Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂತಾರಾಷ್ಟ್ರೀಯ ವೈಶಾಖ್ ದಿನದ ಉದ್ಘಾಟನಾ ಮಹೋತ್ಸವ ಉದ್ದೇಶಿಸಿ ಪ್ರಧಾನಿ ಭಾಷಣ

ಅಂತಾರಾಷ್ಟ್ರೀಯ ವೈಶಾಖ್ ದಿನದ ಉದ್ಘಾಟನಾ ಮಹೋತ್ಸವ ಉದ್ದೇಶಿಸಿ ಪ್ರಧಾನಿ ಭಾಷಣ

ಅಂತಾರಾಷ್ಟ್ರೀಯ ವೈಶಾಖ್ ದಿನದ ಉದ್ಘಾಟನಾ ಮಹೋತ್ಸವ ಉದ್ದೇಶಿಸಿ ಪ್ರಧಾನಿ ಭಾಷಣ

ಅಂತಾರಾಷ್ಟ್ರೀಯ ವೈಶಾಖ್ ದಿನದ ಉದ್ಘಾಟನಾ ಮಹೋತ್ಸವ ಉದ್ದೇಶಿಸಿ ಪ್ರಧಾನಿ ಭಾಷಣ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ಕೊಲಂಬೋದ ಬಂಡಾರನಾಯಿಕೆ ಸ್ಮಾರಕ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ವೈಶಾಖ ದಿನದ ಉದ್ಘಾಟನಾ ಮಹೋತ್ಸವ ಉದ್ದೇಶಿಸಿ ಭಾಷಣ ಮಾಡಿದರು.

ಪ್ರಧಾನಿಯವರು ಆಗಮಿಸುತ್ತಿದ್ದಂತೆ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಶುಭಕೋರಿ ಸ್ವಾಗತಿಸಿದರು. ಸಾಂಪ್ರದಾಯಿಕ ಡ್ರಮ್ಸ್ ಮತ್ತು ಸಾಂಪ್ರದಾಯಿಕ ನೃತ್ಯದ ಮೂಲಕ ಪ್ರಧಾನಿಯವರನ್ನು ಬರಮಾಡಿಕೊಳ್ಳಲಾಯಿತು. ಸಭಾಂಗಣದ ದ್ವಾರದಲ್ಲಿ ಅವರು ಸಾಂಪ್ರದಾಯಿಕ ಜ್ಯೋತಿ ಬೆಳಗಿಸಿದರು.

ಕಾರ್ಯಕ್ರಮವು ಪಂಚ ಬುದ್ಧ ಸೂತ್ರಗಳ ಪಠಣದೊಂದಿಗೆ ಆರಂಭವಾಯಿತು. ಶ್ರೀಲಂಕಾದ ಬುದ್ಧ ಶಾಶನ ಮತ್ತು ನ್ಯಾಯ ಖಾತೆ ಸಚಿವ ಶ್ರೀ. ವಿಜೇಯದಾಸ ರಾಜಪಕ್ಸೆ ಅವರು ಸ್ವಾಗತ ಭಾಷಣ ಮಾಡಿದರು.

ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಅವರು, ನೀವು ಶ್ರೀಲಂಕಾದಲ್ಲಿ ನಮಗೆ ನಮ್ಮಲ್ಲಿಯೇ ಒಬ್ಬರಿದ್ದಂತೆ ಎಂದು ಹೇಳಿದರು.

ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮಾತನಾಡಿ, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ಹಾಜರಿರುವುದು ನಮ್ಮ ಸೌಭಾಗ್ಯ ಎಂದರು. ಅವರು ಎರಡೂ ದೇಶಗಳ ನಡುವಿನ ಪುರಾತನ ಬಾಂಧವ್ಯದ ಕುರಿತು ಮಾತನಾಡಿ, ವೈಶಾಖ್ ದಿನದ ಸಂದರ್ಭದಲ್ಲಿಂದು ಪ್ರಧಾನಿ ಶ್ರೀ. ನರೇಂದ್ರ ಮೋದಿ ಅವರ ಉಪಸ್ಥಿತಿ, ಮಹತ್ವ ತಂದಿದೆ ಮತ್ತು ಇದನ್ನು ಇಡೀ ವಿಶ್ವ ಗಮನಿಸುತ್ತಿದೆ ಎಂದರು. ಅವರು ಸ್ನೇಹ ಮತ್ತು ಶಾಂತಿಯ ಸಂದೇಶ ತಂದಿದ್ದಾರೆ ಎಂದು ಅಧ್ಯಕ್ಷರು ಹೇಳಿದರು.

ಭಗವಾನ್ ಬುದ್ಧನ ಜನನ, ಜ್ಞಾನೋದಯ ಮತ್ತು ಪರಿನಿರ್ವಾಣಕ್ಕೆ ಮಾನವತೆ ಗೌರವ ನೀಡುವ ವೈಶಾಕ್ ಪರಮ ಪವಿತ್ರವಾದ ದಿನ ಎಂದು ಪ್ರಧಾನಿ ಬಣ್ಣಿಸಿದರು. ಸರ್ವೋನ್ನತ ಸತ್ಯ ಮತ್ತು ಕಾಲಾತೀತವಾದ ಧಮ್ಮದ ವಾಸ್ತವತೆಯನ್ನು ಮತ್ತು ನಾಲ್ಕು ಪವಿತ್ರ ಸತ್ಯಗಳನ್ನು ಪ್ರತಿಫಲಿಸುವ ದಿನ ಇದೆಂದು ಅವರು ಹೇಳಿದರು.

ತಮ್ಮನ್ನು ಕೊಲಂಬೋದ ಅಂತಾರಾಷ್ಟ್ರೀಯ ವೈಶಾಖ್ ದಿನ ಮಹೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕಾಗಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಪ್ರಧಾನಿ ರನಿಲ್ ವಿಕ್ರಮಸಿಂಘೆ ಮತ್ತು ಶ್ರೀಲಂಕಾದ ಜನತೆಗೆ ತಾವು ಆಭಾರಿಯಾಗಿರುವುದಾಗಿ ಪ್ರಧಾನಿ ತಿಳಿಸಿದರು.

ಈ ಪವಿತ್ರ ಸಂದರ್ಭದಲ್ಲಿ, ತಾವು ಸಂಯಕ್ ಸಂಬುದ್ಧ ನಾಡಿನಿಂದ 125 ಕೋಟಿ ಭಾರತೀಯರ ಶುಭಾಶಯಗಳನ್ನೂ ತಂದಿರುವುದಾಗಿ ಪ್ರಧಾನಿ ತಿಳಿಸಿದರು.

ಪ್ರಧಾನಮಂತ್ರಿಯವರ ಭಾಷಣದ ಪ್ರಮುಖ ಅಂಶಗಳು ಈ ಕೆಳಗಿನಂತಿದೆ:

ಭಾರತದ ಬೋದ ಗಯದಲ್ಲಿ ರಾಜ ಕುಮಾರ ಸಿದ್ಧಾರ್ಥ ಬುದ್ಧನಾದ, ಈ ತಾಣ ಬೌದ್ಧರ ಪ್ರಪಂಚದಲ್ಲಿ ಪವಿತ್ರ ತಾಣವಾಗಿದೆ.

ಭಗವಾನ್ ಬುದ್ಧನ ಪ್ರಥಮ ಹಿತೋಪದೇಶ ನಡೆದದ್ದು ವಾರಾಣಸಿಯಲ್ಲಿ. ಇದು ಧಮ್ಮದ ಚಕ್ರಕ್ಕೆ ಚಾಲನೆ ನೀಡಿದ ತಾಣ. ನಾನು ಆ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ಗೌರವ ಹೊಂದಿದ್ದೇನೆ.
ನಮ್ಮ ಪ್ರಮುಖ ರಾಷ್ಟ್ರ ಲಾಂಛನಗಳನ್ನು ಬೌದ್ಧಧರ್ಮದ ಸ್ಫೂರ್ತಿಯಿಂದ ರೂಪಿಸಲಾಗಿದೆ.

ನಮ್ಮ ಆಡಳಿತ, ಸಂಸ್ಕೃತಿ ಮತ್ತು ತತ್ತ್ವಗಳಲ್ಲಿ ಬೌದ್ಧಧರ್ಮ ಮತ್ತು ಅದರ ಹಲವಾರು ಎಳೆಗಳು ಆಳವಾಗಿ ಬೇರೂರಿವೆ.

ಭಾರತದಿಂದ ಹೊರಹೊಮ್ಮಿದ ಬೌದ್ಧಧರ್ಮದ ಪವಿತ್ರ ಪರಿಮಳ ಜಗತ್ತಿನ ಮೂಲೆ ಮೂಲೆಗೂ ಹಬ್ಬಿದೆ. ಅಶೋಕ ಚಕ್ರವರ್ತಿಯ ಪುತ್ರರಾದ ಮಹೀಂದ್ರ ಮತ್ತು ಸಂಗಮಿತ್ರ ಭಾರತದಿಂದ ಶ್ರೀಲಂಕಾಗೆ ಧಮ್ಮ ದೂತರಾಗಿ ಪ್ರಯಾಣ ಮಾಡಿ, ಧಮ್ಮದ ಅತಿ ದೊಡ್ಡ ಕಾಣಿಕೆ ನೀಡಿದರು.

ಇಂದು, ಶ್ರೀಲಂಕಾ ಬೌದ್ಧ ಬೋಧನೆ ಮತ್ತು ಅಧ್ಯಯನದ ಪ್ರಮುಖ ತಾಣಗಳಲ್ಲಿ ಒಂದಾಗಿದೆ ಎಂಬ ಹೆಮ್ಮೆಗೆ ಪಾತ್ರವಾಗಿದೆ.

ಶತಮಾನಗಳ ಬಳಿಕ, ಅಂಗಾರಿಕ, ಧರ್ಮಪಾಲ ಇದೇ ರೀತಿಯ ಪಯಣ ಕೈಗೊಂಡರು, ಆದರೆ ಈ ಬಾರಿ ಶ್ರೀಲಂಕಾದಿಂದ ತನ್ನ ಸ್ವಂತ ನೆಲೆಯ ಭಾರತದಲ್ಲಿ ಬುದ್ಧನ ಸ್ಫೂರ್ತಿ ಪಸರಿಸಿದರು.
ಒಂದು ರೀತಿಯಲ್ಲಿ ನೀವು ನಮ್ಮನ್ನು ಮತ್ತೆ ನಮ್ಮ ಹಿಂದಿನ ಬೇರಿಗೆ ಕರೆದುಕೊಂಡು ಹೋಗಿದ್ದೀರಿ.

ಬೌದ್ಧ ಪರಂಪರೆಯ ಹಲವು ಬಹು ಮುಖ್ಯ ಅಂಶಗಳನ್ನು ಸಂರಕ್ಷಿಸಿರುವುದಕ್ಕೆ ಶ್ರೀಲಂಕಾಗಿ ಇಡೀ ವಿಶ್ವವೇ ಕೃತಜ್ಞರಾಗಿರಬೇಕು.

ವೈಶಾಖ್ ಈ ಮುರಿಯದ ಬೌದ್ಧ ಪರಂಪರೆಯ ಹಂಚಿಕೆಯನ್ನು ಸಂಭ್ರಮಿಸುವ ಸಂದರ್ಭವಾಗಿದೆ.

ಈ ಪರಂಪರೆ ನಮ್ಮ ಸಮಾಜವನ್ನು ಪೀಳಿಗೆಗಳಿಂದ ಮತ್ತು ಶತಮಾನಗಳಿಂದ ಬಂಧಿಸಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಮೈತ್ರಿ ಶ್ರೇಷ್ಠ ನಾಯಕರಿಂದ ಎಚ್ಚಣೆಯಾಗಿದೆ.

ಬೌದ್ಧಧರ್ಮವು ನಮ್ಮ ಸಂಬಂಧಕ್ಕೆ ಪ್ರಸ್ತುತ ಪ್ರಕಾಶವನ್ನು ನೀಡುತ್ತದೆ.

ಆಪ್ತ ನೆರೆಯವರಾಗಿ, ನಮ್ಮ ಬಾಂಧವ್ಯ ಹಲವು ಮಡಿಕೆಗಳಲ್ಲಿ ಹರಡಿದೆ.

ನಮ್ಮ ಅಂತರ್ ಸಂಪರ್ಕಿತ ಬೌದ್ಧ ಧರ್ಮದ ಪರಸ್ಪರ ಹಂಚಿಕೆಯ ಮೌಲ್ಯಗಳಿಂದ ಅದಕ್ಕೆ ಬಲ ಬಂದಿದೆ, ಇದು ಅಪರಿಮಿತ ಸಾಧ್ಯತೆಗಳಿಂದ ನಮ್ಮ ಭವಿಷ್ಯ ಹೆಚ್ಚಿಸಿದೆ.
ನಮ್ಮ ಮೈತ್ರಿ ನಮ್ಮ ಜನತೆಯ ಹೃದಯದಲ್ಲಿ ಮತ್ತು ನಮ್ಮ ಸಮಾಜದ ಎಳೆಯಲ್ಲಿ ನೆಲೆಸಿದೆ.

ಬೌದ್ಧ ಪರಂಪರೆಯ ನಂಟನ್ನು ಆಳಗೊಳಿಸಲು ಮತ್ತು ಗೌರವಿಸಲು, ಮುಂದಿನ ಆಗಸ್ಟ್ ನಿಂದ ಏರ್ ಇಂಡಿಯಾ ಕೊಲಂಬೋ ಮತ್ತು ವಾರಾಣಸಿಯ ನಡುವೆ ನೇರ ವಿಮಾನ ಯಾನ ಆರಂಭಿಸಲಿದೆ ಎಂದು ಘೋಷಿಸಲು ಸಂತೋಷಿಸುತ್ತೇನೆ.

ಇದು ಶ್ರೀಲಂಕಾದ ನನ್ನ ಸೋದರ ಸೋದರಿಯರಿಗೆ ಬುದ್ಧನ ನಾಡಿನ ಪ್ರಯಣವನ್ನು ಸುಗಮಗೊಳಿಸುತ್ತದೆ ಮತ್ತು ಶ್ರವಸ್ತಿ, ಖುಷಿನಗರ್, ಸಂಕಾಸ, ಕೌಶಂಬಿ ಮತ್ತು ಸಾರಾನಾಥ್ ಗೆ ನೇರವಾಗಿ ಭೇಟಿ ನೀಡಲು ನೆರವಾಗುತ್ತದೆ.

ನನ್ನ ತಮಿಳು ಸೋದರ ಮತ್ತು ಸೋದರಿಯರಿಗೆ ಕಾಶಿ ವಿಶ್ವನಾಥನ ನಾಡು ವಾರಾಣಸಿಗೆ ಭೇಟಿ ನೀಡಲೂ ಸಹಾಯ ಮಾಡುತ್ತದೆ.

ನಾವು ಶ್ರೀಲಂಕಾದೊಂದಿಗಿನ ಬಾಂಧವ್ಯದಲ್ಲಿ ಅಗಾದ ಅವಕಾಶಗಳ ಸಂದರ್ಭದಲ್ಲಿದ್ದೇವೆ ಎಂದು ನಾನು ನಂಬುತ್ತೇನೆ.

ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪಾಲುದಾರಿಕೆಯಲ್ಲಿ ದೊಡ್ಡ ಜಿಗಿತ ಸಾಧಿಸಲು ಇದೊಂದು ಅವಕಾಶವಾಗಿದೆ.

ನಮಗೆ, ನಿಮ್ಮ ಪ್ರಗತಿ ಮತ್ತು ಯಶಸ್ಸಿನಲ್ಲಿ ನಮ್ಮ ಮೈತ್ರಿಯ ಯಶಸ್ಸಿನ ಸೂಕ್ತ ಮೈಲಿಗಲ್ಲಿದೆ.

ನಾವು ಶ್ರೀಲಂಕಾದ ಸೋದರ ಮತ್ತು ಸೋದರಿಯರ ಆರ್ಥಿಕ ಪ್ರಗತಿಗೆ ಬದ್ಧರಾಗಿದ್ದೇವೆ.

ನಮ್ಮ ಅಭಿವೃದ್ಧಿ ಸಹಕಾರವನ್ನು ಆಳಗೊಳಿಸಲು ಧನಾತ್ಮಕ ಬದಲಾವಣೆ ತರಲು ಮತ್ತು ಆರ್ಥಿಕ ಪ್ರಗತಿಗಾಗಿ ನಾವು ಹೂಡಿಕೆಯನ್ನು ಮುಂದುವರಿಸುತ್ತೇವೆ.
ನಮ್ಮ ಜ್ಞಾನ, ಸಾಮರ್ಥ್ಯ ಮತ್ತು ಪ್ರಗತಿಯ ವಿನಿಮಯದಲ್ಲಿ ನಮ್ಮ ಶಕ್ತಿಇದೆ.

ವಾಣಿಜ್ಯ ಮತ್ತು ಹೂಡಿಕೆಯಲ್ಲಿ ನಾವು ಈಗಾಗಲೇ ಪ್ರಮುಖ ಪಾಲುದಾರರಾಗಿದ್ದೇವೆ.

ಸರಾಗವಾದ ವಾಣಿಜ್ಯ, ಹೂಡಿಕೆ ಮತ್ತು ತಂತ್ರಜ್ಞಾನದ ಮುಕ್ತ ಹರಿವಿನಿಂದ ಮತ್ತು ನಮ್ಮ ಗಡಿಯಾಚೆಗಿನ ಕಲ್ಪನೆಗಳು ನಮ್ಮ ಪರಸ್ಪರರ ಲಾಭಕ್ಕಾಗಿ ಎಂದು ನಾವು ಭಾವಿಸುತ್ತೇವೆ.
ಭಾರತದ ತ್ವರಿತ ಪ್ರಗತಿ ಇಡೀ ವಲಯಕ್ಕೆ ಅದರಲ್ಲೂ ಶ್ರೀಲಂಕಾಕ್ಕೆ ಲಾಭ ತರುತ್ತದೆ.

ಮೂಲಸೌಕರ್ಯ ಮತ್ತು ಸಂಪರ್ಕ, ಸಾರಿಗೆ ಮತ್ತು ಇಂಧನದಲ್ಲಿ ನಮ್ಮ ಸಹಕಾರವನ್ನು ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ.

ನಮ್ಮ ಅಭಿವೃದ್ಧಿ ಪಾಲುದಾರಿಕೆಯು ಬಹುತೇಕ ಎಲ್ಲ ಮಾನವ ಕ್ಷೇತ್ರಗಳಲ್ಲಿ ಅಂದರೆ ಕೃಷಿ, ಶಿಕ್ಷಣ, ಆರೋಗ್ಯ, ಪುನರ್ವಸತಿ, ಸಾರಿಗೆ, ಇಂಧನ, ಸಂಸ್ಕೃತಿ, ಜಲ, ವಸತಿ, ಕ್ರೀಡೆ ಮತ್ತು ಮಾನವ ಸಂಪನ್ಮೂಲದಲ್ಲಿ ವಿಸ್ತಾರವಾಗಿದೆ.

ಇಂದು, ಶ್ರೀಲಂಕಾದೊಂದಿಗಿನ ಭಾರತದ ಅಭಿವೃದ್ದಿ ಸಹಕಾರ 2.6 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ್ದಾಗಿದೆ.

ಮತ್ತು, ಇದರ ಏಕೈಕ ಉದ್ದೇಶ, ಶಾಂತಿಯುತ, ಪ್ರಗತಿದಾಯಕ ಮತ್ತು ಅದರ ಜನರ ಸುರಕ್ಷತೆಯ ಭವಿಷ್ಯಕ್ಕೆ ಬೆಂಬಲ ನೀಡುವುದಾಗಿದೆ.

ಏಕೆಂದರೆ ಶ್ರೀಲಂಕಾದ ಜನರ ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣವು 125 ಕೋಟಿ ಭಾರತೀಯರೊಂದಿಗೆ ಸಂಪರ್ಕ ಹೊಂದಿದೆ.

ಕಾರಣ, ಅದು ಭೂಮಿಯಲ್ಲೇ ಇರಲಿ ಅಥವಾ ಹಿಂದೂ ಮಹಾಸಾಗರದ ಜಲದಲ್ಲೇ ಇರಲಿ, ನಮ್ಮ ಸಮಾಜದ ಭದ್ರತೆ ಅವಿಭಜಿತವಾದ್ದು.

ಅಧ್ಯಕ್ಷ ಸಿರಿಸೇನಾ ಮತ್ತು ಪ್ರಧಾನಿ ವಿಕ್ರಮಸಿಂಘೆ ಅವರೊಂದಿಗೆ ನಡೆದ ಮಾತುಕತೆಯಲ್ಲಿ, ನಾವು ನಮ್ಮ ಸಮಾನ ಗುರಿಗಳನ್ನು ಸಾಧಿಸಲು ಕೈಜೋಡಿಸುವುದನ್ನು ಪುನರುಚ್ಚರಿಸಿದ್ದೇವೆ.
ನಿಮ್ಮ ಸಮಾಜದ ಪ್ರಗತಿ ಮತ್ತು ಸೌಹಾರ್ದತೆಗೆ ನೀವು ಮಹತ್ವದ ಆಯ್ಕೆ ಮಾಡಿದ್ದು, ನಿಮಗೆ ನಿಮ್ಮ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಭಾರತ ಒಬ್ಬ ಮಿತ್ರ ಹಾಗೂ ಪಾಲುದಾರನಾಗಿ ಕಾಣುತ್ತದೆ.

ಭಗವಾನು ಬುದ್ಧನ ಸಂದೇಶ ಎರಡೂವರೆ ಸಮಸ್ರಮಾನಗಷ್ಟು ಹಳೆಯದಾದರೂ 21ನೇ ಶತಮಾನದಲ್ಲೂ ಪ್ರಸ್ತುತವಾಗಿದೆ.

ಬುದ್ಧ ತೋರಿದ ದಾರಿ ನಮ್ಮೆಲ್ಲರೊಂದಿಗೆ ಮಾತನಾಡುತ್ತದೆ.

ಅದರ ಸಾರ್ವತ್ರಿಕತೆ ಮತ್ತು ಹಚ್ಚ ಹಸಿರಾದ ಸ್ವಭಾವ ಬಡಿದೆಬ್ಬಿಸುತ್ತದೆ.

ಇದು ದೇಶಗಳ ನಡುವೆ ಒಗ್ಗೂಡಿಸುವ ಶಕ್ತಿಯಾಗಿದೆ.

ದಕ್ಷಿಣ, ಮಧ್ಯ, ಆಗ್ನೇಯ ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳು ಬುದ್ಧನ ನಾಡಿನೊಂದಿಗಿನ ಬೌದ್ಧ ಸಂಪರ್ಕಕ್ಕೆ ಹೆಮ್ಮೆಪಡುತ್ತವೆ.

ವೈಶಾಖ ದಿನಕ್ಕೆ ಆಯ್ಕೆ ಮಾಡಿರುವ ಸಾಮಾಜಿಕ ನ್ಯಾಯ ಮತ್ತು ಸುಸ್ಥಿರ ಜಾಗತಿಕ ಶಾಂತಿಯ ಧ್ಯೇಯ ಬುದ್ಧನ ಬೋಧನೆಯೊಂದಿಗೆ ಆಳವಾಗಿ ಅನುಕರಣಿಸುತ್ತದೆ.
ಧ್ಯೇಯವಾಕ್ಯ ಸ್ವತಂತ್ರವಾಗಿ ಕಾಣಬಹುದು.

ಆದರೆ, ಅವು ಎರಡೂ ಆಳವಾಗಿ ಅಂತರ್ ಅವಲಂಬಿತವಾಗಿವೆ ಮತ್ತು ಒಂದಕ್ಕೊಂದು ಬೆಸೆದುಕೊಂಡಿವೆ.
ಸಾಮಾಜಿಕ ನ್ಯಾಯದ ವಿಚಾರ ಸಮುದಾಯಗಳ ನಡುವೆ ಮತ್ತು ಸಮುದಾಯದೊಳಗಿನ ಸಂಘರ್ಷದೊಂದಿಗೆ ಕೂಡುತ್ತದೆ. ಇದು ಸಂಸ್ಕೃತದಲ್ಲಿ ಹೇಳುವಂತೆ ತನ್ಹ ಅಥವಾ ತೃಷ್ಣ, ಅಂದರೆ ತೃಷೆ ಅಥವಾ ದುರಾಸೆಯಿಂದ ಕೂಡಿದ್ದಾಗಿದೆ.

ದುರಾಸೆಯು ಮನುಕುಲ ಪ್ರಾಬಲ್ಯ ಪಡೆಯಲು ಮತ್ತು ನಮ್ಮ ಸ್ವಾಭಾವಿಕ ವಾಸ್ತವ್ಯಗಳನ್ನು ಕೆಳದರ್ಜೆಗಳಿಸುವಂತೆ ಮಾಡಿವೆ. ನಮ್ಮ ಎಲ್ಲ ಅಗತ್ಯಗಳನ್ನು ಪೂರೈಸಿಕೊಳ್ಳುವ ಆಶಯವು ಸಮುದಾಯದಲ್ಲಿ ಆದಾಯದ ಅಸಮಾನತೆಗೆ ಕಾರಣವಾಗಿದ್ದು, ಸಾಮಾಜಿಕ ಸೌಹಾರ್ದವನ್ನು ಕದಡಿದೆ.

ಅದೇರೀತಿ, ಸುಸ್ಥಿರ ಜಾಗತಿಕ ಶಾಂತಿಗೆ ಇಂದು ಇರುವ ಅತಿ ದೊಡ್ಡ ಸವಾಲು ದೇಶಗಳ ನಡುವಿನ ಸಂಘರ್ಷದಿಂದ ಇಲ್ಲ.

ಇದು ಮನೋಸ್ಥಿತಿ, ಚಿಂತನೆಯ ಹರಿವು, ಕಾಯಗಳು ಮತ್ತು ದ್ವೇಷ ಮತ್ತು ಹಿಂಸೆಯ ಕಲ್ಪನೆಯಲ್ಲಿ ಬೇರೂರಿದ ಸಾಧನಗಳಲ್ಲಿದೆ.

ನಮ್ಮ ವಲಯದ ಭಯೋತ್ಪಾದನೆಯ ಪಿಡುಗು ಸಂಪೂರ್ಣವಾಗಿ ಈ ವಿನಾಶಕಾರಿ ಭಾವನೆಗಳಿಂದ ಆವಿರ್ಭವಿಸಿದ್ದಾಗಿದೆ.

ದುಃಖದ ಸಂಗತಿ ಎಂದರೆ, ನಮ್ಮ ವಲಯದಲ್ಲಿನ ದ್ವೇಷದ ಈ ಸಿದ್ಧಾಂತಗಳು ಮತ್ತು ಅದನ್ನು ಪ್ರತಿಪಾದಿಸುವವರು ಮುಕ್ತ ಮಾತುಕತೆಗೆ ಸಿದ್ಧರಿಲ್ಲ ಮತ್ತು ಸಾವು ಮತ್ತು ವಿನಾಶವನ್ನು ಉಂಟುಮಾಡುವುದಕ್ಕೆ ಮಾತ್ರ ಮುಕ್ತರಾಗಿದ್ದಾರೆ.

ಬುದ್ಧನ ಶಾಂತಿ ಸಂದೇಶವೇ ವಿಶ್ವಾದ್ಯಂತ ವೃದ್ಧಿಸುತ್ತಿರುವ ಹಿಂಸಾಚಾರಕ್ಕೆ ಉತ್ತರ ಎಂದು ನಾನು ಬಲವಾಗಿ ನಂಬಿದ್ದೇನೆ.

ಮತ್ತು, ಸಂಘರ್ಷವಿಲ್ಲದ ವ್ಯಾಖ್ಯಾನದ ಶಾಂತಿಯ ದೇಶವಷ್ಟೇ ಅಲ್ಲ,

ಆದರೆ, ಸಕ್ರಿಯವಾದ ಶಾಂತಿ ಇರಬೇಕು, ಅಲ್ಲಿ ನಾವೆಲ್ಲರೂ ಕರುಣೆ ಮತ್ತು ಜ್ಞಾನ ಆಧಾರಿತ ಮಾತುಕತೆ, ಸೌಹಾರ್ದತೆ ಮತ್ತು ನ್ಯಾಯವನ್ನು ಉತ್ತೇಜಿಸುವಂತಿರಬೇಕು.

ಬುದ್ಧ ಹೇಳಿದಂತೆ ಶಾಂತಿಗಿಂತ ಮಿಗಿಲಾದ ಆನಂದ ಯಾವುದೂ ಇಲ್ಲ.

ವೈಶಾಖದ ಸಂದರ್ಭದಲ್ಲಿ, ಭಗವಾನ್ ಬುದ್ಧನ ಆದರ್ಶಗಳನ್ನು ಎತ್ತಿ ಹಿಡಿಯಲು ಮತ್ತುನಮ್ಮ ಸರ್ಕಾರಗಳ ನೀತಿಗಳು ಮತ್ತು ನಡವಳಿಕೆಗಳಲ್ಲಿ ಸೌಕರ್ಯಗಳು, ಅಂತರ್ಗತತೆ ಮತ್ತು ಸಹಾನುಭೂತಿಯಲ್ಲಿ ಶಾಂತಿಯ ಮೌಲ್ಯವನ್ನು ಉತ್ತೇಜಿಸಲು ಭಾರತ ಮತ್ತು ಶ್ರೀಲಂಕಾ ಒಗ್ಗೂಡಿ ಶ್ರಮಿಸುತ್ತದೆ ಎಂಬ ವಿಶ್ವಾಸ ನನ್ನದಾಗಿದೆ.

ವೈಶಾಖದ ಈ ಶುಭ ದಿನ, ನಾವು ಜ್ಞಾನದ ಬೆಳಕು ಹಚ್ಚೋಣ, ಅಜ್ಞಾನದ ಅಂಧಕಾರದಿಂದ ಹೊರಬರೋಣ, ನಾವು ಹೆಚ್ಚು ನಮ್ಮೊಳಗೆ ನೋಡೋಣ, ಮತ್ತು ಸತ್ಯವನ್ನು ಎತ್ತಿ ಹಿಡಿಯೋಣ.
ಮತ್ತು ಬುದ್ಧ ತೋರಿದ ಮಾರ್ಗದ ಬೆಳಕು ವಿಶ್ವದೆಲ್ಲೆಡೆ ಪಸರಿಸುವ ಪ್ರಯತ್ನಗಳಿಗೆ ನಮ್ಮನ್ನು ಸಮರ್ಪಿಸಿಕೊಳ್ಳೋಣ.

ಧಮ್ಮಪದದ 387 ನೇ ಶ್ಲೋಕವು ಹೀಗೆ ಹೇಳುತ್ತದೆ:

ಸೂರ್ಯ ಹಗಲಲ್ಲಿ ಪ್ರಕಾಶಿಸುತ್ತಾನೆ,

ಚಂದ್ರ ಇರುಳಲ್ಲಿ ಬೆಳಕು ನೀಡುತ್ತಾನೆ,

ಯೋಧನು ತನ್ನ ರಕ್ಷಾಕವಚದಲ್ಲಿ ಪ್ರಕಾಶಿಸುತ್ತಾನೆ,
ಬ್ರಾಹ್ಮಣನು ತನ್ನ ಧ್ಯಾನದಲ್ಲಿ ಹೊಳೆಯುತ್ತಾನೆ,

ಆದರೆ, ಎಚ್ಚರಗೊಂಡವನು ಪ್ರಕಾಶಮಾನವಾಗಿ ದಿನ ಮತ್ತು ರಾತ್ರಿಯಲ್ಲೆಲ್ಲಾ ಹೊಳೆಯುತ್ತಾನೆ.

ನಾನು ನಿಮ್ಮೊಂದಿಗೆ ಇರುವ ಈ ಗೌರವಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

ನಾನು ಕ್ಯಾಂಡಿಯಲ್ಲಿ ಇಂದು ಮದ್ಯಾಹ್ನ ಶ್ರೀ. ದಲಾಡ ಮಲಿಂಗವಾ, ಪವಿತ್ರ ಹಲ್ಲಿನ ಸ್ಮಾರಕ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಎದಿರು ನೋಡುತ್ತಿದ್ದೇನೆ.
ಬುದ್ಧ, ಧಮ್ಮ ಮತ್ತು ಸಂಘ ಎಂಬ ಮೂರು ರತ್ನಗಳು ನಮ್ಮೆಲ್ಲರನ್ನೂ ಹರಸಲಿ.

****
AKT/NT- 161734