ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು `ಪಿಎಂ-ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆʼಗೆ ಒಂದು ಕೋಟಿಗೂ ಹೆಚ್ಚು ಕುಟುಂಬಗಳು ನೋಂದಾಯಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಧಾನಮಂತ್ರಿಯವರು ʻಎಕ್ಸ್ʼ ವೇದಿಕೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
ಅತ್ಯುತ್ತಮ ಸುದ್ದಿ!
“ಪ್ರಾರಂಭವಾದ ಸುಮಾರು ಒಂದು ತಿಂಗಳಲ್ಲೇ 1 ಕೋಟಿಗೂ ಅಧಿಕ ಕುಟುಂಬಗಳು ಈಗಾಗಲೇ ʻಪಿಎಂ-ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆʼಗೆ ನೋಂದಾಯಿಸಿಕೊಂಡಿವೆ.
ದೇಶದ ಎಲ್ಲಾ ಭಾಗಗಳಿಂದ ನೋಂದಣಿಗಳು ಹರಿದು ಬರುತ್ತಿವೆ. ಅಸ್ಸಾಂ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ನೋಂದಣಿಗಳು ನಡೆದಿವೆ.
ಇನ್ನೂ ನೋಂದಾಯಿಸಿಕೊಳ್ಳದವರು ಸಹ ಆದಷ್ಟು ಬೇಗ pmsuryaghar.gov.in ಮೂಲಕ ನೋಂದಾಯಿಸಿಕೊಳ್ಳಿ “
“ಈ ಉಪಕ್ರಮವು ಇಂಧನ ಉತ್ಪಾದನೆಯನ್ನು ಖಾತರಿಪಡಿಸುವುದರ ಜೊತೆಗೆ ಮನೆಗಳಿಗೆ ವಿದ್ಯುತ್ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಭರವಸೆ ನೀಡುತ್ತದೆ. ಇದು ʻಪರಿಸರಕ್ಕಾಗಿ ಜೀವನಶೈಲಿʼ(LiFE) ಅನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸುತ್ತದೆ, ಜೊತೆಗೆ ಭೂಗ್ರಹದ ರಕ್ಷಣೆಗೆ ಕೊಡುಗೆ ನೀಡುತ್ತದೆ.”
*****
Outstanding news!
— Narendra Modi (@narendramodi) March 16, 2024
In about a month since it was launched, over 1 crore households have already registered themselves for the PM-Surya Ghar: Muft Bijli Yojana.
Registrations have been pouring in from all parts of the nation. Assam, Bihar, Gujarat, Maharashtra, Odisha, Tamil…
This initiative promises substantial reductions in electricity expenses for households, along with ensuring energy production. It's poised to encourage Lifestyle for Environment (LiFE) on a grand scale, contributing to a better planet.
— Narendra Modi (@narendramodi) March 16, 2024