Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಗಿ

ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಕಾರ್ಯಕ್ರಮದಲ್ಲಿ  ಪ್ರಧಾನ ಮಂತ್ರಿ ಭಾಗಿ

ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಕಾರ್ಯಕ್ರಮದಲ್ಲಿ  ಪ್ರಧಾನ ಮಂತ್ರಿ ಭಾಗಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿ ಭಾರತೀಯ ಸಂಸದೀಯ ಗುಂಪು ಆಯೋಜಿಸಿದ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಯವರಾದ  ಶ್ರೀ ರಾಮ್ ನಾಥ್ ಕೋವಿಂದ್ ಅವರು ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಉಪರಾಷ್ಟ್ರಪತಿಯವರಾದ ಶ್ರೀ ಎಂ. ವೆಂಕಯ್ಯ  ನಾಯ್ಡು  ಮತ್ತು ಲೋಕಸಭಾ ಸ್ಪೀಕರ್ ಶ್ರೀಮತಿ ಸುಮಿತ್ರಾ ಮಹಾಜನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ ಪ್ರಧಾನ ಮಂತ್ರಿಗಳು ಪ್ರಶಸ್ತಿ ಪುರಸ್ಕೃತರು ಸಂಸತ್ತಿಗೆ ಮತ್ತು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸದಾ ಸ್ಮರಿಸಲಾಗುತ್ತದೆ ಎಂದರು. ಅವರ ಜೊತೆ ಕೆಲಸ ಮಾಡುವುದು  ಮತ್ತು ಅವರಿಂದ ಕಲಿತುಕೊಂಡದ್ದು   ಗೌರವದ ಸಂಗತಿ  ಎಂದರು.

 

ಸಂಸತ್ತು 125 ಕೋಟಿ ಭಾರತೀಯರ ಕನಸು ಮತ್ತು ಧ್ವನಿಯನ್ನು ಪ್ರತಿನಿಧಿಸುತ್ತದೆ ಎಂದ ಪ್ರಧಾನ ಮಂತ್ರಿಯವರು ಸಂಸತ್ತಿನಲ್ಲಿ ಹೇಳಿದ ಪ್ರತಿಯೊಂದು ಮಾತಿಗೂ ಬಹಳ ಮೌಲ್ಯವಿದೆ ಮತ್ತು ಅದು ನೀತಿ ರೂಪಕರಿಗೆ ಹಾಗು ಸರಕಾರಕ್ಕೆ ಪ್ರಮುಖ ವಿಷಯಗಳನ್ನು ಬಗೆಹರಿಸಲು ಅವಕಾಶಗಳನ್ನು ಒದಗಿಸುತ್ತದೆ ಎಂದರು.

 

ಸಮಾರಂಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಸಂಸತ್ತಿನಲ್ಲಿ ಕಲಾಪಕ್ಕೆ ಎದುರಾಗುವ ಅಡೆ ತಡೆಗಳು ಸಾಮಾನ್ಯ ಜನರನ್ನು ಮತ್ತು ಅವರು ಪ್ರತಿನಿಧಿಸುವ ಕ್ಷೇತ್ರದ ಜನರನ್ನು ಹೆಚ್ಚು ಪ್ರಮಾಣದಲ್ಲಿ ಬಾಧಿಸುತ್ತವೆ ಎಂದರು. ಕಲಾಪಕ್ಕೆ ಎದುರಾಗುವ ಅಡೆತಡೆಗಳು, ಕಲಾಪ ಹಾಳುಗೆಡಹುವಿಕೆ ಸರಕಾರಕ್ಕಿಂತ ಮುಖ್ಯವಾಗಿ ರಾಷ್ಟ್ರಕ್ಕೆ ಹಾನಿ ತರುತ್ತವೆ ಎಂದವರು ಹೇಳಿದರು. 

 

ಸಂಸತ್ತು  ಸುಸೂತ್ರವಾಗಿ ನಡೆಯುವಂತೆ ಖಾತ್ರಿ ಪಡಿಸುವುದು ಮತ್ತು ಪ್ರತೀ ಸಂಸದರಿಗೆ ಮಾತನಾಡುವ ಅವಕಾಶ ಲಭಿಸುವಂತೆ ಮಾಡುವುದು ಹಾಗೂ ಆ ಮೂಲಕ ಚರಿತ್ರೆಯ ಭಾಗವಾಗುವಂತೆ ಮಾಡುವುದು ಸಂಸತ್ ಸದಸ್ಯರ  ಜವಾಬ್ದಾರಿ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು