Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ʻಬಿಮ್‌ಸ್ಟೆಕ್ʼ ರಾಷ್ಟ್ರಗಳ ನಡುವಿನ ಸಹಕಾರದ ವಿವಿಧ ವಿಚಾರಗಳನ್ನು ಒಳಗೊಂಡ  21 ಅಂಶಗಳ ʻಕ್ರಿಯಾ ಯೋಜನೆʼಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಥಾಯ್ಲೆಂಡ್ ನ ಬ್ಯಾಂಕಾಕ್ ನಲ್ಲಿ ನಡೆದ 6ನೇ ʻಬಿಮ್‌ಸ್ಟೆಕ್ʼ ಶೃಂಗಸಭೆಯಲ್ಲಿ ʻಬಿಮ್‌ಸ್ಟೆಕ್ʼ ರಾಷ್ಟ್ರಗಳ ನಡುವಿನ ಸಹಕಾರದ ವಿವಿಧ ವಿಚಾರಗಳನ್ನು ಒಳಗೊಂಡ 21 ಅಂಶಗಳ ʻಕ್ರಿಯಾ ಯೋಜನೆʼಯನ್ನು ಪ್ರಸ್ತಾಪಿಸಿದರು. ʻಬಿಮ್‌ಸ್ಟೆಕ್ʼ ರಾಷ್ಟ್ರಗಳಾದ್ಯಂತ ವ್ಯಾಪಾರವನ್ನು ಉತ್ತೇಜಿಸಲು ಮತ್ತು ಐಟಿ ಕ್ಷೇತ್ರದ ಶ್ರೀಮಂತ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅವರು ಒತ್ತಾಯಿಸಿದರು. ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡಲು ಮತ್ತು ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಶ್ರೀ ಮೋದಿ ಅವರು ಕರೆ ನೀಡಿದರು. ʻಬಿಮ್‌ಸ್ಟೆಕ್ʼಗೆ ಸಾಮೂಹಿಕವಾಗಿ ಶಕ್ತಿ ತುಂಬುವಂತೆ ಒತ್ತಾಯಿಸಿದ ಅವರು, ನಾಯಕತ್ವ ವಹಿಸುವ ಯುವಕರ ಪಾತ್ರವನ್ನು ಒತ್ತಿಹೇಳಿದರು. ಸಾಂಸ್ಕೃತಿಕ ಸಂಪರ್ಕಗಳು ʻಬಿಮ್‌ಸ್ಟೆಕ್ʼ ರಾಷ್ಟ್ರಗಳನ್ನು ಮತ್ತಷ್ಟು ಹತ್ತಿರ ತರುತ್ತವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ʻಎಕ್ಸ್ʼ ಜಾಲತಾಣ ವೇದಿಕೆಯ ಪೋಸ್ಟ್ ನಲ್ಲಿ, ಅವರು ಹೀಗೆ ಬರೆದಿದ್ದಾರೆ:

“ಬಿಮ್‌ಸ್ಟೆಕ್ ಜಾಗತಿಕ ಒಳಿತನ್ನು ಮತ್ತಷ್ಟು ಹೆಚ್ಚಿಸಲು ಒಂದು ಪ್ರಮುಖ ವೇದಿಕೆಯಾಗಿದೆ. ನಾವು ಅದನ್ನು ಬಲಪಡಿಸುವುದು ಮತ್ತು ನಮ್ಮ ತೊಡಗಿಸಿಕೊಳ್ಳುವಿಕೆಯನ್ನು ಆಳಗೊಳಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ, ನಮ್ಮ ಸಹಕಾರದ ವಿವಿಧ ವಿಚಾರಗಳನ್ನು ಒಳಗೊಂಡ 21 ಅಂಶಗಳ ʻಕ್ರಿಯಾ ಯೋಜನೆʼಯನ್ನು ನಾನು ಪ್ರಸ್ತಾಪಿಸಿದೆ.

“ಇದು ʻಬಿಮ್‌ಸ್ಟೆಕ್ʼ ರಾಷ್ಟ್ರಗಳಾದ್ಯಂತ ವ್ಯವಹಾರವನ್ನು ಹೆಚ್ಚಿಸುವ ಸಮಯ!”

“ಐಟಿ ಕ್ಷೇತ್ರದ ಶ್ರೀಮಂತ ಸಾಮರ್ಥ್ಯವನ್ನು ಬಳಸಿಕೊಳ್ಳೋಣ ಮತ್ತು ʻಬಿಮ್‌ಸ್ಟೆಕ್ʼ ಅನ್ನು ತಾಂತ್ರಿಕವಾಗಿ ಬಲಪಡಿಸೋಣ”.

“ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ಮೇಲೆ ಗಂಭೀರ ಪರಿಣಾಮ ಬೀರಿರುವ ಇತ್ತೀಚಿನ ಭೂಕಂಪವು, ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿಹೇಳುತ್ತದೆ.”

“ನಮ್ಮ ಸಹಕಾರವನ್ನು ಬಾಹ್ಯಾಕಾಶ ಜಗತ್ತಿಗೆ ಕೊಂಡೊಯ್ಯೋಣ. ನಮ್ಮ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸೋಣ.”

“ಸಾಮರ್ಥ್ಯ ವರ್ಧನೆ ನೀತಿಗಳ ಉಜ್ವಲ ಉದಾಹರಣೆಯಾಗುವ ಶಕ್ತಿಯನ್ನು ʻಬಿಮ್‌ಸ್ಟೆಕ್ʼ  ಹೊಂದಿದೆ. ನಾವೆಲ್ಲರೂ ಪರಸ್ಪರ ಕಲಿಯುತ್ತೇವೆ ಮತ್ತು ಬೆಳೆಯುತ್ತೇವೆ!”

“ನಾವು ಒಟ್ಟಾಗಿ ʻಬಿಮ್‌ಸ್ಟೆಕ್ʼಗೆ ಶಕ್ತಿ ತುಂಬುತ್ತೇವೆ ಮತ್ತು ನಮ್ಮ ಯುವಕರು ಮುಂದಾಳತ್ವ ವಹಿಸುತ್ತಾರೆ.” 

“ಕೆಲವು ವಿಷಯಗಳು ಸಂಸ್ಕೃತಿಯಂತೆ ಸಂಪರ್ಕ ಹೊಂದಿವೆ! ಸಾಂಸ್ಕೃತಿಕ ಸಂಪರ್ಕಗಳು ʻಬಿಮ್‌ಸ್ಟೆಕ್ʼ ಅನ್ನು ಇನ್ನಷ್ಟು ಹತ್ತಿರ ತರಲಿ.

 

 

*****