Search

ಪಿಎಂಇಂಡಿಯಾಪಿಎಂಇಂಡಿಯಾ

ಜಾಮ್ ನ ಸಾಮರ್ಥ್ಯದ ಸದ್ಬಳಕೆ : ಜನ್ ಧನ್, ಆಧಾರ್ ಮತ್ತು ಮೊಬೈಲ್


ಜಾಮ್ ದೃಷ್ಟಿಕೋನವು ನೂತನ ಯೋಜನೆಗಳಿಗೆ ರಹದಾರಿಯಾಗಿ ಪರಿಣಮಿಸಲಿದೆ. ನನ್ನ ಪಾಲಿಗೆ ಜಾಮ್ ಎನ್ನುವುದು ಜಸ್ಟ್ ಅಚೀವಿಂಗ್ ಮ್ಯಾಕ್ಸಿಮಮ್. ವೆಚ್ಚವಾಗುವ ಪ್ರತಿ ರೂಪಾಯಿಯಿಂದಲೂ ಗರಿಷ್ಟ ಲಾಭ ಪಡೆಯುವುದು. ನಮ್ಮ ಬಡ ಜನತೆಗೆ ಗರಿಷ್ಟ ಸಬಲೀಕರಣ ಮಾಡುವುದು, ಸಮುದಾಯಕ್ಕೆ ಗರಿಷ್ಟ ಪ್ರಮಾಣದಲ್ಲಿ ತಂತ್ರಜ್ಞಾನದ ಸಹಾಯ ಒದಗಿಸುವುದು.

–ನರೇಂದ್ರ ಮೋದಿ

ಸ್ವಾತಂತ್ರ್ಯದ 67 ವರ್ಷಗಳ ಬಳಿಕವೂ ಭಾರತದ ಬಹುಪಾಲು ಜನಸಂಖ್ಯೆಯು ಬ್ಯಾಂಕಿಂಗ್ ಸೌಲಭ್ಯಕ್ಕೆ ಒಳಪಟ್ಟಿಲ್ಲ. ಇದರ ಅರ್ಥವೇನೆಂದರೆ ಈ ಜನರಿಗೆ ಉಳಿತಾಯದ ಅವಕಾಶವಾಗಲೀ, ಸಾಂಸ್ಥಿಕ ಸಾಲದ ಅವಕಾಶವಾಗಲೀ ಲಭ್ಯವಾಗಿಲ್ಲ. ಈ ಮೂಲಭೂತ ಸಮಸ್ಯೆ ನಿವಾರಣೆಗಾಗಿ ಆಗಸ್ಟ್ 28ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಜನಧನ ಯೋಜನೆಗೆ ಚಾಲನೆ ನೀಡಿದರು. ಕೆಲವೇ ತಿಂಗಳಲ್ಲಿ, ಈ ಯೋಜನೆಯು ದೇಶದ ಲಕ್ಷಾಂತರ ಬಡ ಜನರ ಜೀವನವನ್ನೇ ಬದಲಾಯಿಸಿದೆ. ಕೇವಲ ಒಂದೇ ವರ್ಷದ ಅವಧಿಯಲ್ಲಿ 19.72 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. 16.8 ಕೋಟಿ ರೂಪೇ ಕಾರ್ಡ್ ಗಳನ್ನು ಈವರೆಗೆ ವಿತರಿಸಲಾಗಿದೆ. ಈ ಖಾತೆಗಳಲ್ಲಿ ಈಗಾಗಲೇ 28699.65 ಕೋಟಿ ರೂಪಾಯಿಗಳು ಜಮೆಯಾಗಿವೆ. ದಾಖಲೆಯ 1,25,697 ಬ್ಯಾಂಕ್ ಮಿತ್ರರನ್ನು ನೇಮಿಸಲಾಗಿದೆ. ಒಂದೇ ವಾರದಲ್ಲಿ 1,80,96,130 ಖಾತೆಗಳನ್ನು ತೆರೆಯುವ ಮೂಲಕ ಈ ಯೋಜನೆಯು ಗಿನ್ನೆಸ್ ದಾಖಲೆ ಪುಸ್ತಕ ಸೇರಿದೆ.

0.50382800-1451573487-jandhan1 [ PM India 542KB ]

ಲಕ್ಷಾಂತರ ಖಾತೆಗಳನ್ನು ತೆರೆಯುವುದೇ ದೊಡ್ಡ ಸವಾಲು ಅವುಗಳ ಜೊತೆಗೆ ಜನರಿಗೆ ಬ್ಯಾಂಕ್ ವ್ಯವಹಾರವನ್ನು ತಿಳಿಸಿಕೊಡುವುದು ಇದಕ್ಕಿಂತ ದೊಡ್ಡ ಸವಾಲಾಗಿತ್ತು. 2014ರ ಸೆಪ್ಟಂಬರ್ ನಲ್ಲಿ 76.8% ನಷ್ಟಿದ್ದ ಶೂನ್ಯ ಬ್ಯಾಲೆನ್ಸ್ ಖಾತೆಗಳ ಸಂಖ್ಯೆ 2015ರ ಡಿಸೆಂಬರ್ ವೇಳೆಗೆ 32.4%ಕ್ಕೆ ಇಳಿದಿದೆ. 131 ಕೋಟಿ ರೂಪಾಯಿಗಳನ್ನು ಓವರ್ ಡ್ರಾಫ್ಟ್ ಆಗಿ ಪಡೆಯಲಾಗಿದೆ

ಇದೆಲ್ಲವೂ ಪ್ರಧಾನ ಮಂತ್ರಿ ಮೋದಿಯವರ ಉತ್ತೇಜನ, ಜನರನ್ನು ಸೆಳೆಯುವ ಅವರ ಸಾಮರ್ಥ್ಯ ಮತ್ತು ಸರಕಾರಿ ಯಂತ್ರದಿಂದಾಗಿ ಸಾಧ್ಯವಾಗಿದೆ. ಈ ದೊಡ್ಡ ಸವಾಲನ್ನು ಅಭಿಯಾನ ಮಾದರಿಯಲ್ಲಿ ಸ್ವೀಕರಿಸಿದ ಸರ್ಕಾರವು ಜನರು ಮತ್ತು ಸರ್ಕಾರದ ಸಹಭಾಗಿತ್ವದಿಂದಾಗಿ ಯಶಸ್ಸು ಪಡೆದಿದೆ.ಬ್ಯಾಂಕ್ ಖಾತೆಗಳು ಕೇವಲ ಲಕ್ಷಾಂತರ ಜನರಿಗೆ ಬ್ಯಾಂಕಿಂಗ್ ಸೇವೆಗಳ ಅವಕಾಶವನ್ನಷ್ಟೇ ಕಲ್ಪಿಸಿಲ್ಲ, ಭ್ರಷ್ಟಾಚಾರಕ್ಕೂ ಪರಿಣಾಮಕಾರಿಯಾಗಿ ಕಡಿವಾಣ ಹಾಕಿದೆ. ಈಗ ಸಬ್ಸಿಡಿಗಳು ನೇರವಾಗಿ ಫಲಾನುಭವಿಗಳ ಖಾತೆಯನ್ನು ಸೇರುತ್ತಿವೆ. ಇದರಿಂದಾಗಿ ಸರ್ಕಾರಿ ಹಣದ ಸೋರಿಕೆ ತಡೆಗಟ್ಟಿದಂತಾಗಿದೆ.

0.97574200-1451573581-jandhan2 [ PM India 151KB ]

ಪಹಲ್ ಯೋಜನೆಯು ವಿಶ್ವದ ಅತಿದೊಡ್ಡ ನೇರ ನಗದು ಪಾವತಿ ಯೋಜನೆಯಾಗಿ ಇತ್ತೀಚೆಗಷ್ಟೇ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕವನ್ನು ಸೇರಿದೆ. ಪಹಲ್ ಯೋಜನೆಯಡಿ ಎಲ್ ಪಿ ಜಿ ಸಬ್ಸಿಡಿಯನ್ನು ನೇರವಾಗಿ ಫಲಾನಭವಿಗಳ ಖಾತೆಗೆ ತಲುಪಿಸಲಾಗುತ್ತಿದೆ. ಈ ಯೋಜನೆಯಡಿ 14.62 ಕೋಟಿ ಜನರು ನೇರವಾಗಿ ಸಬ್ಸಿಡಿ ಹಣವನ್ನು ಪಡೆಯುತ್ತಿದ್ದಾರೆ. ಅಲ್ಲದೆ, ಈ ಯೋಜನೆಯು ಸುಮಾರು 3.34 ಕೋಟಿ ನಕಲಿ ಮತ್ತು ನಿಷ್ಕ್ರಿಯ ಖಾತೆಗಳನ್ನು ಗುರುತಿಸುವಲ್ಲಿ ನೆರವಾಗಿದೆ. ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಿದೆ. ಸಧ್ಯ ಸರ್ಕಾರವು 35-40 ಯೋಜನೆಗಳಿಗೆ ನೇರ ನಗದು ಪಾವತಿ ಪ್ರಕ್ರಿಯೆಯನ್ನು ಜಾರಿಗೊಳಿಸಿದೆ. 2015ರಲ್ಲಿ ವಿವಿಧ ಫಲಾನುಭವಿಗಳಿಗೆ ಸುಮಾರು 40 000 ಕೋಟಿ ರೂಪಾಯಿಗಳನ್ನು ನೇರ ನಗದು ವರ್ಗಾವಣೆ ಮಾಡಿದೆ.

ಮೂಲಭೂತ ಬ್ಯಾಂಕಿಂಗ್ ಸೌಲಭ್ಯವನ್ನು ಕಲ್ಪಿಸಿದ ಬಳಿಕ ಎನ್ ಡಿ ಎ ಸರ್ಕಾರವು ಜನರಿಗೆ ವಿಮೆ ಮತ್ತು ಪಿಂಚಣಿ ಯೋಜನೆ ಕಲ್ಪಿಸುವ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿತು. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಅಪಘಾತ ಸಂದರ್ಭದಲ್ಲಿ 2 ಲಕ್ಷ ರೂಪಾಯಿ ವಿಮೆಯನ್ನು ಕೇವಲ ವಾರ್ಷಿಕ 12 ರೂಪಾಯಿಗೆ ಒದಗಿಸುತ್ತದೆ. ಹಾಗೆಯೇ ವಾರ್ಷಿಕ 333 ರೂ. ಪ್ರೀಮಿಯಂ ಪಾವತಿಸಿದರೆ, ಜೀವವಿಮೆ ಕಲ್ಪಿಸುವ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹಾಗೆಯೇ

ಪಾಲಿಸಿದಾರರ ಪಾವತಿಗೆ ಅನುಗುಣವಾಗಿ ಮಾಸಿಕ 5 ಸಾವಿರ ರೂಪಾಯಿಗಳವರೆಗೆ ಪಿಂಚಣಿ ನೀಡುವ ಅಟಲ್ ಪೆನ್ಷನ್ ಯೋಜನೆಯನ್ನೂ ರೂಪಿಸಲಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಸುಮಾರು 9.2 ಕೋಟಿ ಜನರು ಹಾಗೂ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ 3 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ. ಅಟಲ್ ಪಿಂಚಣಿ ಯೋಜನೆಗೆ ಸುಮಾರು 15.85 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ.

Loading... Loading