Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಡ್ಮಿರಾಲ್ಟಿ ಶಾಸನ (ವ್ಯಾಪ್ತಿ ಮತ್ತು ಕಡಲ ವಸಾಹತು) ಮಸೂದೆ 2016 ಮತ್ತು ಐದು ಪುರಾತನ ಶಾಸನಗಳನ್ನು ಹಿಂಪಡೆಯಲು ಒಪ್ಪಿಗೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಡ್ಮಿರಾಲ್ಟಿ ಶಾಸನ ಜಾರಿಗೆ (ವ್ಯಾಪ್ತಿ ಮತ್ತು ಕಡಲ ವಸಾಹತು) ಮಸೂದೆ 2016 ಮತ್ತು ಐದು ಪುರಾತನ ಶಾಸನಗಳನ್ನು ಹಿಂಪಡೆಯಬೇಕು ಎಂಬ ಹಡಗು ಸಚಿವಾಲಯದ ಪ್ರಸ್ತಾವಕ್ಕೆ ತನ್ನ ಅನುಮೋದನೆ ನೀಡಿದೆ.

ಕಡಲ ವಸಾಹತು ಪ್ರಕ್ರಿಯೆ, ಹಡಗುಗಳ ವಶ ಮತ್ತು ಇತರ ಸಂಬಂಧಿತ ವಿಚಾರಗಳಲ್ಲಿ

ಅಡ್ಮಿರಾಲ್ಟಿಯ ನ್ಯಾಯಾಲಯದ ವ್ಯಾಪ್ತಿಗೆ ಸಂಬಂಧಿಸಿದಂತೆ ಹಾಲಿ ಇರುವ ಕಾನೂನುಗಳನ್ನು ಈ ವಿಧೇಯಕ ಸಮಗ್ರಗೊಳಿಸುತ್ತದೆ. ಅಲ್ಲದೆ ಇದು ಸಿವಿಲ್ ವಿಚಾರಗಳಿಗೆ ಸಂಬಂಧಿಸಿದಂತೆ ಅಡ್ಮಿರಾಲ್ಟಿ ವ್ಯಾಪ್ತಿಗೆ ಸೇರಿದ ಐದು ಹಳೆಯ ಬ್ರಿಟಿಷ್ ಕಾಲದ ಶಾಸನಗಳನ್ನು ಅಂದರೆ ಮುಂಬೈ, ಕೋಲ್ಕತ್ತಾ ಮತ್ತು ಮದ್ರಾಸ್ ಹೈಕೋರ್ಟ್ ಗಳ ಅಡ್ಮಿರಾಲ್ಟಿ ವ್ಯಾಪ್ತಿಯ (ಎ) ಅಡ್ಮಿರಾಲ್ಟಿ ನ್ಯಾಯಾಲಯ ಕಾಯಿದೆ 1840 (ಬಿ) ಅಡ್ಮಿರಾಲ್ಟಿ ನ್ಯಾಯಾಲಯ ಕಾಯಿದೆ 1861 (ಸಿ) ವಸಾಹತು ನ್ಯಾಯಾಲಯಗಳ ಅಡ್ಮಿರಾಲ್ಟಿ ಕಾಯಿದೆ 1890 (ಡಿ) ಅಡ್ಮಿರಾಲ್ಟಿ ವಸಾಹತು ನ್ಯಾಯಾಲಯಗಳ (ಭಾರತ) ಕಾಯಿದೆ 1891 ಮತ್ತು (ಇ) ಪತ್ರಗಳ ಪೇಟೆಂಟ್ ನಿಬಂಧನೆಗಳು 1865ನ್ನು ತೆಗೆದು ಹಾಕುತ್ತದೆ.

ಅಡ್ಮಿರಾಲ್ಟಿ ಮಸೂದೆ 2016ರ ಪ್ರಮುಖಾಂಶಗಳು

ಈ ಕಾನೂನು ಪ್ರಸ್ತಾವನೆಯು ಕಡಲ ಕಾನೂನು ಸಮುದಾಯದ ದೀರ್ಘ ಕಾಲೀನ ಬೇಡಿಕೆಯನ್ನು ಈಡೇರಿಸುತ್ತದೆ. ಇದರ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:-

· ಭಾರತದ ಕರಾವಳಿ ರಾಜ್ಯಗಳಲ್ಲಿರುವ ಹೈಕೋರ್ಟ್ ಗಳ ಅಡ್ಮಿರಾಲ್ಟಿ ವ್ಯಾಪ್ತಿಯನ್ನು ಈ ಮಸೂದೆ ಪ್ರದಾನ ಮಾಡುತ್ತದೆ ಮತ್ತು ಈ ವ್ಯಾಪ್ತಿಯು ಸಾಗರ ಜಲ ಪ್ರದೇಶದವರೆಗೂ ವಿಸ್ತರಿಸುತ್ತದೆ.

· ಕೇಂದ್ರ ಸರ್ಕಾರದ ಅಧಿಸೂಚನೆಯ ಮೇರೆಗೆ ಈ ವ್ಯಾಪ್ತಿಯನ್ನು ವಿಶಿಷ್ಠ ಆರ್ಥಿಕ ವಲಯ ಅಥವಾ ಯಾವುದೇ ಇತರ ಭಾರತದ ಸಾಗರ ವಲಯ ಅಥವಾ ಭಾರತದ ಭಾಗವಾಗಿರುವ ದ್ವೀಪಗಳವರೆಗೆ ವಿಸ್ತರಿಸಬಹುದಾಗಿದೆ,

· ಇದು ನಿವಾಸ ಸ್ಥಳ ಅಥವಾ ನಿವಾಸಿ (esidence or domicile) ಮಾಲೀಕತ್ವದ ಪರಿಗಣನೆಗೆ ಒಳಪಡದೆ ಎಲ್ಲ ಹಡಗುಗಳಿಗೂ ಅನ್ವಯಿಸುತ್ತದೆ.

· ಒಳನಾಡ ಹಡಗುಗಳು ಮತ್ತು ನಿರ್ಮಾಣ ಹಂತದಲ್ಲಿರುವ ಹಡಗುಗಳನ್ನು ಇದರ ಅನ್ವಯಿಕತೆಯಿಂದ ಹೊರತುಪಡಿಸಲಾಗಿದೆ ಆದರೆ ಕೇಂದ್ರ ಸರ್ಕಾರ ಅಗತ್ಯ ಬಿದ್ದರೆ ಅಧಿಸೂಚನೆಯ ಮೂಲಕ ಇವುಗಳನ್ನೂ ಇದರ ವ್ಯಾಪ್ತಿಗೆ ತರಬಹುದಾಗಿದೆ.

· ಆದರೆ ಇದು ಯುದ್ಧ ನೌಕೆಗಳು ಮತ್ತು ನೌಕಾ ಸಹಾಯಕ ಹಡಗು ಮತ್ತು ವಾಣಿಜ್ಯೇತರ ಉದ್ದೇಶಕ್ಕೆ ಬಳಸುವ ಹಡಗುಗಳಿಗೆ ಅನ್ವಯಿಸುವುದಿಲ್ಲ.

· ಮಸೂದೆಯಲ್ಲಿ ಪಟ್ಟಿ ಮಾಡಿರುವ ಕಡಲ ಕ್ಲೇಮ್ ಗಳ ನ್ಯಾಯ ನಿರ್ಣಯಕ್ಕಾಗಿ ಈ ವ್ಯಾಪ್ತಿ ನಿರ್ಧರಿಸಲಾಗಿದೆ.

· ಕೆಲವೊಂದು ಸನ್ನಿವೇಶದಲ್ಲಿ ವಶಕ್ಕೆ ಪಡೆಯಲಾದ ಹಡಗಿನ ವಸಾಹತಿನ ಹಕ್ಕಿನ ವಿರುದ್ಧ ಸುರಕ್ಷತೆಯ ಖಾತ್ರಿ ಒದಗಿಸಲು.
· ಮಸೂದೆಯಲ್ಲಿ ಯಾವ ವಿಚಾರಗಳಿಗೆ ಸಂಬಂಧಿಸಿದಂತೆ ಉಪಬಂಧಗಲನ್ನು ಉಲ್ಲೇಖಿಸಲಾಗಿಲ್ಲವೋ ಅದಕ್ಕೆ, ನಾಗರಿಕ ಪ್ರಕ್ರಿಯಾ ಸಂಹಿತೆ 1908 ಅನ್ವಯವಾಗುತ್ತದೆ.

ಹಿನ್ನೆಲೆ:

ಭಾರತವು ಪ್ರಮುಖ ಕಡಲ ರಾಷ್ಟ್ರವಾಗಿದೆ ಮತ್ತು ಅದರ ಶೇಕಡ 95ರಷ್ಟು ಗಾತ್ರದ ವಾಣಿಜ್ಯ ವಹಿವಾಟು ಸಾಗರದ ಮೂಲಕವೇ ನಡೆಯುತ್ತದೆ. ಆದಾಗ್ಯೂ, ಪ್ರಸಕ್ತ ಶಾಸನಾತ್ಮಕ ಚೌಕಟ್ಟಿನಲ್ಲಿ, ಭಾರತೀಯ ನ್ಯಾಯಾಲಯಗಳ ಅಡ್ಮಿರಾಲ್ಟಿ ವ್ಯಾಪ್ತಿಯು ಬ್ರಿಟಿಷರ ಕಾಲದಲ್ಲಿ ಮಾಡಲಾದ ಕಾನೂನಿನ ಹರಿವಿನಲ್ಲೇ ಸಾಗಿತ್ತು. ಜಲ ಮಾರ್ಗದ ಸಂಚಾರ ಮತ್ತು ಸಾಗರದ ಮೂಲಕ ನಡೆಸಲಾಗುವ ಸಾಗಾಟದ ಕ್ಲೇಮುಗಳಿಗೆ ಸಂಬಂಧಿಸಿದಂತೆ ಅಡ್ಮಿರಾಲ್ಟಿ ವ್ಯಾಪ್ತಿಯ ಹೈಕೋರ್ಟ್ ಅಧಿಕಾರಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಐದು ಪುರಾತನ ಶಾಸನಗಳನ್ನು ಹಿಂಪಡೆಯುವುದು, ಸಮರ್ಥ ಆಡಳಿತಕ್ಕೆ ಅಡ್ಡಿಯಾಗಿರುವ ಹಳೆಯ ಕಾನೂನುಗಳನ್ನು ರದ್ದು ಮಾಡುವ ಸರ್ಕಾರದ ಬದ್ಧತೆಯಲ್ಲಿ ಸೇರಿದೆ.