Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಮಂತ್ರಿಗಳಿಂದ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಹಣೆ ಮಹಿಳಾ ಸಾಧಕಿಯರಿಗೆ ಹಸ್ತಾಂತರ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಿಳಾ ದಿನಾಚರಣೆ ನಿಮಿತ್ತ ಸ್ತ್ರೀ ಶಕ್ತಿ ಮತ್ತು ಸಾಧನೆಗೆ ಪ್ರೇರಣಾದಾಯಕ ಗೌರವಸೂಚಕವಾಗಿ, ಇಂದಿನ ದಿನ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರಿಗೆ ಹಸ್ತಾಂತರಿಸಿದ್ದಾರೆ. 

ಅಂತಾರಾಷ್ಟ್ರೀಯ ಮಹಿಳಾ ದಿನದಂದು, ಮಹಿಳಾ ಸಾಧಕಿಯರು ಪ್ರಧಾನಮಂತ್ರಿಯವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಮ್ಮ ಯಶೋಗಾಥೆಗಳು ಮತ್ತು ಒಳನೋಟಗಳನ್ನು ಹಂಚಿಕೊಳ್ಳಲು ಹೆಮ್ಮೆಯಿಂದ  ಮುಂದಾಗಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್‌ ಖಾತೆಯಲ್ಲಿ ಮಹಿಳಾ ಸಾಧಕಿಯರ ಪೋಸ್ಟ್‌ ಗಳು ಹೀಗಿವೆ:

“ಬಾಹ್ಯಾಕಾಶ ತಂತ್ರಜ್ಞಾನ, ಪರಮಾಣು ತಂತ್ರಜ್ಞಾನ ಮತ್ತು ಮಹಿಳಾ ಸಬಲೀಕರಣ…

ಪರಮಾಣು ವಿಜ್ಞಾನಿ ಎಲಿನಾ ಮಿಶ್ರಾ ಮತ್ತು ಬಾಹ್ಯಾಕಾಶ ವಿಜ್ಞಾನಿ ಶಿಲ್ಪಿ ಸೋನಿ ಆದ ನಮಗೆ #WomensDay ದಂದು ಪ್ರಧಾನಮಂತ್ರಿಯವರ ಸಾಮಾಜಿಕ ಮಾಧ್ಯಮ ಜಾಲಗಳನ್ನು ನಿರ್ವಹಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆ.

ನಮ್ಮ ಸಂದೇಶ- ವಿಜ್ಞಾನಕ್ಕೆ ಭಾರತ ಅತ್ಯಂತ ರೋಮಾಂಚಕ ತಾಣವಾಗಿದೆ ಮತ್ತು ಹೀಗಾಗಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ವಲಯದಲ್ಲಿ ತೊಡಗಿಕೊಳ್ಳುವಂತೆ ನಾವು ಕರೆ ನೀಡುತ್ತೇವೆ.”

*****