ಭಾರತ್ ಮಾತಾ ಕೀ ಜೈ,
ಭಾರತ್ ಮಾತಾ ಕೀ ಜೈ,
ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಜೀ, ಉತ್ತರ ಪ್ರದೇಶದ ಜನಪ್ರಿಯ ಮತ್ತು ಉತ್ಸಾಹೀ, ಸಿಡಿಗುಂಡಿನಂತಹ ಮಾತಿನ ಮುಖ್ಯಮಂತ್ರಿ, ಯೋಗಿ ಆದಿತ್ಯನಾಥ ಜೀ, ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಜೀ, ಉತ್ತರ ಪ್ರದೇಶ ಸರಕಾರದ ಸಚಿವರೇ, ಇತರ ಸಂಸತ್ ಸದಸ್ಯರೇ, ಶಾಸಕರೇ ಮತ್ತು ಅಲಿಘರ್ ನ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ,
ಇಂದು ಅಲಿಘರ್ ಮತ್ತು ಪಶ್ಚಿಮ ಉತ್ತರ ಪ್ರದೇಶಕ್ಕೆ ಒಂದು ಚಾರಿತ್ರಿಕ ದಿನ. ಇಂದು ರಾಧಾ ಅಷ್ಟಮಿ ಕೂಡಾ. ಈ ಸಂದರ್ಭ ನಮಗೆಲ್ಲಾ ಹೆಚ್ಚು ಆಶೀರ್ವಾದಪೂರ್ವಕವಾಗಿ ಲಭ್ಯವಾದಂತಿದೆ. ರಾಧಾ ಬ್ರಜ್ ಭೂಮಿಯಲ್ಲಿ ಸರ್ವವ್ಯಾಪಿಯಾಗಿರುವಂತಹವರು. ನಾನು ನಿಮಗೆಲ್ಲಾ ಮತ್ತು ಇಡೀ ದೇಶಕ್ಕೆ ರಾಧಾ ಅಷ್ಟಮಿಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಈ ಪವಿತ್ರ ದಿನದಂದು ಸರಣಿ ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳುತ್ತಿರುವುದು ನಮ್ಮ ಅದೃಷ್ಟ. ಯಾವುದೇ ಪವಿತ್ರ ಕೆಲಸ ಆರಂಭ ಮಾಡುವಾಗ ನಾವು ನಮ್ಮ ಹಿರಿಯರನ್ನು ನೆನಪಿಸಿಕೊಳ್ಳುವುದು ನಮ್ಮ ಸಂಪ್ರದಾಯ. ಈ ಮಣ್ಣಿನ ಶ್ರೇಷ್ಠ ಪುತ್ರ ದಿವಂಗತ ಕಲ್ಯಾಣ್ ಸಿಂಗ್ ಜೀ ಅವರ ಗೈರು ಹಾಜರಿ ನನ್ನನ್ನು ಬಹಳವಾಗಿ ಕಾಡುತ್ತಿದೆ. ಕಲ್ಯಾಣ್ ಸಿಂಗ್ ಜೀ ಇಂದು ನಮ್ಮೊಂದಿಗಿದ್ದಿದ್ದರೆ ರಕ್ಷಣಾ ವಲಯದಲ್ಲಿ ಮತ್ತು ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ರಾಜ್ಯ ವಿಶ್ವವಿದ್ಯಾಲಯ ಸ್ಥಾಪನೆಯಿಂದಾಗಿ ಅಲಿಘರದ ಬದಲಾಗುತ್ತಿರುವ ಚಿತ್ರಣವನ್ನು ಕಂಡು ಬಹಳ ಸಂತೋಷ ಅನುಭವಿಸುತ್ತಿದ್ದರು. ಅವರ ಆತ್ಮ ನಮ್ಮನ್ನು ಹರಸುತ್ತಿರಲಿ.
ಸ್ನೇಹಿತರೇ,
ಸಾವಿರಾರು ವರ್ಷದ ಭಾರತೀಯ ಇತಿಹಾಸವು ಕಾಲ ಕಾಲಕ್ಕೆ ತಮ್ಮ ದೃಢ ನಿಲುವು ಮತ್ತು ತ್ಯಾಗದಿಂದ ಭಾರತಕ್ಕೆ ದಿಕ್ಕು ದಿಶೆಗಳನ್ನು ನೀಡಿದ ಇಂತಹ ದೇಶಭಕ್ತರಿಂದ ತುಂಬಿದೆ. ಎಷ್ಟೋ ಮಂದಿ ಶ್ರೇಷ್ಠ ವ್ಯಕ್ತಿಗಳು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಆದರೆ ದೇಶದ ಮುಂದಿನ ತಲೆಮಾರು ಇಂತಹ ರಾಷ್ಟ್ರೀಯ ನಾಯಕರ ಮತ್ತು ಪ್ರಮುಖ ಮಹಿಳೆಯರ ದೃಢ ನಿಶ್ಚಯ ಮತ್ತು ತ್ಯಾಗದ ಬಗ್ಗೆ ಪರಿಚಯ ಹೊಂದಿಲ್ಲದಂತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಸ್ವಾತಂತ್ರ್ಯಾನಂತರ ದೇಶದ ಹಲವು ತಲೆಮಾರುಗಳು ಅವರ ವೀರಗಾಥೆಯ ಮಾಹಿತಿಯಿಂದ ವಂಚಿತವಾಗಿವೆ.
ಇಂದು 21 ನೇ ಶತಮಾನದ ಭಾರತ 20 ನೇ ಶತಮಾನದ ಆ ದೋಷಗಳನ್ನು ಸರಿಪಡಿಸುತ್ತಿದೆ. ಮಹಾರಾಜ ಸುಖ್ ದೇವ್ ಇರಲಿ, ದೀನಬಂಧು ಚೌಧುರಿ ಛೋಟು ರಾಂ ಜೀ, ಅಥವಾ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಜೀ ಇರಲಿ, ಅವರ ಬಗ್ಗೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆ ಬಗ್ಗೆ ಹೊಸ ತಲೆಮಾರಿಗೆ ಪರಿಚಯ ಮಾಡಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗಿದೆ. ಇಂದು ದೇಶವು ಸ್ವಾತಂತ್ರ್ಯದ 75 ನೇ ವರ್ಷವನ್ನಾಚರಿಸುತ್ತಿರುವಾಗ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಈ ಪ್ರಯತ್ನಗಳಿಗೆ ಹೆಚ್ಚಿನ ವೇಗ ನೀಡಲಾಗಿದೆ. ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರು ಭಾರತದ ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆಯನ್ನು ಗೌರವಿಸುವ ಈ ಪವಿತ್ರ ಸಂದರ್ಭ ಆ ನಿಟ್ಟಿನಲ್ಲಿಯ ಒಂದು ಪ್ರಯತ್ನವಾಗಿದೆ.
ಸ್ನೇಹಿತರೇ,
ಇಂದು ಬಹಳ ದೊಡ್ಡ ಕನಸು ಕಾಣುವ ಮತ್ತು ದೊಡ್ಡದನ್ನು ಸಾಧಿಸಲು ಇಚ್ಛಿಸುವ ದೇಶದ ಪ್ರತಿಯೊಬ್ಬ ಯುವಜನತೆಯೂ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಜೀ ಅವರನ್ನು ತಿಳಿದುಕೊಳ್ಳಬೇಕು. ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಜೀ ಅವರ ಬದುಕಿನಿಂದ ಅವರ ಅದಮ್ಯ ಇಚ್ಛಾಶಕ್ತಿ ಮತ್ತು ಉತ್ಸಾಹದಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆ. ಅವರು ಸ್ವತಂತ್ರ ಭಾರತದ ಆಶಯವನ್ನು ಹೊಂದಿದ್ದರು ಮತ್ತು ಇದಕ್ಕಾಗಿ ತಮ್ಮ ಬದುಕಿನ ಸಮಯವನ್ನು ಮೀಸಲಾಗಿರಿಸಿದ್ದರು. ಅವರು ಭಾರತದಲ್ಲಿ ಉಳಿಯುವ ಮೂಲಕ ಜನತೆಗೆ ಪ್ರೇರೇಪಣೆ ನೀಡಿದ್ದು ಮಾತ್ರವಲ್ಲ ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ಜಗತ್ತಿನ ಪ್ರತೀ ಮೂಲೆಗಳಿಗೂ ತೆರಳಿದ್ದರು. ಅಫ್ಘಾನಿಸ್ತಾನ, ಪೋಲೆಂಡ್ , ಜಪಾನ್, ದಕ್ಷಿಣ ಆಫ್ರಿಕಾಗಳಂತಹ ಪ್ರದೇಶಗಳಿಗೆ ತೆರಳಿ ಭಾರತ ಮಾತೆಯನ್ನು ಸಂಕೋಲೆಗಳಿಂದ ವಿಮೋಚನೆ ಮಾಡಲು ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ಕೆಲಸ ಮಾಡಿದ್ದಲ್ಲದೆ ಅದಕ್ಕೆ ಬದ್ಧರಾಗಿಯೂ ದುಡಿದಿದ್ದರು.
ನಾನು ದೇಶದ ಯುವ ಜನತೆಗೆ ಹೇಳಲಿಚ್ಛಿಸುತ್ತೇನೆ ಮತ್ತು ನನ್ನನ್ನು ಅತ್ಯಂತ ಜಾಗ್ರತೆಯಿಂದ ಆಲಿಸಿ, ಅದೇನೆಂದರೆ ಯಾವುದೇ ಗುರಿ ಸಾಧನೆ ಕಷ್ಟವೆಂದು ಕಂಡು ಬಂದಾಗ ಅಥವಾ ಕೆಲವು ಸಂಕಷ್ಟಗಳು ಎದುರಾದಾಗ ನೀವು ನಿಮ್ಮ ಮನಸ್ಸಿನಲ್ಲಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ರನ್ನು ನೆನಪಿಗೆ ತಂದುಕೊಳ್ಳಿ, ನಿಮ್ಮಲ್ಲಿ ಸ್ಫೂರ್ತಿ ಹೆಚ್ಚುತ್ತದೆ. ಒಂದು ಗುರಿಯನ್ನಿಟ್ಟುಕೊಂಡು ಮತ್ತು ಅದಕ್ಕಾಗಿ ಅರ್ಪಣಾ ಭಾವದಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಜೀ ಆವರು ಕಾರ್ಯ ನಿರ್ವಹಿಸಿದ ರೀತಿ ನಿರಂತರವಾಗಿ ನಮಗೆ ಪ್ರೇರಣೆ ನೀಡುವಂತಹದ್ದು.
ಮತ್ತು ಸ್ನೇಹಿತರೇ,
ನಿಮ್ಮೊಂದಿಗೆ ಮಾತನಾಡುವಾಗ, ದೇಶದ ಇನ್ನೋರ್ವ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ, ಗುಜರಾತಿನ ಪುತ್ರ ಶ್ಯಾಂಜಿ ಕೃಷ್ಣ ವರ್ಮಾ ಜೀ ಅವರು ನೆನಪಾಗುತ್ತಾರೆ. ಮೊದಲ ಮಹಾ ಯುದ್ಧದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಜೀ ಅವರು ಯುರೋಪಿಗೆ ವಿಶೇಷವಾಗಿ ಶ್ಯಾಂಜಿ ಕೃಷ್ಣ ವರ್ಮಾ ಜೀ ಮತ್ತು ಲಾಲಾ ಹರ್ ದಯಾಲ್ ಜೀ ಅವರನ್ನು ಭೇಟಿಯಾಗಲು ಹೋಗಿದ್ದರು. ಆ ಸಭೆಯಲ್ಲಿ ಕೈಗೊಂಡ ನಿರ್ಧಾರದ ಫಲವಾಗಿ ಭಾರತದ ಮೊದಲ ಗಡಿ ದಾಟಿದ ಅಥವಾ ಗಡಿಪಾರು ಸರಕಾರ ಅಪಘಾನಿಸ್ಥಾನದಲ್ಲಿ ಸ್ಥಾಪನೆಯಾಯಿತು. ಈ ಸರಕಾರಕ್ಕೆ ಮುಖ್ಯಸ್ಥರಾಗಿದ್ದವರು ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಜೀ.
73 ವರ್ಷಗಳ ಬಳಿಕ ಶ್ಯಾಂಜಿ ಕೃಷ್ಣ ವರ್ಮಾ ಜೀ ಅವರ ಚಿತಾ ಭಸ್ಮವನ್ನು, ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಭಾರತಕ್ಕೆ ತರುವಲ್ಲಿ ಯಶಸ್ಸು ಸಾಧಿಸಿದ ಅದೃಷ್ಟಶಾಲಿಯಾದೆ. ನಿಮಗೆಂದಾದರೂ ಕಚ್ ಗೆ ಬೇಟಿ ನೀಡುವ ಸಂದರ್ಭ ಒದಗಿ ಬಂದರೆ ಅಲ್ಲಿ ಮಾಂಡ್ವಿಯಲ್ಲಿ ಶ್ಯಾಂಜಿ ಕೃಷ್ಣ ವರ್ಮಾ ಜೀ ಅವರ ಪ್ರೇರಣಾದಾಯಕವಾದಂತಹ ಸ್ಮಾರಕವಿದೆ, ಅಲ್ಲಿ ಅವರ ಚಿತಾಭಸ್ಮವನ್ನು ಇಡಲಾಗಿದೆ ಮತ್ತು ಅವರು ಭಾರತ ಮಾತೆಗಾಗಿ ಬದುಕಲು ನಮಗೆ ಸದಾ ಪ್ರೇರಣೆ ನೀಡುತ್ತಿರುತ್ತಾರೆ.
ರಾಜಾ ಮಹೇಂದ್ರ ಪ್ರತಾಪ್ ಜೀ ಅವರಂತಹ ಶ್ರೇಷ್ಠ ದೂರದೃಷ್ಟಿಯ ನಾಯಕ ಮತ್ತು ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ವಿಶ್ವವಿದ್ಯಾಲಯಕ್ಕೆ ಶಿಲಾನ್ಯಾಸ ಮಾಡುವ ಅವಕಾಶ ದೇಶದ ಪ್ರಧಾನ ಮಂತ್ರಿಯಾಗಿ ನನಗೆ ದೊರಕಿದೆ. ಇದು ನನ್ನ ಬದುಕಿನ ಬಹಳ ದೊಡ್ಡ ಅದೃಷ್ಟ. ಇಂತಹ ಪವಿತ್ರ ಸಂದರ್ಭದಲ್ಲಿ ನಿಮ್ಮ ಆಶೀರ್ವಾದವನ್ನು ನೀಡಲು ನೀವು ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಬಂದಿದ್ದೀರಿ ಮತ್ತು ನನಗೆ ಕೂಡಾ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗಿರುವುದು ಬಹಳ ಉತ್ತೇಜನ, ಶಕ್ತಿ ತುಂಬುವ ಸಂಗತಿಯಾಗಿದೆ.
ಸ್ನೇಹಿತರೇ,
ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಜೀ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಮಾತ್ರವೇ ಹೋರಾಟ ಮಾಡಿದ್ದಲ್ಲ ಅವರು ಭಾರತದ ಭವಿಷ್ಯತ್ತಿಗೂ ನೆಲೆಗಟ್ಟು ಹಾಕುವಲ್ಲಿ ಸಕ್ರಿಯವಾಗಿ ಕೊಡುಗೆಯನ್ನು ನೀಡಿದ್ದಾರೆ. ತಮ್ಮ ವಿದೇಶ ಪ್ರವಾಸಗಳ ಅನುಭವವನ್ನು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸಲು ಅವರು ಬಳಸಿಕೊಂಡರು. ಅವರು ತಮ್ಮ ಪೂರ್ವಜರ ಆಸ್ತಿಯನ್ನು ದಾನ ಮಾಡಿ ತಮ್ಮದೇ ಸಂಪನ್ಮೂಲಗಳ ಮೂಲಕ ವೃಂದಾವನದಲ್ಲಿ ಆಧುನಿಕ ತಾಂತ್ರಿಕ ಕಾಲೇಜನ್ನು ಕಟ್ಟಿದರು. ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಬೃಹತ್ ಪ್ರಮಾಣದ ಭೂಮಿಯನ್ನೂ ನೀಡಿದ್ದಾರೆ. ಇಂದು 21 ನೇ ಶತಮಾನದ ಭಾರತ ಶಿಕ್ಷಣದ ಹಾದಿಯಲ್ಲಿ ಮುನ್ನಡೆಯುತ್ತಿದೆ. ಸ್ವಾತಂತ್ರ್ಯದ ಆಮೃತ ಮಹೋತ್ಸವದಲ್ಲಿ ಕೌಶಲ್ಯದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಭಾರತ ಮಾತೆಯ ಈ ಶ್ರೇಷ್ಟ ಪುತ್ರನ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಯಾಗುತ್ತಿರುವುದು ಅವರಿಗೆ ಸಲ್ಲಿಸುವ ನೈಜ ಶೃದ್ಧಾಂಜಲಿಯಾಗಿದೆ. ಯೋಗೀ ಜೀ ಅವರಿಗೆ ಮತ್ತು ಅವರ ಇಡೀ ತಂಡಕ್ಕೆ ಈ ಚಿಂತನೆಯನ್ನು ಕಾರ್ಯರೂಪಕ್ಕೆ ತಂದಿರುವುದಕ್ಕೆ ಬಹಳ ಅಭಿನಂದನೆಗಳು.
ಸ್ನೇಹಿತರೇ,
ಈ ವಿಶ್ವವಿದ್ಯಾನಿಲಯ ಆಧುನಿಕ ಶಿಕ್ಷಣದ ಪ್ರಮುಖ ಕೇಂದ್ರವಾಗುವುದು ಮಾತ್ರವಲ್ಲ, ಅದು ಆಧುನಿಕ ರಕ್ಷಣಾ ಅಧ್ಯಯನದ ಕೇಂದ್ರವಾಗಿಯೂ, ರಕ್ಷಣಾ ಉತ್ಪಾದನಾ ಸಂಬಂಧಿ ತಂತ್ರಜ್ಞಾನ ಮತ್ತು ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಯ ಕೇಂದ್ರವಾಗಿಯೂ ಮೂಡಿ ಬರಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕೌಶಲ್ಯ ಕುರಿತ ಅಂಶಗಳು ಮತ್ತು ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಲಿದೆ.
ಮಿಲಿಟರಿ ಶಕ್ತಿಯಲ್ಲಿ ಸ್ವಾವಲಂಬಿಯಾಗುವ ಭಾರತದ ಪ್ರಯತ್ನಗಳು ಈ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನಗಳಿಗೆ ವೇಗ ದೊರಕಿಸಿಕೊಡಲಿವೆ. ಆಧುನಿಕ ಗ್ರೆನೇಡ್ ಗಳಿಂದ ಹಿಡಿದು ಯುದ್ಧ ವಿಮಾನಗಳ ರೈಫಲ್ ಗಳು, ಡ್ರೋನ್ ಗಳು, ಯುದ್ಧ ನೌಕೆಗಳು ಇತ್ಯಾದಿಗಳನ್ನು ಒಳಗೊಂಡಂತೆ ರಕ್ಷಣಾ ಉಪಕರಣಗಳನ್ನು ಭಾರತ ಉತ್ಪಾದಿಸುತ್ತಿರುವುದನ್ನು ಇಡೀ ವಿಶ್ವ ಗಮನಿಸುತ್ತಿದೆ. ಭಾರತವು ಈಗ ರಕ್ಷಣಾ ಸಾಮಗ್ರಿಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿವ ದೇಶ ಎಂಬ ಹಣೆಪಟ್ಟಿಯಿಂದ ಹೊರಬಂದು, ಜಗತ್ತಿನ ಪ್ರಮುಖ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ದೇಶ ಎಂಬುದಾಗಿ ಗುರುತಿಸಲ್ಪಡುತ್ತಿದೆ. ಸ್ವಾತಂತ್ರ್ಯದ 75 ವರ್ಷಗಳಲ್ಲಿ ನಾವು ನಿರಂತರವಾಗಿ ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡುತ್ತಿದ್ದೆವು. ಉತ್ತರ ಪ್ರದೇಶ ಈಗ ಪರಿವರ್ತನೆಯ ಬಹಳ ದೊಡ್ಡ ಕೇಂದ್ರವಾಗುತ್ತಿದೆ ಮತ್ತು ಇದಕ್ಕಾಗಿ ನಾನು ಉತ್ತರ ಪ್ರದೇಶದ ಸಂಸತ್ ಸದಸ್ಯನಾಗಿ ಬಹಳ ಸಂತೋಷಪಡುತ್ತೇನೆ.
ಸ್ನೇಹಿತರೇ,
ಸ್ವಲ್ಪ ಸಮಯದ ಹಿಂದೆ ರಕ್ಷಣಾ ಕಾರಿಡಾರಿನ “ಅಲಿಘರ್ ಗೊಂಚಲಿನ .” (ಅಲಿಘರ್ ನೋಡ್) ನ ಪ್ರಗತಿಯನ್ನು ವೀಕ್ಷಿಸಿದೆ. ಒಂದೂವರೆ ಡಜನ್ನಿಗೂ ಅಧಿಕ ರಕ್ಷಣಾ ಉತ್ಪಾದನಾ ಕಂಪೆನಿಗಳು ಬಿಲಿಯಾಂತರ ರೂಪಾಯಿ ಹೂಡಿಕೆಯೊಂದಿಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿ ಮಾಡಲಿವೆ. ರಕ್ಷಣಾ ಕಾರಿಡಾರಿನ ಅಲಿಘರ್ ಗೊಂಚಲಿನಲ್ಲಿ ಸಣ್ಣ ಶಸ್ತ್ರಾಸ್ತ್ರಗಳನ್ನು, ಡ್ರೋನ್ ಗಳನ್ನು ಮತ್ತು ಬಾಹ್ಯಾಕಾಶ ಸಂಬಂಧಿ ಉಪಕರಣಗಳನ್ನು, ಲೋಹದ ಭಾಗಗಳನ್ನು, ಡ್ರೋನ್ ನಿರೋಧಿ ಭಾಗಗಳು ಇತ್ಯಾದಿಗಳನ್ನು ತಯಾರಿಸಲು ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಇದು ಅಲಿಘರಕ್ಕೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹೊಸ ಗುರುತಿಸುವಿಕೆಯನ್ನು ನೀಡಲಿದೆ.
ಸ್ನೇಹಿತರೇ,
ಇದುವರೆಗೆ ಜನತೆ ಅವರ ಮನೆಗಳ ಮತ್ತು ಅಂಗಡಿಗಳ ಭದ್ರತೆಗೆ ಅಲಿಘರ್ ನ್ನು ಅವಲಂಬಿಸಿದ್ದರು ಎಂಬುದು ನಿಮಗೆ ಗೊತ್ತಿರಬಹುದು. ಅಲಿಘರದ ಜೋತಾಡುವ ಬೀಗವೊಂದಿದ್ದರೆ ಸಾಕು ಅದು ಭದ್ರತೆ ಎಂದು ಜನರು ನಂಬಿಕೊಂಡು ಸಮಾಧಾನದಿಂದಿರುತ್ತಿದ್ದರು. ಮತ್ತು ಇಂದು ನಾನು ನನ್ನ ಬಾಲ್ಯ ಕಾಲದ ಬಗ್ಗೆ ಮಾತನಾಡುತ್ತಿದ್ದೇನೆ. ಅದು ಸುಮಾರು 55-60 ವರ್ಷಗಳ ಹಿಂದಿನ ಮಾತು. ನಾವೆಲ್ಲ ಮಕ್ಕಳಾಗಿದ್ದಾಗ ಅಲಿಘರದಿಂದ ಜೋತಾಡುವ ಬೀಗಗಳನ್ನು ಮಾರಾಟ ಮಾಡಲು ಮಾರಾಟಗಾರರೊಬ್ಬರು ಬರುತ್ತಿದ್ದರು. ಅವರು ಮುಸ್ಲಿಂ ಪೋಷಾಕಿನಲ್ಲಿರುತ್ತಿದ್ದರು ಮತ್ತು ಪ್ರತೀ ಮೂರು ತಿಂಗಳಿಗೊಮ್ಮೆ ಬರುತ್ತಿದ್ದರು. ನನಗಿನ್ನೂ ನೆನಪಿದೆ, ಅವರು ಕಪ್ಪು ಜ್ಯಾಕೆಟ್ ಧರಿಸುತ್ತಿದ್ದರು. ಅವರು ತನ್ನ ಜೋತಾಡುವ ಬೀಗಗಳನ್ನು ಅಂಗಡಿಗಳಿಗೆ ಮಾರಿ ಮೂರು ತಿಂಗಳ ಬಳಿಕ ತನ್ನ ಹಣವನ್ನು ಪಡೆಯಲು ಬರುತ್ತಿದ್ದರು. ನೆರೆಯ ಗ್ರಾಮಗಳ ವ್ಯಾಪಾರಿಗಳಿಗೂ ಅವರು ಬೀಗಗಳನ್ನು ಮಾರಾಟ ಮಾಡುತ್ತಿದ್ದರು. ಅವರು ನನ್ನ ತಂದೆಯವರ ಜೊತೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದರು. ಅವರು ತಮ್ಮ ಭೇಟಿಯಲ್ಲಿ ನಾಲ್ಕಾರು ದಿನ ನಮ್ಮ ಗ್ರಾಮದಲ್ಲಿ ತಂಗುತ್ತಿದ್ದರು. ಹಗಲಿನಲ್ಲಿ ಸಂಗ್ರಹಿಸಿದ ಹಣವನ್ನು ಅವರು ನಮ್ಮ ತಂದೆಯವರಲ್ಲಿ ಇಟ್ಟುಕೊಳ್ಳಲು ನೀಡುತ್ತಿದ್ದರು. ಮತ್ತು ನನ್ನ ತಂದೆ ಅದನ್ನು ಜಾಗ್ರತೆಯಿಂದ ಇರಿಸುತ್ತಿದ್ದರು. ನಾಲ್ಕಾರು ದಿನಗಳ ನಂತರ ಗ್ರಾಮದಿಂದ ಅವರು ಹೊರಡುವಾಗ ನನ್ನ ತಂದೆಯವರಿಂದ ಹಣ ಪಡೆದುಕೊಂಡು ರೈಲು ಹತ್ತುತ್ತಿದ್ದರು. ಬಾಲ್ಯದಲ್ಲಿ ನಮಗೆ ಉತ್ತರ ಪ್ರದೇಶದ ಎರಡು ನಗರಗಳಾದ –ಸೀತಾಪುರ ಮತ್ತು ಅಲಿಘರ್ ಗಳು ಚಿರಪರಿಚಿತವಾಗಿದ್ದವು. ನಮ್ಮ ಗ್ರಾಮದಲ್ಲಿ ಯಾರಿಗಾದರೂ ಕಣ್ಣಿನ ಚಿಕಿತ್ಸೆ ಆಗಬೇಕಾಗಿದ್ದರೆ ಆಗ ಅವರಿಗೆ ಸಾಮಾನ್ಯವಾಗಿ ಸೀತಾಪುರಕ್ಕೆ ಹೋಗಲು ಸಲಹೆ ಮಾಡಲಾಗುತ್ತಿತ್ತು. ಆಗ ನಮಗೆ ಹೆಚ್ಚು ಅರ್ಥವಾಗುತ್ತಿರಲಿಲ್ಲ. ಅದರೆ ಸೀತಾಪುರದ ಹೆಸರನ್ನು ಹೆಚ್ಚಾಗಿ ಕೇಳುತ್ತಿದ್ದೆವು. ಅದೇ ರೀತಿ ಅಲಿಘರದ ಬಗ್ಗೆಯೂ ಆಗಾಗ ಕೇಳುತ್ತಿದ್ದೆವು. ಅದಕ್ಕೆ ಕಾರಣ ಈ ಮಾರಾಟಗಾರ ವ್ಯಕ್ತಿ.
ಆದರೆ ಸ್ನೇಹಿತರೇ,
ಮನೆಗಳನ್ನು ಮತ್ತು ಅಂಗಡಿಗಳನ್ನು ರಕ್ಷಿಸುವಲ್ಲಿ ತನ್ನ ಪ್ರಖ್ಯಾತವಾದ ಜೋತಾಡುವ ಬೀಗಗಳಿಂದಾಗಿ ಪ್ರಸಿದ್ಧಿ ಪಡೆದಿದ್ದ ಅಲಿಘರ್ ಈಗ ದೇಶದ ಗಡಿಗಳನ್ನು ರಕ್ಷಿಸುವ ಉತ್ಪಾದನೆಗಳಿಗೆ ಪ್ರಖ್ಯಾತವಾಗುತ್ತಿದೆ. ಇಂತಹ ಅಸ್ತ್ರಗಳನ್ನು ಇಲ್ಲಿ ತಯಾರಿಸಲಾಗುತ್ತಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿಯಲ್ಲಿ ಉತ್ತರ ಪ್ರದೇಶ ಸರಕಾರ ಅಲಿಘರ್ ನ ಜೋತಾಡುವ ಬೀಗಗಳು ಮತ್ತು ಹಾರ್ಡ್ ವೇರ್ ಗೆ ಹೊಸ ಗುರುತನ್ನು ನೀಡಿದೆ. ಇದು ಯುವಜನತೆಗೆ ಮತ್ತು ಎಂ.ಎಸ್.ಎಂ.ಇ.ಗೆ ಹೊಸ ಅವಕಾಶಗಳನ್ನು ಸೃಷ್ಟಿ ಮಾಡುತ್ತಿದೆ. ಈಗ ಇರುವ ಉದ್ಯಮಗಳು ಮತ್ತು ಎಂ.ಎಸ್.ಎಂ.ಇ. ಗಳು ವಿಶೇಷ ಸೌಲಭ್ಯಗಳನ್ನು ಪಡೆಯುತ್ತವೆ ಮತ್ತು ಹೊಸ ಎಂ.ಎಸ್.ಎಂ.ಇ.ಗಳೂ ರಕ್ಷಣಾ ಉದ್ಯಮದ ಮೂಲಕ ಪ್ರೋತ್ಸಾಹಧನ ಪಡೆಯುತ್ತವೆ. ರಕ್ಷಣಾ ಕಾರಿಡಾರಿನ ಅಲಿಘರ್ ಗೊಂಚಲು ಸಣ್ಣ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ನಿರ್ಮಾಣ ಮಾಡಲಿದೆ.
ಸಹೋದರರೇ ಮತ್ತು ಸಹೋದರಿಯರೇ,
ಜಗತ್ತಿನ ಅತ್ಯಂತ ಉತ್ತಮ ಕ್ಷಿಪಣಿ ಬ್ರಹ್ಮೋಸ್ ನ್ನು ಕೂಡಾ ರಕ್ಷಣಾ ಕಾರಿಡಾರಿನ ಲಕ್ನೋ ಗೊಂಚಲಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 9,000 ಕೋ.ರೂ.ಗಳನ್ನು ಹೂಡಿಕೆ ಮಾಡಲಾಗುತ್ತದೆ. ಉತ್ತರ ಪ್ರದೇಶ ರಕ್ಷಣಾ ಕಾರಿಡಾರ್ ಇಂತಹ ಬೃಹತ್ ಹೂಡಿಕೆಯೊಂದಿಗೆ ಮತ್ತು ಉದ್ಯೋಗಾವಕಾಶಗಳೊಂದಿಗೆ ನೆಲೆ ಕಂಡುಕೊಳ್ಳಲಿದೆ.
ಸ್ನೇಹಿತರೇ,
ಉತ್ತರ ಪ್ರದೇಶವು ದೇಶದ ಮತ್ತು ಜಗತ್ತಿನ ಪ್ರತೀ ಸಣ್ಣ ಮತ್ತು ದೊಡ್ಡ ಹೂಡಿಕೆದಾರರಿಗೆ ಆಕರ್ಷಕ ಸ್ಥಳವಾಗಿದೆ. ಹೂಡಿಕೆಗೆ ಅವಶ್ಯವಾದ ಪರಿಸರ ಮತ್ತು ಅಗತ್ಯ ಸೌಕರ್ಯಗಳು ಲಭ್ಯವಾಗುವಂತೆ ಮಾಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಎರಡು ಇಂಜಿನ್ ಸರಕಾರದ ದುಪ್ಪಟ್ಟು ಪ್ರಯೋಜನಗಳ ಬಹಳ ದೊಡ್ಡ ಉದಾಹರಣೆ ಎಂದರೆ ಉತ್ತರ ಪ್ರದೇಶ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರವನ್ನು ಅನುಸರಿಸಿ ಯೋಗೀ ಜೀ ಮತ್ತು ಅವರ ಇಡೀ ತಂಡ ಉತ್ತರ ಪ್ರದೇಶವನ್ನು ಹೊಸ ಪಾತ್ರಕ್ಕೆ ಸಜ್ಜು ಮಾಡಿದ್ದಾರೆ. ಇದು ಪ್ರತಿಯೊಬ್ಬರ ಪ್ರಯತ್ನದೊಂದಿಗೆ ಮುಂದುವರೆಯಬೇಕು. ಸಮಾಜದಲ್ಲಿ ಅಭಿವೃದ್ಧಿ ಅವಕಾಶಗಳಿಂದ ವಂಚಿತರಾದವರಿಗೆ, ಅದರಿಂದ ದೂರ ಉಳಿದವರಿಗೆ ಶಿಕ್ಷಣದಲ್ಲಿ ಮತ್ತು ಸರಕಾರಿ ಉದ್ಯೋಗದಲ್ಲಿ ಅವಕಾಶ ಒದಗಿಸುವಂತಾಗಬೇಕು. ಇಂದು ಉತ್ತರ ಪ್ರದೇಶ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಮತ್ತು ಪ್ರಮುಖ ನಿರ್ಧಾರಗಳಿಗಾಗಿ ಪ್ರಖ್ಯಾತವಾಗಿದೆ. ಪಶ್ಚಿಮ ಉತ್ತರ ಪ್ರದೇಶ ಇದರ ಬಹಳ ದೊಡ್ಡ ಫಲಾನುಭವಿಯಾಗಿದೆ.
ಗ್ರೇಟರ್ ನೊಯಿಡಾದಲ್ಲಿ ಸಮಗ್ರ ಕೈಗಾರಿಕಾ ಟೌನ್ ಶಿಪ್ ನಿರ್ಮಾಣ, ಬಹು ಮಾದರಿ ಸಾರಿಗೆ ಸಾಗಾಟ ಹಬ್, ಜೀವಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಆಧುನಿಕ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇ ಗಳು ಪಶ್ಚಿಮ ಉತ್ತರ ಪ್ರದೇಶದಲ್ಲಿ ಅನುಷ್ಟಾನಕ್ಕೆ ಬರುತ್ತಿವೆ. ಉತ್ತರ ಪ್ರದೇಶದ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗಳು ಮುಂದಿನ ವರ್ಷಗಳಲ್ಲಿ ಭಾರತದ ಪ್ರಗತಿಗೆ ಬೃಹತ್ ಆಧಾರವಾಗಲಿವೆ.
ಸಹೋದರರೇ ಮತ್ತು ಸಹೋದರಿಯರೇ,
ದೇಶದ ಅಭಿವೃದ್ಧಿಯಲ್ಲಿ ತೊಡರುಗಲ್ಲಾಗಿ ನಿಂತ ಅದೇ ಉತ್ತರ ಪ್ರದೇಶ ಈಗ ದೇಶದ ದೊಡ್ಡ ಆಂದೋಲನಗಳ ನಾಯಕತ್ವ ವಹಿಸುವುದನ್ನು ನೋಡುವುದಕ್ಕೆ ನಾನು ಬಹಳ ಸಂತೋಷಪಡುತ್ತಿದ್ದೇನೆ. ಶೌಚಾಲಯಗಳನ್ನು ನಿರ್ಮಾಣ ಮಾಡುವ ಆಂದೋಲನ ಇರಲಿ, ಬಡವರಿಗೆ ಪಕ್ಕಾ ಮನೆಗಳನ್ನು ನೀಡುವ ಕಾರ್ಯಕ್ರಮ ಇರಲಿ, ಉಜ್ವಲಾದಡಿ ಅಡುಗೆ ಅನಿಲ ಸಂಪರ್ಕ ನೀಡುವುದಿರಲಿ, ವಿದ್ಯುತ್ ಸಂಪರ್ಕ ಒದಗಿಸುವುದಿರಲಿ, ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಇರಲಿ, ಎಲ್ಲದರಲ್ಲೂ ಯೋಗೀ ಜೀ ಅವರ ಉತ್ತರ ಪ್ರದೇಶವು ದೇಶದ ಪ್ರತೀ ಯೋಜನೆಯನ್ನು ಮತ್ತು ಆಂದೋಲನವನ್ನು ಅನುಷ್ಟಾನಿಸುವ ಮೂಲಕ ಗುರಿಗಳನ್ನು ಸಾಧಿಸುವಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿದೆ. 2017ಕ್ಕೆ ಮೊದಲು ಬಡವರಿಗೆ ಸಂಬಂಧಿಸಿದ ಪ್ರತೀ ಕಾರ್ಯಕ್ರಮವನ್ನು ಇಲ್ಲಿ ತಡೆಹಿಡಿಯಲಾಗುತ್ತಿತ್ತು. ಅದನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ ಮತ್ತು ಆ ದಿನಗಳನ್ನು ನಾನು ಮರೆಯಲಾರೆ. ಪ್ರತೀ ಯೋಜನೆಯನ್ನು ಅನುಷ್ಟಾನಿಸುವಂತೆ ಕೇಂದ್ರವು ಡಜನ್ನುಗಟ್ಟಲೆ ಪತ್ರಗಳನ್ನು ಬರೆಯುತ್ತಿತ್ತು. ಆದರೆ ಕಾರ್ಯದ ಪ್ರಗತಿ ಮಾತ್ರ ಬಹಳ ನಿಧಾನಗತಿಯಲ್ಲಿ ಇರುತ್ತಿತ್ತು…ನಾನು 2017 ಕ್ಕಿಂತ ಮೊದಲಿನ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದೇನೆ. ..ಆದು ಆಗಬೇಕಾದ ರೀತಿಯಲ್ಲಿ ಆಗುತ್ತಿರಲಿಲ್ಲ.
ಸ್ನೇಹಿತರೇ,
ಉತ್ತರ ಪ್ರದೇಶದ ಜನತೆ ಇಲ್ಲಿ ನಡೆಯುತ್ತಿದ್ದ ಹಗರಣಗಳನ್ನು ಮತ್ತು ಆಡಳಿತವನ್ನು ಹೇಗೆ ಭ್ರಷ್ಟರ ಕೈಗಳಿಗೆ ಒಪ್ಪಿಸಲಾಗಿತ್ತು ಎಂಬುದನ್ನು ಮರೆಯಲಾರರು. ಇಂದು ಯೋಗೀ ಜೀ ಅವರ ಸರಕಾರ ಉತ್ತರ ಪ್ರದೇಶದ ಅಭಿವೃದ್ಧಿಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದೆ. ಇಲ್ಲಿಯ ಆಡಳಿತವನ್ನು ಮಾಫಿಯಾಗಳು, ಗೂಂಡಾಗಳು ನಡೆಸುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಮಾಫಿಯಾ ರಾಜ್ ನಡೆಸುತ್ತಿದ್ದವರು, ಹಣ ವಸೂಲು ಮಾಡುತ್ತಿದ್ದವರು ಕಬ್ಬಿಣದ ಕಂಬಿಗಳ ಹಿಂದೆ, ಜೈಲಿನಲ್ಲಿದ್ದಾರೆ.
ಪಶ್ಚಿಮ ಉತ್ತರ ಪ್ರದೇಶದ ಜನತೆಗೆ ನಾನು ವಿಶೇಷವಾಗಿ ನೆನಪು ಮಾಡಲಿಚ್ಛಿಸುತ್ತೇನೆ. ನಾಲ್ಕೈದು ವರ್ಷಗಳ ಹಿಂದೆ, ಈ ಭಾಗದ ಕುಟುಂಬಗಳು ತಮ್ಮ ಮನೆಗಳಲ್ಲಿ ಭಯದಿಂದ ಬದುಕುತ್ತಿದ್ದರು. ಸಹೋದರಿಯರು ಮತ್ತು ಪುತ್ರಿಯರು ಶಾಲೆ ಮತ್ತು ಕಾಲೇಜುಗಳಿಗೆ ಹೋಗಲು ಮನೆಯಿಂದ ಹೊರಬರಲು ಹೆದರುತ್ತಿದ್ದರು. ಪೋಷಕರು ತಮ್ಮ ಮಕ್ಕಳು ಮನೆಗೆ ಬರುವವರೆಗೆ ಉಸಿರು ಬಿಗಿ ಹಿಡಿದು ನಿಲ್ಲುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಹಲವಾರು ಜನರು ತಮ್ಮ ಪೂರ್ವಜರ ಮನೆಯನ್ನು ತೊರೆದು ವಲಸೆ ಹೋಗುತ್ತಿದ್ದರು.ಇಂದು ಉತ್ತರ ಪ್ರದೇಶದ ಕ್ರಿಮಿನಲ್ ಒಬ್ಬ ಇಂತಹ ಕೃತ್ಯವನ್ನು ಮಾಡಬೇಕಿದ್ದರೆ ನೂರು ಬಾರಿ ಯೋಚಿಸುತ್ತಾನೆ !.
ಸ್ನೇಹಿತರೇ,
ಸ್ವಾತಂತ್ರ್ಯದ ಈ ಅಮೃತದಲ್ಲಿ ಗ್ರಾಮೀಣ ಆರ್ಥಿಕತೆ ಕೂಡಾ ತ್ವರಿತವಾಗಿ ಬದಲಾಗುತ್ತಿದೆ. ದಶಕಗಳ ಹಿಂದೆ, ಚೌಧುರಿ ಚರಣ ಸಿಂಗ್ ಜೀ ಅವರೇ ಬದಲಾವಣೆ ಜೊತೆ ಹೇಗೆ ಹೋಗಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಚೌಧುರಿ ಸಾಹೀಬ್ ಅವರು ಹಾಕಿ ಕೊಟ್ಟ ಹಾದಿಯಿಂದ ದೇಶದ ಕೃಷಿ ಕಾರ್ಮಿಕರು ಮತ್ತು ಸಣ್ಣ ರೈತರು ಹೇಗೆ ಪ್ರಯೋಜನಗಳನ್ನು ಪಡೆದಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆ ಸುಧಾರಣೆಗಳ ಕಾರಣದಿಂದ ಇಂದು ಹಲವು ತಲೆಮಾರುಗಳು ಘನತೆಯಿಂದ ಜೀವನ ನಡೆಸುತ್ತಿವೆ.
ಚೌಧುರಿ ಸಾಹೀಬ್ ಅವರು ಕಳಕಳಿ ಹೊಂದಿದ್ದ ದೇಶದ ಸಣ್ಣ ರೈತರ ಜೊತೆ ಪಾಲುದಾರನಾಗಿ ಸರಕಾರ ನಿಲ್ಲುವುದು ಬಹಳ ಮುಖ್ಯ. ಈ ಸಣ್ಣ ರೈತರು ಎರಡು ಹೆಕ್ಟೇರಿಗಿಂತ ಕಡಿಮೆ ಭೂಮಿಯನ್ನು ಹೊಂದಿರುವಂತಹವರು ಮತ್ತು ನಮ್ಮ ದೇಶದಲ್ಲಿರುವ ಸಣ್ಣ ರೈತರ ಸಂಖ್ಯೆ 80 ಶೇಖಡಾಕ್ಕಿಂತಲೂ ಅಧಿಕ. ಬೇರೆ ಮಾತುಗಳಲ್ಲಿ ಹೇಳುವುದಾದರೆ ದೇಶದಲ್ಲಿ ಭೂಮಿ ಹೊಂದಿರುವ 10 ಮಂದಿ ರೈತರಲ್ಲಿ 8 ಮಂದಿ ರೈತರು ಬಹಳ ಸಣ್ಣ ಹಿಡುವಳಿಯನ್ನು ಹೊಂದಿದವರು. ಆದುದರಿಂದ ಸಣ್ಣ ರೈತರನ್ನು ಸಶಕ್ತೀಕರಣಗೊಳಿಸಲು ಕೇಂದ್ರ ಸರಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಒಂದೂವರೆ ಪಟ್ಟು ಎಂ.ಎಸ್.ಪಿ., ಕಿಸಾನ್ ಕ್ರೆಡಿಟ್ ಕಾರ್ಡಿನ ವಿಸ್ತರಣೆ, ವಿಮಾ ಯೋಜನೆಯಲ್ಲಿ ಸುಧಾರಣೆ, 3,000 ರೂಪಾಯಿ ಪಿಂಚಣಿ; ಇಂತಹ ಹಲವು ನಿರ್ಧಾರಗಳು ಸಣ್ಣ ರೈತರನ್ನು ಸಶಕ್ತೀಕರಣಗೊಳಿಸುತ್ತಿವೆ.
ಕೊರೊನಾ ಕಾಲದಲ್ಲಿ ಸರಕಾರ ದೇಶಾದ್ಯಂತ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಸಣ್ಣ ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡಿತು. ಮತ್ತು ಉತ್ತರ ಪ್ರದೇಶದ ರೈತರು 25,000 ಕೋ.ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ಪಡೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಎಂ.ಎಸ್.ಪಿ. ಮೂಲಕ ಖರೀದಿಯಲ್ಲಿ ಹೊಸ ದಾಖಲೆಗಳನ್ನು ಮಾಡಲಾಗಿದೆ ಎಂಬುದು ನನಗೆ ಸಂತೋಷದ ಸಂಗತಿಯಾಗಿದೆ. ಕಬ್ಬಿನ ಹಣ ಪಾವತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರಂತರವಾಗಿ ಬಗೆಹರಿಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಉತ್ತರ ಪ್ರದೇಶದ ಕಬ್ಬು ಬೆಳೆಗಾರರಿಗೆ 1 ಲಕ್ಷ 40 ಸಾವಿರ ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ಪಾವತಿಸಲಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಉತ್ತರ ಪ್ರದೇಶದ ಕಬ್ಬು ಬೆಳೆಗಾರರಿಗೆ ಹೊಸ ಸಾಧ್ಯತೆಗಳ ಬಾಗಿಲು ತೆರೆಯಲಿದೆ. ಕಬ್ಬಿನಿಂದ ಉತ್ಪಾದನೆಯಾಗುವ ಎಥೆನಾಲ್ ನ್ನು ಜೈವಿಕ ಇಂಧನವನ್ನಾಗಿ ಮಾಡಿ ಇಂಧನಕ್ಕೆ ಪರ್ಯಾಯವಾಗಿ ಬಳಕೆ ಮಾಡಲಾಗುತ್ತದೆ. ಇದರಿಂದ ಪಶ್ಚಿಮ ಉತ್ತರ ಪ್ರದೇಶದ ಕಬ್ಬು ಬೆಳೆಗಾರರಿಗೆ ಪ್ರಯೋಜನವಾಗಲಿದೆ.
ಸ್ನೇಹಿತರೇ,
ಯೋಗೀ ಜೀ ಸರಕಾರ ಮತ್ತು ಕೇಂದ್ರ ಸರಕಾರ ಪರಸ್ಪರ ಹೆಗಲಿಗೆ ಹೆಗಲು ಕೊಟ್ಟು ಅಲಿಘರ್ ಸಹಿತ ಇಡೀ ಪಶ್ಚಿಮ ಉತ್ತರ ಪ್ರದೇಶದ ಪ್ರಗತಿಗೆ ಪರಿಶ್ರಮಪಡುತ್ತಿದೆ. ನಾವು ಒಗ್ಗೂಡಿ ಈ ವಲಯವನ್ನು ಹೆಚ್ಚು ಸಮೃದ್ಧವಾಗಿಸಬೇಕಾಗಿದೆ, ಇಲ್ಲಿಯ ಪುತ್ರರ ಮತ್ತು ಪುತ್ರಿಯರ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ ಮತ್ತು ಉತ್ತರ ಪ್ರದೇಶವನ್ನು ಅಭಿವೃದ್ಧಿ ವಿರೋಧಿ ಶಕ್ತಿಗಳಿಂದ ಉಳಿಸಬೇಕಾಗಿದೆ. ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಜೀ ಅವರಂತಹ ರಾಷ್ಟ್ರೀಯ ನಾಯಕರ ಪ್ರೇರಣೆಯಿಂದ ನಾವು ನಮ್ಮ ಗುರಿಗಳ ಈಡೇರಿಕೆಯಲ್ಲಿ ಯಶಸ್ಸು ಸಾಧಿಸುವಂತಾಗಲಿ. ನೀವು ಬಹಳ ದೊಡ್ಡ ಸಂಖ್ಯೆಯಲ್ಲಿ ನನಗೆ ಆಶೀರ್ವಾದ ನೀಡಲು ಬಂದಿದ್ದೀರಿ, ನಿಮ್ಮನ್ನೆಲ್ಲ ನೋಡುವ ಅವಕಾಶ ನನಗೆ ಸಿಕ್ಕಿದೆ, ಇದಕ್ಕಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮತ್ತು ನಿಮಗೆ ಶುಭವನ್ನು ಹಾರೈಸುತ್ತೇನೆ.
ನೀವು ನಿಮ್ಮ ಎರಡೂ ಕೈಗಳನ್ನು ಎತ್ತಿ ನನ್ನೊಂದಿಗೆ ಹೇಳಬೇಕಾಗುತ್ತದೆ. ನಾನು ಹೇಳುತ್ತೇನೆ, ರಾಜಾ ಪ್ರತಾಪ್ ಸಿಂಗ್, ನೀವು ನಿಮ್ಮ ಕೈಗಳನ್ನು ಮೇಲೆತ್ತಿ ಹೇಳಬೇಕಿದೆ– ಚಿರಾಯುವಾಗಲಿ, ಚಿರಾಯುವಾಗಲಿ.
ರಾಜಾ ಮಹೇಂದ್ರ ಪ್ರತಾಪ್ ಸಿಂಗ್
ಚಿರಾಯುವಾಗಲಿ, ಚಿರಾಯುವಾಗಲಿ.
ರಾಜಾ ಮಹೇಂದ್ರ ಪ್ರತಾಪ್ ಸಿಂಗ್
ಚಿರಾಯುವಾಗಲಿ, ಚಿರಾಯುವಾಗಲಿ.
ರಾಜಾ ಮಹೇಂದ್ರ ಪ್ರತಾಪ್ ಸಿಂಗ್
ಚಿರಾಯುವಾಗಲಿ, ಚಿರಾಯುವಾಗಲಿ.
ಭಾರತ್ ಮಾತಾ ಕೀ ಜೈ
ಭಾರತ್ ಮಾತಾ ಕೀ ಜೈ
ಬಹಳ ಬಹಳ ಧನ್ಯವಾದಗಳು.
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
Addressing a programme in Aligarh. #उच्च_शिक्षा_यूपी_की_पहचान https://t.co/ltXwCEowsG
— Narendra Modi (@narendramodi) September 14, 2021
मैं आज इस धरती के महान सपूत, स्वर्गीय कल्याण सिंह जी की अनुपस्थिति बहुत ज्यादा महसूस कर रहा हूं।
— PMO India (@PMOIndia) September 14, 2021
आज कल्याण सिंह जी हमारे साथ होते तो राजा महेंद्र प्रताप सिंह राज्य विश्वविद्यालय और डिफेंस सेक्टर में बन रही अलीगढ़ की नई पहचान को देखकर बहुत खुश होते: PM @narendramodi
हमारी आजादी के आंदोलन में ऐसे कितने ही महान व्यक्तित्वों ने अपना सब कुछ खपा दिया।
— PMO India (@PMOIndia) September 14, 2021
लेकिन ये देश का दुर्भाग्य रहा कि आजादी के बाद ऐसे राष्ट्र नायक और राष्ट्र नायिकाओं की तपस्या से देश की अगली पीढ़ियों को परिचित ही नहीं कराया गया: PM @narendramodi
उनकी गाथाओं को जानने से देश की कई पीढ़ियां वंचित रह गईं।
— PMO India (@PMOIndia) September 14, 2021
20वीं सदी की उन गलतियों को आज 21वीं सदी का भारत सुधार रहा है: PM @narendramodi
राजा महेंद्र प्रताप सिंह जी के जीवन से हमें अदम्य इच्छाशक्ति, अपने सपनों को पूरा करने के लिए कुछ भी कर गुजरने वाली जीवटता सीखने को मिलती है।
— PMO India (@PMOIndia) September 14, 2021
वो भारत की आजादी चाहते थे और अपने जीवन का एक-एक पल उन्होंने इसी के लिए समर्पित कर दिया था: PM @narendramodi
आज देश ही नहीं दुनिया भी देख रही है कि आधुनिक ग्रेनेड और राइफल से लेकर लड़ाकू विमान, ड्रोन, युद्धपोत तक भारत में ही निर्मित किए जा रहे है।
— PMO India (@PMOIndia) September 14, 2021
भारत दुनिया के एक बड़े defence importer की छवि से बाहर निकलकर दुनिया के एक अहम defence exporter की नई पहचान बनाने की तरफ बढ़ रहा है: PM
आज उत्तर प्रदेश देश और दुनिया के हर छोटे-बड़े निवेशक के लिए बहुत आकर्षक स्थान बनता जा रहा है।
— PMO India (@PMOIndia) September 14, 2021
ये तब होता है जब निवेश के लिए ज़रूरी माहौल बनता है, जरूरी सुविधाएं मिलती हैं।
आज उत्तर प्रदेश डबल इंजन सरकार के डबल लाभ का एक बहुत बड़ा उदाहरण बन रहा है: PM @narendramodi
मुझे आज ये देखकर बहुत खुशी होती है कि जिस यूपी को देश के विकास में एक रुकावट के रूप में देखा जाता था, वही यूपी आज देश के बड़े अभियानों का नेतृत्व कर रहा है: PM @narendramodi
— PMO India (@PMOIndia) September 14, 2021
यूपी के लोग भूल नहीं सकते कि पहले यहां किस तरह के घोटाले होते थे, किस तरह राज-काज को भ्रष्टाचारियों के हवाले कर दिया गया था।
— PMO India (@PMOIndia) September 14, 2021
आज योगी जी की सरकार पूरी ईमानदारी से यूपी के विकास में जुटी हुई है: PM @narendramodi
एक दौर था जब यहां शासन-प्रशासन, गुंडों और माफियाओं की मनमानी से चलता था।
— PMO India (@PMOIndia) September 14, 2021
लेकिन अब वसूली करने वाले, माफियाराज चलाने वाले सलाखों के पीछे हैं: PM @narendramodi
केंद्र सरकार का निरंतर प्रयास है कि छोटी जोत वालों को ताकत दी जाए।
— PMO India (@PMOIndia) September 14, 2021
डेढ़ गुणा MSP हो, किसान क्रेडिट कार्ड का विस्तार हो, बीमा योजना में सुधार हो, 3 हज़ार रुपए की पेंशन की व्यवस्था हो, ऐसे अनेक फैसले छोटे किसानों को सशक्त कर रहे हैं: PM @narendramodi