Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಮೆರಿಕದ ಕಾಂಗ್ರೆಸ್ ನಿಯೋಗದಿಂದ ಪ್ರಧಾನಮಂತ್ರಿ ಭೇಟಿ

ಅಮೆರಿಕದ ಕಾಂಗ್ರೆಸ್ ನಿಯೋಗದಿಂದ ಪ್ರಧಾನಮಂತ್ರಿ ಭೇಟಿ


ಅಮೆರಿಕ ಕಾಂಗ್ರೆಸ್ ನ ಇಪ್ಪತ್ತಾರು ಸದಸ್ಯರ ಉಭಯಪಕ್ಷೀಯ ಜಂಟಿ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.

ಪ್ರಧಾನಮಂತ್ರಿಯವರು ಕಾಂಗ್ರೆಸ್ ಪ್ರತಿನಿಧಿಗಳನ್ನು ಭಾರತಕ್ಕೆ ಸ್ವಾಗತಿಸಿದರು. ಅಮೆರಿಕದ ಹೊಸ ಆಡಳಿತ ಮತ್ತು ಕಾಂಗ್ರೆಸ್ ನೊಂದಿಗೆ ದ್ವಿಪಕ್ಷೀಯ ವಿನಿಮಯದ ಉತ್ತಮ ಆರಂಭ ಶುಭ ಸೂಚನೆಯಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗಿನ ಧನಾತ್ಮಕ ಸಂವಾದವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಆಳವಾಗಿರುವ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಹಂಚಿಕೆಯ ಬದ್ಧತೆಯನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕದ ಪಾಲುದಾರಿಕೆಗೆ ಕಾಂಗ್ರೆಸ್ ನ ಉಭಯಪಕ್ಷೀಯ ಬೆಂಬಲವನ್ನು ಅವರು ಗುರುತಿಸಿದರು. ಪರಸ್ಪರರ ಪ್ರಗತಿಗೆ ಹವಾರು ವರ್ಷಗಳಿಂದ ಕೊಡುಗೆ ನೀಡುತ್ತಿರುವ ಜನರೊಂದಿಗಿನ ಸಂಪರ್ಕ ಸೇರಿದಂತೆ, ಎರಡೂ ರಾಷ್ಟ್ರಗಳು ಇನ್ನೂ ಹೆಚ್ಚು ಆಪ್ತವಾಗಿ ಕಾರ್ಯ ನಿರ್ವಹಿಸಬಹುದಾದ ಕ್ಷೇತ್ರಗಳ ಮೇಲೆ ಪ್ರಧಾನಿಯವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಈ ನಿಟ್ಟಿನಲ್ಲಿ, ಅಮೆರಿಕದ ಆರ್ಥಿಕತೆ ಮತ್ತು ಸಮಾಜವನ್ನು ಶ್ರೀಮಂತಗೊಳಿಸುವಲ್ಲಿ ಭಾರತೀಯ ಪ್ರತಿಭಾವಂತರ ಕೌಶಲದ ಪಾತ್ರವನ್ನು ಅವರು ಉಲ್ಲೇಖಿಸಿದರು. ಪ್ರತಿಫಲನಾತ್ಮಕ, ಸಮತೋಲಿತ ಮತ್ತು ದೂರದರ್ಶಿತ್ವದ ದೃಷ್ಟಿಕೋನವುಳ್ಳ ನುರಿತ ವೃತ್ತಿಪರರ ಸುಗಮ ಸಂಚಾರ ಅಭಿವೃದ್ಧಿಪಡಿಸಲು ಅವರು ಒತ್ತಾಯಿಸಿದರು.

*****