ಶ್ರೀ ಚರಣ್ ಸಿಂಗ್ ಅವರು ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮಧ್ಯಮ ವರ್ಗದ ರೈತಾಪಿ ಕುಟುಂಬವೊಂದರಲ್ಲಿ 1902ರಲ್ಲಿ ಜನಿಸಿದರು. ಅವರು 1923ರಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದರು. 1925ರಲ್ಲಿ ಆಗ್ರಾ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಕಾನೂನು ಶಿಕ್ಷಣವನ್ನು ಪಡೆದ ಅವರು ಗಾಝಿಯಾಬಾದ್ನಲ್ಲಿ ತಮ್ಮ ಅಭ್ಯಾಸ ಪ್ರಾರಂಭಿಸಿದರು. ಬಳಿಕ 1929ರಲ್ಲಿ ಮೀರತ್ಗೆ ತೆರಳಿ ಅಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು.
ಶ್ರೀ ಚರಣ್ ಸಿಂಗ್ ಅವರು 1937ರಲ್ಲಿ ಉತ್ತರ ಪ್ರದೇಶದ ಛಪ್ರೌಲಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾಯಿತರಾದರು ಮತ್ತು 1946, 1952, 1962 ಮತ್ತು 1967ರಲ್ಲಿ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1946ರಲ್ಲಿ ಪಂಡಿತ್ ಗೋವಿಂದ್ ಭಲ್ಲಭ್ ಪಂತರ ಸರ್ಕಾರದಲ್ಲಿ ಅವರು ಸಂಸದೀಯ ಕಾರ್ಯದರ್ಶಿಯಾಗಿದ್ದರು. ಕಂದಾಯ, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ನ್ಯಾಯ, ವಾರ್ತೆ…ಹೀಗೆ ಹಲವಾರು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದರು. ಜೂನ್ 1951ರಲ್ಲಿ ಅವರಿಗೆ ರಾಜ್ಯ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನವನ್ನು ನೀಡಿ ನ್ಯಾಯ ಮತ್ತು ವಾರ್ತಾ ಖಾತೆಗಳ ಹೊಣೆಯನ್ನು ನೀಡಲಾಯಿತು. 1954ರಲ್ಲಿ ಸಂಪೂರ್ಣಾನಂದ ಅವರ ಮಂತ್ರಿಮಂಡಲದಲ್ಲಿ ಅರು ಕಂದಾಯ ಮತ್ತು ಕೃಷಿ ಸಚಿವರಾಗಿದ್ದರು. 1959ರಲ್ಲಿ ಅವರು ರಾಜೀನಾಮೆಯನ್ನು ನೀಡುವಾಗ ಶ್ರೀ ಚರಣ್ ಸಿಂಗ್ ಕಂದಾಯ ಮತ್ತು ಸಾರಿಗೆ ಸಚಿವರಾಗಿದ್ದರು.
1960ರಲ್ಲಿ ಶ್ರೀ. ಸಿ.ಬಿ ಗುಪ್ತಾ ಅವರ ಮಂತ್ರಿಮಂಡಲದಲ್ಲಿ ಶ್ರೀ ಚರಣ್ ಸಿಂಗ್ ಅವರು ಗೃಹ ಮತ್ತು ಕೃಷಿ ಸಚಿವರಾಗಿದ್ದರು. ಸುಚೇತಾ ಕೃಪಲಾನಿ ಅವರ ಮಂತ್ರಿ ಮಂಡಲದಲ್ಲೂ ಶ್ರೀ ಚರಣ್ ಸಿಂಗ್ ಅವರು ಕೃಷಿ ಮತ್ತು ಅರಣ್ಯ ಸಚಿವÀರಾಗಿ 1962ರಿಂದ 1963ರವೆರೆಗೆ ಕಾರ್ಯ ನಿರ್ವಹಿಸಿದರು. 1965ರಲ್ಲಿ ಅವರು ಕೃಷಿ ವಿಭಾಗವನ್ನು ಬಿಟ್ಟುಕೊಟ್ಟು 1966ರಲ್ಲಿ ಸ್ಥಳೀಯ ಸ್ವಯಂ ಆಡಳಿತ ವಿಭಾಗದ ಅಧಿಕಾರ ವಹಿಸಿಕೊಂಡರು.
ಕಾಂಗ್ರೆಸ್ ವಿಭಜನೆಗೊಂಡ ಬಳಿಕ ಫೆಬ್ರವರಿ 1970ರಲ್ಲಿ ಶ್ರೀ ಚರಣ್ ಸಿಂಗ್ ಅವರು ಎರಡನೆಯ ಬಾರಿಗೆ ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದರು. ಅಕ್ಟೋಬರ್ 2, 1970ರಲ್ಲಿ ರಾಜ್ಯದ ಮೇಲೆ ರಾಷ್ಟ್ರಪತಿ ಆಡಳಿತವನ್ನು ಘೊಷಿಸಲಾಯಿತು.
ಶ್ರೀ ಚರಣ್ ಸಿಂಗ್ ಅವರು ಉತ್ತರ ಪ್ರದೇಶ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಆಡಳಿತದಲ್ಲಿ ಭೃಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಸಾಮಥ್ರ್ಯವನ್ನು ಸಹಿಸದ ಒಬ್ಬ ಟಾಸ್ಕ್ ಮಾಸ್ಟರ್ ಎಂಬ ಖ್ಯಾತಿಯನ್ನು ಪಡೆದರು. ಶ್ರೀ ಚರಣ್ ಸಿಂಗ್ ಅವರೊಬ್ಬ ಉತ್ತಮ ಸಂಸದರಾಗಿದ್ದರು. ಅವರು ತಮ್ಮ ವಾಕ್ಚಾತುರ್ಯ ಮತ್ತು ದೃಢಾಭಿಪ್ರಾಯಕ್ಕೆ ಹೆಸರುವಾಸಿಯಾದವರು.
ಶ್ರೀ ಚರಣ್ ಸಿಂಗ್ ಉತ್ತರ ಪ್ರದೇಶದ ಭೂ ಸುಧಾರಣೆಗಳ ಮುಖ್ಯ ವಿನ್ಯಾಸಕ. 1939ರಲ್ಲಿ ಸಾಲ ಮನ್ನಾ ಮಸೂದೆ ರಚನೆ ಮತ್ತು ಅಂತಿಮಗೊಳಿಸುವಿಕೆಯಲ್ಲಿ ಶ್ರೀ. ಸಿಂಗ್ ಪ್ರಮುಖ ಪಾತ್ರ ವಹಿಸಿದರು. ಇದು ಗ್ರಾಮೀಣ ಸಾಲಗಾರರಿಗೆ ನಿರಾಳ ತಂದುಕೊಟ್ಟಿತು. ಉತ್ತರ ಪ್ರದೇಶದಲ್ಲಿ ಸಚಿವರು ಪಡೆಯುತ್ತಿದ್ದ ವೇತನ ಮತ್ತು ಅನುಭವಿಸುತ್ತಿದ್ದ ಇತರ ಸೌಲಭ್ಯಗಳನ್ನು ಇವರ ಅವಧಿಯಲ್ಲಿ ಕಡಿತಗೊಳಿಸಲಾಯಿತು. ರಾಜ್ಯದೆಲ್ಲೆಡೆ ಭೂ ಹಿಡುವಳಿಯನ್ನು ಸರಿಸಮನಾಗಿರಿಸಲು ಭೂಮಿಯ ಗರಿಷ್ಠ ಮಿತಿಯನ್ನು ಕಡಿತಗೊಳಿಸುವ ಉದ್ದೇಶ ಹೊಂದಿರುವ ಭೂ ಹಿಡುವಳಿ ಕಾಯ್ದೆಯನ್ನು 1960ರಲ್ಲಿ ಪರಿಚಯಿಸುವಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯೋನ್ಮುಖರಾದರು.
ದೇಶದ ಕೆಲವು ರಾಜಕಾರಣಿಗಳಿಗು ಇಂದಿಗೂ ಶ್ರೀ ಚರಣ್ ಸಿಂಗ್ ಅವರನ್ನು ಜನಪ್ರಿಯ ಜನನಾಯಕನಾಗಿ ಗುರುತಿಸುತ್ತಾರೆ. ಒಬ್ಬ ನಿಷ್ಠಾವಂತ ಕೆಲಸಗಾರ ಮತ್ತು ಸಮಾಜಿಕ ನ್ಯಾಯದಲ್ಲಿ ಕಟ್ಟಾ ನಂಬಿಕೆಯುಳ್ಳ ವ್ಯಕ್ತಿಯಾದ ಶ್ರೀ ಚರಣ್ ಸಿಂಗ್ಗೆ ಲಕ್ಷಾಂತರ ಜನ ರೈತರ ವಿಶ್ವಾಸವೇ ಶಕ್ತಿಯಾಗಿತ್ತು.
ಚೌಧರಿ ಚರಣ್ ಸಿಂಗ್ ಸರಳಜೀವನವನ್ನು ಜೀವಿಸಿದರು ಮತ್ತು ವಿರಾಮದ ಸಮಯವನ್ನು ಓದು ಮತ್ತು ಬರವಣಿಗೆಯಲ್ಲಿ ಕಳೆದರು. ‘ ಜಮೀನ್ಧಾರಿ ನಿರ್ನಾಮ’, ಕೋ ಅಪರೇಟಿವ್ ಫಾರ್ಮಿಂಗ್ ಎಕ್ಸ್ರೇಯ್ಡ್’ , ‘ಭಾರತದ ಬಡತನ ಒಂದು ಪರಿಹಾರ’ ಹೀಗೆ ಹಲವಾರು ಪುಸ್ತಕಗಳು ಮತ್ತು ಕೈಪಿಡಿಗಳನ್ನು ಅವರು ಬರೆದರು.