Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಮೃತ್ ಸರೋವರಗಳು ನಮ್ಮ ಭೂಮಿಯಲ್ಲಿ ಜೊತೆಗಿರುವ ಜೀವಿಗಳೊಂದಿಗೆ ಸಾಮರಸ್ಯವನ್ನು ಖಾತ್ರಿಪಡಿಸುತ್ತಿದೆ: ಪ್ರಧಾನಮಂತ್ರಿಗಳು


ಅಮೃತ ಸರೋವರದ ಮಹತ್ವವನ್ನು ತಿಳಿಸುತ್ತಾ, ಜಲ ಸಂರಕ್ಷಣೆ ಮತ್ತು ಸಮುದಾಯದ ಸಹಭಾಗಿತ್ವವನ್ನು ಸಕ್ರಿಯಗೊಳಿಸುವುದರ ಜೊತೆಗೆ, ಈ ಶ್ರೀಮಂತ ಜಲಮೂಲಗಳು ನಮ್ಮ ಭೂಮಿಯಲ್ಲಿ ಜೊತೆಗಿರುವ ಜೀವಿಗಳೊಂದಿಗೆ ಸಾಮರಸ್ಯವನ್ನು ಖಾತ್ರಿಪಡಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂನ ಕಮ್ರೂಪ್ ಜಿಲ್ಲೆಯ ಸಿಂಗ್ರಾದಲ್ಲಿ ಪ್ರಶಾಂತವಾದ ಸರೋವರಗಳಲ್ಲಿ ಆನೆಗಳು ಬೇಸಿಗೆಯಲ್ಲಿ ಸ್ನಾನ ಮಾಡುವುದರ ಕುರಿತು ಮಾಡಿದ ಟ್ವೀಟ್ಗೆ ಪ್ರತಿಕ್ರಿಯಿಸುತ್ತಾ, ಪ್ರಧಾನ ಮಂತ್ರಿಯವರು ಹೀಗೆ ಪ್ರತಿಕ್ರಿಯಿಸಿದ್ದಾರೆ;

“ಆಹ್ಲಾದಕರ ನೋಟ. ಜಲ ಸಂರಕ್ಷಣೆ ಮತ್ತು ಸಮುದಾಯದ ಸಹಭಾಗಿತ್ವದ ಜೊತೆಗೆ, ಅಮೃತ್ ಸರೋವರಗಳು ನಾವು ನಮ್ಮ ಭೂಮಿಯಲ್ಲಿ ಜೊತೆಗಿರುವ ಜೀವಿಗಳ ಜೊತೆ  ಸಾಮರಸ್ಯವನ್ನು ಖಾತ್ರಿಪಡಿಸುತ್ತಿವೆ.”

***