ಕ್ಷಯರೋಗದ ವಿರುದ್ಧ ಭಾರತದ ಹೋರಾಟ ಈಗಷ್ಟೇ ಬಲಗೊಂಡಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಅಧಿಕ ಹೊರೆಯಿರುವ ಕ್ಷಯರೋಗ ಜಿಲ್ಲೆಗಳನ್ನು ಕೇಂದ್ರೀಕರಿಸಿ ಇಂದು 100 ದಿನಗಳ ವಿಶೇಷ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಕೇಂದ್ರ ಆರೋಗ್ಯ ಸಚಿವ ಶ್ರೀ ಜೆ. ಪಿ. ನಡ್ಡಾ ಅವರು ಬರೆದ ಲೇಖನವನ್ನು ಓದುವಂತೆ ಅವರು ನಾಗರಿಕರನ್ನು ಪ್ರೇರೇಪಿಸಿದರು.
Xನ ಪೋಸ್ಟ್ ನಲ್ಲಿ ಶ್ರೀ ಮೋದಿ ಹೀಗೆ ಹೇಳಿದ್ದಾರೆ:
“ಕ್ಷಯರೋಗದ ವಿರುದ್ಧ ನಮ್ಮ ಹೋರಾಟ ಈಗಷ್ಟೇ ಬಲಗೊಂಡಿದೆ!
ಕ್ಷಯರೋಗವನ್ನು ಹೋಗಲಾಡಿಸಲು ಸಾಮೂಹಿಕ ಮನೋಭಾವದಿಂದ, ಹೆಚ್ಚಿನ ಹೊರೆಯ ಕ್ಷಯರೋಗ ಜಿಲ್ಲೆಗಳನ್ನು ಕೇಂದ್ರೀಕರಿಸಿ 100 ದಿನಗಳ ವಿಶೇಷ ಅಭಿಯಾನ ಇಂದಿನಿಂದ ಪ್ರಾರಂಭವಾಗುತ್ತಿದೆ. ಭಾರತವು ಕ್ಷಯರೋಗದ ವಿರುದ್ಧ ಈ ಕೆಳಗಿನ ರೀತಿಯಲ್ಲಿ ಬಹುಮುಖಿಯಾಗಿ ಹೋರಾಡುತ್ತಿದೆ:
(1) ರೋಗಿಗಳಿಗೆ ಬೆಂಬಲ ದ್ವಿಗುಣಗೊಳಿಸುವಿಕೆ
(2) ಜನ ಭಾಗೀದಾರಿ
(3) ಹೊಸ ಔಷಧಿಗಳು
(4) ತಂತ್ರಜ್ಞಾನ ಮತ್ತು ಉತ್ತಮ ರೋಗನಿರ್ಣಯ ಸಾಧನಗಳ ಬಳಕೆ.
ನಾವೆಲ್ಲರೂ ಒಗ್ಗೂಡಿ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ನಮ್ಮ ಕೈಲಾದಷ್ಟು ಸಹಾಯ ಮಾಡೋಣ.
ಕೇಂದ್ರ ಸಚಿವರಾದ ಶ್ರೀ ಜೆ. ಪಿ. ನಡ್ಡಾ ಅವರ Xನ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು:
“ಆರೋಗ್ಯ ಸಚಿವರಾದ ಶ್ರೀ ಜೆ. ಪಿ. ನಡ್ಡಾ ಅವರು ಭಾರತವನ್ನು ಕ್ಷಯ ಮುಕ್ತವಾಗಿಸಲು ನಿರಂತರವಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಒಳನೋಟದ ಚಿತ್ರವನ್ನು ನೀಡಿದ್ದಾರೆ. ಅದನ್ನು ತಪ್ಪದೆ ಓದಿ ಎಂದು ಬರೆದಿದ್ದಾರೆ.
@JPNadda”
*****
Our fight against TB just got stronger!
— Narendra Modi (@narendramodi) December 7, 2024
Powered by a collective spirit to defeat TB, a special 100 day campaign is starting today with a focus on the high burden TB districts. India is fighting TB in a multi-pronged manner with:
(1) Doubling support to patients
(2) Jan…
Health Minister Shri JP Nadda Ji gives an insightful picture of the steps we are continuously taking to make India TB-free. Do read. @JPNadda https://t.co/xvYNvzxfCV
— Narendra Modi (@narendramodi) December 7, 2024