Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಟಲ್ ಭೂಜಲ್ ಯೋಜನೆಗೆ ಸಂಪುಟದ ಅನುಮೋದನೆ


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೇಂದ್ರ ಸರ್ಕಾರದ ಯೋಜನೆಯಾದ ಅಟಲ್ ಭೂಜಲ್ ಯೋಜನೆ (ATAL JAL) ಅನುಷ್ಠಾನಕ್ಕೆ ಅನುಮೋದನೆ ನೀಡಿದೆ. 2020-21 ರಿಂದ 2024-25 ರವರೆಗೆ ಐದು ವರ್ಷಗಳ ಅವಧಿಯಲ್ಲಿ ಅನುಷ್ಠಾನವಾಗುವ ಈ ಯೋಜನೆಯ ಒಟ್ಟುವೆಚ್ಚ 6,000 ಕೋಟಿ ರೂ.ಗಳಾಗಿವೆ.

ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳ ಗುರುತಿಸಲಾದ ಆದ್ಯತಾ ಪ್ರದೇಶಗಳಲ್ಲಿ ಸಮುದಾಯದ ಭಾಗವಹಿಸುವಿಕೆಯ ಮೂಲಕ ಅಂತರ್ಜಲ ನಿರ್ವಹಣೆಯನ್ನು ಸುಧಾರಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಯೋಜನೆಯ ಅನುಷ್ಠಾನದಿಂದ ಈ ರಾಜ್ಯಗಳ 78 ಜಿಲ್ಲೆಗಳಲ್ಲಿ ಸುಮಾರು 8,350 ಗ್ರಾಮ ಪಂಚಾಯಿತಿಗಳಿಗೆ ಅನುಕೂಲವಾಗಲಿದೆ. ಅಟಲ್ ಜಲ್, ಪಂಚಾಯತ್ ನೇತೃತ್ವದ ಅಂತರ್ಜಲ ನಿರ್ವಹಣೆ ಮತ್ತು ವರ್ತನೆಯ ಬದಲಾವಣೆಯಲ್ಲಿ ಬೇಡಿಕೆಯ ನಿರ್ವಹಣೆಗೆ ಪ್ರಮುಖ ಗಮನವನ್ನು ನೀಡುತ್ತದೆ.

6,000 ಕೋ.ರೂ. ಗಳ ಒಟ್ಟು ವೆಚ್ಚದಲ್ಲಿ ಶೇ. 50 ವಿಶ್ವಬ್ಯಾಂಕ್ ಸಾಲದ ರೂಪದಲ್ಲಿರಬೇಕು ಮತ್ತು ಅದನ್ನು ಕೇಂದ್ರ ಸರ್ಕಾರವು ಮರುಪಾವತಿಸುತ್ತದೆ. ಉಳಿದ ಶೇ.50 ಬಜೆಟ್ ಬೆಂಬಲದಿಂದ ಕೇಂದ್ರ ಸರ್ಕಾರದ ನೆರವಿನ ಮೂಲಕ ಇರಬೇಕು. ವಿಶ್ವ ಬ್ಯಾಂಕಿನ ಸಾಲ ಮತ್ತು ಕೇಂದ್ರದ ನೆರವನ್ನು ರಾಜ್ಯಗಳಿಗೆ ಅನುದಾನವಾಗಿ ನೀಡಲಾಗುತ್ತದೆ.

ಅಟಲ್ ಜಲ್ ಎರಡು ಪ್ರಮುಖ ಅಂಶಗಳನ್ನು ಹೊಂದಿದೆ

ಎ. ಸಾಂಸ್ಥಿಕ ಬಲಪಡಿಸುವಿಕೆ ಮತ್ತು ಸಾಮರ್ಥ್ಯ ವೃದ್ಧಿಸುವ ಘಟಕಗಳು ರಾಜ್ಯಗಳಲ್ಲಿ ಸುಸ್ಥಿರ ಅಂತರ್ಜಲ ನಿರ್ವಹಣೆಗೆ ಸಾಂಸ್ಥಿಕ ವ್ಯವಸ್ಥೆಗಳನ್ನು ಬಲಪಡಿಸಲು ನಿರ್ವಹಣಾ ಜಾಲವನ್ನು ಸುಧಾರಿಸುವುದು, ಸಾಮರ್ಥ್ಯ ವೃದ್ಧಿ, ನೀರಿನ ಬಳಕೆದಾರರ ಸಂಘಗಳನ್ನು ಬಲಪಡಿಸುವುದು ಇತ್ಯಾದಿ.

ಬಿ. ಸುಧಾರಿತ ಅಂತರ್ಜಲ ನಿರ್ವಹಣಾ ಅಭ್ಯಾಸಗಳಲ್ಲಿನ ಸಾಧನೆಗಳಿಗಾಗಿ ರಾಜ್ಯಗಳನ್ನು ಪ್ರೋತ್ಸಾಹಿಸಲು ಪ್ರೋತ್ಸಾಹಕ ಘಟಕ. ಅವುಗಳೆಂದರೆ ದತ್ತಾಂಶ ಪ್ರಸಾರ, ನೀರಿನ ಸುರಕ್ಷತಾ ಯೋಜನೆಗಳ ತಯಾರಿ, ಜಾರಿಯಲ್ಲಿರುವ ಯೋಜನೆಗಳ ಸಮನ್ವಯದ ಮೂಲಕ ನಿರ್ವಹಣಾ ಮಧ್ಯಸ್ಥಿಕೆಗಳ ಅನುಷ್ಠಾನ, ಬೇಡಿಕೆಯ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಇತ್ಯಾದಿ.

ಅಟಲ್ ಜಲ್ ಫಲಿತಾಂಶ

i. ಅಂತರ್ಜಲ ಮೇಲ್ವಿಚಾರಣೆ ಜಾಲಗಳನ್ನು ಸುಧಾರಿಸಲು ಸಾಂಸ್ಥಿಕ ಬಲವರ್ಧನೆ ಮತ್ತು ವಿವಿಧ ಹಂತಗಳಲ್ಲಿ ಮಧ್ಯಸ್ಥಗಾರರ ಸಾಮರ್ಥ್ಯವನ್ನು ಹೆಚ್ಚಿಸುವುದು ಅಂತರ್ಜಲ ದತ್ತಾಂಶ ಸಂಗ್ರಹಣೆ, ವಿನಿಮಯ, ವಿಶ್ಲೇಷಣೆ ಮತ್ತು ಪ್ರಸಾರವನ್ನು ಹೆಚ್ಚಿಸುತ್ತದೆ.

ii. ಸುಧಾರಿತ ಅಂಕಿ ಅಂಶ ಮತ್ತು ಪಂಚಾಯತ್ ಮಟ್ಟದಲ್ಲಿ ಸಮುದಾಯ ನೇತೃತ್ವದ ಜಲ ಸುರಕ್ಷತಾ ಯೋಜನೆಗಳ ತಯಾರಿಕೆಯ ಆಧಾರದ ಮೇಲೆ ಸುಧಾರಿತ ಮತ್ತು ವಾಸ್ತವಿಕ ನೀರಿನ ಬಜೆಟ್

iii. ಸುಸ್ಥಿರ ಅಂತರ್ಜಲ ನಿರ್ವಹಣೆಗೆ ಹಣವನ್ನು ನ್ಯಾಯಯುತವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅನುಕೂಲವಾಗುವಂತೆ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಜಾರಿಯಲ್ಲಿರುವ ಹಾಗೂ ಹೊಸ ಯೋಜನೆಗಳನ್ನು ಒಗ್ಗೂಡಿಸುವ ಮೂಲಕ ನೀರಿನ ಸುರಕ್ಷತಾ ಯೋಜನೆಗಳ ಅನುಷ್ಠಾನ.

iv. ಸಣ್ಣ ನೀರಾವರಿ, ಬೆಳೆ ವೈವಿಧ್ಯೀಕರಣ, ವಿದ್ಯುತ್ ಫೀಡರ್ ಬೇರ್ಪಡಿಕೆ ಮುಂತಾದ ಬೇಡಿಕೆಯ ಕ್ರಮಗಳಿಗೆ ಒತ್ತು ನೀಡಿ ಲಭ್ಯವಿರುವ ಅಂತರ್ಜಲ ಸಂಪನ್ಮೂಲಗಳ ಸಮರ್ಥ ಬಳಕೆ.

ಪರಿಣಾಮ

ಎ. ಸ್ಥಳೀಯ ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಯೋಜನಾ ಪ್ರದೇಶದಲ್ಲಿ ಜಲ ಜೀವನ್ ಮಿಷನ್ಗೆ ಸುಸ್ಥಿರತೆ.

ಬಿ. ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯತ್ತ ಕೊಡುಗೆ ನೀಡಲಿದೆ.

ಸಿ. ಅಂತರ್ಜಲ ನಿರ್ವಹಣೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.

ಡಿ. ಸಾಮೂಹಿಕ ಪ್ರಮಾಣದಲ್ಲಿ ಮತ್ತು ಸುಧಾರಿತ ಬೆಳೆ ಮಾದರಿಯಲ್ಲಿ ನೀರಿನ ಸೂಕ್ತ ಬಳಕೆ.

ಇ. ಅಂತರ್ಜಲ ಸಂಪನ್ಮೂಲಗಳ ಸಮರ್ಥವಾದ ಮತ್ತು ಸಮನಾದ ಬಳಕೆಯನ್ನು ಉತ್ತೇಜಿಸುವುದು ಮತ್ತು ಸಮುದಾಯ ಮಟ್ಟದಲ್ಲಿ ವರ್ತನೆಯಲ್ಲಿ ಬದಲಾವಣೆ ತರುವುದು.

ಹಿನ್ನೆಲೆ

ದೇಶದ ಒಟ್ಟು ನೀರಾವರಿ ಪ್ರದೇಶದ ಸುಮಾರು ಶೇ.65 ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜಿನಲ್ಲಿ ಸುಮಾರು ಶೇ.85 ರಷ್ಟು ಕೊಡುಗೆಯನ್ನು ಅಂತರ್ಜಲ ನೀಡುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣ ಮತ್ತು ಕೈಗಾರಿಕೀಕರಣದ ಬೇಡಿಕೆಗಳಿಂದಾಗಿ ದೇಶದ ಸೀಮಿತ ಅಂತರ್ಜಲ ಸಂಪನ್ಮೂಲಗಳು ಅಪಾಯದಲ್ಲಿವೆ. ಅನೇಕ ಪ್ರದೇಶಗಳಲ್ಲಿ ತೀವ್ರವಾದ ಮತ್ತು ಅನಿಯಂತ್ರಿತ ಅಂತರ್ಜಲ ಬಳಕೆಯು, ಅಂತರ್ಜಲ ಮಟ್ಟದಲ್ಲಿ ತ್ವರಿತ ಮತ್ತು ವ್ಯಾಪಕ ಕುಸಿತಕ್ಕೆ ಕಾರಣವಾಗಿದೆ. ದೇಶದ ಕೆಲವು ಭಾಗಗಳಲ್ಲಿ ಅಂತರ್ಜಲದ ಗುಣಮಟ್ಟ ಕುಸಿಯುತ್ತಿರುವ ಮೂಲಕ ಅಂತರ್ಜಲ ಲಭ್ಯತೆ ಕಡಿಮೆಯಾಗುವ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ. ಅತಿಯಾದ ಬಳಕೆ, ಮಾಲಿನ್ಯ ಸಂಬಂಧಿತ ಪರಿಸರ ಪರಿಣಾಮಗಳಿಂದಾಗಿ ಅಂತರ್ಜಲದ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ನಿವಾರಿಸಲು ಅಗತ್ಯವಾದ ತಡೆಗಟ್ಟುವಿಕೆ, ಪರಿಹಾರ ಕ್ರಮಗಳನ್ನು ಆದ್ಯತೆಯ ಮೇಲೆ ತೆಗೆದುಕೊಳ್ಳದಿದ್ದರೆ ದೇಶದ ಆಹಾರ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ,

ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನಗಳು, ಅಟಲ್ ಭುಜಲ್ ಯೋಜನೆ (ಅಟಾಲ್ ಜಲ್) ಮೂಲಕ ದೇಶದಲ್ಲಿ ಅಂತರ್ಜಲ ಸಂಪನ್ಮೂಲಗಳ ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಏಳು ರಾಜ್ಯಗಳಲ್ಲಿ ಗುರುತಿಸಲಾದ ಅಂತರ್ಜಲ ಒತ್ತಡದ ಪ್ರದೇಶಗಳಲ್ಲಿ ಟಾಪ್ ಡೌನ್ ಮತ್ತು ಬಾಟಮ್ ಅಪ್ ವಿಧಾನಗಳ ಮೂಲಕ ಪ್ರವರ್ತಕ ಉಪಕ್ರಮವನ್ನು ಕೈಗೊಳ್ಳುತ್ತವೆ. ಇದು ಭೂರೂಪ, ಹವಾಮಾನ ಮತ್ತು ಜಲವಿಜ್ಞಾನ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳನ್ನು ಪ್ರತಿನಿಧಿಸುತ್ತದೆ. ಭಾಗವಹಿಸುವಿಕೆ ಮೂಲಕ ಅಂತರ್ಜಲ ನಿರ್ವಹಣೆಗೆ ಸಾಂಸ್ಥಿಕ ಚೌಕಟ್ಟನ್ನು ಬಲಪಡಿಸುವ ಮತ್ತು ಸುಸ್ಥಿರ ಅಂತರ್ಜಲ ಸಂಪನ್ಮೂಲ ನಿರ್ವಹಣೆಗಾಗಿ ಸಮುದಾಯ ಮಟ್ಟದಲ್ಲಿ ವರ್ತನೆಯ ಬದಲಾವಣೆಗಳನ್ನು ತರುವ ಮುಖ್ಯ ಉದ್ದೇಶದಿಂದ ಅಟಲ್ ಜಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಜಾಗೃತಿ ಕಾರ್ಯಕ್ರಮಗಳು, ಸಾಮರ್ಥ್ಯ ವೃದ್ಧಿ, ಜಾರಿಯಲ್ಲಿರುವ ಹಾಗೂ ಹೊಸ ಯೋಜನೆಗಳ ಸಮನ್ವಯ ಮತ್ತು ಸುಧಾರಿತ ಕೃಷಿ ಪದ್ಧತಿಗಳು ಸೇರಿದಂತೆ ವಿವಿಧ ಮಧ್ಯಸ್ಥಿಕೆಗಳ ಮೂಲಕ ಇದನ್ನು ಕೈಗೊಳ್ಳಲು ಈ ಯೋಜನೆ ಉದ್ದೇಶಿಸಿದೆ.