(i) |
ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಸಂಬಂಧಿಸಿದ ವಿವರಗಳು, ಅದರ ಕಾರ್ಯವಿಧಾನ ಮತ್ತು ಕರ್ತವ್ಯಗಳು |
ಪ್ರಧಾನ ಮಂತ್ರಿಗಳ ಸಚಿವಾಲಯವನ್ನು 15.08.1947 ರಂದು ಸ್ಥಾಪಿಸಲಾಯಿತು ಮತ್ತು ನಂತರ 28.03.1977 ರಂದು ಅದನ್ನು ಪ್ರಧಾನ ಮಂತ್ರಿ ಕಚೇರಿ ಎಂದು ಮರುನಾಮಕರಣ ಮಾಡಲಾಯಿತು. 1961ರ ಭಾರತ ಸರಕಾರದ (ಕರ್ತವ್ಯ ನಿಗದಿ) ನಿಯಮಗಳ ಪ್ರಕಾರ ,ಪ್ರಧಾನಮಂತ್ರಿಗಳ ಕಾರ್ಯಾಲಯವು (ಪಿಎಂಒ) ಮಾನ್ಯ ಪ್ರಧಾನಮಂತ್ರಿಗಳಿಗೆ ಆಡಳಿತಾಧಿಕಾರಿಗಳ/ಕಾರ್ಯದರ್ಶಿಯ ನೆರವನ್ನು ಒದಗಿಸುತ್ತದೆ. ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು ಪ್ರಧಾನಮಂತ್ರಿಗಳ ಕಾರ್ಯಾಲಯದ ಮುಖ್ಯಸ್ಥರಾಗಿರುತ್ತಾರೆ. ಸದ್ಯಕ್ಕೆ ಇಲ್ಲಿ 122 ಪತ್ರಾಂಕಿತ ಹುದ್ದೆಗಳೂ, ಪತ್ರಾಂತಿಕವಲ್ಲದ 281 ಹುದ್ದೆಗಳೂ ಇವೆ. (ಪ್ರಧಾನಮಂತ್ರಿಗಳ/ರಾಜ್ಯ ಸಚಿವರ/ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮತ್ತು ಮಾಜಿ ಪ್ರಧಾನ ಮಂತ್ರಿಗಳ ಆಪ್ತ ಸಿಬ್ಬಂದಿಯನ್ನು ಹೊರತುಪಡಿಸಿ) ಪ್ರಧಾನಮಂತ್ರಿಗಳ ಕಾರ್ಯಾಲಯದ ಮುಖ್ಯ ಕಚೇರಿಯು ಹೊಸದೆಹಲಿಯ ಸೌತ್ ಬ್ಲಾಕ್ ನಲ್ಲಿದೆ. ಆದರೆ, ಇದರ ಕೆಲವು ವಿಭಾಗಗಳು ರೈಲು ಭವನ (ಆರ್ ಟಿ ಐ ವಿಭಾಗ) ಮತ್ತು ಸಂಸತ್ ಭವನ (ಸಂಸತ್ ವಿಭಾಗ)ದಲ್ಲೂ ಇವೆ. ಅಲ್ಲದೆ, ಪ್ರಧಾನಮಂತ್ರಿಗಳ ನಿವಾಸವಾದ “# 7, ಲೋಕಕಲ್ಯಾಣ ಮಾರ್ಗ” (# 7, ಎಲ್ಕೆಎಂ) ಇಲ್ಲಿಂದಲೂ ಇದು ಕಾರ್ಯ ನಿರ್ವಹಿಸುತ್ತದೆ |
(ii) |
ಪ್ರಧಾನಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗಿರುವ ಅಧಿಕಾರ ಮತ್ತು ಕರ್ತವ್ಯಗಳು |
|
(iii) |
ನೀತಿ ನಿರ್ಧಾರ, ಉಸ್ತುವಾರಿ ಮತ್ತು ಉತ್ತರದಾಯಿತ್ವಕ್ಕೆ ಸಂಬಂಧಪಟ್ಟಂತೆ ಅನುಸರಿಸುವ ವಿಧಾನ |
ತಮಗೆ ಹರಿದುಬರುವ ಪ್ರಸ್ತಾವನೆ ಇತ್ಯಾದಿಗಳ ಬಗ್ಗೆ ಪ್ರಧಾನಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಕಾರ್ಯಾಲಯವು ಅದಕ್ಕೆ ಅಗತ್ಯವಾದ ನೆರವು ಮತ್ತು ಆಡಳಿತ/ಕಾರ್ಯದರ್ಶಿಯ ಸಹಾಯವನ್ನು ನೀಡುತ್ತದೆ . ಉಳಿದಂತೆ ಪ್ರಧಾನಮಂತ್ರಿಗಳ ಕಾರ್ಯಾಲಯದ ಸಿಬ್ಬಂದಿ ವರ್ಗದವರು ಕಚೇರಿ ಕಾರ್ಯವಿಧಾನ ಕೈಪಿಡಿನಲ್ಲಿರುವ ನಿಯಮಗಳನ್ನು ಪಾಲಿಸುತ್ತಾರೆ. ಒಂದು ಸಚಿವಾಲಯದ ನೇರ ಹೊಣೆಗಾರಿಕೆ ಪ್ರಧಾನ ಮಂತ್ರಿ ಅಥವಾ ಸಂಪುಟ ಸಚಿವರು ಅಥವಾ ಸ್ವತಂತ್ರ ಮಂತ್ರಿಯದ್ದೇ ಎಂಬುದರ ಆಧಾರದ ಮೇಲೆ ಫೈಲ್ಗಳನ್ನು ಪ್ರಧಾನಮಂತ್ರಿಗೆ ಸಲ್ಲಿಸಲಾಗುತ್ತದೆ. ಕಾರ್ಯವು ನೇರವಾಗಿಲ್ಲದಿದ್ದರೆ, ಹೆಚ್ಚಿನ ವಿಷಯಗಳನ್ನು ಆಯಾ ಸಂಪುಟ ಸಚಿವರು ಅಥವಾ ರಾಜ್ಯ ಸಚಿವರು ನಿರ್ವಹಿಸುತ್ತಾರೆ. ಪ್ರಧಾನಮಂತ್ರಿಯವರು ನಿರ್ವಹಿಸುವ, ಸಂಪುಟ ಅನುಮೋದನೆ ಅಗತ್ಯವಿರುವ ಮತ್ತು ಸಹ-ಸಚಿವರ ಅಧಿಕಾರವಿಲ್ಲದೆ ನಿರ್ವಹಿಸುವ ಎಲ್ಲಾ ವಿಷಯಗಳನ್ನು ಪ್ರಧಾನ ಮಂತ್ರಿಗಳ ಆದೇಶಗಳಿಗೆ ಸಲ್ಲಿಸಲಾಗುತ್ತದೆ. ಭಾರತ ಸರ್ಕಾರ (ವ್ಯವಹಾರ ಹಂಚಿಕೆ) ಕಾಯ್ದೆ 1961,ಭಾರತ ಸರ್ಕಾರ (ಖಾತೆಯ ವ್ಯವಹಾರ) ಕಾಯ್ದೆ, 1961 ವಿವಿಧ ಕಾನೂನುಗಳಿಗೆ ಅನುಸಾರವಾಗಿ ಪ್ರಧಾನಮಂತ್ರಿಯ ಆದೇಶ ಮತ್ತು ಜ್ಞಾನಕ್ಕಾಗಿ ಪ್ರಮುಖ ನೀತಿ ವಿಷಯಗಳನ್ನು ಸಲ್ಲಿಸಲು ಅವಕಾಶ ನೀಡುತ್ತದೆ. |
(iv) |
ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಪ್ರಧಾನಮಂತ್ರಿಗಳ ಕಾರ್ಯಾಲಯ (ಪಿಎಂಓ) ಅಳವಡಿಸಿಕೊಂಡಿರುವ ಮಾನದಂಡಗಳು |
ಮಂತ್ರಿ ಮಂಡಳಿಯ ಮುಖ್ಯಸ್ಥರಾಗಿ, ಪ್ರಧಾನಮಂತ್ರಿ ಸಂಪುಟ ಸಭೆಗಳ ಅಧ್ಯಕ್ಷತೆ ವಹಿಸುತ್ತಾರೆ ಮತ್ತು ಭಾರತ ಸಂವಿಧಾನ, ಭಾರತ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1961 ಮತ್ತು ಭಾರತ ಸರ್ಕಾರ (ಖಾತೆಯ ವ್ಯವಹಾರ) ನಿಯಮಗಳು, 1961 ರಲ್ಲಿ ಸೂಚಿಸಿರುವಂತೆ ಅದರ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಪ್ರಧಾನಮಂತ್ರಿಗಳ ಕಾರ್ಯಾಲಯವು ತನ್ನ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ 1961ರ ಭಾರತ ಸರಕಾರದ (ಕರ್ತವ್ಯ ನಿಗದಿ) ನಿಯಮಗಳು, 1961ರ ಭಾರತ ಸರಕಾರದ (ಕರ್ತವ್ಯ ನಿರ್ವಹಣೆ) ನಿಯಮಗಳು ಮತ್ತು ಕರ್ತವ್ಯ ನಿರ್ವಹಣೆಯ ನಿರ್ದೇಶನ ಕೈಪಿಡಿ aಯನ್ನು ಅನುಸರಿಸಲಾಗುತ್ತದೆ |
(v) |
ಪ್ರಧಾನಮಂತ್ರಿಗಳ ಕಾರ್ಯಾಲಯವು ಹೊಂದಿರುವ ನಿಯಮಗಳು, ವಿಧಿಗಳು, ಸೂಚನೆಗಳು, ಕೈಪಿಡಿಗಳು ಮತ್ತು ದಾಖಲೆಗಳು ಅಥವಾ ತನ್ನ ನಿಯಂತ್ರಣದಲ್ಲಿ ಹೊಂದಿರುವ ಇಂಥ ಸಂಗತಿಗಳು ಅಥವಾ ಕಾರ್ಯಾಲಯದ ಸಿಬ್ಬಂದಿ ವರ್ಗದವರು ತಮ್ಮಕರ್ತವ್ಯ ನಿರ್ವಹಣೆಯಲ್ಲಿ ಅನುಸರಿಸುವ ನೀತಿನಿಯಮಾವಳಿಗಳು |
ಕೇಂದ್ರ ಸರಕಾರದ ಉದ್ಯೋಗಿಗಳು/ಅಖಿಲ ಭಾರತ ಸೇವಾವ್ಯಾಪ್ತಿಯುಳ್ಳ ಅಧಿಕಾರಿಗಳು ಮತ್ತು ಕೇಂದ್ರ ಸರಕಾರದ ಅಧಿಕಾರಿಗಳಿಗೆ ಅನ್ವಯವಾಗುವಂಥ ನಿಯಮಗಳೇ ಪ್ರಧಾನಮಂತ್ರಿಗಳ ಕಾರ್ಯಾಲಯದ ಉದ್ಯೋಗಿಗಳಿಗೂ ಅನ್ವಯಿಸುತ್ತವೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ [ 419KB ] |
(vi) |
ಪ್ರಧಾನಮಂತ್ರಿಗಳ ಕಾರ್ಯಾಲಯವು ತಾನೇ ನೇರವಾಗಿ ಹೊಂದಿರುವ / ತನ್ನ ಅಡಿಯಲ್ಲಿ ಇಟ್ಟುಕೊಂಡಿರುವ ದಾಖಲೆಗಳ ಸ್ವರೂಪ/ಬಗೆಗಳು |
ಪ್ರಧಾನಮಂತ್ರಿಗಳ ಕಾರ್ಯಾಲಯವು ತನ್ನ ಆಡಳಿತ, ತನಗೆ ಬರುವ ಸಾರ್ವಜನಿಕ ಕುಂದುಕೊರತೆಗಳು, ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ ಇತ್ಯಾದಿಗಳಿಗೆ ಸಂಬಂಧಿಸಿದ ದಾಖಲೆ/ಪತ್ರಗಳನ್ನು ಹೊಂದಿರುತ್ತದೆ. ಇದಲ್ಲದೆ ಇತರ ಸಚಿವಾಲಯಗಳು/ಇಲಾಖೆಗಳು, ಸಂಪುಟ ಕಾರ್ಯಾಲಯ(ಸಚಿವಾಲಯ), ರಾಜ್ಯ ಸರಕಾರಗಳು ಮತ್ತು ಇನ್ನಿತರ ಇಲಾಖೆಗಳಿಂದ ಮಾಹಿತಿ/ ಅಭಿಪ್ರಾಯ/ ಟಿಪ್ಪಣಿ/ ಆದೇಶ ಕೋರಿ ಬರುವ ದಾಖಲೆ/ಪತ್ರಗಳನ್ನು ಕೂಡ ಪ್ರಧಾನಮಂತ್ರಿಗಳ ಕಾರ್ಯಾಲಯವು ಇಟ್ಟುಕೊಂಡಿರುತ್ತದೆ |
(vii) |
ಪ್ರಧಾನಮಂತ್ರಿಗಳ ಕಾರ್ಯಾಲಯವು ತನ್ನ ನೀತಿ ನಿರೂಪಣೆ ಅಥವಾ ಅದರ ಜಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಪ್ರತಿನಿಧಿಗಳೊಂದಿಗೆ ವಿಚಾರ ವಿನಿಮಯ ನಡೆಸಲು ಹೊಂದಿರುವ ವ್ಯವಸ್ಥೆಯ ವಿವರ |
ಯಾವುದೇ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಆಯಾಯ ಸಚಿವಾಲಯಗಳು ಮತ್ತು ಇಲಾಖೆಗಳೇ ಸಾರ್ವಜನಿಕರ ಪ್ರತಿನಿಧಿಗಳೊಂದಿಗೆ ವಿಚಾರ ವಿನಿಮಯ/ಸಂವಾದದ ವ್ಯವಸ್ಥೆ ಹೊಂದಿವೆ. ಬಳಿಕ ಆಯಾ ಸಚಿವಾಲಯಗಳು/ಇಲಾಖೆಗಳೇ ಆ ನೀತಿಗಳನ್ನು ರೂಪಿಸಿ, ಜಾರಿಗೆ ತರುತ್ತವೆ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿಗಳ ಕಾರ್ಯಾಲಯವು ಯಾವುದೇ ನಿರ್ದಿಷ್ಟ ವ್ಯವಸ್ಥೆಯನ್ನು ಹೊಂದಿರುವುದಿಲ್ಲ ಆದರೂ ಸಾರ್ವಜನಿಕರು ಪ್ರಧಾನಮಂತ್ರಿಗಳಿಗೆ/ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ತಮ್ಮ ಪ್ರತಿಕ್ರಿಯೆ/ ಸಲಹೆ/ ಕುಂದುಕೊರತೆಗಳನ್ನು ಕಳಿಸಬಹುದು. ಇದಕ್ಕಾಗಿ ಈ ಮುಂದಿನ ಇಂಟರ್ಆಕ್ಟೀವ್ ಪೇಜ್ ಲಿಂಕ್ ಅನ್ನು ಬಳಸಿಕೊಳ್ಳಬಹುದು-“ಪ್ರಧಾನ ಮಂತ್ರಿಯವರೊಂದಿಗೆ ಸಂವಾದ ” . |
(viii) |
ಸಲಹೆಗಳನ್ನು ಪಡೆಯಲೆಂದು ರಚಿಸಿರುವ ಎರಡು ಅಥವಾ ಎರಡಕ್ಕಿಂತ ಹೆಚ್ಚು ಸದಸ್ಯರಿರುವ ಯಾವುದೇ ಮಂಡಲಿಗಳು, ಕೌನ್ಸಿಲ್ಗಳು, ಸಮಿತಿಗಳನ್ನು ಕುರಿತ ವಿವರ ಅಥವಾ ಇಂಥ ಮಂಡಲಿ/ಕೌನ್ಸಿಲ್/ಸಮಿತಿಗಳು ನಡೆಸುವ ಸಭೆಯ ಕಾರ್ಯಕ್ರಮ ಪಟ್ಟಿಗಳು ಸಾರ್ವಜನಿಕರಿಗೆ ಲಭ್ಯವಿದೆಯೇ ಎನ್ನುವುದನ್ನು ತಿಳಿಸುವ ಬಗ್ಗೆ ಇರುವ ವ್ಯವಸ್ಥೆ |
ಪಿಎಂಒ ಪ್ರಧಾನ ಮಂತ್ರಿಗೆ ಕಾರ್ಯದರ್ಶಿಯ ಸಹಾಯವನ್ನು ಒದಗಿಸುವ ಕಾರಣದಿಂದ ಅನ್ವಯವಾಗುವುದಿಲ್ಲ. |
(ix) |
ಪ್ರಧಾನಮಂತ್ರಿಗಳ ಕಾರ್ಯಾಲಯದ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಇರುವ ನಿರ್ದೇಶಿಕೆ |
ಪಿಎಂಓ ನ ಪ್ರಮುಖ ಅಧಿಕಾರಿಗಳ ಡೈರೆಕ್ಟರಿ ಇದಕ್ಕೆ ಸಂಬಂಧಿಸಿದ ವಿವರವನ್ನು ಕ್ರಮಸಂಖ್ಯೆ 10ರಲ್ಲಿ ಕೊಡಲಾಗಿದೆ |
(x) |
ಪ್ರಧಾನಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳು ಮತ್ತು ಉದ್ಯೋಗಿಗಳು ಪಡೆಯುವ ಮಾಸಿಕ ಗೌರವಧನ ಮತ್ತು ನಿಯಮಾನುಸಾರ ಹೊಂದಿರುವ ಪರಿಹಾರ ವಿತರಣೆ ವ್ಯವಸ್ಥೆಯ ವಿವರ |
ಪ್ರಧಾನಮಂತ್ರಿಗಳು/ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿರುವ ರಾಜ್ಯ ಸಚಿವರ ವೇತನ ಮತ್ತು ಇತರ ಭತ್ಯೆಗಳನ್ನು ಕಾಲಕಾಲಕ್ಕೆ ತಿದ್ದುಪಡಿಗೊಂಡಿರುವ `1952ರ ಸಚಿವರುಗಳ ವೇತನ ಮತ್ತು ಭತ್ಯೆಗಳ ಕಾಯಿದೆ’ಯ ಪ್ರಕಾರ ನೀಡಲಾಗುತ್ತಿದೆ |
(xi) |
ಪ್ರಧಾನಮಂತ್ರಿಗಳ ಕಾರ್ಯಾಲಯದ ಪ್ರತಿಯೊಂದು ವಿಭಾಗಕ್ಕೂ ಕೇಂದ್ರ ಸರಕಾರದ ಬಜೆಟ್ನಲ್ಲಿ ಒದಗಿಸುವ ಮೊತ್ತ ಮತ್ತು ಅದು ಹೊಂದಿರುವ ಎಲ್ಲ ಯೋಜನೆಗಳ, ಅಂದಾಜು ವೆಚ್ಚದ ಮತ್ತು ಅದರ ಹಣಕಾಸು ಹಂಚಿಕೆಯ ವರದಿಗಳ ವಿವರ |
ಪ್ರಧಾನಮಂತ್ರಿಗಳ ಕಾರ್ಯಾಲಯದ ಕಾರ್ಯ ನಿರ್ವಹಣೆಗೆಂದೇ ಹಣಕಾಸನ್ನು ಒದಗಿಸುವ ಯಾವುದೇ ಪ್ರತ್ಯೇಕ ಇಲಾಖೆ ಇರುವುದಿಲ್ಲ (i) 2014-15, 2015-16, 2016-17 ಮತ್ತು 2017-18 ವರ್ಷಗಳಿಗೆ ಧನಸಹಾಯಕ್ಕಾಗಿ ವಿವರವಾದ ಬೇಡಿಕೆಗಳು [ 519KB ] . (ii) 2018-19 ವರ್ಷಗಳಿಗೆ ಧನಸಹಾಯಕ್ಕಾಗಿ ವಿವರವಾದ ಬೇಡಿಕೆಗಳು [ 274KB ] . (iii) ಹಣಕಾಸು ವರ್ಷ 2018-19ರ ಬಜೆಟ್ / ವೆಚ್ಚದ ವಿವರಗಳು ಮತ್ತು ಹಣಕಾಸು ವರ್ಷ 2019-20 ರ ಬಜೆಟ್ ಅಂದಾಜು [ 11KB ] (iv) 2015-16ರ ಮಾಸಿಕ ಖರ್ಚು [ 479KB ] . (v) 2016-17ರ ಮಾಸಿಕ ಖರ್ಚು [ 465KB ] . (vi) 2017-18ರ ಮಾಸಿಕ ಖರ್ಚು [ 405KB ] . (vii) 2018-19ರ ಹಣಕಾಸು ವರ್ಷಕ್ಕೆ ತಲೆವಾರು ಮಾಸಿಕ ಖರ್ಚು. [ 19KB ] |
(xii) |
ಸಹಾಯಧನ ಕಾರ್ಯಕ್ರಮಗಳು, ಅವುಗಳಿಗೆ ಹಣಕಾಸು ಮಂಜೂರಾತಿ ಮತ್ತು ಇಂಥ ಕಾರ್ಯಕ್ರಮಗಳ ಫಲಾನುಭವಿಗಳ ವಿವರ |
ಪ್ರಧಾನಮಂತ್ರಿಗಳ ಕಾರ್ಯಾಲಯವು ಯಾವುದೇ ಸಹಾಯಧನ ಕಾರ್ಯಕ್ರಮಗಳನ್ನು ಹೊಂದಿರುವುದಿಲ್ಲ |
(xiii) |
ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ರಿಯಾಯಿತಿ, ಅನುಮತಿ/ಅಪ್ಪಣೆ ಚೀಟಿ ಅಥವಾ ಪ್ರಮಾಣೀಕರಣ ಅಧಿಕಾರ ಪಡೆದಿರುವವರ ವಿವರ |
ಯಾರೂ ಇಲ್ಲ |
(xiv) |
ಪ್ರಧಾನಮಂತ್ರಿಗಳ ಕಾರ್ಯಾಲಯವು ತಾನು ಹೊಂದಿರುವ/ ತನಗೆ ಲಭ್ಯವಿರುವ ಮಾಹಿತಿಗಳನ್ನು ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ ವಿವರ |
ಈ ಮಾಹಿತಿ ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟಿನಲ್ಲಿ ಲಭ್ಯ |
(xv) |
ನಾಗರಿಕರು ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಇರಬಹುದಾದ ಸಾರ್ವಜನಿಕ ಗ್ರಂಥಾಲಯ/ವಾಚನಾಲಯದ ಕೆಲಸದ ಅವಧಿಯೂ ಸೇರಿದಂತೆ ಇನ್ನಿತರ ಮಾಹಿತಿಯನ್ನು ಪಡೆಯಲು ಇರುವ ವ್ಯವಸ್ಥೆಗಳ ವಿವರ |
ಮಾನ್ಯ ಪ್ರಧಾನಮಂತ್ರಿಗಳ ಭಾಷಣಗಳು ಮತ್ತು ಹೇಳಿಕೆಗಳನ್ನು ಕೇಂದ್ರ ಸರಕಾರದ ವಾರ್ತಾ ಶಾಖೆ ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟ್ ಟ್ವೀಟ್ ಸಂದೇಶಗಳು ಹಾಗೂ ಫೇಸ್ ಬುಕ್ನಂಥ ಅಧಿಕೃತ ಸೋಷಿಯಲ್ ಮೀಡಿಯಾಗಳ ಮೂಲಕ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುವುದು ಹಾಗೆಯೇ, ಪ್ರಧಾನಮಂತ್ರಿಗಳು/ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಸಾರ್ವಜನಿಕರು ಅಂಚೆ ಮೂಲಕ ಅಥವಾ “ಪ್ರಧಾನ ಮಂತ್ರಿಯವರೊಂದಿಗೆ ಸಂವಾದ “.ಇಂಟರ್ಆಕ್ಟೀವ್ ಪುಟದ ಕೊಂಡಿಯನ್ನು ಉಪಯೋಗಿಸಿಕೊಂಡು ತಮ್ಮ ಸಲಹೆ/ಪ್ರತಿಕ್ರಿಯೆ/ಸಲಹೆಗಳನ್ನು ಕಳುಹಿಸಬಹುದು ಸಾರ್ವಜನಿಕರು ಇನ್ನೂ ಅನೇಕ ಬಗೆಗಳಲ್ಲಿ ತಮ್ಮ ಕುಂದುಕೊರತೆಗಳ ಬಗ್ಗೆ ಪ್ರಧಾನಮಂತ್ರಿಗಳಿಗೆ ದೂರು ಸಲ್ಲಿಸಬಹುದು/ಪತ್ರ ಬರೆಯಬಹುದು. ಅಂಚೆ ಮೂಲಕ ಕಳುಹಿಸುವವರು “ಪ್ರಧಾನಮಂತ್ರಿಗಳ ಕಾರ್ಯಾಲಯ, ಸೌತ್ ಬ್ಲಾಕ್, ಹೊಸದೆಹಲಿ-110 011” ಈ ವಿಳಾಸಕ್ಕೆ ಕಳುಹಿಸಬಹುದು. ಖುದ್ದಾಗಿ ತಲುಪಿಸುವವರು “ಪ್ರಧಾನಮಂತ್ರಿಗಳ ಅಂಚೆ ಮುಂಗಟ್ಟೆ” ಇಲ್ಲಿಗೆ ತಲುಪಿಸಬಹುದು ಅಥವಾ 011-23016857 ಈ ಸಂಖ್ಯೆಗೆ ಫ್ಯಾಕ್ಸ್ ಮಾಡಬಹುದು ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಪತ್ರ ಬರೆದಿರುವ/ದೂರು ಸಲ್ಲಿಸಿರುವ ಸಾರ್ವಜನಿಕರು 011-23386447 ಸಂಖ್ಯೆಗೆ ದೂರವಾಣಿ ಕರೆ ಮಾಡಿ, ತಮ್ಮ ಪತ್ರ/ದೂರುಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಆನ್ ಲೈನ್ ಮೂಲಕವೂ ಸಾರ್ವಜನಿಕರು ದೂರು ದಾಖಲಿಸಬಹುದು. ಇದಕ್ಕಾಗಿ ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟಿನಲ್ಲಿರುವ ‘ ಪ್ರಧಾನಿಯವರಿಗೊಂದು ಪತ್ರ ‘ ಶೀರ್ಷಿಕೆಯಡಿ ಸೌಲಭ್ಯ ಕಲ್ಪಿಸಲಾಗಿದೆ . ಈ ವೆಬ್ ಸೈಟಿನಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ, ಅದು ನಿಮ್ಮನ್ನು ಸಿಪಿಗ್ರಾಮ್ಸ್ ಪುಟಕ್ಕೆ ನಿರ್ದೇಶಿಸುತ್ತದೆ. ಅಲ್ಲಿ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ದಾಖಲಿಸಿದ ನಂತರ, ಆ ದೂರಿಗೊಂದು ಕ್ರಮಸಂಖ್ಯೆ ಸೃಷ್ಟಿಯಾಗುತ್ತದೆ. ಸಾರ್ವಜನಿಕರು ತಮ್ಮ ಅಹವಾಲು/ದೂರು/ಪತ್ರ/ಸಲಹೆಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಕೂಡ ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟಿಗೆ ಅಪ್ಲೋಡ್ ಮಾಡಬಹುದು ಸಾರ್ವಜನಿಕರು ತಮ್ಮ ಅಹವಾಲು/ದೂರು/ಪತ್ರ/ಸಲಹೆಗಳ ಸ್ಥಿತಿಗತಿಗಳನ್ನು ಸಿಪಿಗ್ರಾಮ್ಸ್ ವೆಬ್ ಪೋರ್ಟಲ್ ನಲ್ಲಿ ತಮ್ಮ ದೂರಿನ ಕ್ರಮಸಂಖ್ಯೆಯನ್ನು ಉಪಯೋಗಿಸಿಕೊಂಡು ತಿಳಿದುಕೊಳ್ಳಬಹುದು. ಮಾಹಿತಿ ಹಕ್ಕಿನ ಕಾಯ್ದೆಯ ಪ್ರಕಾರ ಮಾಹಿತಿಯನ್ನು ಹೇಗೆ ಪಡೆದುಕೊಳ್ಳಬಹುದು ಎಂಬ ಬಗ್ಗೆ ತಿಳಿದುಕೊಳ್ಳಲು ಕ್ಲಿಕ್ ಮಾಡಿ |
(xvi) |
ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಹುದ್ದೆ ಮತ್ತು ಇತರ ವಿವರಗಳು |
(i) ಮೇಲ್ಮನವಿ ಪ್ರಾಧಿಕಾರಿ (ii) ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ(ಸಿಪಿಐಒ) (iii) ಸಹಾಯಕ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ(ಎಸಿಪಿಐಒ) (iv) ಮಾಜಿ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು (ಮಾಜಿ- ಸಿಪಿಐಒ) (v) ಪ್ರಧಾನಮಂತ್ರಿ ಕಾರ್ಯಾಲಯ ದ ಹಿಂದಿನ ಮೇಲ್ಮನವಿ ಪ್ರಾಧಿಕಾರಗಳ ಪಟ್ಟಿ [ 171KB ] |
(xvii) |
ಪಿಎಂಒಗೆ ಸಂಬಂಧಿಸಿದ ಸಿಪಿಸಿಯ ಸೆಕ್ಷನ್ 80 ರ ಅಡಿಯಲ್ಲಿ ನೋಟಿಸ್ ಸ್ವೀಕರಿಸಲು ಮತ್ತು ನಿರ್ಧರಿಸಲು ಗೊತ್ತುಪಡಿಸಿದ ನೋಡಲ್ ಅಧಿಕಾರಿಯ ಹೆಸರು, ಹುದ್ದೆ ಮತ್ತು ವಿಳಾಸ |
ಶ್ರೀ ಚಿರಾಗ್ ಎಂ. ಪಂಚಲ್, ಸಹಾಯಕ ಕಾರ್ಯದರ್ಶಿ , ಪಿಎಂಒಗೆ ಸಂಬಂಧಿಸಿದಂತೆ ಸಿಪಿಸಿಯ ಸೆಕ್ಷನ್ 80 ರ ಅಡಿಯಲ್ಲಿ ಸ್ವೀಕರಿಸಿದ ಮೊಕದ್ದಮೆ / ನೋಟಿಸ್ ಅನ್ನು ಎದುರಿಸಲು ನೋಡಲ್ ಅಧಿಕಾರಿ ಮತ್ತು ಅವರ ವಿಳಾಸ ಹೀಗಿದೆ: ಕೊಠಡಿ ಸಂಖ್ಯೆ 236-ಬಿ, ಸೌತ್ ಬ್ಲಾಕ್, ನವದೆಹಲಿ |
(xviii) |
ಮಾಹಿತಿಗಾಗಿ ಇರುವ ಇನ್ನಿತರ ಮೂಲಗಳ ವಿವರ |
(i) ಪ್ರಗತಿಯ ವೆಬ್ಸೈಟ್ |
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾರ್ಗದರ್ಶಿ ಸೂತ್ರ 1.1 |
ಪ್ರಧಾನಮಂತ್ರಿಗಳ ಕಾರ್ಯಾಲಯದ ಯಾವುದೇ ಆದಾಯ/ ಖರ್ಚು, ಸಾರ್ವಜನಿಕ ಇಲಾಖೆಗಳು ನೀಡುವ ನೋಟಿಸ್/ ಟೆಂಡರ್ಗಳ ಮೂಲಕ ಬರುವ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಆದಾಯದ ವಿವರಗಳು (ಪೂರೈಕೆದಾರ ಸಂಸ್ಥೆಗಳ ಹೆಸರಿನೊಂದಿಗೆ) |
ಪಿಎಂಒನಲ್ಲಿನ ಎಲ್ಲಾ ಖರೀದಿಗಳನ್ನು ಸಾಮಾನ್ಯ ಹಣಕಾಸು ನಿಯಮಗಳು ಮತ್ತು ಖರ್ಚು ಇಲಾಖೆ ನಿಗದಿಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಾಡಲಾಗುತ್ತದೆ. 2017-18ರ ಹಣಕಾಸು ವರ್ಷದಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ವಸ್ತುವನ್ನು ಪಿಎಂಒ ಖರೀದಿಸಲಿಲ್ಲ. |
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾರ್ಗದರ್ಶಿ ಸೂತ್ರ 1.2 |
ಸಾರ್ವಜನಿಕ ಸೇವೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೊಡಲು ಉದ್ದೇಶಿಸಿದ್ದು, ಈ ಸಂಬಂಧ ಯಾವುದೇ ಗುತ್ತಿಗೆ / ವಿನಾಯಿತಿ ಒಪ್ಪಂದವಾಗಿದ್ದರೆ ಅದರ ವಿವರಗಳು |
ಯಾವುದೂ ಇಲ್ಲ |
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾರ್ಗದರ್ಶಿ ಸೂತ್ರ 1.3 |
ವರ್ಗಾವಣೆ ನೀತಿ ಮತ್ತು ವರ್ಗಾವಣೆ ಆದೇಶಗಳು |
ಪ್ರಧಾನಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳು/ಸಿಬ್ಬಂದಿಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ/ಕೇಂದ್ರ ಗೃಹ ಸಚಿವಾಲಯ/ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳು ನೇಮಿಸುತ್ತವೆ. ಇಂಥ ನೇಮಕಾತಿಗಳ ಮಾಹಿತಿ/ವಿವರಗಳನ್ನು ಉದ್ಯೋಗಿಗಳ ಕೈಪಿಡಿಯಲ್ಲಿ ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ. |
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾರ್ಗದರ್ಶಿ ಸೂತ್ರ 1.4 |
ಆರ್ಟಿಐ ಅರ್ಜಿಗಳು/ ಮೊದಲ ಮೇಲ್ಮನವಿಗಳು ಮತ್ತು ಅವುಗಳಿಗೆ ಕೊಟ್ಟಿರುವ ಉತ್ತರಗಳು |
“ಕೆಲವು ಆರ್ ಟಿಐ ಪ್ರಶ್ನೆಗಳು ಮತ್ತು ಅದರ ಪ್ರತ್ಯುತ್ತರಗಳು” [ 1817KB ] |
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾರ್ಗದರ್ಶಿ ಸೂತ್ರ 1.5 |
ಮಹಾಲೇಖಪಾಲರು ಮತ್ತು ಸಂಸದೀಯ ವ್ಯವಹಾರಗಳ ಸಮಿತಿ ನೀಡಿದ ವರದಿಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳನ್ನು ತಿಳಿಸುವ ವಿವರ |
ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಸಂಬಂಧಿಸಿದಂತೆ ಯಾವುದೇ ಮಹಾಲೇಖಪಾಲರ ಮತ್ತು ಸಂಸದೀಯ ವ್ಯವಹಾರಗಳ ಸಮಿತಿಯ ವರದಿಯಾಗಲಿ ಇರುವುದಿಲ್ಲ |
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾರ್ಗದರ್ಶಿ ಸೂತ್ರ 1.6 |
ನಾಗರಿಕ ಸನ್ನದು |
ಪ್ರಧಾನಮಂತ್ರಿಗಳ ಕಾರ್ಯಾಲಯವು ನೇರವಾಗಿ ಯಾವುದೇ ಸಾರ್ವಜನಿಕ ಸೇವೆಯನ್ನು ಒದಗಿಸುವುದಿಲ್ಲ. ಹೀಗಾಗಿ, ಈ ಕಾರ್ಯಾಲಯಕ್ಕೆ `ನಾಗರಿಕ ಸನ್ನದು’ (ಸಿಟಿಜನ್ಸ್ ಚಾರ್ಟರ್) ಅನ್ವಯಿಸುವುದಿಲ್ಲ |
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾರ್ಗದರ್ಶಿ ಸೂತ್ರ 1.7 |
ವಿವೇಚೆನಾಧಿಕಾರದ ಮೂಲಕ ಮತ್ತು ಸಾಮಾನ್ಯ ಅಧಿಕಾರದ ಮೂಲಕ ನೀಡಿದ ಅನುದಾನ/ಮಂಜೂರಾತಿಗಳು ರಾಜ್ಯ ಸರಕಾರಗಳಿಗೆ/ಸ್ವಯಂಸೇವಾ ಸಂಸ್ಥೆಗಳಿಗೆ/ಇನ್ನಿತರರಿಗೆ ಸಚಿವಾಲಯಗಳು/ಇಲಾಖೆಗಳು ವಿವೇಚನಾಧಿಕಾರ/ಸಾಮಾನ್ಯ ಅಧಿಕಾರ ಬಳಸಿ ನೀಡಿರುವ ಎಲ್ಲ ಅನುದಾನ/ಮಂಜೂರಾತಿಗಳ ವಿವರ |
ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ಸಂಬಂಧಿಸಿದ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ ಮತ್ತು ರಾಷ್ಟ್ರೀಯ ರಕ್ಷಣಾ ನಿಧಿಗೆ ಸಂಬಂಧಿಸಿದ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ ರಾಷ್ಟ್ರೀಯ ರಕ್ಷಣಾ ನಿಧಿಗೆ ಸಂಬಂಧಿಸಿದ ವಿವರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ |
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾರ್ಗದರ್ಶಿ ಸೂತ್ರ 1.8 |
ಪ್ರಧಾನಮಂತ್ರಿಗಳು ಮತ್ತು ಜಂಟಿ ಕಾರ್ಯದರ್ಶಿಗಳು ಹಾಗೂ ಅವರಿಗಿಂತ ಮೇಲ್ಪಟ್ಟ ಅಧಿಕಾರಿಗಳು ಕೈಗೊಂಡ ಪ್ರವಾಸಗಳ ವಿವರ |
ಮಾನ್ಯ ಪ್ರಧಾನಮಂತ್ರಿಗಳು 26.05.2014ರಿಂದ ಈಚೆಗೆ ಕೈಗೊಂಡ ವಿದೇಶೀ ಪ್ರವಾಸಗಳ ವಿವರಗಳು ಮತ್ತು ಇದಕ್ಕಾಗಿ ಆಗಿರುವ ಖಾಸಗಿ ವಿಮಾನ ಪ್ರಯಾಣದ ವೆಚ್ಚದ ಮಾಹಿತಿಗಳು ಇಲ್ಲಿ ಲಭ್ಯ. ಗೃಹ ವ್ಯವಹಾರಗಳ ಸಚಿವಾಲಯದ ಅನುದಾನಕ್ಕಾಗಿ ವಿವರವಾದ ಡಿಮ್ಯಾಂಡ್– ಪ್ರಧಾನ ಮಂತ್ರಿಯ ವಿಮಾನದ ನಿರ್ವಹಣೆ- ಇತರ ಶುಲ್ಕಗಳು. ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ಕೈಗೊಂಡಿದ್ದ ವಿದೇಶೀ ಪ್ರವಾಸಗಳ ವೈಮಾನಿಕ ವೆಚ್ಚಸಹಿತ ವಿವರಗಳು [ 1434KB ] ಇಲ್ಲಿ ಲಭ್ಯ. ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಕೈಗೊಂಡ ವಿದೇಶೀ ಪ್ರವಾಸಗಳ ವೈಮಾನಿಕ ವೆಚ್ಚಸಹಿತ ವಿವರಗಳು [ 493KB ] ಇಲ್ಲಿ ಲಭ್ಯ. ಪ್ರಧಾನಮಂತ್ರಿಗಳು ಕೈಗೊಂಡ ಸ್ಥಳೀಯ ಪ್ರವಾಸಗಳು: ಮಾನ್ಯ ಪ್ರಧಾನಮಂತ್ರಿಗಳು ಸ್ಥಳೀಯವಾಗಿ ನಡೆಸುವ ಖರ್ಚುವೆಚ್ಚಗಳನ್ನು ರಕ್ಷಣಾ ಸಚಿವಾಲಯ ಭರಿಸುತ್ತದೆ. ಪ್ರಧಾನಮಂತ್ರಿಗಳು 26.05.2016ರಿಂದ ಈಚೆಗೆ ಕೈಗೊಂಡ ಸ್ಥಳೀಯ ಪ್ರವಾಸಗಳ ಸಮಗ್ರ ವಿವರ ಪಿಎಂಒ ವೆಬ್ಸೈಟ್ನಲ್ಲಿ ಲಭ್ಯ.
|
(1)(ಬಿ) ಅನುಚ್ಛೇದದ ಅಡಿಯಲ್ಲಿ | ವಿಧಿಯ ಅಗತ್ಯಗಳು | ಪ್ರಕಟಣೆ |
---|