ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಖಿಲ ಭಾರತ ಮೇಯರುಗಳ ಸಮಾವೇಶವನ್ನು ಉದ್ಘಾಟಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಪುರಾತನ ನಗರವಾದ ವಾರಾಣಸಿಯಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಉಲ್ಲೇಖಿಸಿದರು. ಕಾಶಿಯ ಅಭಿವೃದ್ಧಿ ಇಡೀ ದೇಶಕ್ಕೆ ನೀಲನಕ್ಷೆಯಾಗಲಿದೆ ಎಂಬ ತಮ್ಮ ಹೇಳಿಕೆಯನ್ನು ಅವರು ಸ್ಮರಿಸಿಕೊಂಡರು. ನಮ್ಮ ದೇಶದ ಬಹುತೇಕ ನಗರಗಳು ಸಾಂಪ್ರದಾಯಿಕ ನಗರಗಳಾಗಿವೆ, ಅವುಗಳನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು. ಇಂದಿನ ಆಧುನಿಕ ಯುಗದಲ್ಲಿ ನಮ್ಮ ನಗರಗಳ ಪ್ರಾಚೀನತೆಯೂ ಕೂಡ ಅಷ್ಟೇ ಮುಖ್ಯ ಎಂದರು., ಈ ನಗರಗಳು ನಮಗೆ ನಮ್ಮ ಪರಂಪರೆಯನ್ನು ಮತ್ತು ಸ್ಥಳೀಯ ಕೌಶಲ್ಯಗಳನ್ನು ಹೇಗೆ ಸಂರಕ್ಷಿಸಿಕೊಳ್ಳಬಹುದೆಂಬುದನ್ನು ತಿಳಿಸುತ್ತವೆ ಎಂದು ಪ್ರಧಾನಿ ಹೇಳಿದರು. ಅಸ್ಥಿತ್ವದಲ್ಲಿರುವ ಕಟ್ಟಡಗಳನ್ನು ನಾಶಗೊಳಿಸುವುದಕ್ಕಿಂತ ಅವುಗಳನ್ನು ಸಂರಕ್ಷಿಸುವುದು ಮತ್ತು ಪುನರುಜ್ಜೀವನಗೊಳಿಸುವುದಕ್ಕೆ ಒತ್ತು ನೀಡಬೇಕೆಂದು ಪ್ರಧಾನಿ ಹೇಳಿದರು. ಇದನ್ನು ಆಧುನಿಕ ಕಾಲದ ಅಗತ್ಯತೆಗಳಿಗೆ ತಕ್ಕಂತೆ ಮಾಡಬೇಕು.
ಸ್ವಚ್ಛತೆಗಾಗಿ ನಗರಗಳ ಜೊತೆ ಆರೋಗ್ಯಕರ ಪೈಪೋಟಿಗೆ ಕರೆ ನೀಡಿದ ಪ್ರಧಾನಿ ಅವರು, ಉತ್ತಮ ಪ್ರದರ್ಶನ ನೀಡುವ ನಗರಗಳ ಜೊತೆಗೆ ಸ್ವಚ್ಛತೆಯನ್ನು ಸಾಧಿಸಲು ವಿನೂತನ ಪ್ರಯತ್ನಗಳನ್ನು ಮಾಡುತ್ತಿರುವ ನಗರಗಳನ್ನು ಗುರುತಿಸಲು ಹೊಸ ವಿಭಾಗಗಳು ಇರಬಹುದೇ ಎಂದು ಅಚ್ಚರಿ ವ್ಯಕ್ತಪಡಿಸಿದರು. ಸ್ವಚ್ಛತೆಯ ಜೊತೆಗೆ ನಗರಗಳ ಸುಂದರೀಕರಣ ಕಾರ್ಯವನ್ನೂ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆ ನಿಟ್ಟಿನಲ್ಲಿ ತಮ್ಮ ನಗರಗಳ ವಾರ್ಡ್ ಗಳ ನಡುವೆ ಆರೋಗ್ಯಕರ ಸ್ಪರ್ಧೆಯ ಭಾವನೆಯನ್ನು ಸೃಷ್ಟಿಸುವಂತೆ ಅವರು ಮೇಯರ್ ಗಳಿಗೆ ಕರೆ ನೀಡಿದರು.
‘ಆಜಾ಼ದಿ ಕಾ ಅಮೃತ ಮಹೋತ್ಸವ’ ಕ್ಕೆ ಸಂಬಂಧಿಸಿದಂತೆ ಸ್ವಾತಂತ್ರ್ಯ ಹೋರಾಟ ವಿಷಯದ ‘ರಂಗೋಲಿ’ ಸ್ಪರ್ಧೆಗಳು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಹಾಡುಗಳ ಸ್ಪರ್ಧೆ ಮತ್ತು ಲೋರಿ ಸ್ಪರ್ಧೆಗಳನ್ನು ಆಯೋಜಿಸುವಂತೆ ಪ್ರಧಾನಿ ಮೇಯರ್ ಗಳಿಗೆ ಸೂಚಿಸಿದರು. ಇವುಗಳನ್ನು ಪ್ರಧಾನಮಂತ್ರಿ ಅವರು ತಮ್ಮ ಮನ್ ಕಿ ಬಾತ್ ಹಾಗೂ ಇತರೆ ಭಾಷಣಗಳಲ್ಲಿ ಪ್ರಸ್ತಾಪಿಸಿದ್ದರು. ಮೇಯರ್ ಗಳು ನಗರಗಳ ಉದಯಿಸಿದ ದಿನಗಳನ್ನು ಕಂಡುಹಿಡಿಯಬೇಕು ಮತ್ತು ಆ ದಿನಗಳನ್ನು ಆಚರಿಸಬೇಕು ಎಂದು ಪ್ರಧಾನಮಂತ್ರಿ ಮೇಯರ್ ಗಳಿಗೆ ಸಲಹೆ ನೀಡಿದರು. ನದಿಗಳನ್ನು ಹೊಂದಿರುವ ನಗರಗಳು ನದಿ ಉತ್ಸವಗಳನ್ನು ಆಚರಿಸಬೇಕು. ಜನರು ನದಿಗಳ ಬಗ್ಗೆ ಹೆಮ್ಮೆ ಪಡುವಂತೆ ಮತ್ತು ಅವುಗಳನ್ನು ಸ್ವಚ್ಛವಾಗಿಡಲು ನದಿಗಳ ವೈಭವವನ್ನು ಹರಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. “ನದಿಗಳನ್ನು ಮತ್ತೆ ನಗರ ಜೀವನದ ಮುಖ್ಯಭಾಗಕ್ಕೆ ತರಬೇಕು. ಇದು ನಗರಗಳಿಗೆ ಹೊಸ ಜೀವವನ್ನು ನೀಡುತ್ತವೆ” ಎಂದು ಪ್ರಧಾನಮಂತ್ರಿ ಹೇಳಿದರು. ಬಿಡಿ ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ವಿರುದ್ಧ ಅಭಿಯಾನಗಳನ್ನು ಪುನರುಜ್ಜೀವನಗೊಳಿಸುವಂತೆ ಅವರು ಮೇಯರ್ ಗಳಿಗೆ ಸೂಚಿಸಿದರು. ತ್ಯಾಜ್ಯದಿಂದ ಸಂಪತ್ತು ಸೃಷ್ಟಿಸುವ ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆಸುವಂತೆ ಅವರು ಮೇಯರ್ ಗಳಿಗೆ ಕರೆ ನೀಡಿದರು. “ನಮ್ಮ ನಗರಗಳು ಸ್ವಚ್ಛತೆಯ ಜೊತೆಗೆ ಆರೋಗ್ಯದಿಂದಲೂ ಇರಬೇಕು, ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಡೆಯಬೇಕು” ಎಂದು ಹೇಳಿದರು.
ತಮ್ಮ ನಗರಗಳ ಬೀದಿ ದೀಪಗಳಲ್ಲಿ ಮತ್ತು ಮನೆಗಳಲ್ಲಿ ಎಲ್ ಇ ಡಿ ಬಲ್ಬ್ ಗಳನ್ನು ವ್ಯಾಪಕವಾಗಿ ಬಳಸುವುದನ್ನು ಖಾತ್ರಿಪಡಿಸಬೇಕು ಎಂದು ಅವರು ಮೇಯರ್ ಗಳಿಗೆ ಸೂಚನೆ ನೀಡಿದರು. ಈ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕೆಂದು ಅವರು ಸಲಹೆ ಮಾಡಿದರು. ನಾವು ಅಸ್ಥಿತ್ವದಲ್ಲಿರುವ ಯೋಜನೆಗಳನ್ನು ಹೊಸ ಬಳಕೆಗೆ ಬಳಸಿಕೊಳ್ಳುವ ಮತ್ತು ಅವುಗಳನ್ನು ಮುಂದೆ ಕೊಂಡೊಯ್ಯುವ ಬಗ್ಗೆ ನಾವು ಯೋಚಿಸಬೇಕು ಎಂದರು. ನಗರದ ಎನ್ ಸಿಸಿ ಘಟಕಗಳೊಂದಿಗೆ ಸದಾ ಸಂಪರ್ಕದಲ್ಲಿರಲು ಮತ್ತು ನಗರದಲ್ಲಿರುವ ಪ್ರತಿಮೆಗಳನ್ನು ಸ್ವಚ್ಛಗೊಳಿಸಲು ಹಾಗೂ ‘ಆಜಾ಼ದಿ ಕಾ ಅಮೃತ ಮಹೋತ್ಸವ’ದ ಉತ್ಸಾಹದಲ್ಲಿ ಸ್ವಾತಂತ್ರ್ಯ ಹೋರಾಟದ ಗಣ್ಯ ವ್ಯಕ್ತಿಗಳ ಕುರಿತು ಭಾಷಣಗಳನ್ನು ಆಯೋಜಿಸಬೇಕು ಎಂದು ಅವರು ಮೇಯರ್ ಗಳಿಗೆ ಸೂಚನೆ ನೀಡಿದರು. ಅಂತೆಯೇ ಮೇಯರ್ ಗಳು ತಮ್ಮ ನಗರಗಳಲ್ಲಿನ ಸ್ಥಳವನ್ನು ಗುರುತಿಸಬಹುದು ಮತ್ತು ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಆಜಾ಼ದಿ ಕಾ ಅಮೃತ ಮಹೋತ್ಸವದೊಂದಿಗೆ ಹೊಂದಿಕೊಳ್ಳುವ ಸ್ಮಾರಕವನ್ನು ನಿರ್ಮಿಸಬೇಕು ಎಂದರು. ‘ಇಂದು ಜಿಲ್ಲೆ– ಒಂದು ಉತ್ಪನ್ನ’ ಕಾರ್ಯಕ್ರಮವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು ಮೇಯರ್ ಗಳು ನಗರದಲ್ಲಿ ಕೆಲವು ವಿಶಿಷ್ಟ ಉತ್ಪನ್ನ ಮತ್ತು ಸ್ಥಳಗಳಿಂದ ಪ್ರಚಾರ ಮಾಡಲಾಗದ ತಮ್ಮ ನಗರಗಳ ವಿಶಿಷ್ಟ ಗುರುತುಗಳನ್ನು ಉತ್ತೇಜಿಸುವಂತೆ ಮೇಯರ್ ಗಳಿಗೆ ಸೂಚಿಸಿದರು.
ನಗರ ಜೀವನಕ್ಕೆ ಸಂಬಂಧಿಸಿದಂತೆ ವಿವಿಧ ಅಂಶಗಳ ಬಗ್ಗೆ ಜನಸ್ನೇಹಿ ಆಲೋಚನೆಗಳನ್ನು ಅಭಿವೃದ್ಧಿಪಡಿಸಿಕೊಳ್ಳುವಂತೆ ಪ್ರಧಾನಮಂತ್ರಿ ಕರೆ ನೀಡಿದರು. ನಾವು ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸಬೇಕಿದೆ ಎಂದು ಅವರು ಹೇಳಿದರು. ಮೇಯರ್ ಗಳು ಸುಗಮ್ಯ ಭಾರತ ಅಬಿಯಾನದಡಿ– ಭಾರತ ಲಭ್ಯತೆ ಚಳವಳಿಯ ಭಾಗವಾಗಿ ದಿವ್ಯಾಂಗ ಸ್ನೇಹಿ ಸೌಕರ್ಯಗಳನ್ನು ನಗರಗಳಲ್ಲಿ ಸೃಷ್ಟಿಸಬೇಕು ಎಂದು ಪ್ರಧಾನಿ ಮೇಯರ್ ಗಳಿಗೆ ಕರೆ ಕೊಟ್ಟರು.
“ನಮ್ಮ ನಗರಗಳು ನಮ್ಮ ಆರ್ಥಿಕತೆಯ ಪ್ರೇರಕ ಶಕ್ತಿಗಳಾಗಿವೆ. ನಾವು ನಗರಗಳನ್ನು ಆರ್ಥಿಕತೆಯ ಕ್ರಿಯಾಶೀಲ ಕೇಂದ್ರಗಳನ್ನಾಗಿ ಮಾಡಬೇಕಿದೆ”ಎಂದು ಅವರು ಹೇಳಿದರು. ಆರ್ಥಿಕ ಚಟುವಟಿಕೆಗಳನ್ನು ಆಹ್ವಾನಿಸುವ ಮತ್ತು ಉತ್ತೇಜಿಸುವ ಪರಿಸರ ವ್ಯವಸ್ಥೆಯನ್ನು ರಚಿಸಲು ಎಲ್ಲ ಸೌಲಭ್ಯಗಳು ಏಕಕಾಲದಲ್ಲಿ ಅಭಿವೃದ್ಧಿಗೊಳ್ಳುವ ಸಮಗ್ರ ವ್ಯವಸ್ಥೆಯನ್ನು ರಚಿಸಲು ಅವರು ಕರೆ ನೀಡಿದರು.
ನಮ್ಮ ಅಭಿವೃದ್ಧಿಯ ಮಾದರಿಗಳಲ್ಲಿ ಎಂಎಸ್ ಎಂಇಗಳನ್ನು ಬಲವರ್ಧನೆಗೊಳಿಸುವ ಅಗತ್ಯವನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. “ಬೀದಿ ಬದಿ ವ್ಯಾಪಾರಿಗಳು ನಮ್ಮದೇ ಪಯಣದ ಭಾಗವಾಗಿದ್ದಾರೆ. ಅವರು ಕಷ್ಟಗಳನ್ನು ನಾವು ಪ್ರತಿಕ್ಷಣವೂ ಕಾಣುತಿದ್ದೇವೆ. ಅವರಿಗೆ ನಾವು ಪಿಎಂ ಸ್ವನಿಧಿ ಯೋಜನೆ ಜಾರಿಗೊಳಿಸಿದ್ದೇವೆ. ಈ ಯೋಜನೆ ಅತ್ಯಂತ ಒಳ್ಳೆಯದನ್ನೇ ಮಾಡಿದೆ. ನಿಮ್ಮ ನಗರದಲ್ಲಿನ ಅಂತಹ ವ್ಯಾಪಾರಿಗಳ ಪಟ್ಟಿಯನ್ನು ಮಾಡಿ ಮತ್ತು ಅವರಿಗೆ ಮೊಬೈಲ್ ಫೋನ್ ಮೂಲಕ ವಹಿವಾಟು ನಡೆಸುವುದನ್ನು ಕಲಿಸಿ. ಅವು ಬ್ಯಾಂಕ್ ಹಣಕಾಸು ವಹಿವಾಟುಗಳಿಗೆ ಅತ್ಯುತ್ತಮ ರೀತಿಯಲ್ಲಿ ನೆರವು ನೀಡುತ್ತಾರೆ “ಎಂದು ಪ್ರಧಾನಮಂತ್ರಿ ಹೇಳಿದರು. ಸಾಂಕ್ರಾಮಿಕದ ಸಮಯದಲ್ಲಿ ಅವರ ಪ್ರಾಮುಖ್ಯತೆ ಅತಿ ಸ್ಪಷ್ಟವಾಗಿ ಮನಗಂಡಿದ್ದೇವೆ ಎಂದರು.
ಕಾಶಿಯ ಅಭಿವೃದ್ಧಿಗೆ ತಮ್ಮ ಅನುಭವಗಳೊಂದಿಗೆ ಸಲಹೆಗಳನ್ನು ನೀಡುವಂತೆ ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಕೊನೆಯಲ್ಲಿ ಮೇಯರ್ ಗಳಿಗೆ ಮನವಿ ಮಾಡಿದರು. “ನಿಮ್ಮ ಸಲಹೆಗಳಿಗೆ ನಾವು ಆಭಾರಿಯಾಗಿರುತ್ತೇನೆ ಮತ್ತು ನಾನು ನಿಮ್ಮ ಮೊದಲ ವಿದ್ಯಾರ್ಥಿ” ಎಂದು ಹೇಳಿದರು. ಸರ್ದಾರ್ ಪಟೇಲ್ ಅವರು ಆಹಮದಾಬಾದ್ ನಗರದ ಮೇಯರ್ ಆಗಿದ್ದರು, ಅವರನ್ನು ಇಂದಿಗೂ ದೇಶ ಸ್ಮರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. “ಮೇಯರ್ ಹುದ್ದೆ ಒಂದು ಅರ್ಥಪೂರ್ಣ ರಾಜಕೀಯ ಜೀವನಕ್ಕೆ ಒಂದು ಮೆಟ್ಟಿಲು ಆಗಿದೆ, ಅಲ್ಲಿ ನೀವು ದೇಶದ ಜನತೆಗೆ ಸೇವೆ ಸಲ್ಲಿಸಬೇಕು” ಎಂದು ಪ್ರಧಾನಮಂತ್ರಿ ಹೇಳಿದರು.
***
Addressing the All India Mayors’ Conference. https://t.co/PYcC02bPDe
— Narendra Modi (@narendramodi) December 17, 2021
हमारे देश में ज़्यादातर शहर पारंपरिक शहर ही हैं, पारंपरिक तरीके से ही विकसित हुए हैं।
— PMO India (@PMOIndia) December 17, 2021
आधुनिकीकरण के इस दौर में हमारे इन शहरों की प्राचीनता भी उतनी ही अहमियत है: PM @narendramodi
हमारा शहर स्वच्छ रहे और स्वस्थ भी रहे, ये हमारा प्रयास होना चाहिए: PM @narendramodi
— PMO India (@PMOIndia) December 17, 2021
हमें शहर को vibrant economy का hub बनाना चाहिए: PM @narendramodi
— PMO India (@PMOIndia) December 17, 2021
हमारे विकास के मॉडल में MSME को कैसे बल मिले, इस पर विचार करने की जरूरत है: PM @narendramodi
— PMO India (@PMOIndia) December 17, 2021
रेहड़ी-पटरी वाले हमारी अपनी ही यात्रा के अंग है, इनकी मुसीबतों को हम हर पल देखेंगे।
— PMO India (@PMOIndia) December 17, 2021
उनके लिए हम पीएम स्वनिधि योजना लाए हैं। यह योजना बहुत ही उत्तम है।
आप अपने नगर में उनकी लिस्ट बनाइए और उनको मोबाइल फोन से लेन-देन सिखा दीजिए: PM @narendramodi
मेरा मेयरों से आग्रह है कि आप स्वच्छता को सिर्फ सालभर के एक कार्यक्रम के रूप में न लें। क्या आप हर महीने वार्डों के बीच स्वच्छता की स्पर्धा ऑर्गेनाइज करके यह देख सकते हैं कि कौन सा वार्ड सबसे ज्यादा सुंदर है? pic.twitter.com/GfUrh1uxEg
— Narendra Modi (@narendramodi) December 17, 2021
आजादी के अमृत महोत्सव के निमित्त हमारे शहरों में भी कई स्पर्धाएं करवाई जा सकती हैं। ये आजादी के आंदोलन से जुड़ी रंगोली या फिर गीत लिखने की स्पर्धा हो सकती है। हमारी माताएं-बहनें आजादी के 100 साल के सपनों से जुड़ी नई लोरियां भी बना सकती हैं। pic.twitter.com/7IxAoPZ1pI
— Narendra Modi (@narendramodi) December 17, 2021
जिन शहरों में नदी है, क्या हम वहां हर वर्ष सात दिन के लिए नदी-उत्सव मना सकते हैं, जिसमें पूरे शहर के लोग शामिल हों। इससे आपके शहर में एक नई जान आ जाएगी, नया उत्साह आ जाएगा। pic.twitter.com/0NxjQlT8pz
— Narendra Modi (@narendramodi) December 17, 2021
कोरोना काल ने हमें समझाया है कि जिनके भरोसे हमारी रोजाना की जिंदगी चलती है, वे रेहड़ी-पटरी वाले कितने मूल्यवान हैं। उनके लिए ही पीएम स्वनिधि योजना लाई गई है। हमारा दायित्व बनता है कि उन्हें डिजिटली ट्रेंड करें, ताकि उनका जीवन अधिक से अधिक आसान बन सके। pic.twitter.com/EfFqS6IAyR
— Narendra Modi (@narendramodi) December 17, 2021
उत्तर प्रदेश में एक बहुत अच्छा कार्यक्रम चल रहा है- वन डिस्ट्रिक्ट वन प्रोडक्ट। इसका इतना असर हुआ है कि आपको पता चल जाएगा कि किस जिले की पहचान किस चीज के लिए है। क्या उसी प्रकार आपका शहर यह तय कर सकता है कि वो कौन सी बात है, जो उसकी पहचान बने। pic.twitter.com/cNUxgmWi5V
— Narendra Modi (@narendramodi) December 17, 2021