Search

ಪಿಎಂಇಂಡಿಯಾಪಿಎಂಇಂಡಿಯಾ

ಸುಧಾರಣೆಗಳ ಹಾದಿಯಲ್ಲಿ


upload-SAGY [ PM India 436KB ]

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಬಹುವಿಧದ ಸುಧಾರಣಾ ಕ್ರಮಗಳ ಜಾರಿ

ಜನಧನ್, ಆಧಾರ್ ಮತ್ತು ಮೊಬೈಲ್ ಮೊದಲಾದ ತ್ರಿವಳಿ ಕಾರ್ಯಕ್ರಮಗಳ ಮೂಲಕ ನೇರ ನಗದು ವರ್ಗಾವಣೆ ಯೋಜನೆಗಳನ್ನು ಅಳವಡಿಸಿ ಗೇಮ್ ಚೇಂಜಿಂಗ್ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಈ ಹೊಚ್ಚಹೊಸ ತಂತ್ರದ ಮೂಲಕ ಸೋರಿಕೆ ರಹಿತ, ಗುರಿ ನಿರ್ಧಾರಿತ ಮತ್ತು ನಗದು ರಹಿತ ಮಾರ್ಗದ ಮೂಲಕ ಸೌಲಭ್ಯವನ್ನು ವರ್ಗಾವಣೆ ಮಾಡಲಾಗುತ್ತಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಸೂದೆಯನ್ನು ಜಾರಿಗೆ ತರಲು ಸಂವಿಧಾನ ತಿದ್ದುಪಡಿಗಾಗಿ ರಾಷ್ಟ್ರೀಯ ಸಹಮತವನ್ನು ರೂಪಿಸಲಾಗಿದೆ. ಜಿಎಸ್ ಟಿ ಯು ಜಾರಿಗೆ ಬಂದರೆ, ಗೊಂದಲದ ತೆರಿಗೆ ಪದ್ಧತಿಗಳನ್ನು ತಪ್ಪಿಸಿ, ಏಕೀಕೃತ ಮತ್ತು ಸಾಮಾನ್ಯ ದೇಶೀ ಮಾರುಕಟ್ಟೆ ತೆರಿಗೆ ಪದ್ಧತಿ ರೂಪಿಸಲು ಸಹಕಾರಿಯಾಗುತ್ತದೆ.

ಸರಕಾರವು ಅಪರೂಪದ ಯೋಜನೆಯಾದ ಸಂಸದ ಆದರ್ಶ ಗ್ರಾಮ ಯೋಜನೆಯನ್ನು ಜಾರಿಗೆ ತಂದಿದ್ದು, ಸಂಸದರು ತಮ್ಮ ಕ್ಷೇತ್ರದ ಯಾವುದಾದರೂ ಗ್ರಾಮ ಪಂಚಾಯತ್ ನ ದತ್ತು ತೆಗೆದುಕೊಂಡು ಸರ್ವಾಂಗೀಣ ಅಭಿವೃದ್ಧಿ ಮಾಡುಬೇಕಾಗುತ್ತದೆ. ಹಲವು ಯೋಜನೆಗಳನ್ನು ಬಳಸಿಕೊಂಡು ತಮ್ಮ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುವ ಅವಕಾಶವನ್ನು ಈ ಯೋಜನೆ ಸಂಸದರಿಗೆ ನೀಡಿದೆ.

ಯೂರಿಯಾ ಉತ್ಪಾದಿಸುವ ಎಲ್ಲಾ ರಸಗೊಬ್ಬರ ಕಾರ್ಖಾನೆಗಳಿಗೆ ಏಕ ರೀತಿಯ ದರದಲ್ಲಿ ನೈಸರ್ಗಿಕ ಅನಿಲ ಒದಗಿಸಲು, ಎಂಒಪಿಎನ್ ಜಿ ಪ್ರಸ್ತಾಪಕ್ಕೆ ಸರ್ಕಾರ ಸಮ್ಮತಿ ನೀಡಿದೆ. ಈ ಮೂಲಕ 16000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಎಂಒಪಿಎನ್ ಜಿ ಮತ್ತು ವಿದ್ಯುತ್ ಇಲಾಖೆಯ ಜಂಟಿ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿದೆ.

ಹೂಡಿಕೆ ಮಿತಿ ಮತ್ತು ನಿಯಂತ್ರಣಗಳನ್ನು ಸರಳೀಕರಿಸುವ ಮೂಲಕ, ಭಾರತದ ಅತ್ಯುನ್ನತ ಕ್ಷೇತ್ರಗಳಾದ ರಕ್ಷಣೆ, ನಿರ್ಮಾಣ ಮತ್ತು ರೈಲ್ವೇ ವಲಯಗಳಲ್ಲಿ ಜಾಗತಿಕ ಪಾಲುದಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ರಕ್ಷಣಾ ವಲಯದಲ್ಲಿ ನೀತಿ ಬದಲಾಯಿಸಲಾಗಿದ್ದು, 26% ದಿಂದ 49% ವರೆಗೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸ್ವಯಂಚಾಲಿತ ಮಾರ್ಗದ ಮೂಲಕ ಈ ಹೂಡಿಕೆ ಮಿತಿಯನ್ನು 24% ವರೆಗೆ ಏರಿಸಲಾಗಿದೆ. ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಲು ಅನುಕೂಲವಾಗುವಂತೆ ರಕ್ಷಣಾ ವಲಯದಲ್ಲಿ 100% ವರೆಗೆ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸ್ವಯಂಚಾಲಿತ ಮಾರ್ಗದ ಮೂಲಕ ನಿರ್ಮಾಣ ಕ್ಷೇತ್ರ ಮತ್ತು ರೈಲ್ವೇ ಮೂಲಸೌಕರ್ಯ ಯೋಜನೆಗಳಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 100% ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗಿದೆ.

Know more about the the JAM Trinity

Loading... Loading