Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅರುಣಾಚಲ ಪ್ರದೇಶ ರಾಜ್ಯೋತ್ಸವ ದಿನದ ಅಂಗವಾಗಿ ಪ್ರಧಾನಮಂತ್ರಿ ಜನತೆಗೆ ಶುಭಾಶಯ


ಅರುಣಾಚಲ ಪ್ರದೇಶದ ಜನರಿಗೆ ಅವರ ರಾಜ್ಯೋತ್ಸವ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ. ಅರುಣಾಚಲ ಪ್ರದೇಶವು ತನ್ನ ಶ್ರೀಮಂತ ಸಂಪ್ರದಾಯಗಳು ಮತ್ತು ಪ್ರಕೃತಿಯೊಂದಿಗಿನ ಆಳವಾದ ಸಂಬಂಧ ಬೆಸೆದುಕೊಂಡಿರುವುದಕ್ಕೆ ಹೆಸರುವಾಸಿಯಾಗಿದೆ, ಮುಂಬರುವ ವರ್ಷಗಳಲ್ಲಿ ಅರುಣಾಚಲ ಪ್ರದೇಶ ರಾಜ್ಯದ ಪ್ರಗತಿ ಮತ್ತು ಸಾಮರಸ್ಯದ ಪಯಣವು ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದ್ದಾರೆ. 

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿರುವ ಪ್ರಧಾನಮಂತ್ರಿಗಳು,

“ಅರುಣಾಚಲ ಪ್ರದೇಶದ ಜನರಿಗೆ ಅವರ ರಾಜ್ಯೋತ್ಸವ ದಿನದ ಶುಭಾಶಯಗಳು! ಈ ರಾಜ್ಯವು ತನ್ನ ಶ್ರೀಮಂತ ಸಂಪ್ರದಾಯಗಳು ಮತ್ತು ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಆಳವಾದ ಸಂಬಂಧಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಶ್ರಮಶೀಲ ಮತ್ತು ಕ್ರಿಯಾಶೀಲ ಜನರು ಭಾರತದ ಬೆಳವಣಿಗೆಗೆ ಅಪಾರ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಇಲ್ಲಿನ ಬುಡಕಟ್ಟು ಜನರ ರೋಮಾಂಚಕ ಪರಂಪರೆ ಮತ್ತು ಅಚ್ಚರಿ ಮೂಡಿಸುವ ಜೀವವೈವಿಧ್ಯತೆಯು ರಾಜ್ಯವನ್ನು ನಿಜವಾಗಿಯೂ ವಿಶೇಷವಾಗಿಸುತ್ತದೆ. ಅರುಣಾಚಲ ಪ್ರದೇಶವು ಇನ್ನಷ್ಟು ಪ್ರಗತಿ ಹೊಂದಲಿ ಮತ್ತು ಮುಂಬರುವ ವರ್ಷಗಳಲ್ಲಿ ಅದರ ಪ್ರಗತಿ ಮತ್ತು ಸಾಮರಸ್ಯದ ಪಯಾಣವು ಮುಂದುವರಿಯಲಿ” ಎಂದು ಆಶಯ ವ್ಯಕ್ತಪಡಿಸಿದ್ದಾರೆ.

 

 

*****