ಎನ್ ಡಿ ಎ ಸರಕಾರದ ನೇತೃತ್ವದಲ್ಲಿ ಭಾರತದ ಆರ್ಥಿಕತೆಯು ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಭಾರತದ ಆರ್ಥಿಕತೆಗೆ ಈ ವರ್ಷವು ಐತಿಹಾಸಿಕ ವರ್ಷವಾಗಿದೆ. ಕನಿಷ್ಟ ಬೆಳವಣಿಗೆ, ಗರಿಷ್ಟ ಹಣದುಬ್ಬರ ಮತ್ತು ಕುಂಠಿತ ಉತ್ಪಾದನೆಯ ಅವಧಿಯಲ್ಲಿದ್ದ ಭಾರತವನ್ನು ಎನ್ ಡಿ ಎ ಸರಕಾರವು ಮೇಲೆತ್ತಿದ್ದಷ್ಟೇ ಅಲ್ಲದೆ, ಅತಿಸೂಕ್ಷ್ಮ ಆರ್ಥಿಕ ಮೂಲಾಂಶಗಳನ್ನು ಸರಿಪಡಿಸುವ ಮೂಲಕ ಅರ್ಥಿಕ ಬೆಳವಣಿಗೆಗೆ ಭರ್ಜರಿ ಉತ್ತೇಜನ ನೀಡಿದೆ. ಭಾರತದ ಜಿಡಿಪಿ ಬೆಳವಣಿಗೆಯು ರಾಕೆಟ್ ವೇಗದಲ್ಲಿ 7.4%ಗೆ ತಲುಪಿದೆ.
ಇದು ಜಗತ್ತಿನ ಬಲಾಢ್ಯ ದೇಶಗಳ ಪೈಕಿ ಭಾರತವನ್ನು ಅತಿ ವೇಗವಾಗಿ ಬೆಳೆಯುತ್ತಿರುವ ದೇಶವಾಗಿ ಮುಂಚೂಣಿಯಲ್ಲಿ ನಿಲ್ಲಿಸಿದೆ.
ಹಲವು ರೇಟಿಂಗ್ ಸಂಸ್ಥೆಗಳು ಹಾಗೂ ಆರ್ಥಿಕ ಚಿಂತಕರು, ಎನ್ ಡಿ ಎ ಸರಕಾರದ ನೇತೃತ್ವದಲ್ಲಿ ಭಾರತವು ಮುಂದಿನ ಕೆಲವು ವರ್ಷಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಬಲಿಷ್ಟ ಮೂಲಾಂಶಗಳು ಮತ್ತು ಸುಧಾರಣೆಗಳನ್ನು ಗಣನೆಗೆ ತೆಗೆದುಕೊಂಡಿರುವ ಮೂಡಿ’ಸ್ ಸಮೀಕ್ಷೆಯು ಭಾರತದ ರ್ಯಾಂಕಿಂಗ್ ಅನ್ನು ಸ್ಥಿರದಿಂದ ಧನಾತ್ಮಕವಾಗಿ ನೀಡಿದೆ.
ಬ್ರಿಕ್ಸ್ ಸಂಘಟನೆ ಆರಂಭಿಸಿದಾಗ ಐ(ಇಂಡಿಯಾ) ಈ ಸಾಲಿನಲ್ಲಿ ನಿಲ್ಲುವ ಅರ್ಹತೆಯನ್ನು ಹೊಂದಿಲ್ಲ. ಅದರದ್ದು ಸಿನಿಕತನ ಎಂದು ಮೂದಲಿಸಿದ್ದರು. ಆದರೆ ಈಗ ಬ್ರಿಕ್ಸ್ ರಾಷ್ಟ್ರಗಳ ಸಂಘಟನೆಯನ್ನು ಭಾರತವೇ ಎಂಜಿನ್ ನಂತೆ ಮುನ್ನಡೆಸುತ್ತಿದೆ.
ಸರಕಾರವು ಉತ್ಪಾದನೆಗೆ ಆದ್ಯತೆ ನೀಡುತ್ತಿರುವುದರಿಂದ ಕೈಗಾರಿಕಾ ಉತ್ಪನ್ನಗಳ ಸೂಚ್ಯಂಕವು ಪ್ರಸಕ್ತ ಸಾಲಿನಲ್ಲಿ 2.1%ದಷ್ಟು ಅಭಿವೃದ್ಧಿ ಸಾಧಿಸಿದೆ. ಕಳೆದ ಬಾರಿ ಈ ದರ ಋಣಾತ್ಮಕವಾಗಿತ್ತು. 2014ರ ಏಪ್ರಿಲ್ ನಲ್ಲಿ 5.5% ನಷ್ಟಿದ್ದ ಹಣದುಬ್ಬರವು 2015ರ ಏಪ್ರಿಲ್ ವೇಳೆಗೆ -2.65% ಗೆ ಇಳಿದಿದೆ. ವಿದೇಶಿ ಬಂಡವಾಳ ಹೂಡಿಕೆಯು ಐತಿಹಾಸಿಕ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಳೆದ ವರ್ಷ 1,25,960 ಕೋಟಿ ಹೂಡಿಕೆಯಾಗಿದ್ದರೆ ಈ ಬಾರಿ 40% ಏರಿಕೆಯಾಗಿ 1,75,886 ಕೋಟಿಗೆ ಏರಿಕೆಯಾಗಿದೆ.
ವಿತ್ತೀಯ ಕೊರತೆಯು ಸ್ಥಿರವಾಗಿ ಇಳಿಕೆಯಾಗುತ್ತಿದೆ. ಭಾರತದ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ 4.7% ನಿಂದ ಈ ಬಾರಿ ಜಿಡಿಪಿಯ 1.7% ಗೆ ಇಳಿಕೆಯಾಗಿದೆ. ಭಾರತದ ವಿದೇಶಿ ವಿನಿಮಯ ಸಂಗ್ರಹವು 311.8 ಬಿಲಿಯನ್ ಡಾಲರ್ ನಿಂದ 352.1 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಇದರಿಂದಾಗಿ ಜಾಗತಿಕ ಪರಿಣಾಮವನ್ನು ಭಾರತ ತಾಳಿಕೊಳ್ಳಲು ನೆರವಾಗಿದೆ.