Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಭಿವೃದ್ಧಿ ಮತ್ತು ಪರಂಪರೆಯೊಂದಿಗೆ ಒಟ್ಟಾಗಿ ಮುಂದುವರಿಯಲು ನಾವು ಬದ್ಧರಾಗಿದ್ದೇವೆ: ಪ್ರಧಾನಮಂತ್ರಿ

ಅಭಿವೃದ್ಧಿ ಮತ್ತು ಪರಂಪರೆಯೊಂದಿಗೆ ಒಟ್ಟಾಗಿ ಮುಂದುವರಿಯಲು ನಾವು ಬದ್ಧರಾಗಿದ್ದೇವೆ: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಗಾಸ್ ಹಬ್ಬದ ಸಂದರ್ಭದಲ್ಲಿ ಎಲ್ಲ ನಾಗರಿಕರಿಗೆ ಶುಭ ಕೋರಿದ್ದಾರೆ. ಅಭಿವೃದ್ಧಿ ಮತ್ತು ಪರಂಪರೆಯೊಂದಿಗೆ ಒಟ್ಟಾಗಿ ಮುಂದುವರಿಯಲು ಭಾರತ ಬದ್ಧವಾಗಿದೆ ಎಂದು ಅವರು ಹೇಳಿದರು. ವಿಶೇಷವಾಗಿ ಉತ್ತರಾಖಂಡದ ನಾಗರಿಕರಿಗೆ ಶುಭ ಕೋರಿದ ಅವರು, ದೇವಭೂಮಿಯ ಇಗಾಸ್ ಹಬ್ಬದ ಪರಂಪರೆ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 ಈ ಸಂಬಂಧ ಎಕ್ಸ್ ಖಾತೆಯಲ್ಲಿ ಅವರು ಸರಣಿ ಟ್ವೀಟ್ ನಲ್ಲಿ ಹೀಗೆ ಬರೆದಿದ್ದಾರೆ:

“ಉತ್ತರಾಖಂಡದ ನನ್ನ ಕುಟುಂಬ ಸದಸ್ಯರು ಸೇರಿದಂತೆ ಎಲ್ಲಾ ದೇಶವಾಸಿಗಳಿಗೆ ಇಗಾಸ್ ಹಬ್ಬದ ಶುಭಾಶಯಗಳು! ಇಂದು ದೆಹಲಿಯಲ್ಲಿ, ಉತ್ತರಾಖಂಡದ ಲೋಕಸಭಾ ಸಂಸದ ಅನಿಲ್ ಬಲೂನಿ ಜೀ ಅವರ ಸ್ಥಳದಲ್ಲಿ ನಡೆದ ಈ ಉತ್ಸವದಲ್ಲಿ ಭಾಗವಹಿಸುವ ಸೌಭಾಗ್ಯವೂ ನನಗೆ ಸಿಕ್ಕಿತು. ಈ ಹಬ್ಬವು ಪ್ರತಿಯೊಬ್ಬರ lives@anil_baluni ಸಂತೋಷ ಮತ್ತು ಸಮೃದ್ಧಿಯನ್ನು ತರಲಿ” ಎಂದು ಟ್ವೀಟ್ ಮಾಡಿದ್ದಾರೆ.

“ಅಭಿವೃದ್ಧಿ ಮತ್ತು ಪರಂಪರೆಯನ್ನು ಒಟ್ಟಿಗೆ ತೆಗೆದುಕೊಂಡು ಮುಂದೆ ಸಾಗಲು ನಾವು ಬದ್ಧರಾಗಿದ್ದೇವೆ. ಬಹುತೇಕ ಅಳಿವಿನಂಚಿನಲ್ಲಿರುವ ಮತ್ತು ಜಾನಪದ ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿರುವ ಇಗಾಸ್ ಉತ್ಸವವು ಮತ್ತೊಮ್ಮೆ ಉತ್ತರಾಖಂಡದ ನನ್ನ ಕುಟುಂಬ ಸದಸ್ಯರ ನಂಬಿಕೆಯ ಕೇಂದ್ರವಾಗುತ್ತಿದೆ ಎಂದು ನನಗೆ ತೃಪ್ತಿ ಇದೆ, ”

“ಉತ್ತರಾಖಂಡದ ನನ್ನ ಸಹೋದರ ಸಹೋದರಿಯರು ಇಗಾಸ್ ಸಂಪ್ರದಾಯವನ್ನು ಜೀವಂತವಾಗಿ ತಂದ ರೀತಿ ತುಂಬಾ ಪ್ರೋತ್ಸಾಹದಾಯಕವಾಗಿದೆ. ಈ ಪವಿತ್ರ ಹಬ್ಬವನ್ನು ದೇಶಾದ್ಯಂತ ಆಚರಿಸುತ್ತಿರುವ ಪ್ರಮಾಣವು ಇದಕ್ಕೆ ನೇರ ಪುರಾವೆಯಾಗಿದೆ. ದೇವಭೂಮಿಯ ಈ ಪರಂಪರೆ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿದೆ ಎಂಬ ವಿಶ್ವಾಸ ನನಗಿದೆ,” ಎಂದರು.

 

 

*****