ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಸ್ಸಾಂನಲ್ಲಿ ಎರಡು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶಂಕುಸ್ಥಾಪನೆ ಮತ್ತು ಸೋನಿತ್ಪುರ್ ಜಿಲ್ಲೆಯ ದೇಕೈಜುಲಿಯ ಪ್ರಮುಖ ಜಿಲ್ಲಾ ರಸ್ತೆಗಳು ಮತ್ತು ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ‘ಅಸೋಮ್ ಮಾಲಾ’ಗೆ ಚಾಲನೆ ನೀಡಿದರು. ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೋವಾಲ್, ಕೇಂದ್ರ ಸಚಿವ ಶ್ರೀ ರಾಮೇಶ್ವರ್ ತೇಲಿ, ಅಸ್ಸಾಂ ಸರ್ಕಾರದ ಸಚಿವರೇ ಮತ್ತು ಬೋಡೋಲ್ಯಾಂಡ್ ಭೌಗೋಳಿಕ ಪ್ರದೇಶ ಮಂಡಳಿಯ ಮುಖ್ಯಸ್ಥ ಶ್ರೀ ಪ್ರಮೋದ್ ಬೊರೊ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಅಸ್ಸಾಂ ಜನರು ತಮ್ಮ ಬಗ್ಗೆ ತೋರುತ್ತಿರುವ ಪ್ರೀತಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೋವಾಲ್, ಸಚಿವ ಶ್ರೀ ಹಿಮಂತ ಬಿಸ್ವಾಸ್ ಮತ್ತು ಬೋಡೋಲ್ಯಾಂಡ್ ಭೌಗೋಳಿಕ ಪ್ರದೇಶ ಮಂಡಳಿಯ ಮುಖ್ಯಸ್ಥ ಶ್ರೀ ಪ್ರಮೋದ್ ಬೊರೊ ಹಾಗೂ ರಾಜ್ಯ ಸರ್ಕಾರ ಅಸ್ಸಾಂ ನ ಕ್ಷಿಪ್ರ ಪ್ರಗತಿಗೆ ಸೇವೆ ಸಲ್ಲಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 1942ರಲ್ಲಿ ತ್ರಿ ವರ್ಣ ಧ್ವಜಕ್ಕಾಗಿ ಹುತ್ಮಾತರಾಗಿದ್ದು ಹಾಗೂ ತ್ಯಾಗ ಮಾಡಿದ್ದು ಮತ್ತು ಆಕ್ರಮಣಕಾರರ ವಿರುದ್ಧ ಈ ಪ್ರದೇಶದಲ್ಲಿ ತೋರಿದ್ದ ಪ್ರತಿರೋಧದ ವೈಭವದ ಇತಿಹಾಸವನ್ನು ಅವರು ಸ್ಮರಿಸಿದರು.
ಹಿಂಸಾಚಾರ, ಅಭಾವ, ಬಿಕ್ಕಟ್ಟು, ತಾರತಮ್ಯ ಮತ್ತು ಸಂಘರ್ಷದ ಗತವೈಭವವನ್ನು ಬಿಟ್ಟು ಇಂದು ಈಶಾನ್ಯ ಭಾಗ ಪ್ರಗತಿ ಪಥದತ್ತ ಸಾಗಿದೆ ಮತ್ತು ಅಸ್ಸಾಂ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಐತಿಹಾಸಿಕ ಬೋಡೋ ಒಪ್ಪಂದ, ಇತ್ತೀಚಿನ ಬೋಡೋ ಭೌಗೋಳಿಕ ಪ್ರದೇಶ ಮಂಡಳಿಗೆ ಚುನಾವಣೆಗಳು ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವನ್ನು ತೆರೆದಿವೆ ಮತ್ತು ಪ್ರದೇಶದಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿವೆ. “ಈ ದಿನ ಅಸ್ಸಾಂನ ಭವಿಷ್ಯದ ಬದಲಾವಣೆಯನ್ನು ಮಾಡುವ ಮಹತ್ವದ ದಿನವಾಗಿದೆ ಮತ್ತು ಭವಿಷ್ಯದ ಅಸ್ಸಾಂನಲ್ಲಿ ಬಿಸ್ವನಾಥ್ ಮತ್ತು ಚರೈಡಿಯೋದಲ್ಲಿ ಎರಡು ಹೊಸ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿದ್ದು, ಅಸೋಮ್ ಮಾಲಾ ಮೂಲಕ ಆಧುನಿಕ ಮೂಲಸೌಕರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ’’ಎಂದು ಪ್ರಧಾನಮಂತ್ರಿ ಹೇಳಿದರು.
ಹಿಂದೆ ಅಸ್ಸಾಂ ರಾಜ್ಯದಲ್ಲಿದ್ದ ಕಳಪೆ ವೈದ್ಯಕೀಯ ಮೂಲಸೌಕರ್ಯಗಳನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ ಅವರು, ಸ್ವಾತಂತ್ರ್ಯಾನಂತರ 2016ರವರೆಗೆ ಅಸ್ಸಾಂನಲ್ಲಿ ಕೇವಲ 6 ವೈದ್ಯಕೀಯ ಕಾಲೇಜುಗಳಿದ್ದವು, ಆದರೆ ಕಳೆದ ಐದು ವರ್ಷಗಳಲ್ಲಿ ಆರು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಬಿಸ್ವನಾಥ್ ಮತ್ತು ಚರೈಡಿಯೋ ಕಾಲೇಜುಗಳು ಉತ್ತರ ಹಾಗೂ ಮೇಲ್ಮೈ ಅಸ್ಸಾಂ ವೈದ್ಯಕೀಯ ಅಗತ್ಯತೆಗಳನ್ನು ಪೂರೈಸಲಿದೆ. ಅಂತೆಯೇ, ರಾಜ್ಯದಲ್ಲಿ ಹಿಂದೆ ಕೇವಲ 725 ವೈದ್ಯಕೀಯ ಸೀಟುಗಳಿದ್ದವು, ಇದೀಗ ಹೊಸ ವೈದ್ಯಕೀಯ ಕಾಲೇಜುಗಳು ಕಾರ್ಯಾರಂಭ ಮಾಡಿದರೆ ಆಗ ಪ್ರತಿವರ್ಷ 1600 ಹೊಸ ವೈದ್ಯರು ಸೇವೆಗೆ ಲಭ್ಯವಾಗಲಿದ್ದಾರೆ. ಇದರಿಂದ ರಾಜ್ಯದ ಗುಡ್ಡ ಗಾಡು ಪ್ರದೇಶಗಳಲ್ಲಿ ವೈದ್ಯಕೀಯ ಸೌಕರ್ಯಗಳು ಭಾರಿ ಪ್ರಮಾಣದಲ್ಲಿ ಸುಧಾರಣೆಯಾಗಲಿವೆ. ಗೌವಾಹಟಿ ಐಮ್ಸ್ ನಿರ್ಮಾಣ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ ಮತ್ತು ಸಂಸ್ಥೆಯಲ್ಲಿ ಮೊದಲ ಬ್ಯಾಚ್ ಆರಂಭವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ ಒಂದೂವರೆ ಎರಡು ವರ್ಷಗಳಲ್ಲಿ ಏಮ್ಸ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಅಸ್ಸಾಂನ ಸಮಸ್ಯೆಗಳ ಕುರಿತಂತೆ ಇದ್ದ ಐತಿಹಾಸಿಕ ನಿರಾಸಕ್ತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಸದ್ಯದ ಸರ್ಕಾರ ಸಂಪೂರ್ಣ ಬದ್ಧತೆಯೊಂದಿಗೆ ಅಸ್ಸಾಂ ಜನರಿಗಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಅಸ್ಸಾಂ ಜನರ ವೈದ್ಯಕೀಯ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಮಂತ್ರಿ ವಿವರಿಸಿದರು. ಆಯುಷ್ಮಾನ್ ಭಾರತ್ ಯೋಜನೆಯಡಿ 350ಕ್ಕೂ ಅಧಿಕ ಆಸ್ಪತ್ರೆಗಳು ರಾಜ್ಯದಲ್ಲಿ ನೋಂದಣಿ ಮಾಡಿಕೊಂಡಿವೆ ಮತ್ತು ಅಸ್ಸಾಂನ 1.25ಕೋಟಿಗೂ ಅಧಿಕ ಜನರು ಯೋಜನೆಯ ಲಾಭ ಪಡೆದಿದ್ದಾರೆ ಎಂದು ಹೇಳಿದರು. ಆಯುಷ್ಮಾನ್ ಭಾರತ್ ಯೋಜನೆಯಡಿ ಅಸ್ಸಾಂನ 1.50ಲಕ್ಷ ಜನರು ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ. ರಾಜ್ಯದ ಸುಮಾರು 55 ಲಕ್ಷ ಜನರು ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ಪಡೆದಿದ್ದಾರೆ. ಜನೌಷಧಿ ಕೇಂದ್ರಗಳು, ಅತತ್ ಅಮೃತ್ ಯೋಜನಾ ಮತ್ತು ಪ್ರಧಾನಮಂತ್ರಿ ಡಯಾಲಿಸಿಸ್ ಕಾರ್ಯಕ್ರಮಗಳು ಸಾಮಾನ್ಯ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದಿವೆ ಎಂದು ಪ್ರಧಾನಮಂತ್ರಿ ಹೇಳಿದರು.
ಅಸ್ಸಾಂ ನ ಪ್ರಗತಿಯಲ್ಲಿ ಚಹಾ ತೋಟಗಳ ಕೇಂದ್ರ ಪಾತ್ರವನ್ನು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಅವರು ನಿನ್ನೆ ಧನ ಪುರಸ್ಕಾರ್ ಮೇಳ ಯೋಜನೆಯಡಿ ಚಹಾ ತೋಟಗಳಲ್ಲಿ ಕೆಲಸ ಮಾಡುವ 7.5 ಲಕ್ಷ ಕಾರ್ಮಿಕರ ಖಾತೆಗಳಿಗೆ ಕೋಟ್ಯಂತರ ರೂ.ಗಳನ್ನು ವರ್ಗಾವಣೆ ಮಾಡಲಿದೆ ಎಂದರು. ಗರ್ಭಿಣಿಯರಿಗೆ ವಿಶೇಷ ಯೋಜನೆ ಮೂಲಕ ನೆರವು ನೀಡಲಾಗುತ್ತಿದೆ. ಕಾರ್ಮಿಕರ ಆರೋಗ್ಯ ರಕ್ಷಣೆಗೆ ವಿಶೇಷ ವೈದ್ಯಕೀಯ ಘಟಕಗಳನ್ನು ಚಹಾ ತೋಟಗಳಿಗೆ ಕಳುಹಿಸಲಾಗಿದೆ. ಉಚಿತ ಔಷಧಿಗಳನ್ನೂ ನೀಡಲಾಗುತ್ತಿದೆ. ಈ ವರ್ಷದ ಬಜೆಟ್ ನಲ್ಲಿ ಚಹಾ ತೋಟದ ಕಾರ್ಮಿಕರ ಕಲ್ಯಾಣಕ್ಕೆ 1000 ಕೋಠಿ ರೂ. ವಿಶೇಷ ಯೋಜನೆ ಪ್ರಕಟಿಸಲಾಗಿದೆ.
ಭಾರತೀಯ ಚಹಾದ ವರ್ಚಸ್ಸಿಗೆ ಕಳಂಕ ತರುವ ಪಿತೂರಿ ತರುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದೊಂದಿಗೆ ಚಹಾ ಗುರುತಿಸುವಿಕೆ ವಿರುದ್ಧ ಕೆಲವು ವಿದೇಶಿ ಮೂಲದ ಪಡೆಗಳು ಕಾರ್ಯನಿರ್ವಹಿಸುತ್ತಿರುವ ಅಂಶ ಇತ್ತೀಚೆಗೆ ದಾಖಲೆಗಳಿಂದ ಕಂಡುಬಂದಿದೆ. ಅಸ್ಸಾಂ ನೆಲೆದಿಂದ ಪ್ರಧಾನಮಂತ್ರಿ ಅವರು, ಅಂತಕ ಪಿತೂರಿಗಳು ಯಶಸ್ವಿಯಾಗುವುದಿಲ್ಲ ಮತ್ತು ಅಂತಹ ದಾಳಿಕೋರರಿಂದ ಮತ್ತು ಅದಕ್ಕೆ ಬೆಂಬಲ ನೀಡುತ್ತಿರುವವರಿಂದ ಜನರು ಉತ್ತರ ಕೇಳುತ್ತಿದ್ದಾರೆ ಎಂದರು. “ ಈ ಸಮರದಲ್ಲಿ ನಮ್ಮ ಚಹಾ ತೋಟಗಳ ಕೆಲಸಗಾರರು ವಿಜಯಿಯಾಗಲಿದ್ದಾರೆ. ಭಾರತೀಯ ಚಹಾದ ಮೇಲಿನ ಈ ದಾಳಿಗಳಿಗೆ ನಮ್ಮ ಚಹಾ ತೋಟಗಳಲ್ಲಿ ಶ್ರಮವಹಿಸಿ ದುಡಿಯುವ ಸಾಮರ್ಥ್ಯವನ್ನು ಎದುರಿಸುವ ಶಕ್ತಿ ಇಲ್ಲ’’ ಎಂದು ಪ್ರಧಾನಮಂತ್ರಿ ಹೇಳಿದರು.
ಆಧುನಿಕ ರಸ್ತೆಗಳು ಮತ್ತು ಮೂಲಸೌಕರ್ಯ ಅಸ್ಸಾಂನ ಸಾಮರ್ಥ್ಯವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಇದನ್ನು ಗಮನದಲ್ಲಿರಿಸಿಕೊಂಡು “ಭಾರತ್ ಮಾಲಾ ಯೋಜನೆ’ ಯಂತೆ ‘ಅಸೋಂ ಮಾಲಾ’ ಯೋಜನೆ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಸಾವಿರಾರು ಕಿಲೋಮೀಟರ್ ರಸ್ತೆ ಮತ್ತು ಹಲವು ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಅಸ್ಸೋಂ ಮಾಲಾ ಯೋಜನೆ ರಾಜ್ಯದ ವಿಸ್ತಾರವಾದ ರಸ್ತೆಗಳು ಮತ್ತು ಗ್ರಾಮಗಳು ಮತ್ತು ಆಧುನಿಕ ನಗರಗಳಿಗೆ ಸಂಪರ್ಕ ಕಲ್ಪಿಸುವ ಕನಸನ್ನು ಸಕಾರಾಗೊಳಿಸುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. “ಈ ಎಲ್ಲ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಹೊಸ ಆಯಾಮ ನೀಡಲಿವೆ ಮತ್ತು ಬಜೆಟ್ ನಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿರುವುದರಿಂದ ಕ್ಷಿಪ್ರ ಪ್ರಗತಿ ಮತ್ತು ಅಭಿವೃದ್ಧಿ ಸಾಧ್ಯವಾಗಲಿದೆ’’ಎಂದು ಪ್ರಧಾನಮಂತ್ರಿ ಹೇಳಿದರು.
***
Addressing a public meeting in Sonitpur district, Assam. https://t.co/LnRt81JyB6
— Narendra Modi (@narendramodi) February 7, 2021