Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ʼಶ್ರೀ ವಿಜಯ ಪುರಂ’ಎಂಬ ಹೆಸರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಶ್ರೀಮಂತ ಇತಿಹಾಸ ಮತ್ತು ವೀರ ಜನರಿಗೆ ಗೌರವ ಸೂಚಕ : ಪ್ರಧಾನಮಂತ್ರಿ


“ಶ್ರೀ ವಿಜಯ ಪುರಂ” ಎಂಬ ಹೆಸರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದ ವೀರ ಜನರಿಗೆ ಗೌರವ ಸೂಚಕವಾಗಿದೆ ಮತ್ತು ವಸಾಹತುಶಾಹಿ ಆಡಳಿತವನ್ನು ತೊಡೆದು ಹಾಕಿದುದರ ಪ್ರತೀಕವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒತ್ತಿ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಎಕ್ಸ್‌ ಪೋಸ್ಟ್‌ ಗೆ ಪ್ರತಿಕ್ರಿಯೆ ನೀಡಿರುವ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:

“ಶ್ರೀ ವಿಜಯ ಪುರಂ ಎಂಬ ಹೆಸರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಶ್ರೀಮಂತ ಇತಿಹಾಸ ಮತ್ತು ವೀರ ಜನರನ್ನು ಗೌರವಿಸುತ್ತದೆ. ಇದು ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರುವ ಮತ್ತು ನಮ್ಮ ಪರಂಪರೆಯನ್ನು ಸಂಭ್ರಮಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.”

 

 

*****