Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಮೇರಿಕಾ ಭಾರತ ವ್ಯೂಹಾತ್ಮಕ ಸಹಭಾಗಿತ್ವ ವೇದಿಕೆ ಮಂಡಳಿ ಸದಸ್ಯರಿಂದ ಪ್ರಧಾನ ಮಂತಿ ಅವರ ಭೇಟಿ


ಅಮೇರಿಕಾ ಸಂಯುಕ್ತ ಸಂಸ್ಥಾನಗಳ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಕ್ಷೇತ್ರದ ಹಿರಿಯ ನಾಯಕರನ್ನು ಒಳಗೊಂಡಂತೆ ಅಮೇರಿಕಾ ಭಾರತ ವ್ಯೂಹಾತ್ಮಕ ಸಹಭಾಗಿತ್ವ ವೇದಿಕೆಯ (ಯು.ಎಸ್.ಐ.ಎಸ್.ಪಿ.ಎಫ್.) ಮಂಡಳಿಯ ಸದಸ್ಯರು ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಈ ಮೊದಲು ನಡೆದ ಭಾರತ ನಾಯಕತ್ವ ಶೃಂಗದ ಫಲಿತಾಂಶಗಳನ್ನು ಅವರು ಪ್ರಧಾನ ಮಂತ್ರಿ ಅವರಿಗೆ ವಿವರಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಸರಕಾರ ಜಾರಿಗೆ ತಂದ ಆರ್ಥಿಕ ಮತ್ತು ನಿಯಂತ್ರಣ ಸುಧಾರಣೆಗಳ ಬಗ್ಗೆ ವ್ಯಾಪಾರೋದ್ಯಮದ ಪ್ರಮುಖರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ತ್ವರಿತವಾಗಿ ಬೆಳೆಯುತ್ತಿರುವ ಭಾರತೀಯ ಆರ್ಥಿಕತೆಯಲ್ಲಿ ಪರಸ್ಪರ ಲಾಭದಾಯಕವಾಗುವ ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಭಾರತದ ಜೊತೆ ತಮ್ಮ ಪಾಲುದಾರಿಕೆಯನ್ನು ಇನ್ನಷ್ಟು ವಿಸ್ತರಿಸುವ ಇರಾದೆಯನ್ನು ವ್ಯಕ್ತಪಡಿಸಿದರು.

ಆರ್ಥಿಕ ಪಾಲ್ಗೊಳ್ಳುವಿಕೆ ಕಾರ್ಯಕ್ರಮಗಳ ಮೂಲಕ ಉಭಯ ದೇಶಗಳು ಅಭೂತಪೂರ್ವ ರೀತಿಯಲ್ಲಿ ಲಾಭ ಪಡೆದುಕೊಂಡಿವೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು. ನವೋದ್ಯಮ, ಇಂಧನ, ಆರೋಗ್ಯ ರಕ್ಷಣೆ ಮತ್ತು ಡಿಜಿಟಲ್ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳಲ್ಲಿಯ ವ್ಯಾಪಾರೋದ್ಯಮದ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳುವಂತೆ ಅಮೇರಿಕಾದ ಕಂಪೆನಿಗಳನ್ನು ಅವರು ಉತ್ತೇಜಿಸಿದರು.