Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಮರನಾಥ ಯಾತ್ರೆಯು ನಮ್ಮ ಪರಂಪರೆಯ ದೈವಿಕ ಮತ್ತು ಭವ್ಯ ಅಭಿವ್ಯಕ್ತಿಯಾಗಿದೆ: ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮರನಾಥ ಯಾತ್ರೆ ಕೈಗೊಂಡಿರುವವರಿಗೆ ಶುಭ ಕೋರಿದ್ದಾರೆ. ಅವರು ಅಮರನಾಥ ಯಾತ್ರೆಯು ನಮ್ಮ ಪರಂಪರೆಯ ದೈವಿಕ ಮತ್ತು ಭವ್ಯ ಅಭಿವ್ಯಕ್ತಿಯಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಟ್ವೀಟ್ ನಲ್ಲಿ ಹೀಗೆ ತಿಳಿಸಿದ್ದಾರೆ.

ಶ್ರೀ ಅಮರನಾಥ ಯಾತ್ರೆಯು ನಮ್ಮ ಪರಂಪರೆಯ ದೈವಿಕ ಮತ್ತು ಭವ್ಯ ರೂಪವಾಗಿದೆ. ಬಾಬಾ ಬರ್ಫಾನಿಯವರ ಆಶೀರ್ವಾದದಿಂದ, ಎಲ್ಲಾ ಭಕ್ತರ ಜೀವನದಲ್ಲಿ ಹೊಸ ಉತ್ಸಾಹ ಮತ್ತು ಹೊಸ ಶಕ್ತಿ ತುಂಬಲಿ ಎಂದು ನಾನು ಬಯಸುತ್ತೇನೆ. ಅಂತೆಯೇ ನಮ್ಮ ದೇಶ ಅಮೃತಕಾಲದಲ್ಲಿ ಕೈಗೊಂಡ ನಿರ್ಣಯದಿಂದ ಸಾಧನೆಯತ್ತ ವೇಗವಾಗಿ ಚಲಿಸುತ್ತದೆ. ಬಾಬಾ ಬರ್ಫಾನಿಗೆ ನಮಸ್ಕಾರ!”

******