ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ನಡೆದ ಅಂತರ ರಾಜ್ಯ ಮಂಡಳಿಯ ಸಭೆಯಲ್ಲಿ ಕಾರ್ಯಕ್ರಮ ಪಟ್ಟಿಯಲ್ಲಿದ್ದ ವಿವಿಧ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ಸಲಹೆ ವ್ಯಕ್ತಪಡಿಸಿದ ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗೌರ್ನರ್ ಗಳಿಗೆ ಧನ್ಯವಾದ ಅರ್ಪಿಸಿದರು.
ಪುಂಚ್ಚಿ ಆಯೋಗದ ಶಿಫಾರಸುಗಳ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಯವರು, ಇಂದು ನಡೆದ ಚರ್ಚೆ, ಉತ್ತಮ ಆರಂಭ ನೀಡಿದೆ ಎಂದು ಹೇಳಿದರು. ಈ ವಿಷಯದ ಮೇಲಿನ ಚರ್ಚೆ ಮುಂದುವರಿಯುತ್ತದೆ, ಮತ್ತು ಶಿಫಾರಸುಗಳ ಬಗ್ಗೆ ಒಮ್ಮತ ಮೂಡಿದ ಬಳಿಕ ಅವುಗಳ ಅನುಷ್ಠಾನ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು. ಆಧಾರ್ ಅನ್ನು ಪಾರದರ್ಶಕ ಮತ್ತು ಉತ್ತಮ ಆಡಳಿತ ಉತ್ತೇಜಿಸಲು ಒಂದು ಸಾಧನ ಎಂದು ಒಟ್ಟಾರೆ ಒಪ್ಪಿಕೊಳ್ಳುವುದರ ಹತ್ತಿರದಲ್ಲಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಆಧಾರ್ ನ ಪರಿಣಾಮವಾಗಿ ಬೊಕ್ಕಸಕ್ಕೆ ಗಣನೀಯ ಉಳಿತಾಯ ಆಗುತ್ತಿದೆ ಎಂದು ಅವರು ಹೇಳಿದರು. ಈ ಉಳಿತಾಯದ ಸಾಧನೆಯ ಪ್ರಮಾಣ ಕುರಿತಂತೆ ರಾಜ್ಯಗಳಿಂದ ದತ್ತಾಂಶ ಸಂಗ್ರಹಿಸುವಂತೆ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಅವರು ಸೂಚಿಸಿದರು. ಎಲ್ಲ ಅಂಚೆ ಕಚೇರಿಗಳೂ ಈಗ ಪಾವತಿ ಬ್ಯಾಂಕ್ ಗಳೆಂದು ಗುರುತಿಸಲ್ಪಟ್ಟಿವೆ ಮತ್ತು ಇದು ನೇರ ಸವಲತ್ತು ವರ್ಗಾವಣೆಗೆ ದೊಡ್ಡ ಸಹಾಯ ಮಾಡಿದೆ ಎಂದು ಹೇಳಿದರು.
ಶಿಕ್ಷಣ ಕುರಿತಂತೆ ಮಾತನಾಡಿದ ಪ್ರಧಾನಿ, ಮುಂದೆ ಸಾಗಲು ಕೇವಲ ಶಿಕ್ಷಣವನ್ನು ವಿಸ್ತರಣೆ ಮಾಡಿದರೆ ಸಾಲದು, ಗುಣಮಟ್ಟದ ಬಗ್ಗೆಯೂ ಗಮನ ಹರಿಸಬೇಕು ಎಂದರು. ಶಿಕ್ಷಣದಲ್ಲಿನ ಗುಣಮಟ್ಟದ ಕೊರತೆಯನ್ನು ತಂತ್ರಜ್ಞಾನದ ಮೂಲಕ ಬೆಸೆಯಬೇಕು ಎಂದು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ವಿಶ್ವದಾದ್ಯಂತ ಇಂದು ಏನು ನಡೆಯುತ್ತಿದೆ ಎಂಬುದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉಪೇಕ್ಷಿಸುವಂತಿಲ್ಲ ಎಂದು ಪ್ರತಿಪಾದಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ಸಂಬಂಧಿತರಿಗೆ, ರಾಜಕೀಯವನ್ನು ಬದಿಗಿಟ್ಟು ಮತ್ತು ರಾಷ್ಟ್ರೀಯ ಸುರಕ್ಷತೆಯೇ ಪರಮೋಚ್ಛ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುವಂತೆ ಮನವಿ ಮಾಡಿದರು. ಮೂರು ದಿನಗಳ ಸಮಾವೇಶದ ವೇಳೆ ತಾವು ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರುಗಳೊಂದಿಗೆ ಸಂವಾದ ನಡೆಸಿದ್ದನ್ನು ಸ್ಮರಿಸಿದ ಅವರು, ಆ ಸಮಾವೇಶದಲ್ಲಿ ನಡೆದ ಚರ್ಚೆಗಳ ಬಗ್ಗೆ ಅನುಸರಣೆ ನಡೆಸುವಂತೆ ಎಲ್ಲ ಮುಖ್ಯಮಂತ್ರಿಗಳಿಗೆ ಸೂಚಿಸಿದರು. ಪೊಲೀಸ್ ಪಡೆಗಳು ಕಾಣುವಂತೆ ಮತ್ತು ಅಪರಾಧವನ್ನು ತಡೆಗಟ್ಟುವಲ್ಲಿ ಉತ್ತಮ ಸಿಸಿ ಟಿವಿ ಜಾಲದ ಮಹತ್ವವನ್ನು ಪ್ರಧಾನಿ ಪ್ರತಿಪಾದಿಸಿದರು. ಖಾಸಗಿಯಾಗಿ ಅಳವಡಿಸಲಾಗಿರುವ ಸಿಸಿ ಟಿವಿಗಳು ಕೂಡ ಈ ನಿಟ್ಟಿನಲ್ಲಿ ಸಹಕಾರಿ ಎಂದು ಹೇಳಿದರು. ಕಾನೂನು ಬಾಹಿರ ಚಟುವಟಿಕೆ ತಡೆಯಲು ಅಂತಾ ರಾಜ್ಯ ಸಹಯೋಗ ಮಹತ್ವದ್ದು ಎಂದು ಹೇಳಿದರು.
ಅಂತಿಮವಾಗಿ, ಪ್ರಧಾನಮಂತ್ರಿಯವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗೌರ್ನರ್ ಗಳು ನೀಡಿರುವ ಸಲಹೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದಾಗಿ ತಿಳಿಸಿದರು.
AKT/AK