2023ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ 100 ದಿನಗಳ ಕ್ಷಣಗಣನೆಯನ್ನು ಆಚರಿಸಲು ನಡೆಯುವ ಮೂರು ದಿನಗಳ ಯೋಗ ಮಹೋತ್ಸವ 2023ರಲ್ಲಿ ಎಲ್ಲರೂ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೋರಿದ್ದಾರೆ. ಮೂರು ದಿನಗಳ ಯೋಗ ಮಹೋತ್ಸವವು ನವದೆಹಲಿಯಲ್ಲಿ ಮಾರ್ಚ್ 13 ಮತ್ತು 14 ರಂದು ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಹಾಗು ಮಾರ್ಚ್ 15 ರಂದು ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗ ದಲ್ಲಿ ನಡೆಯಲಿದೆ..
ಆಯುಷ್ ಸಚಿವಾಲಯದ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
“ಯೋಗ ದಿನಾಚರಣೆಗೆ ನೂರು ದಿನಗಳು ಬಾಕಿಯಿದ್ದು, ಅದನ್ನು ಉತ್ಸಾಹದಿಂದ ಆಚರಿಸುವಂತೆ ನಿಮ್ಮೆಲ್ಲರನ್ನು ಕೋರುತ್ತೇನೆ. ಮತ್ತು, ನೀವು ಈಗಾಗಲೇ ಯೋಗವನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಲ್ಲದಿದ್ದರೆ, ಆದಷ್ಟು ಬೇಗ ಮಾಡಿ.”
***
With a hundred days to go for Yoga Day, urging you all to mark it with enthusiasm. And, if you haven’t made Yoga a part of your lives already, do so at the earliest. https://t.co/8duu7BlUzi
— Narendra Modi (@narendramodi) March 13, 2023