Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಅಯೋಧ್ಯೆ ದೀಪೋತ್ಸವಕ್ಕೆ ಪ್ರಧಾನಿ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಯೋಧ್ಯೆ ದೀಪೋತ್ಸವದ ಶಕ್ತಿಯು ದೇಶದಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ ಎಂದು ಹೇಳಿದರು. 

ಭಗವಾನ್ ಶ್ರೀರಾಮನು ಎಲ್ಲಾ ದೇಶವಾಸಿಗಳನ್ನು ಆಶೀರ್ವದಿಸಲಿ ಮತ್ತು ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಅವರು ಹಾರೈಸಿದರು.

ಸಾಮಾಜಿಕ ಜಾಲತಾಣ  X ನಲ್ಲಿ ಪ್ರಧಾನಮಂತ್ರಿ ಸಂದೇಶ ನೀಡಿದ್ದಾರೆ.

“ಅದ್ಭುತ, ಅಲೌಕಿಕ ಮತ್ತು ಅವಿಸ್ಮರಣೀಯ!

ಲಕ್ಷಾಂತರ ದೀಪಗಳು ಝಗಮಗಿಸುವ ಮೂಲಕ ಅಯೋಧ್ಯಾ ನಗರಕ್ಕೆ ಇಡೀ ದೇಶದಿಂದ ಶ್ಲಾಘನೆ ವ್ಯಕ್ತವಾಗಿದೆ!

ಈ ದೀಪಗಳಿಂದ ಹೊಮ್ಮಿದ ಹೊಳಪು ಇಡೀ ಭಾರತದಲ್ಲಿ ಹೊಸ ಭರವಸೆ ಮತ್ತು ಉತ್ಸಾಹವನ್ನು  ನೀಡಿದೆ. ನನ್ನ ಆಶಯ ಏನೆಂದರೆ ಭಗವಾನ್ ಶ್ರೀರಾಮನಿಂದ ನನ್ನ ದೇಶದ ಸಮಸ್ತ ದೇಶವಾಸಿಗಳಿಗೆ ಕಲ್ಯಾಣ ಕಾರ್ಯಗಳು ಮತ್ತು ಸಕಲ ಆಶೀರ್ವಾದ ‌ದಕ್ಕುವಂತಾಗಲಿ.

ಜಯ ಸಿಯಾರಾಮ್

 

****