ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಅಂಚೆ ಮತ್ತು ವಿಯೆಟ್ ನಾಮ್ ಅಂಚೆ ಇಲಾಖೆಗಳ ನಡುವೆ ಅಂಚೆ ಚೀಟಿಗಳ ಜಂಟಿ ಬಿಡುಗಡೆ ಕುರಿತಂತೆ ವಿವರಿಸಲಾಯಿತು.
ಸಂಪರ್ಕ ಸಚಿವಾಲಯದ ಅಂಚೆ ಇಲಾಖೆ ಮತ್ತು ವಿಯಟ್ನಾಂ ಅಂಚೆ ಇಲಾಖೆ ಭಾರತ –ವಿಯಟ್ನಾಂ ಕುರಿತ ಅಂಚೆ ಚೀಟಿಗಳನ್ನು ಜಂಟಿಯಾಗಿ ಬಿಡುಗಡೆ ಮಾಡಲು ಪರಸ್ಪರ ಸಮ್ಮತಿಸಿವೆ. ‘ಪುರಾತನ ವಾಸ್ತು’ ಎಂಬುದು ಈ ಜಂಟಿ ಬಿಡುಗಡೆಯ ವಸ್ತುವಾಗಿದ್ದು, 25-01-2018ರಂದು ಈ ಜಂಟಿ ಅಂಚೆಚೀಟಿ ಬಿಡುಗಡೆ ಮಾಡಲಾಗಿದೆ.
ಭಾರತ-ವಿಯೆಟ್ನಾಂ ಸ್ಮರಣಾರ್ಥ ಅಂಚೆ ಚೀಟಿಗಳ ಜಂಟಿ ಬಿಡುಗಡೆಯಲ್ಲಿ ಭಾರತದ ಸಾಂಚಿ ಸ್ಥೂಪ ಮತ್ತು ವಿಯಟ್ನಾಂನ ಫೋ ಮಿನ್ಹ ಪಗೋಡಗಳನ್ನು ಸಂಕೇತಿಸುತ್ತದೆ. ಭಾರತ ಮತ್ತು ವಿಯಟ್ನಾಂನ ಅಂಚೆ ಆಡಳಿತಗಳ ನಡುವೆ ಈ ಜಂಟಿ ಬಿಡುಗಡೆಗಾಗಿ 18-12-2017ರಂದು ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಕ್ಕೆ ಸಹಿ ಹಾಕಲಾಗಿತ್ತು.