Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಮೆರಿಕದ ಅರ್ಥಶಾಸ್ತ್ರಜ್ಞ ಮತ್ತು ಉದ್ಯಮಿ ಪ್ರೊ. ಪಾಲ್ ರೋಮರ್ ಅವರೊಂದಿಗೆ ಪ್ರಧಾನ ಮಂತ್ರಿ ಚರ್ಚೆ

ಅಮೆರಿಕದ ಅರ್ಥಶಾಸ್ತ್ರಜ್ಞ ಮತ್ತು ಉದ್ಯಮಿ ಪ್ರೊ. ಪಾಲ್ ರೋಮರ್ ಅವರೊಂದಿಗೆ ಪ್ರಧಾನ ಮಂತ್ರಿ ಚರ್ಚೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕದ ನ್ಯೂಯಾರ್ಕ್ನಲ್ಲಿ ನೊಬೆಲ್ ಪ್ರಶಸ್ತಿ ವಿಜೇತ, ಅಮೆರಿಕದ ಅರ್ಥಶಾಸ್ತ್ರಜ್ಞ ಮತ್ತು ಉದ್ಯಮಿ ಪ್ರೊ.ಪಾಲ್ ರೋಮರ್ ಅವರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿ ಮತ್ತು ಪ್ರೊ. ರೋಮರ್ ಅವರು ಆಧಾರ್ ಬಳಕೆ ಮತ್ತು ಡಿಜಿಲಾಕರ್ನಂತಹ ನವೀನ ಉಪಕ್ರಮಗಳು ಸೇರಿದಂತೆ ಭಾರತದ ಡಿಜಿಟಲ್ ವಹಿವಾಟಿನ ಕುರಿತು ಚರ್ಚೆ ನಡೆಸಿದರು. ನಗರಾಭಿವೃದ್ಧಿಗಾಗಿ ಭಾರತ ಕೈಗೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆಯೂ ಉಭಯರು ಚರ್ಚಿಸಿದರು.

****