Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

“ಅಬಂಡನ್ಸ್ ಇನ್ ಮಿಲೆಟ್ಸ್” ಹಾಡಿನಲ್ಲಿ, ಆಹಾರ ಭದ್ರತೆ ಮತ್ತು ಹಸಿವಿನ ನಿರ್ಮೂಲನೆಯ ಪ್ರಮುಖ ಉದ್ದೇಶದೊಂದಿಗೆ ಸೃಜನಶೀಲತೆ ವಿಲೀನಗೊಂಡಿದೆ: ಪ್ರಧಾನಮಂತ್ರಿ  


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ರೀ ಅನ್ನ ಅಥವಾ ಸಿರಿಧಾನ್ಯದಿಂದ ಉತ್ತಮ ಆರೋಗ್ಯ ಮತ್ತು ಗುಣಮಟ್ಟದ ಜೀವನ ಪ್ರಾಪ್ತವಾಗಲಿದೆ ಎಂದು ಹೇಳಿದ್ದಾರೆ.

ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತೀಯ ಮೂಲದ ಅಮೆರಿಕನ್ ಗಾಯಕಿ ಫಾಲು ಅವರು ವಿಶ್ವಸಂಸ್ಥೆ 2023 ರನ್ನು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವರ್ಷವೆಂದು ಘೋಷಿಸಲು ಕಾರಣವಾದ  ಪ್ರಧಾನ ಮಂತ್ರಿಯವರ ಉಪಕ್ರಮದಿಂದ  ಸ್ಪೂರ್ತಿ ಪಡೆದು ಹಾಡನ್ನು ಹೊರತಂದಿದ್ದಾರೆ. ಸಿರಿಧಾನ್ಯವನ್ನು ಉತ್ತೇಜಿಸಲು, ರೈತರಿಗೆ ಅದನ್ನು ಬೆಳೆಯಲು ಮತ್ತು ಪ್ರಪಂಚದ ಹಸಿವನ್ನು ಕೊನೆಗೊಳಿಸಲು ಸಹಾಯ ಮಾಡಲು ಹಾಡನ್ನು ಬರೆಯಲು ಪ್ರಧಾನಮಂತ್ರಿಯವರಿಂದ ಸಹಕಾರ ಕುರಿತು ಅವರು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಉತ್ತರವಾಗಿ ಪ್ರಧಾನಮಂತ್ರಿಯವರ ಟ್ವೀಟ್ ಹೀಗಿದೆ:

“ಅತ್ಯುತ್ತಮ ಪ್ರಯತ್ನ @FaluMusic! ಶ್ರೀ ಅನ್ನ ಅಥವಾ ಸಿರಿಧಾನ್ಯಗಳಿಂದ  ಆರೋಗ್ಯ ಮತ್ತು ಜೀವನದ ಗುಣಮಟ್ಟ ಸುಧಾರಿಸಲಿದೆ.‌ ಈ‌‌ ಹಾಡಿನಲ್ಲಿ, ಆಹಾರ ಭದ್ರತೆ ಮತ್ತು ಹಸಿವು ನಿರ್ಮೂಲನೆಯ  ಪ್ರಮುಖ ಉದ್ದೇಶದೊಂದಿಗೆ ಸೃಜನಶೀಲತೆ ವಿಲೀನಗೊಂಡಿದೆ.

***