ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಇಂದಿನ ಕಾಲದ ಜಗತ್ತಿನಲ್ಲಿ, ಬಡತನವು ಪ್ರಪಂಚದಾದ್ಯಂತದ ಸರ್ಕಾರಗಳಿಗೆ ಸಂಕೀರ್ಣ ನಿರ್ಣಾಯಕ ಕಳವಳವಾಗಿ ಉಳಿದಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ, ಬಡತನವನ್ನು ಕಡಿಮೆ ಮಾಡುವುದು, ನಿವಾರಿಸುವುದು ಸರ್ಕಾರಕ್ಕೆ ಸವಾಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಿ ಮೋದಿಯವರ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಧ್ಯೇಯವಾಕ್ಯದೊಂದಿಗೆ ಸರ್ವರ ಸಾಮಾಜಿಕ ಕಲ್ಯಾಣದತ್ತ ಗಮನ ಹರಿಸಿದೆ. 2014 ರಿಂದ, ಯಾರೂ ಹಿಂದೆ ಉಳಿಯದಂತೆ ನೋಡಿಕೊಳ್ಳಲು ಮತ್ತು ಬೆಳವಣಿಗೆ ಹಾಗು ಪ್ರಗತಿಯ ಪರಿಣಾಮ ಮತ್ತು ಪ್ರಯೋಜನಗಳು ಸಮಾಜದ ಎಲ್ಲಾ ವರ್ಗಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಅನೇಕ ಉಪಕ್ರಮಗಳನ್ನು ಪ್ರಾರಂಭಿಸಿದೆ. ಕಳೆದ ಒಂಬತ್ತು ವರ್ಷಗಳಲ್ಲಿ, ಸರ್ಕಾರದ ವಿವಿಧ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನವು ಉದ್ದೇಶಿತ ಪ್ರಯೋಜನಗಳ ಸಾರ್ವತ್ರೀಕರಣದೊಂದಿಗೆ ರಾಷ್ಟ್ರದಾದ್ಯಂತ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಕಾರಣವಾಗಿದೆ.
ಪ್ರಧಾನ ಮಂತ್ರಿ ಕಾರ್ಯಾಲಯವು ಪ್ರಧಾನ ಮಂತ್ರಿಗಳ ಜಾಲತಾಣದಿಂದ (ವೆಬ್ ಸೈಟ್ ನಿಂದ) ಒಂದು ಲೇಖನವನ್ನು ಹಂಚಿಕೊಂಡಿದೆ.
‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಧ್ಯೇಯವಾಕ್ಯದೊಂದಿಗೆ ಆರ್ಥಿಕ ಸೇರ್ಪಡೆ ಮತ್ತು ನೇರ ನಗದು ವರ್ಗಾವಣೆಯ ಮೂಲಕ ಬಡತನವನ್ನು ತಗ್ಗಿಸುವುದು.#9YearsOfGaribKalyan”
********
Mitigating poverty through Financial Inclusion and Direct Benefit Transfer, with the motto of 'Sabka Saath, Sabka Vikas'.#9YearsOfGaribKalyanhttps://t.co/a3BDtx0tml
— PMO India (@PMOIndia) June 1, 2023