Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅರ್ಮೇಲಿಯಲ್ಲಿ ಸಹಕಾರ ಸಮ್ಮೇಳನ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಅರ್ಮೇಲಿಯ ಎಂ.ಪಿ.ಎಂ.ಸಿ.ಯಲ್ಲಿ ನೂತನವಾಗಿ ನಿರ್ಮಿಸಿರುವ ಮಾರುಕಟ್ಟೆ ಸಮುಚ್ಚಯವನ್ನು ಉದ್ಘಾಟಿಸಿದರು. ಅಮರ್ ಡೈಲಿಯ ನೂತನ ಘಟಕವನ್ನೂ ಉದ್ಘಾಟಿಸಿದ ಪ್ರಧಾನಿ, ಜೇನು ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಅರ್ಮೇಲಿಯ ಸಹಕಾರ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ, ಸಹಕಾರ ವಲಯದಲ್ಲಿ ಯುವಜನರು ಮುಂದೆ ಬಂದು ನಾಯಕತ್ವ ವಹಿಸುತ್ತಿರುವುದನ್ನು ನೋಡಿ ಸಂತೋಷವಾಗುತ್ತಿದೆ ಎಂದರು. ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸೌರಾಷ್ಟ್ರದಲ್ಲಿ ಡೈರಿ ಹೇಗೆ ಬೆಳೆಯಿತು ಎಂಬುದನ್ನು ಅವರು ಸ್ಮರಿಸಿದರು.

ಇ-ನಾಮ್ ಯೋಜನೆ ರೈತರಿಗೆ ಪ್ರಯೋಜನಕಾರಿಯಾಗಿದೆ ಮತ್ತು ಅವರಿಗೆ ಉತ್ತಮ ಮಾರುಕಟ್ಟೆಯ ಸೌಲಭ್ಯ ಕಲ್ಪಿಸುತ್ತಿದೆ ಎಂದರು. ನೀಲಿ ಕ್ರಾಂತಿ ಮತ್ತು ಸಿಹಿ (ಜೇನು) ಕ್ರಾಂತಿ ಸೌರಾಷ್ಟ್ರದ ಜನತೆಯ ಜೀವನ ಪರಿವರ್ತಿಸುವ ಸಾಮರ್ಥ್ಯ ಹೊಂದಿವೆ ಎಂದರು.

ಕೇಂದ್ರ ಸರ್ಕಾರ ರೈತರ ಅಗತ್ಯ ಮತ್ತು ಕಾಳಜಿಗೆ ಸಂವೇದನಶೀಲವಾಗಿದೆ ಎಂದು ಹೇಳಿದರು.