Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಬುಧಾಬಿ ರಾಜಕುಮಾರ ಹಾಗೂ ಪ್ರಧಾನಿ ಮೋದಿ ನಡುವೆ ದೂರವಾಣಿ ಮಾತುಕತೆ


ಅಬುಧಾಬಿಯ ರಾಜಕುಮಾರ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮಾತುಕತೆ ನಡೆಸಿ ಸರ್ಕಾರ ಮತ್ತು ಯುಎಇ ಜನತೆಗೆ ಈದ್-ಉಲ್-ಫಿತರ್ ಶುಭಾಶಯಗಳನ್ನು ತಿಳಿಸಿದರು.

ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಉಭಯ ದೇಶಗಳ ನಡುವಿನ ಪರಿಣಾಮಕಾರಿ ಸಹಕಾರದ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಯುಎಇಯಲ್ಲಿ ಭಾರತೀಯ ನಾಗರಿಕರಿಗೆ ನೀಡಿದ ಬೆಂಬಲಕ್ಕಾಗಿ ಪ್ರಧಾನಿ ಮೋದಿ ರಾಜಕುಮಾರರಿಗೆ ಧನ್ಯವಾದ ತಿಳಿಸಿದರು.

ರಾಜಕುಮಾರ, ರಾಜಮನೆತನ ಮತ್ತು ಯುಎಇ ಜನತೆಯ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಧಾನಿಯವರು ಹಾರೈಸಿದರು.