Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಯ್ಯ ವೈಕುಂಡ ಸ್ವಾಮಿಕಲ್ ಅವರಿಗೆ ಪ್ರಧಾನ ಮಂತ್ರಿ ಅವರಿಂದ ಗೌರವ ನಮನ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಯ್ಯ ವೈಕುಂಡ ಸ್ವಾಮಿಕಲ್ ಅವರ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು, “ಅಯ್ಯ ವೈಕುಂಡ ಸ್ವಾಮಿಕಲ್ ಅವರಿಗೆ ಜನ್ಮ ದಿನದ ಅಂಗವಾಗಿ, ಗೌರವ ನಮನ ಸಲ್ಲಿಸುತ್ತಿದ್ದೇನೆ. ಅಯ್ಯ ಸ್ವಾಮಿಕಲ್ ಅವರು 19ನೇ ಶತಮಾನದ ಉದಾತ್ತ ಚಿಂತಕ ಮತ್ತು ಸಮಾಜ ಸುಧಾರಕರಾಗಿದ್ದರು. ಅವರ ಬೋಧನೆಗಳು ಸಾಮಾಜಿಕ ಕಂದಕಗಳು ಮತ್ತು ಅಡೆತಡೆಗಳನ್ನು ತೊಡೆದು ಹಾಕಿ, ಜನರನ್ನು ಒಟ್ಟುಗೂಡಿಸಲು  ನೆರವಾಗಿವೆ. ಅವರು ಸಮಾನತೆಯ ಸಮಾಜ ನಿರ್ಮಾಣಕ್ಕೆ ನೀಡಿದ್ದ ಒತ್ತು ಮತ್ತು ಸಾರಿದ ಸಂದೇಶ ನಮ್ಮೆಲ್ಲರಿಗೂ ಸದಾಕಾಲ ಸ್ಫೂರ್ತಿದಾಯಕವಾಗಿದೆ”.