ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಮೆರಿಕದ 20 ಉನ್ನತ ಸಿ.ಇ.ಓ.ಗಳನ್ನು ಭೇಟಿ ಮಾಡಿ, ದುಂಡು ಮೇಜಿನ ಸಭೆಯಲ್ಲಿ ಸಂವಾದ ನಡೆಸಿದರು.
ಸಿ.ಇ.ಓ.ಗಳನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ಇಡೀ ವಿಶ್ವ ಭಾರತದ ಆರ್ಥಿಕತೆಯ ಮೇಲೆ ಗಮನವಿಟ್ಟಿದೆ ಎಂದರು. ಭಾರತದ ಆರ್ಥಿಕತೆಯ ಮೇಲೆ ಅದರಲ್ಲೂ ಉತ್ಪಾದನೆ, ವಾಣಿಜ್ಯ ಮತ್ತು ವ್ಯಾಪಾರ ಹಾಗೂ ಜನರೊಂದಿಗಿನ ಸಂಪರ್ಕ ವಲ್ಯದಲ್ಲಿ ಜಾಗತಿಕ ಆಸಕ್ತಿ ಸೃಷ್ಟಿಯಾಗಲು ಭಾರತದಲ್ಲಿರುವ ಯುವ ಜನಸಂಖ್ಯೆ ಹಾಗೂ ಹೆಚ್ಚುತ್ತಿರುವ ಮಧ್ಯಮವರ್ಗವೂ ಕಾರಣವಾಗಿದೆ ಎಂದರು,
ಕಳೆದ ಮೂರು ವರ್ಷಗಳಲ್ಲಿ, ಭಾರತದ ಕೇಂದ್ರ ಸರ್ಕಾರವು ಜನರ ಜೀವನಮಟ್ಟ ಸುಧಾರಣೆಗೆ ಗಮನ ಹರಿಸಿದೆ ಎಂದರು.
ಇದಕ್ಕೆ ಜಾಗತಿಕ ಪಾಲುದಾರಿಕೆಯ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಹೀಗಾಗಿಯೇ ತಮ್ಮ ಸರ್ಕಾರ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದಂಥ ತತ್ವದ ಮೇಲೆ ಕೆಲಸ ಮಾಡುತ್ತಿದೆ ಎಂದರು.
ಇತ್ತೀಚಿನ ಸುಧಾರಣೆಗಳ ಬಗ್ಗೆ ಮಾತನಾಡಿದ ಪ್ರಧಾನಿ, ಕೇಂದ್ರ ಸರ್ಕಾರವೊಂದೇ ಸುಮಾರು 7 ಸಾವಿರ ಸುಧಾರಣೆ ತಂದಿದೆ ಎಂದರು. ಇದು ಜಾಗತಿಕ ಮಾನದಂಡಕ್ಕೆ ಭಾರತದ ತುಡಿತವನ್ನು ಸೂಚಿಸುತ್ತದೆ ಎಂದರು. ಸಾಮರ್ಥ್ಯ, ಪಾರದರ್ಶಕತೆ, ವೃದ್ಧಿ ಮತ್ತು ಎಲ್ಲರಿಗೂ ಲಾಭ ದೊರಕಿಸುವ ಸರ್ಕಾರದ ಬದ್ಧತೆಯನ್ನೂ ಪ್ರಸ್ತಾಪಿಸಿದರು.
ಜಿಎಸ್ಟಿ ಕುರಿತು ಮಾತನಾಡಿದ ಪ್ರಧಾನಿ, ಹಲವಾರು ವರ್ಷಗಳ ಪ್ರಯತ್ನದ ಫಲವಾಗಿ ಇದು ಸಾಕಾರವಾಗಿದೆ ಎಂದರು. ಅದರ ಅನುಷ್ಠಾನ ಸಂಕೀರ್ಣ ಸವಾಲಾಗಿದ್ದು, ಅದು ಭವಿಷ್ಯದ ಪ್ರಕರಣಗಳ ಅಧ್ಯಯನದ ವಿಷಯವಾಗಿದ್ದು, ಉತ್ತಮಗೊಳ್ಳಲಿದೆ ಎಂದರು. ಇದು ಭಾರತ ಎಂಥ ದೊಡ್ಡ ನಿರ್ಧಾರಗಳನ್ನೂ ತೆಗೆದುಕೊಳ್ಳುತ್ತದೆ ಮತ್ತು ತ್ವರಿತವಾಗಿ ಅನುಷ್ಠಾನಗೊಳಿಸುತ್ತದೆ ಎಂಬುದನ್ನು ತೋರಿಸುತ್ತದೆ ಎಂದರು.
ಸುಗಮವಾಗಿ ವಾಣಿಜ್ಯ ನಡೆಸುವ ಸಲುವಾಗಿ ಇತ್ತೀಚಿನ ದಿನಗಳಲ್ಲಿ ಆಗಿರುವ ಕಾರ್ಯ ಮತ್ತು ಕೈಗೊಂಡ ನೀತಿ, ಉಪಕ್ರಮಗಳಿಗಾಗಿ ಸಿ.ಇ.ಓ.ಗಳು ಪ್ರಧಾನಿಯವರನ್ನು ಶ್ಲಾಘಿಸಿದರು. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಕೌಶಲ ಅಭಿವೃದ್ಧಿ, ಹೆಚ್ಚಿನ ಮೌಲ್ಯದ ನೋಟುಗಳ ಅಮಾನ್ಯತೆ ಮತ್ತು ನವೀಕರಿಸಬಹುದಾದ ಇಂಧನದ ತುಡಿತದಂಥ ಉಪಕ್ರಮಗಳ ಬಗ್ಗೆ ಹೆಚ್ಚಿನ ಸಂಖ್ಯೆಯ ಸಿ.ಇ.ಓ.ಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ಸಿಇಓಗಳು ಕೌಶಲ ಅಭಿವೃದ್ಧಿ ಮತ್ತು ಶಿಕ್ಷಣದ ಉಪಕ್ರಮಗಳಲ್ಲಿ ಪಾಲುದಾರರಾಗುವ ಇಚ್ಛೆಯನ್ನು ವ್ಯಕ್ತಪಡಿಸಿದರು. ತಮ್ಮ ಕಂಪನಿಗಳು ಭಾರತದಲ್ಲಿ ಕೈಗೊಂಡಿರುವ ಸಾಮಾಜಿಕ ಉಪಕ್ರಮಗಳ ಕುರಿತೂ ಅವರು ಪ್ರಸ್ತಾಪಿಸಿ, ಅವುಗಳಲ್ಲಿ ಮಹಿಳಾ ಸಬಲೀಕರಮ, ಡಿಜಿಟಲ್ ತಂತ್ರಜ್ಞಾನ, ಶಿಕ್ಷಣ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರಗಳನ್ನು ಪ್ರಸ್ತಾಪಿಸಿದರು. ಮೂಲಸೌಕರ್ಯ, ರಕ್ಷಣಾ ಉತ್ಪಾದನೆ ಮತ್ತು ಇಂಧನ ಸುರಕ್ಷತೆ ಸಹ ಚರ್ಚೆಗೆ ಬಂದವು.
ಕೊನೆಯಲ್ಲಿ ಪ್ರಧಾನಮಂತ್ರಿಯವರು, ಸಿಇಓಗಳ ಗಮನ ಹರಿಸುವಿಕೆಗಾಗಿ ಧನ್ಯವಾದ ಅರ್ಪಿಸಿದರು. ನಾಳೆ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲು ಉತ್ಸುಕವಾಗಿರುವುದಾಗಿ ತಿಳಿಸಿದರು. ಭಾರತ ಮತ್ತು ಅಮೆರಿಕ ವಿನಿಮಯಿತ ಮೌಲ್ಯಗಳನ್ನು ಹೊಂದಿವೆ ಎಂದರು. ಅಮೆರಿಕ ಬಲಗೊಂಡರೆ, ಭಾರತ ಸ್ವಾಭಾವಿಕವಾಗಿಯೇ ಪ್ರಯೋಜನ ಪಡೆಯುತ್ತದೆ ಎಂದ ಪ್ರಧಾನಿ, ಬಲಿಷ್ಠ ಅಮೆರಿಕದಿಂದ ಜಗತ್ತಿಗೆ ಒಳಿತಾಗುತ್ತದೆ ಎಂದು ಭಾರತ ಭಾವಿಸುವುದಾಗಿ ಹೇಳಿದರು. ಮಹಿಳಾ ಸಬಲೀಕರಣ, ನವೀಕರಿಸಬಹುದಾದ ಇಂಧನ, ನವೋದ್ಯಮ ಮತ್ತು ನಾವಿನ್ಯತೆ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸುವಂತೆ ಸಿ.ಇ.ಓ.ಗಳಿಗೆ ಕರೆ ನೀಡಿದರು. ಶಾಲೆಗೆ ಹೋಗುವ ಹೆಣ್ಣುಮಕ್ಕಳಅಗತ್ಯಕ್ಕನುಗುಣವಾಗಿ ನೈರ್ಮಲ್ಯ ಪದ್ಧತಿಯೊಂದಿಗೆಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಜೋಡಿಸಲು ಸಲಹೆ ನೀಡಿದರು. ತಮ್ಮ ಮೊದಲ ಆದ್ಯತೆ ಭಾರತದಲ್ಲಿ ಜೀವನ ಮಟ್ಟ ಸುಧಾರಣೆ ಮಾಡುವುದಾಗಿದೆ ಎಂದು ಅವರು ಪುನರುಚ್ಚರಿಸಿದರು.
***
AK
PM @narendramodi interacted with top Indian and American CEOs in Washington DC. pic.twitter.com/oK908BmZJC
— PMO India (@PMOIndia) June 25, 2017
Interacted with top CEOs. We held extensive discussions on opportunities in India. pic.twitter.com/BwjdFM1DaZ
— Narendra Modi (@narendramodi) June 25, 2017