Search

ಪಿಎಂಇಂಡಿಯಾಪಿಎಂಇಂಡಿಯಾ

ಶ್ರೀ ರಾಜೀವ್ ಗಾಂಧಿ

ಅಕ್ಟೋಬರ್ 31, 1984 - ಡಿಸೆಂಬರ್ 2, 1989 | ಕಾಂಗ್ರೆಸ್ (ಐ)

ಶ್ರೀ ರಾಜೀವ್ ಗಾಂಧಿ


ಶ್ರೀ ರಾಜೀವ್ ಗಾಂಧಿ ಅವರು 40ನೇ ವಯಸ್ಸಿಗೆ ಭಾರತದ ಯುವ ಪ್ರಧಾನಮಂತ್ರಿಯಾದರು. ಅಷ್ಟೇ ಏಕೆ ಅವರು ವಿಶ್ವದ ಸರ್ಕಾರದ ಅತ್ಯಂತ ಕಿರಿಯ ಮುಖ್ಯಸ್ಥರೆಂಬ ಹೆಗ್ಗಳಿಕೆ ಪಡೆದರು. ಅವರ ತಾಯಿ ಶ್ರೀಮತಿ ಇಂದಿರಾ ಗಾಂಧಿಯವರು 1966ರಲ್ಲಿ 48ನೇ ವಯಸ್ಸಿನಲ್ಲಿ ಪ್ರಧಾನಮಂತ್ರಿಯಾದರು. ಇವರ ತಾತ ಪಂಡಿತ್ ಜವಾಹರ್ಲಾಲ್ ನೆಹರು ಅವರು 58ನೇ ವಯಸ್ಸಿನಲ್ಲಿಯೇ ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿ 17 ವರ್ಷಗಳ ಸುದೀರ್ಘ ಕಾಲ ಆಳಿದರು.

ರಾಷ್ಟ್ರದಲ್ಲಿ ಹೊಸ ಪೀಳಿಗೆ ಪರಿವರ್ತನೆಯ ಮುನ್ಸೂಚಕರಾದ ಶ್ರೀ ರಾಜೀವ್ ಗಾಂಧಿ ಅವರು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಜನಾದೇಶ ಪಡೆದರು. ಹತ್ಯೆಗೀಡಾದ ತಮ್ಮ ತಾಯಿಯ ಶೋಕಾಚರಣೆ ಪೂರ್ಣಗೊಂಡ ತಕ್ಷಣವೇ ಅವರು ಲೋಕಸಭಾ ಚುನಾವಣೆಗಳಿಗೆ ಆದೇಶ ನೀಡಿದರು. ಈ ಚುನಾವಣೆಯಲ್ಲಿ, ಕಾಂಗ್ರೆಸ್ ಈ ಹಿಂದಿನ ಏಳು ಚುನಾವಣೆಗಳಲ್ಲೇ ಅತ್ಯಂತ ಜನಪ್ರಿಯ ಮತದ ದೊಡ್ಡ ಭಾಗವನ್ನು ಗಳಿಸಿತು ಹಾಗೂ 508 ಲೋಕಸಭಾ ಕ್ಷೇತ್ರಗಳಲ್ಲಿ 401 ಕ್ಷೇತ್ರಗಳಲ್ಲಿ ದಾಖಲೆ ಗೆಲುವನ್ನು ಪಡೆಯಿತು.

700 ದಶಲಕ್ಷ ಭಾರತೀಯರ ನಾಯಕರಾಗಿ ಇಂಥ ಭಾವಪ್ರಚೋದಕ ಆರಂಭ ಮಾಡಿದ್ದು ಯಾವುದೇ ಸನ್ನಿವೇಶದಲ್ಲಿ ಗಮನಾರ್ಹವಾದುದು. ಶ್ರೀ ಗಾಂಧಿ ಅವರ ಬಗ್ಗೆ ವಿಶೇಷವಾಗಿ ಹೇಳುವುದಾದರೆ, ಸ್ವಾತಂತ್ರ್ಯ ಸಂಗ್ರಾಮ ಮತ್ತು ನಂತರ ಎರಡೂ ಸಮಯದಲ್ಲೂ ನಾಲ್ಕು ದಶಕಳು ಭಾರತಕ್ಕೆ ಸೇವೆ ಸಲ್ಲಿಸಿದ ರಾಜಕೀಯ ಕುಟುಂಬಕ್ಕೆ ಸೇರಿದ್ದರೂ ಅವರು ರಾಜಕೀಯಕ್ಕೆ ಸೇರಿದ್ದು ತಡವಾಗಿ ಮತ್ತು ಇಷ್ಟವಿಲ್ಲದೆ.

ರಾಜೀವ್ ಗಾಂಧಿ ಅವರು ಆಗಸ್ಟ್ 20, 1944ರಲ್ಲಿ ಬಾಂಬೆಯಲ್ಲಿ ಜನಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಅವರಿಗೆ ಕೇವಲ ಮೂರು ವರ್ಷ ಹಾಗೂ ಅವರ ತಾತ ಪ್ರಧಾನಮಂತ್ರಿಯಾಗಿದ್ದರು. ಅವರು ಕುಟುಂಬ ನವದೆಹಲಿಯಿಂದ ಲಕ್ನೋಗೆ ಸ್ಥಳಾಂತರಗೊಂಡಿತು. ಅವರ ತಂದೆ ಫಿರೋಜ್ ಗಾಂಧಿ ಸಂಸತ್ ಸದಸ್ಯರಾಗಿದ್ದರು ಹಾಗೂ ನಿರ್ಭಯ ಮತ್ತು ಪರಿಶ್ರಮದ ಸಂಸದೀಯ ಪಟು ಎಂಬ ಹೆಸರು ಪಡೆದಿದ್ದರು.

ಶ್ರೀಮತಿ ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯವರ ಆತಿಥ್ಯಕಾರಿಣಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತೀನ್ ಮೂರ್ತಿ ಭವನದಲ್ಲಿ ತಮ್ಮ ತಾತನೊಂದಿಗೆ ತಮ್ಮ ಬಾಲ್ಯದ ದಿನಗಳನ್ನು ರಾಜೀವ್ಗಾಂಧಿ ಕಳೆದರು. ಡೆಹ್ರಾಡೂನ್ನಲ್ಲಿ ಅವರು ಕೆಲಕಾಲ ವೆಲ್ಹ್ಯಾಂ ಪ್ರೆಪ್ನ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಹಿಮಾಲಯ ತಪ್ಪಲಿನ ಡೂನ್ ವಸತಿ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಿದರು. ಅಲ್ಲಿ ಅವರು ತಮ್ಮ ಜೀವನದ ಅನೇಕ ಆಪ್ತಮಿತ್ರರನ್ನು ಸಂಪಾದಿಸಿದರು. ಅವರ ಕಿರಿಯ ಸಹೋದರ ಸಂಜಯ್ ಗಾಂಧಿ ಸಹ ಇದೇ ಶಾಲೆಗೆ ಸೇರಿದರು.

ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಶ್ರೀ ರಾಜೀವ್ ಗಾಂಧಿ ಅವರು ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜಿಗೆ ಸೇರಿದರು. ಆದರೆ, ನಂತರ ಅವರು ಲಂಡನ್ನ ಇಂಪಿರಿಯಲ್ ಕಾಲೇಜಿಗೆ ಸ್ಥಳಾಂತರಗೊಂಡರು. ಅವರು ಮೆಕ್ಯಾನಿಕಲ್ ಎಂಜಿನಿಯರಿಂದ ಪದವಿ ಪೂರ್ಣಗೊಳಿಸಿದರು.

ರಾಜಕೀಯದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರ ಸಹಪಾಠಿಗಳು ಹೇಳುವಂತೆ, ಅವರ ಪುಸ್ತಕ ಕಪಾಟಿನಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂದ ಕುರಿತ ಸಂಪುಟಗಳು ಸಾಲು ಸಾಲಾಗಿದ್ದವು. ತತ್ವ ಶಾಸ್ತ್ರ, ರಾಜಕಿಯ ಅಥವಾ ಇತಿಹಾಸ ಪುಸ್ತಕಗಳು ಅಲ್ಲಿರಲಿಲ್ಲ. ಅವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇತ್ತು. ಅವರು ಪಾಶ್ಚಿಮಾತ್ಯ ಮತ್ತು ಹಿಂದೂಸ್ತಾನಿ, ಶಾಸ್ತ್ರೀಯ ಹಾಗೆಯೇ ಆಧುನಿಕ ಸಂಗೀತವನ್ನು ತುಂಬಾ ಇಷ್ಟಪಡುತ್ತಿದ್ದರು. ಛಾಯಾಗ್ರಹಣ ಮತ್ತು ಹವ್ಯಾಸಿ ರೇಡಿಯೊದಲ್ಲಿ ಅವರಿಗೆ ವಿಶೇಷ ಆಸಕ್ತಿ ಇತ್ತು.

ಅವರಿಗೆ ತುಂಬಾ ಖುಷಿ ಕೊಡುತ್ತಿದ್ದ ಸಂಗತಿ ಎಂದರೆ ಫ್ಲೈಯಿಂಗ್. ಇಂಗ್ಲೆಂಡ್ನಿಂದ ತಾಯ್ನಾಡಿಗೆ ಹಿಂದಿರುಗಿದ ನಂತರ ಅವರು ದೆಹಲಿ ಫ್ಲೈಯಿಂಗ್ ಕ್ಲಬ್ನಲ್ಲಿ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದರು ಹಾಗೂ ಕಮರ್ಷಿಯಲ್ ಪೈಲೆಟ್ ಲೈಸನ್ಸ್ ಪಡೆದರು. ಬಳಿಕ ಅವರು ಭಾರತದ ದೇಶೀಯ ವಿಮಾನ ಸಂಸ್ಥೆ ಇಂಡಿಯನ್ ಏರ್ಲೈನ್ಸ್ನಲ್ಲಿ ಪೈಲೆಟ್ ಆದರು.

ಕೇಂಬ್ರಿಡ್ಜ್ನಲ್ಲಿ ವ್ಯಾಸಂಗ ಮಾಡುತ್ತಿರುವ ವೇಳೆ ಇಂಗ್ಲಿಷ್ ಅಧ್ಯಯನ ಮಾಡುತ್ತಿದ್ದ ಇಟಲಿಯ ಸೋನಿಯಾ ಮೈನೋ ಅವರನ್ನು ಶ್ರೀ ಗಾಂಧಿ ಭೇಟಿಯಾದರು. ನಂತರ ಸೋನಿಯಾ ಅವರನ್ನು ಶ್ರೀ ರಾಜೀವ್ ಗಾಂಧಿ ವರಿಸಿ ನವದೆಹಲಿಯಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರ ನಿವಾಸದಲ್ಲಿ ನೆಲೆಸಿದರು. ಅವರಿಗೆ ರಾಹುಲ್ ಮತ್ತು ಪ್ರಿಯಾಂಕ ಎಂಬ ಮಕ್ಕಳಿದ್ದಾರೆ.

1980ರಲ್ಲಿ ಅವರ ಸೋದರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ದುರಂತ ಸಾವಿಗೀಡಾದ ನಂತರ ಸನ್ನಿವೇಶ ಬದಲಾಯಿತು. ರಾಜಕೀಯ ರಂಗ ಪ್ರವೇಶಿಸಿ ತಾಯಿಯವರಿಗೆ ನೆರವು ನೀಡುವಂತೆ ಶ್ರೀ ಗಾಂಧಿ ಅವರಿಗೆ ಒತ್ತಡಗಳು ಬಂದವು. ನಂತರ ಅನೇಕ ಆಂತರಿಕ ಮತ್ತು ಬಾಹ್ಯ ಸವಾಲುಗಳು ಎದುರಾದವು. ಮೊದಲಿಗೆ ಈ ಒತ್ತಡಗಳಿಗೆ ಅವರು ಪ್ರತಿರೋಧ ವ್ಯಕ್ತಪಡಿಸಿದ್ದರು. ಆದರೆ ನಂತರ ಅವರ ಸಿದ್ದಾಂತಗಳಿಗೆ ತಲೆ ಬಾಗಿದರು. ತಮ್ಮ ಸೋದರನ ಸಾವಿನಿಂದ ತೆರವಾದ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದರು.

ನವೆಂಬರ್ 1982ರಲ್ಲಿ ಭಾರತವು ಏಷ್ಯನ್ ಕ್ರೀಡಾಕೂಟದ ಅತಿಥ್ಯ ವಹಿಸಿದಾಗ, ಕೆಲವು ವರ್ಷಗಳ ಹಿಂದೆಯೇ ಕ್ರೀಡಾಂಗಣ ನಿರ್ಮಾಣ ಹಾಗೂ ಇತರೆ ಮೂಲಸೌಕರ್ಯಗಳ ವ್ಯವಸ್ಥೆಗೆ ಕೈಗೊಂಡ ಬದ್ಧತೆಯನ್ನು ಪೂರೈಸಲಾಯಿತು. ಸಕಾಲದಲ್ಲಿ ಎಲ್ಲ ಕಾರ್ಯಗಳು ಪೂರ್ಣಗೊಳಿಸುವ ಹೊಣೆಯನ್ನು ರಾಜೀವ್ ಗಾಂಧಿ ಅವರಿಗೆ ವಹಿಸಲಾಯಿತು. ಯಾವುದೇ ಅಡೆತಡೆ ಮತ್ತು ಗೊಂದಲಗಳಿಲ್ಲದೇ ಕ್ರೀಡಾಕೂಟಗಳನ್ನು ನಡೆಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಯಿತು. ಈ ಸವಾಲಿನ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ತಮ್ಮ ಸಾಮಥ್ರ್ಯ ಮತ್ತು ಸುಗಮ ಸಮನ್ವಯತೆಯನ್ನು ಸಾಬೀತು ಮಾಡಿ ತಮ್ಮ ಮೊದಲ ನಾಯಕತ್ವವನ್ನು ಪ್ರದರ್ಶಿಸಿದರು. ಇದೇ ವೇಳೆ, ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಅವರು ಸಮಾನತೆಯೊಂದಿಗೆ ಪಕ್ಷದ ಸಂಘಟನೆಯನ್ನು ಕ್ರಮಬದ್ಧಗೊಳಿಸಿದರು. ಈ ಎಲ್ಲ ನಾಯಕತ್ವ ಗುಣಗಳು ಅವರನ್ನು ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನೆಡೆಸುವ ಅಧಿಕಾರದ ಚುಕ್ಕಾಣಿ ಹಿಡಿಯಲು ನೆರವಾಯಿತು.

ಶ್ರೀ ರಾಜೀವ್ ಗಾಂಧಿ ಅವರು ಭಾರತದ ಪ್ರಧಾನಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಈ ಎರಡು ಮಹತ್ವ ಹುದ್ದೆಗಳ ಅಧಿಕಾರ ಪಡೆದಿದ್ದು ದುರಂತದ ಸನ್ನಿವೇಶದಲ್ಲಿ. 31ನೇ ಅಕ್ಟೋಬರ್, 1984ರಲ್ಲಿ ತಮ್ಮ ತಾಯಿಯವರ ಬರ್ಬರ ಹತ್ಯೆ ನಂತರ ಅವರು ವೈಯಕ್ತಿಕ ದು:ಖ ಮತ್ತು ರಾಷ್ಟ್ರದ ಹೊಣೆಯನ್ನು ಸಮತೋಲನ, ಘನತೆ ಮತ್ತು ಸಂಯಮದಿಂದ ನಿಭಾಯಿಸಿದರು.

ಸುದೀರ್ಘ ಚುನಾವಣಾ ಪ್ರಚಾರದ ವೇಳೆ, ಶ್ರೀ ಗಾಂಧಿ ಅವರು ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ದಣಿವಿಲ್ಲದೇ ಪ್ರವಾಸ ಮಾಡಿದರು. ಅವರು ಭೂಮಿ ಸುತ್ತಳತೆಯ ಒಂದೂವರೆ ಪಟ್ಟುವಿಗೆ ಸಮನಾದ ಅಂತರವನ್ನು ವ್ಯಾಪಿಸಿ ಬಹುತೇಕ ಸ್ಥಳಗಳಲ್ಲಿ 250ಕ್ಕೂ ಸಭೆಗಳನ್ನು ಉದ್ದೇಶಿಸಿ ಮಾತನಾಡಿ, ಲಕ್ಷಾಂತರ ಮಂದಿಯನ್ನು ಭೇಟಿ ಮಾಡಿದರು.

ಆಧುನಿಕ ಮನಸ್ಸಿನ ಆದರೆ ಪ್ರಾಯೋಗಿಕ ವ್ಯಕ್ತಿಯಾದ ಶ್ರೀ ರಾಜೀವ್ ಗಾಂಧಿಯವರು ಅತ್ಯುನ್ನತ ತಂತ್ರಜ್ಞಾನದ ವಿಶ್ವದಲ್ಲಿನ ಮನೆಯಲ್ಲಿದರು. ಹಾಗೂ ಭಾರತವನ್ನು ಏಕತೆಯ ದೇಶವನ್ನಾಗಿ ಮಾಡಿ 21ನೇ ಶತಮಾನದಲ್ಲಿ ಪ್ರಗತಿ ಪಥದತ್ತ ಕೊಂಡ್ಯೊಯುವ ಗುರಿ ಹೊಂದಿದ್ದರು.