Search

ಪಿಎಂಇಂಡಿಯಾಪಿಎಂಇಂಡಿಯಾ

ಶ್ರೀ. ಲಾಲ್ ಬಹಾದ್ದೂರ್ ಶಾಸ್ತ್ರಿ

ಜೂನ್ 9, 1964 - ಜನವರಿ 11, 1966 | ಕಾಂಗ್ರೆಸ್

ಶ್ರೀ. ಲಾಲ್ ಬಹಾದ್ದೂರ್ ಶಾಸ್ತ್ರಿ


ಉತ್ತರ ಪ್ರದೇಶದ ವಾರಾಣಸಿಯಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಪುಟ್ಟ ಹಳ್ಳಿ ಮುಗಲ್ಸರಾಯಿಯಲ್ಲಿ ಅಕ್ಟೋಬರ್ 2, 1904ರಂದು ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಜನಿಸಿದರು. ಲಾಲ್ ಬಹಾದ್ದೂರ್ ಶಾಸ್ತ್ರಿಯವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು ಮತ್ತು ಶಾಸ್ತ್ರಿಯವರು ಒಂದೂವರೆ ವರ್ಷದವರಾಗಿರುವಾಗಲೇ ಅವರು ತೀರಿಕೊಂಡರು. ಆಗ ಇಪ್ಪತ್ತು ವಯಸ್ಸಿನ ಅವರ ತಾಯಿ ತಮ್ಮ ಹದಿಮೂರು ಮಕ್ಕಳ ಜತೆ ತವರು ಮನೆ ಸೇರಿ ಅಲ್ಲೇ ಉಳಿದರು.

ಲಾಲ್ ಬಹಾದ್ದೂರ್ ಅವರ ಪುಟ್ಟ ಹಳ್ಳಿಯ ಶಿಕ್ಷಣ ಯಾವ ರೀತಿಯಲ್ಲೂ ಗಮನಾರ್ಹವಾಗಿಲಿಲ್ಲ. ಕಿತ್ತು ತಿನ್ನುವ ಬಡತನವೊಂದÀನ್ನು ಬಿಟ್ಟರೆ ಅವರ ಬಾಲ್ಯ ಸಂತಸಮಯವಾಗಿತ್ತು.

ಪ್ರೌಢ ಶಾಲೆಗೆ ದಾಖಲಿಸಲುಲಾಲ್ ಬಹಾದ್ದೂರ್ ಅವರನ್ನು ಅವರ ಮಾವನೊಡನೆ ವಾರಾಣಸಿಗೆ ಕಳುಹಿಸಲಾಯಿತು. ಅವರನ್ನು ಮನೆಯಲ್ಲಿ ನನ್ಹೆ ( ಪುಟ್ಟ) ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಉರಿ ಬಿಸಿಲಲ್ಲಿ ಕಾದ ರಸ್ತೆ ಮೇಲೆ ಚಪ್ಪಲಿಗಳಿಲ್ಲದೆ ಮೈಲುಗಟ್ಟಲೆ ನಡೆದು ಲಾಲ್ ಬಹಾದ್ದೂರ್ ಶಾಲೆ ಸೇರಬೇಕಾಗಿತ್ತು.

ಬೆಳೆಯುತ್ತಿದ್ದಂತೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ವಿದೇಶಿಯರ ಹಿಡಿತದಲ್ಲಿರುವ ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಆಸಕ್ತಿ ಹೆಚ್ಚತೊಡಗಿತು. ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಬೆಂಬಲಿಸಿದ ದೇಶದ ರಾಜರುಗಳ ವಿರುದ್ಧ ಮಹಾತ್ಮಾ ಗಾಂಧಿ ಅವರ ಖಂಡನೆಯಿಂದ ಲಾಲ್ ಬಹಾದ್ದೂರ್ ಅತ್ಯಂತ ಪ್ರಭಾವಿತರಾದರು. ಈ ವೇಳೆ ಲಾಲ್ ಬಹಾದ್ದೂರ್ ಕೇವಲ ಹನ್ನೊಂದು ವರುಷ ವಯಸ್ಸಿನವರಾಗಿದ್ದರು.

ಗಾಂಧೀಜಿ ತನ್ನ ದೇಶದ ನಾಗರಿಕರನ್ನು ಅಸಹಕಾರ ಚಳುವಳಿಗೆ ಸೇರಲು ಕರೆ ನೀಡಿದ ಸಂದರ್ಭದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರಿಗೆ ಕೇವಲ ಹದಿನಾರು ವರುಷ ವಯಸ್ಸು. ಮಹಾತ್ಮಾ ಅವರ ಕರೆಗೆ ಪ್ರತಿಕ್ರಿಯೆಯಾಗಿ ತನ್ನ ಓದನ್ನು ಬಿಟ್ಟು ಚಳುವಳಿಗೆ ಸೇರಲು ಶಾಸ್ತ್ರಿ ಅವರು ಒಂದೇ ಬಾರಿಗೆ ನಿರ್ಧರಿಸಿದರು. ಅವರ ನಿರ್ಧಾರ ತಾಯಿಯ ನಿರೀಕ್ಷೆಗಳನ್ನು ನುಚ್ಚುನೂರಾಗಿಸಿತು. ಲಾಲ್ ಬಹಾದ್ದೂರ್ ತನ್ನ ನಿರ್ಣಯವನ್ನು ತೆಗೆದುಕೊಂಡಿದ್ದರು. ಶಾಸ್ತ್ರಿ ಅವರಿಗೆ ಆತ್ಮೀಯರಾದವರಿಗೆಲ್ಲ ಅವರು ಒಮ್ಮೆ ನಿರ್ಣಯ ತೆಗೆದುಕೊಂಡ ಬಳಿಕ ಅವರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ, ಅವರ ಮೃದು ಬಾಹ್ಯದ ಒಳಗಿರುವುದು ಕಲ್ಲಿನಂತಹ ದೃಢ ಮನಸ್ಸು ಎಂಬುದರ ಅರಿವಿತ್ತು.

ಬ್ರಿಟಷ್ ಆಡಳಿತಕ್ಕೆ ವಿರೋಧವಾಗಿ ಸ್ಥಾಪಿಸಲಾದ ಹಲವಾರು ರಾಷ್ಟ್ರೀಯ ಸಂಸ್ಥೆಗಳಲ್ಲೊಂದಾದ ವಾರಣಾಸಿಯ ಕಾಶಿ ವಿದ್ಯಾ ಪೀಠವನ್ನು ಲಾಲ್ ಬಹಾದ್ದೂರ ಶಾಸ್ತ್ರಿ ಸೇರಿದರು. ಅಲ್ಲಿ ಅವರು ದೇಶದ ಶ್ರೇಷ್ಠ ಬುದ್ಧೀವಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು. ‘ಶಾಸ್ತ್ರಿ’ ಎಂಬುದು ವಿದ್ಯಾಪೀಠದಿಂದ ಲಾಲ್ ಬಹದ್ದೂರರಿಗೆ ನೀಡಿದ ಪದವಿ. ಆದರೆ, ಅದು ಅವರ ಹೆಸರಿನ ಭಾಗವಾಗಿ ಜನಮನದಲ್ಲಿ ಉಳಿದುಕೊಂಡಿದೆ.

1927ರಲ್ಲಿ ಅವರು ವಿವಾಹವಾದರು. ಅವರ ಪತ್ನಿ ಅವರ ಹಳ್ಳಿಯ ಪಕ್ಕದ ಮಿರ್ಜಾಪುರದ ಲಲಿತಾ ದೇವಿ. ಒಂದು ವಿಚಾರವನ್ನು ಹೊರತುಪಡಿಸಿ ಉಳಿದೆಲ್ಲಾ ವಿಚಾರಗಳಲ್ಲಿ ವಿವಾಹ ಸಾಂಪ್ರದಾಯಿಕವಾಗಿತ್ತು. ಅದೇನೆಂದರೆ ವರದಕ್ಷಿಣೆಯಾಗಿ ಕೈಮಗ್ಗದ ಕೆಲವು ಬಟ್ಟೆ ಮತ್ತು ಚರಕವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ವರ ಇದಕ್ಕಿಂತ ಹೆಚ್ಚಿನದೇನನ್ನು ಸ್ವೀಕರಿಸಲಿಲ್ಲ

1930ರಲ್ಲಿ ಮಹಾತ್ಮಾ ಗಾಂಧಿ ದಂಡಿ ಸಮುದ್ರ ತೀರದಲ್ಲಿ ನಡೆದು sಉಪ್ಪಿನ ಸಾರ್ವಭೌಮ ಕಾನೂನನ್ನು ಮುರಿದರು. ಈ ಸಾಂಕೇತಿಕ ಕಾರ್ಯ ಇಡೀ ದೇಶವನ್ನೇ ಬೆರಗುಗೊಳಿಸಿತು. ಲಾಲ್ ಬಹಾದ್ದೂರ್ ಶಾಸ್ತ್ರಿ ತಮ್ಮ ಅಗಾಧ ಶಕ್ತಿಯೊಂದಿಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅವರು ಹಲವಾರು ಬ್ರಿಟಿಷ್ ವಿರೋಧಿ ಆಂದೋಲನಗಳ ನಾಯಕತ್ವ ವಹಿಸಿ ಒಟ್ಟು ಏಳು ವರುಷಗಳನ್ನು ಬ್ರಿಟಷ್ ಕಾರಾಗೃಹಗಳಲ್ಲಿ ಕಳೆದರು. ಹೋರಾಟದ ಉರಿಯಲ್ಲಿ ಬೆಂದು ಇನ್ನಷ್ಟು ಪ್ರೌಢರಾದರು.

ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ, ಸೌಮ್ಯ ಮತ್ತು ನಿರ್ಗವಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಸ್ವಾತಂತ್ರ್ಯ ಹೋರಾಟದ ನಾಯಕರುಗಳಿಂದ ಅದಾಗಲೇ ಗುರುತಿಸಿಕೊಳ್ಳಲು ಶುರುವಾದರು. 1946ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಈ ‘ಡೈನಮೊ ವ್ಯಕ್ತಿ’ಯನ್ನು ಆಡಳಿತದಲ್ಲಿ ರಚನಾತ್ಮಕ ಪಾತ್ರ ನಿರ್ವಹಿಸಲು ಕರೆಸಲಾಯಿತು. ಶಾಸ್ತ್ರಿ ಅವರನ್ನು ಅವರ ಸ್ಥಳಿಯ ರಾಜ್ಯ ಉತ್ತರ ಪ್ರದೇಶದ ಸಂಸದೀಯ ಕಾಯದರ್ಶಿಯಾಗಿ ನೇಮಿಸಲಾಯಿತು. ಶೀಘ್ರದಲ್ಲೇ ಅವರು ಗೃಹ ಸಚಿವ ಸ್ಥಾನಕ್ಕೇರಿದರು. ಅವರ ಸಾಮಥ್ರ್ಯ ಮತ್ತು ಕಠಿಣ ಪರಿಶ್ರಮ ಉತ್ತರ ಪ್ರದೇಶದಲ್ಲಿ ಮನೆಮಾತಾಯಿತು. 1951ರಲ್ಲಿ ಅವರು ನವದೆಹಲಿಗೆ ತೆರಳಿದರು. ಕೇಂದ್ರ ಮಂತ್ರಿಮಂಡಲದ ವಿವಿಧ ಖಾತೆಗಳಲ್ಲಿ ಅಧಿಕಾರ ವಹಿಸಿಕೊಂಡರು- ರೈಲ್ವೆ ಸಚಿವ, ಸಾರಿಗೆ ಮತ್ತು ಸಂಪರ್ಕ ಸಚಿವ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ, ಗೃಹ ಸಚಿವ-ನೆಹರು ಅವರ ಅನಾರೋಗ್ಯದ ಸಂದರ್ಭದಲ್ಲಿ ಖಾತೆಯಿಲ್ಲದೆ ಸಚಿವರಾಗಿದ್ದರು. ಶಾಸ್ತ್ರಿ ಅವರು ನಿರಂತರವಾಗಿ ಜನಪ್ರಿಯರಾಗುತ್ತಿದ್ದರು. ಹಲವಾರು ಜನರನ್ನು ಬಲಿ ತೆಗೆದುಕೊಂಡ ರೈಲ್ವೆ ಅಪಘಾತವೊಂದ್ಕಕೆ ತಾನು ಜವಾಬ್ಧಾರಿಯೆಂದು ಅನಿಸಿದ್ದರಿಂದ ಅವರು ತಮ್ಮ ರೈಲೆ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ಅವರ ಈ ನಿರ್ಧಾರ ಸಂಸತ್ತು ಮತ್ತು ಇಡೀ ರಾಷ್ಟ್ರದಲ್ಲೇ ಪ್ರಶಂಸೆಗೆ ಪಾತ್ರವಾಯಿತು. ಆಗಿನ ಪ್ರಧಾನಮಂತ್ರಿ ಶ್ರೀ ಜವಾಹರ್ ಲಾಲ್ ನೆಹರು ಘಟನೆಯ ಕುರಿತು ಸಂಸತ್ತಿನಲ್ಲಿ ಮಾತನಾಡುತ್ತಾ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಉನ್ನತ ಆದರ್ಶಗಳು ಮತ್ತು ದೃಢನಿಷ್ಠೆಯನ್ನು ಪ್ರಶಂಸಿಸಿದರು. ರಾಜಿನಾಮೆಯನ್ನು ಸ್ವೀಕರಿಸಿದ ನೆಹರು ಅವರು ತಾನು ಈ ರಾಜೀನಾಮೆಯನ್ನು ಸ್ವೀಕರಿಸುತ್ತಿರುವುದು ಏಕೆಂದರೆ ಈ ರಾಜೀನಾಮೆ ಸಾಂವಿಧಾನಿಕ ಔಚಿತ್ಯಕ್ಕೆ ಉದಾಹರಣೆಯಾಗಲಿದೆ ಎಂದು ವಿನಹಃ ಶಾಸ್ತ್ರಿ ಅವರು ಈ ಅವಘಢಕ್ಕೆ ಜವಾಬ್ಧಾರರೆಂದಲ್ಲ ಎಂದು ಆ ಸಂದರ್ಭದಲ್ಲಿ ಹೇಳಿದರು. ರೈಲು ದುರಂತದ ಕುರಿತು ನಡದ ದೀರ್ಘ ಚರ್ಚೆಗೆ ಪ್ರತಿಕ್ರಿಯಿಸಿದ ಶಾಸ್ತ್ರಿ ಅವರು ” ನಾನು ಗಾತ್ರದಲ್ಲಿ ಸಣ್ಣ ಮತ್ತು ಮೃದು ನಾಲಿಗೆ ಉಳ್ಳವನಾದುದರಿಂದ ಜನರು ನನಗೆ ಸ್ಥಿರವಾಗಿರಲು ಸಾಧ್ಯವಾಗುತ್ತಿಲ್ಲ ಎಂದು ನಂಬಿದ್ದಾರೆ. ದೈಹಿಕವಾಗಿ ನಾನು ಸದೃಢನಲ್ಲದಿದ್ದರೂ, ಆಂತರಿಕವಾಗಿ ಅಷ್ಟೊಂದು ನಿಶಕ್ತನಲ್ಲ ಅಂದೊಕೊಂಡಿದ್ದೇನೆ’. ಎಂದರು.

ಮೂವತ್ತು ವರುಷಗಳ ಸಮರ್ಪಣಾ ಸೇವೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹಿಂದಿತ್ತು. ಈ ಅವಧಿಯಲ್ಲಿ ಅವರೊಬ್ಬ ಪ್ರಮಾಣಿಕ ಮತ್ತು ಅತ್ಯಂತ ಸಾಮಥ್ರ್ಯವಿರುವ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಶಾಸ್ತ್ರಿ ಅವರು ವಿನಮ್ರತೆ, ಸಹಿಷ್ಣುತೆ, ಮಹಾನ್ ಆಂತರಿಕ ಶಕ್ತಿಯುಳ್ಳ ಮತ್ತು ದೃಢನಿಶ್ಚಯವುಳ್ಳ, ಜನರ ಭಾಷೆಯನ್ನು ಅರ್ಥೈಸಿಕೊಂಡ ಜನರ ವ್ಯಕ್ತಿಯಾದರು. ಪ್ರಗತಿಯೆಡೆಗೆ ರಾಷ್ಟ್ರವನ್ನು ಮುನ್ನಡೆಸಿದ ದೂರದೃಷ್ಠಿಯುಳ್ಳ ವ್ಯಕ್ತಿ ಅವರಾಗಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಮಹಾತ್ಮಾ ಗಾಂಧಿ ಅವರ ರಾಜಕೀಯ ಚಿಂತನೆಗಳಿಂದ ಅತ್ಯಂತ ಪ್ರಭಾವಿತರಾಗಿದ್ದರು. ‘ ಕಠಿಣ ಪರಿಶ್ರಮ ಪ್ರಾರ್ಥನೆಗೆ ಸಮನಾದುದು’ ಎಂದು ಒಮ್ಮೆ ಅವರು ತಮ್ಮ ಗುರುವನ್ನು ಸ್ಮರಿಸುತ್ತಾ ಹೇಳಿದರು. ಮಹಾತ್ಮಾ ಗಾಂಧಿ ಅವರ ನೇರ ಸಂಪ್ರದಾಯದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಭಾರತೀಯ ಸಂಸ್ಕøತಿಯನ್ನು ಪ್ರಾತಿನಿಧಿಸಿದರು.