಮತ್ತು ಭುಪೇನ್ ಹಜಾರಿಕಾ , ಭಾರತ ರತ್ನ ಭುಪೇನ್ ಹಜಾರಿಕಾ ನನ್ನ ಗುಜರಾತಿನ ಅಳಿಯ. ನಾವು ಅದರಲ್ಲಿ ಹೆಮ್ಮೆ ಪಡುತ್ತಿದ್ದೆವು. ಅವರ ಮಕ್ಕಳು, ಅವರ ಮಕ್ಕಳು ಈಗಲೂ ಗುಜರಾತಿ ಮಾತನಾಡುತ್ತಾರೆ ಮತ್ತು ಅದರಿಂದಾಗಿ ನಾನು ಹೆಮ್ಮೆ ಅನುಭವಿಸುತ್ತೇನೆ, ಅದನ್ನು ನಾನು ಕೇಳುತ್ತಿರುವಾಗೆಲ್ಲ..
गोटई जीबोन बिसारिलेउ, अलेख दिवख राती,
अहम देहर दरे नेपाऊं, इमान रहाल माटी ।।
ಅಸ್ಸಾಂನಂತಹ ರಾಜ್ಯದ ಜನತೆಯಿಂದ ಮತ್ತು ಅಸ್ಸಾಂ ಭೂಮಿಯಿಂದ ಇಷ್ಟೊಂದು ಪ್ರೀತಿ ಪಡೆಯುವುದು ಒಂದು ಅದೃಷ್ಟ. ಈ ಸಂಸ್ಕೃತಿ , ಭಾಷೆ ಮತ್ತು ವಿವಿಧ ಸಮಾಜಗಳ ಆಹಾರ ಎಷ್ಟೊಂದು ಶ್ರೀಮಂತ ಎಂಬುದು ನನಗೆ ಗೊತ್ತು. ನಿಮ್ಮ ಆಶೋತ್ತರಗಳ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿದೆ, ನಿಮ್ಮ ಸಂತೋಷ ಮತ್ತು ದುಖಃದ ಬಗ್ಗೆಯೂ ಗೊತ್ತಿದೆ. ನೀವು ಎಲ್ಲಾ ಭ್ರಮೆಗಳನ್ನು ತೊರೆದಿದ್ದೀರಿ ಮತ್ತು ಬೇಡಿಕೆಗಳನ್ನು ಕೊನೆಗೊಳಿಸಿದ್ದೀರಿ. ಬೋಡೋ ಸ್ನೇಹಿತರು ಒಗ್ಗಟ್ಟಾಗಿದ್ದಾರೆ, ಇತರ ಎಲ್ಲಾ ಜನತೆಯ ಭ್ರಮೆಗಳೂ ಸದ್ಯದಲ್ಲಿಯೇ ಕೊನೆಗೊಳ್ಳಲಿವೆ ಎಂದು ನಾನು ಆಶಿಸುತ್ತೇನೆ.
ಸ್ನೇಹಿತರೇ,
ಕಳೆದ 5 ವರ್ಷಗಳಲ್ಲಿ ಅಸ್ಸಾಂನ ಹಿಂದಿನ ಮತ್ತು ಇಂದಿನ ಕೊಡುಗೆಯನ್ನು ದೇಶ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಾಧ್ಯಮ ಅಸ್ಸಾಂ ಸಹಿತ ಇಡೀಯ ಈಶಾನ್ಯದ ಸಂಸ್ಕೃತಿ ಮತ್ತು ಕಲೆಯನ್ನು , ಯುವ ಪ್ರತಿಭೆಯನ್ನು,ಈ ಸ್ಥಳದ ಕ್ರೀಡಾ ಸಂಸ್ಕೃತಿಯನ್ನು ದೇಶಾದ್ಯಂತ ಮತ್ತು ವಿಶ್ವಕ್ಕೆ ಬಿಂಬಿಸಿದೆ. ನಿಮ್ಮ ಪ್ರೀತಿ, ನಿಮ್ಮ ಆಶೀರ್ವಾದ ನಿಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡಲು ನನಗೆ ನಿರಂತರ ಪ್ರೇರಣೆ ನೀಡಲಿವೆ. ಈ ಆಶೀರ್ವಾದಗಳು ವಿಫಲವಾಗಲಾರವು, ಯಾಕೆಂದರೆ ನಿಮ್ಮ ಆಶೀರ್ವಾದಗಳು ಅಷ್ಟೊಂದು ತೀಕ್ಷ್ಣವಾಗಿವೆ, ಪ್ರಬಲವಾಗಿವೆ. ನಿಮ್ಮ ಶಕ್ತಿಯಲ್ಲಿ ನಂಬಿಕೆ ಇಡಿ. ಈ ನಿಮ್ಮ ಸ್ನೇಹಿತನಲ್ಲಿ ವಿಶ್ವಾಸ ಇಡಿ ಮತ್ತು ಕಾಮಾಕ್ಯ ದೇವತೆಯ ಆಶೀರ್ವಾದದಲ್ಲಿ ನಂಬಿಕೆ ಇಡಿ. ಕಾಮಾಕ್ಯ ತಾಯಿಯಲ್ಲಿ ನಂಬಿಕೆ ಮತ್ತು ಅವರ ಆಶೀರ್ವಾದ ನಮ್ಮನ್ನು ಅಭಿವೃದ್ದಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಸ್ನೇಹಿತರೇ, ಗೀತೆಯಲ್ಲಿ ಶ್ರೀ ಕೃಷ್ಣ ದೇವರು ಪಾಂಡವರಿಗೆ ಬಹಳ ಮುಖ್ಯ ಸಂಗತಿಯೊಂದನ್ನು ಹೇಳುತ್ತಾನೆ ಮತ್ತು ಅದನ್ನು ಯುದ್ದರಂಗದಲ್ಲಿ ಹೇಳುತ್ತಾನೆ. ಅಲ್ಲಿ ಕೈಗಳಲ್ಲಿ ಶಸ್ತ್ರಾಸ್ತ್ರಗಳಿರುತ್ತವೆ ಮತ್ತು ಈ ಶಸ್ತ್ರಾಸ್ತ್ರಗಳು ಪರಸ್ಪರ ಎರಡೂ ಕಡೆಯವರಿಂದ ಎಸೆಯಲ್ಪಡುವಂತಹವು. ಶ್ರೀ ಕೃಷ್ಣ ದೇವರು ಯುದ್ದರಂಗದಲ್ಲಿ ಗೀತೆಯಲ್ಲಿ ಹೇಳುತ್ತಾನೆ ಏನೆಂದರೆ-
निर्वैरः सर्वभूतेषु यः स मामेति पाण्डव।।
ಹಾಗೆಂದರೆ ,ನನ್ನ ಭಕ್ತ, ಯಾವ ಜೀವಿಯನ್ನೂ ದ್ವೇಷಿಸದವನು ನನ್ನನ್ನು ಸೇರುತ್ತಾನೆ
ಕಲ್ಪಿಸಿಕೊಳ್ಳಿ !. ಆ ಮಹಾಭಾರತ ಚಾರಿತ್ರಿಕ ಯುದ್ದದಲ್ಲಿ ಶ್ರೀ ಕೃಷ್ಣ ದೇವರು ನೀಡಿದ ಸಂದೇಶವಿದು. ಯಾರನ್ನೂ ದ್ವೇಷಿಸಬೇಡಿ.
ನಾನು ಈ ದೇಶದಲ್ಲಿ ಸ್ವಲ್ಪವಾದರೂ ದ್ವೇಷ ಭಾವನೆ ಹೊಂದಿರುವ ವ್ಯಕ್ತಿಯಲ್ಲಿ ಹೇಳುವುದೇನೆಂದರೆ ದ್ವೇಷ ಮತ್ತು ವೈರ ಭಾವನೆಯನ್ನು ತೊರೆ. ಎಲ್ಲರೊಂದಿಗೆ ಅಭಿವೃದ್ದಿಯ ಮುಖ್ಯವಾಹಿನಿಗೆ ಬಂದು ಪ್ರತಿಯೊಬ್ಬರ ಮರು ಅಭಿವೃದ್ದಿಗೆ ಸಹಾಯ ಮಾಡು ಎಂಬುದಾಗಿ.ಹಿಂಸೆಯಿಂದ ಏನನ್ನೂ ಸಾಧಿಸಲಾಗದು, ಅದರಿಂದ ಹಿಂದೇನೂ ಸಾಧನೆಯಾಗಿಲ್ಲ. ಇನ್ನು ಮುಂದೆ ಸಾಧಿಸಲಾಗುವುದೂ ಇಲ್ಲ.
ಸ್ನೇಹಿತರೇ,
ನಾನು ಮತ್ತೊಮ್ಮೆ ಬೋಡೋ ಸಮುದಾಯಕ್ಕೆ , ಅಸ್ಸಾಂಗೆ ಮತ್ತು ಈಶಾನ್ಯಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮತ್ತು ಮತ್ತೊಮ್ಮೆ ಇಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ ಬೃಹತ್ ಜನ ಸಮೂಹಕ್ಕೆ ನನ್ನ ಶುಭ ಹಾರೈಕೆಗಳು. ಇಂತಹ ದೃಶ್ಯವನ್ನು ಇನ್ನು ನಾನು ಭವಿಷ್ಯದಲ್ಲಿ ನೋಡುವ ಅವಕಾಶವನ್ನು ಪಡೆಯುತ್ತೇನೋ ಇಲ್ಲವೋ ಗೊತ್ತಿಲ್ಲ. ಅದು ಅಸಾಧ್ಯವೆಂಬಂತೆ ಕಾಣುತ್ತದೆ. ಭಾರತದ ಯಾವ ರಾಜಕಾರಣಿಯೂ ಈ ಹಿಂದೆ ಇಂತಹ ಆಶೀರ್ವಾದವನ್ನು ಪಡೆಯುವ ಅವಕಾಶವನ್ನು ಹೊಂದಿರಲಿಲ್ಲ , ಮತ್ತು ಭವಿಷ್ಯದಲ್ಲಿಯೂ ಯಾವುದೇ ರಾಜಕಾರಣಿಗೆ ಇಂತಹ ಆಶೀರ್ವಾದ ಸಿಗುತ್ತದೆ ಎಂಬುದರ ಬಗ್ಗೆ ನನಗೆ ಖಾತ್ರಿ ಇಲ್ಲ. ನಾನು ಬಹಳ ಅದೃಷ್ಟವಂತ ಎಂದು ಭಾವಿಸುತ್ತೇನೆ. ನೀವು ಬಹಳ ಪ್ರೀತಿ ಮತ್ತು ಆಶೀರ್ವಾದವನ್ನು ನನ್ನ ಮೇಲೆ ಸುರಿಸಿದ್ದೀರಿ. ಈ ಆಶೀರ್ವಾದ , ಈ ಪ್ರೀತಿ ನನಗೆ ಸ್ಪೂರ್ತಿ. ಇದು ನನಗೆ ದೇಶಕ್ಕಾಗಿ ರಾತ್ರಿ ಹಗಲು ಏನನ್ನಾದರೂ ಮಾಡುವುದಕ್ಕೆ ಶಕ್ತಿಯನ್ನು ಕೊಡುತ್ತದೆ. ನಿಮಗೆ ಕೃತಜ್ಞತೆಯ ಭಾರವನ್ನು ವ್ಯಕ್ತ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಈಗ ಮತ್ತೊಮ್ಮೆ , ಈ ಯುವ ಜನತೆ ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ಅಹಿಂಸೆಯ ಪಥವನ್ನು ಆಯ್ಕೆ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ನನ್ನನ್ನು ನಂಬಿ, ನಿಮ್ಮ ಹೊಸ ಜೀವನ ಆರಂಭವಾಗಿದೆ. ಇಡೀ ದೇಶದ ಆಶೀರ್ವಾದ ನಿಮ್ಮ ಮೇಲಿದೆ. 130 ಕೋಟಿ ದೇಶವಾಸಿಗಳ ಆಶೀರ್ವಾದ ನಿಮ್ಮ ಮೇಲಿದೆ. ಮತ್ತು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಏನೆಂದರೆ ಈಶಾನ್ಯದಲ್ಲಿ, ನಕ್ಸಲ್ ಪ್ರದೇಶಗಳಲ್ಲಿ ಇರುವವರು ಮತ್ತು ಜಮ್ಮು ಹಾಗು ಕಾಶ್ಮೀರದಲ್ಲಿರುವವರು ಇನ್ನು ಕೂಡಾ ಗನ್ನುಗಳಲ್ಲಿ, ಶಸ್ತ್ರಾಸ್ತ್ರಗಳಲ್ಲಿ ನಿಷ್ಟೆ ಹೊಂದಿರುವವರು ಮುಂದೆ ಬನ್ನಿ, ನಾವು ಬೋಡೋ ಸಮುದಾಯದ ಯುವಜನತೆಯಿಂದ ಏನನ್ನಾದರೂ ಕಲಿಯೋಣ. ಅವರಿಂದ ಸ್ಪೂರ್ತಿ ಪಡೆದುಕೊಳ್ಳಿ, ಹಿಂತಿರುಗಿ ಬನ್ನಿ, ಮುಖ್ಯ ವಾಹಿನಿಗೆ ಮರಳಿ ಬನ್ನಿ. ಜೀವನವನ್ನು ಅನುಭವಿಸಿ ಮತ್ತು ಆಚರಿಸಿ. ಈ ಒಂದು ನಿರೀಕ್ಷೆಯೊಂದಿಗೆ ಮತ್ತೊಮ್ಮೆ ಈ ಭೂಮಿಗೆ ಶಿರಬಾಗಿ ವಂದಿಸಿ , ಮತ್ತು ನಿಮ್ಮೆಲ್ಲರಿಗೂ ವಂದಿಸಿ ಮತ್ತು ಈ ಭೂಮಿಗಾಗಿ ಬದುಕಿದ ಶ್ರೇಷ್ಟ ಜನನಾಯಕರಿಗೂ ವಂದಿಸಿ ನಾನು ನನ್ನ ಭಾಷಣವನ್ನು ಮುಕ್ತಾಯ ಮಾಡುತ್ತೇನೆ. ಬಹಳ , ಬಹಳ ಧನ್ಯವಾದಗಳು !.
ಭಾರತ್ ಮಾತಾ ಕಿ ಜೈ !
ಗಟ್ಟಿ ದ್ವನಿಯಲ್ಲಿ ಹೇಳಿ, ನಿಮ್ಮ ಧ್ವನಿ 130 ಕೋಟಿ ದೇಶವಾಸಿಗಳ ಹೃದಯಗಳನ್ನು ಮುಟ್ಟುವಂತಿರಲಿ-
ಭಾರತ್ ಮಾತಾ ಕಿ ಜೈ !
ಭಾರತ್ ಮಾತಾ ಕಿ ಜೈ !
ಭಾರತ್ ಮಾತಾ ಕಿ ಜೈ !
ಭಾರತ್ ಮಾತಾ ಕಿ ಜೈ !
ಭಾರತ್ ಮಾತಾ ಕಿ ಜೈ !
ಮಹಾತ್ಮಾ ಗಾಂಧಿ ಅಮರ್ ರಹೇ, ಅಮರ್ ರಹೇ !
ಮಹಾತ್ಮಾ ಗಾಂಧಿ ಅಮರ್ ರಹೇ, ಅಮರ್ ರಹೇ !
ಮಹಾತ್ಮಾ ಗಾಂಧಿ ಅಮರ್ ರಹೇ, ಅಮರ್ ರಹೇ !
ನಿಮಗೆಲ್ಲರಿಗೂ ತುಂಬಾ ಧನ್ಯವಾದ.
आज जो उत्साह, जो उमंग मैं आपके चेहरे पर देख रहा हूं, वो यहां के 'आरोनाई' और 'डोखोना' के रंगारंग माहौल से भी अधिक संतोष देने वाला है: PM @narendramodi #BodoPeaceAccord
— PMO India (@PMOIndia) February 7, 2020
आज का दिन उन हज़ारों शहीदों को याद करने का है, जिन्होंने देश के लिए अपने कर्तव्य पथ पर जीवन बलिदान किया: PM @narendramodi #BodoPeaceAccord
— PMO India (@PMOIndia) February 7, 2020
आज का दिन, इस समझौते के लिए बहुत सकारात्मक भूमिका निभाने वाले All Bodo Students Union (ABSU), National Democratic Front of Bodoland (NDFB) से जुड़े तमाम युवा साथियों, BTC के चीफ श्रीहगरामामाहीलारेऔर असम सरकार की प्रतिबद्धता को अभिनंदन करने का है: PM @narendramodi #BodoPeaceAccord
— PMO India (@PMOIndia) February 7, 2020
आज का दिन असम सहित पूरे नॉर्थईस्ट के लिए 21वीं सदी में एक नई शुरुआत, एक नए सवेरे का, नई प्रेरणा को Welcome करने का है: PM @narendramodi #BodoPeaceAccord
— PMO India (@PMOIndia) February 7, 2020
मैं न्यू इंडिया के नए संकल्पों में आप सभी का, शांतिप्रिय असम का, शांति और विकास प्रिय नॉर्थईस्ट का स्वागत करता हूं, अभिनंदन करता हूं: PM @narendramodi #BodoPeaceAccord
— PMO India (@PMOIndia) February 7, 2020
अब असम में अनेक साथियों ने शांति और अहिंसा का मार्ग स्वीकार करने के साथ ही, लोकतंत्र को स्वीकार किया है, भारत के संविधान को स्वीकार किया है: PM @narendramodi #BodoPeaceAccord
— PMO India (@PMOIndia) February 7, 2020
मैं बोडो लैंड मूवमेंट का हिस्सा रहे सभी लोगों का राष्ट्र की मुख्यधारा में शामिल होने पर स्वागत करता हूं। पाँच दशक बाद पूरे सौहार्द के साथ बोडो लैंड मूवमेंट से जुड़े हर साथी की अपेक्षाओं और आकांक्षाओं को सम्मान मिला है: PM @narendramodi #BodoPeaceAccord
— PMO India (@PMOIndia) February 7, 2020
अब केंद्र सरकार, असम सरकार और बोडो आंदोलन से जुड़े संगठनों ने जिस ऐतिहासिक अकॉर्डपर सहमति जताई है, जिस पर साइन किया है, उसके बाद अब कोई मांग नहीं बची है और अब विकास ही पहली प्राथमिकता है और आखिरी भी: PM @narendramodi #BodoPeaceAccord
— PMO India (@PMOIndia) February 7, 2020
अब केंद्र सरकार, असम सरकार और बोडो आंदोलन से जुड़े संगठनों ने जिस ऐतिहासिक अकॉर्डपर सहमति जताई है, जिस पर साइन किया है, उसके बाद अब कोई मांग नहीं बची है और अब विकास ही पहली प्राथमिकता है और आखिरी भी: PM @narendramodi #BodoPeaceAccord
— PMO India (@PMOIndia) February 7, 2020
इस अकॉर्डका लाभ बोडो जनजाति के साथियों के साथ ही दूसरे समाज के लोगों को भी होगा। क्योंकि इस समझौते के तहत बोडो टैरिटोरियल काउंसिल के अधिकारों का दायरा बढ़ाया गया है, अधिक सशक्त किया गया है: PM @narendramodi #BodoPeaceAccord
— PMO India (@PMOIndia) February 7, 2020
अकॉर्ड के तहत BTAD में आने वाले क्षेत्र की सीमा तय करने के लिए कमीशन भी बनाया जाएगा। इस क्षेत्र को 1500 करोड़ रुपए का स्पेशल डेवलपमेंट पैकेज मिलेगा, जिसका बहुत बड़ा लाभ कोकराझार, चिरांग, बक्सा और उदालगुड़ि जैसे जिलों को मिलेगा: PM @narendramodi #BodoPeaceAccord
— PMO India (@PMOIndia) February 7, 2020
अब सरकार का प्रयास है कि असम अकॉर्ड की धारा-6 को भी जल्द से जल्द लागू किया जाए। मैं असम के लोगों को आश्वस्त करता हूं कि इस मामले से जुड़ी कमेटी की रिपोर्ट आने के बाद केंद्र सरकार और त्वरित गति से कार्रवाई करेगी: PM @narendramodi #BodoPeaceAccord
— PMO India (@PMOIndia) February 7, 2020
आज जब बोडो क्षेत्र में, नई उम्मीदों, नए सपनों, नए हौसले का संचार हुआ है, तो आप सभी की जिम्मेदारी और बढ़ गई है। मुझे पूरा विश्वास है कि Bodo Territorial Council अब यहां के हर समाज को साथ लेकर, विकास का एक नया मॉडल विकसित करेगी: PM @narendramodi #BodoPeaceAccord
— PMO India (@PMOIndia) February 7, 2020
बोडो टेरिटोरियल काउंसिल, असम सरकार और केंद्र सरकार, अब साथ मिलकर, सबका साथ, सबका विकास और सबका विश्वास को नया आयाम देंगे। इससे असम भी सशक्त होगा और एक भारत-श्रेष्ठ भारत की भावना भी और मजबूत होगी: PM @narendramodi #BodoPeaceAccord
— PMO India (@PMOIndia) February 7, 2020
बोडो टेरिटोरियल काउंसिल, असम सरकार और केंद्र सरकार, अब साथ मिलकर, सबका साथ, सबका विकास और सबका विश्वास को नया आयाम देंगे। इससे असम भी सशक्त होगा और एक भारत-श्रेष्ठ भारत की भावना भी और मजबूत होगी: PM @narendramodi #BodoPeaceAccord
— PMO India (@PMOIndia) February 7, 2020
देश के सामने कितनी ही चुनौतियां रही हैं जिन्हें कभी राजनीतिक वजहों से, कभी सामाजिक वजहों से, नजरअंदाज किया जाता रहा है। इन चुनौतियों ने देश के भीतर अलग-अलग क्षेत्रों में हिंसा और अस्थिरता को बढ़ावा दिया है: PM @narendramodi #BodoPeaceAccord
— PMO India (@PMOIndia) February 7, 2020
हमने नॉर्थईस्ट के अलग-अलग क्षेत्रों के भावनात्मक पहलू को समझा, उनकी उम्मीदों को समझा, यहां रह रहे लोगों से बहुत अपनत्व के साथ, उन्हें अपना मानते हुए संवाद कायम किया: PM @narendramodi #BodoPeaceAccord
— PMO India (@PMOIndia) February 7, 2020
जिस नॉर्थईस्ट में हिंसा की वजह से हजारों लोग अपने ही देश में शरणार्थी बने हुए थे, अब यहां उन लोगों को पूरे सम्मान और मर्यादा के साथ बसने की नई सुविधाएं दी जा रही हैं: PM @narendramodi #BodoPeaceAccord
— PMO India (@PMOIndia) February 7, 2020
पहले नॉर्थईस्ट के राज्यों को Recipient के तौर पर देखा जाता था। आज उनको विकास के ग्रोथ इंजन के रूप में देखा जा रहा है। पहले नॉर्थईस्ट के राज्यों को दिल्ली से बहुत दूर समझा जाता था, आज दिल्ली आपके दरवाजे पर आई है: PM @narendramodi #BodoPeaceAccord
— PMO India (@PMOIndia) February 7, 2020
नए रेलवे स्टेशन हों, नए रेलवे रूट हों, नए एयरपोर्ट हों, नए वॉटरवे हों, या फिर इंटरनेट कनेक्टिविटी, आज जितना काम नॉर्थईस्ट में हो रहा है, उतना पहले कभी नहीं हुआ:PM @narendramodi #BodoPeaceAccord
— PMO India (@PMOIndia) February 7, 2020
जब बोगीबील पुल जैसे दशकों से लटके अनेक प्रोजेक्ट पूरे होने से लाखों लोगों को कनेक्टिविटी मिलती है, तब उनका सरकार पर विश्वास बढ़ता है। यही वजह है कि विकास के चौतरफा हो रहे कार्यों ने अलगाव को लगाव में बदलने में बहुत बड़ी भूमिका निभाई: PM @narendramodi #BodoPeaceAccord
— PMO India (@PMOIndia) February 7, 2020
आज देश में हमारी सरकार की ईमानदार कोशिशों की वजह से ये भावना विकसित हुई है कि सबके साथ में ही देश का हित है।
— PMO India (@PMOIndia) February 7, 2020
इसी भावना से, कुछ दिन पहले ही गुवाहाटी में 8 अलग-अलग गुटों के लगभग साढ़े 6 सौ कैडर्स ने शांति का रास्ता चुना है: PM @narendramodi #BodoPeaceAccord
मैं आज असम के हर साथी को ये आश्वस्त करने आया हूं, कि असम विरोधी, देश विरोधी हर मानसिकता को, इसके समर्थकों को,देश न बर्दाश्त करेगा, न माफ करेगा: PM @narendramodi #BodoPeaceAccord
— PMO India (@PMOIndia) February 7, 2020
यही ताकतें हैं जो पूरी ताकत से असम और नॉर्थईस्ट में भी अफवाहें फैला रही हैं, कि CAA से यहां, बाहर के लोग आ जाएंगे, बाहर से लोग आकर बस जाएंगे। मैं असम के लोगों को आश्वस्त करता हूं कि ऐसा भी कुछ नहीं होगा: PM @narendramodi #BodoPeaceAccord
— PMO India (@PMOIndia) February 7, 2020
आपकी Aspirations, आपके सुख-दुख, हर बात की भी मुझे पूरी जानकारी है। जिस प्रकार अपने सारे भ्रम समाप्त कर, सारी मांगे समाप्त कर,बोडो समाज से जुड़े साथी साथ आए हैं, मुझे उम्मीद है कि अन्य लोगों के भी सारे भ्रम बहुत जल्द खत्म हो जाएंगे: PM @narendramodi #BodoPeaceAccord
— PMO India (@PMOIndia) February 7, 2020
आप अपने सामर्थ्य पर विश्वास रखें, अपने इस साथी पर विश्वास रखें और मां कामाख्या की कृपा पर विश्वास रखें। मां कामाख्या की आस्था और आशीर्वाद हमें विकास की नई ऊंचाइयों की ले जाएगा: PM @narendramodi #BodoPeaceAccord
— PMO India (@PMOIndia) February 7, 2020