ರಾಷ್ಟ್ರೀಯ ರಕ್ಷಣಾ ಪ್ರಯತ್ನಗಳನ್ನು ಉತ್ತೇಜಿಸಲು ಮತ್ತು ಅವುಗಳ ಬಳಕೆಗೆ ನಿರ್ಧರಿಸಲು ನಗದು ಮತ್ತು ದಯೆಯ ರೂಪದ ಸ್ವಯಂಪ್ರೇರಿತ ದೇಣಿಗೆಯನ್ನು ಸ್ವೀಕರಿಸಲು ರಾಷ್ಟ್ರೀಯ ರಕ್ಷಣಾ ನಿಧಿಯನ್ನು ಸ್ಥಾಪಿಸಲಾಯಿತು. ಈ ನಿಧಿಯನ್ನು ಸಶಸ್ತ್ರ ಪಡೆಗಳ (ಅರೆ ಸೇನಾ ಪಡೆ ಸೇರಿದಂತೆ) ಸದಸ್ಯರು ಮತ್ತು ಅವರ ಅವಲಂಬಿತರ ಕಲ್ಯಾಣಕ್ಕಾಗಿ ಬಳಸಲಾಗುವುದು. ಈ ನಿಧಿಯನ್ನು ಪ್ರಧಾನಮಂತ್ರಿ ಅಧ್ಯಕ್ಷರಾಗಿರುವ ಮತ್ತು ರಕ್ಷಣೆ, ಹಣಕಾಸು, ಗೃಹ ಸಚಿವರು ಸದಸ್ಯರಾಗಿರುವ ಕಾರ್ಯಕಾರಿ ಸಮಿತಿಯಿಂದ ನಿರ್ವಹಿಸಲಾಗುವುದು. ಹಣಕಾಸು ಸಚಿವರು ಈ ನಿಧಿಯ ಖಜಾಂಚಿಯಾಗಿರುವರು ಮತ್ತು ಪ್ರಧಾನಮಂತ್ರಿಯವರ ಕಾರ್ಯಾಲಯದ ಜಂಟಿ ಕಾರ್ಯದರ್ಶಿಯವರು ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವರು. ನಿಧಿಯ ಖಾತೆಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಇಡಲಾಗುವುದು. ಈ ನಿಧಿಯು ಸಂಪೂರ್ಣವಾಗಿ ಸ್ವಯಂಪ್ರೇರಿತ ದೇಣಿಗೆಯನ್ನು ಅವಲಂಬಿಸಿದ್ದು ಇದಕ್ಕೆ ಯಾವುದೇ ಆಯವ್ಯಯದ ಬೆಂಬಲ ಇರುವುದಿಲ್ಲ. ಈ ನಿಧಿಗೆ ಆನ್ ಲೈನ್ ಮೂಲಕ ಕೂಡ ದೇಣಿಗೆ ಸ್ವೀಕರಿಸಲಾಗುತ್ತದೆ. ಅಂಥ ದೇಣಿಗೆಯನ್ನು pmindia.nic.in, pmindia.gov.in ಅಂತರ್ಜಾಲ ತಾಣ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ನ www.onlinesbi.com ಅಂತರ್ಜಾಲ ತಾಣದ ಮೂಲಕವೂ ಸಲ್ಲಿಸಬಹುದಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್, ಸಾಂಸ್ಥಿಕ ವಿಭಾಗ, 4ನೇ ಮಹಡಿ, ಸಂಸದ್ ಮಾರ್ಗ, ನವದೆಹಲಿಯಲ್ಲಿರುವ ಸ್ವೀಕೃತಿ ಖಾತೆಯ ಸಂಖ್ಯೆ 11084239799 ಆಗಿದೆ. ಈ ನಿಧಿಗೆ ಶಾಶ್ವತ ಖಾತೆ ಸಂಖ್ಯೆ (PAN) AAAGN0009F ನೀಡಲಾಗಿದೆ.
ರಾಷ್ಟ್ರೀಯ ರಕ್ಷಣಾ ನಿಧಿಯ ಕಳೆದ ಐದು ವರ್ಷಗಳ ಆದಾಯ ಮತ್ತು ವೆಚ್ಚಗಳು ಈ ಕೆಳಗಿನಂತಿವೆ:-
ವರ್ಷ | ವೆಚ್ಚ | ಜಮೆ | ಸಿಲ್ಕು |
---|---|---|---|
31.03.2020 | 54.62 | 103.04 | 1249.96 |
31.03.2021 | 52.51 | 87.04 | 1284.49 |
31.03.2022 | 70.75 | 90.64 | 1304.38 |
31.03.2023 | 77.76 | 110.74 | 1337.36 |
31.03.2024 | 60.43 | 119.29 | 1396.22 |
ರಾಷ್ಟ್ರೀಯ ರಕ್ಷಣಾ ನಿಧಿಯಡಿಯ ಯೋಜನೆಗಳು
1. ಸಶಸ್ತ್ರ ಪಡೆಗಳ ಮತ್ತು ಅರೆ ಮಿಲಿಟರಿ ಪಡೆಗಳ ಮೃತ ಸಿಬ್ಬಂದಿಯ ವಿಧವೆಯರು ಮತ್ತು ಮಕ್ಕಳ ತಾಂತ್ರಿಕ ಮತ್ತು ಸ್ನಾತಕೋತ್ತರ ಶಿಕ್ಷಣ ಉತ್ತೇಜಿಸಲು ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದಂತೆ ಯೋಜನೆಯನ್ನು ರಕ್ಷಣಾ ಸಚಿವಾಲಯ ಮಾಜಿ ಯೋಧರ ಕಲ್ಯಾಣ ಇಲಾಖೆ ಜಾರಿಗೊಳಿಸುತ್ತದೆ. ಅರೆ ಸೇನಾ ಪಡೆಗಳ ಮತ್ತು ರೈಲ್ವೆ ಸುರಕ್ಷತೆ ಪಡೆ ಸಿಬ್ಬಂದಿಗೆ ಸಂಬಂಧಿಸಿದಂತೆ ಈ ಯೋಜನೆಯನ್ನು ಅನುಕ್ರಮವಾಗಿ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ರೈಲ್ವೆ ಸಚಿವಾಲಯ ಅನುಷ್ಠಾನಗೊಳಿಸುತ್ತದೆ.
ರಾಷ್ಟ್ರೀಯ ರಕ್ಷಣಾ ನಿಧಿಯಲ್ಲಿ ಜಾರಿ ಮಾಡಿರುವ “ಪ್ರಧಾನಮಂತ್ರಿಯವರ ವಿದ್ಯಾರ್ಥಿ ವೇತನ ಯೋಜನೆ”ಯ ಮುಖ್ಯ ಉದ್ದೇಶಗಳು
1. ಈ ಯೋಜನೆ ಸಶಸ್ತ್ರ ಪಡೆಗಳಿಗೆ (ಅರೆ ಮಿಲಿಟರಿ ಪಡೆಗಳು ಸೇರಿದಂತೆ) ಅನ್ವಯಿಸುತ್ತದೆ. ಮಾಸಿಕ ವಿದ್ಯಾರ್ಥಿ ವೇತನವನ್ನು (ಎ) ಮಾಜಿ ಯೋಧರ (ಅಧಿಕಾರಿಗಳ ಶ್ರೇಣಿಯ ಕೆಳಗಿನವರಿಗೆ ಮಾತ್ರ) (ಬಿ) ಅವರ ವಿಧವೆಯರ, (ಸಿ) ಕರ್ತವ್ಯದ ಸ್ವರೂಪದ ಕಾರಣಗಳಿಗಾಗಿ ಮಡಿದ ಯೋಧರ ವಿಧವೆಯರಿಗೆ ಮತ್ತು (ಡಿ) ಅರೆ ಸೇನಾ ಪಡೆಗಳ ಮತ್ತು ರೈಲ್ವೆ ಸುರಕ್ಷತೆ ಪಡೆಗಳ ಸೇವಾ ಸಿಬ್ಬಂದಿಯ ಮಕ್ಕಳು ಮತ್ತು ವಿಧವೆಯರಿಗೆ ಮಂಜೂರು ಮಾಡಲಾಗುತ್ತದೆ. ವಿದ್ಯಾರ್ಥಿ ವೇತನವು ತಾಂತ್ರಿಕ ಶಿಕ್ಷಣ ಸಂಸ್ಥೆಗಳ ವ್ಯಾಸಂಗಕ್ಕಾಗಿ (ವೈದ್ಯಕೀಯ, ದಂತವೈದ್ಯಕೀಯ, ಪಶುವೈದ್ಯಕೀಯ, ಎಂಜಿನಿಯರಿಂಗ್, ಎಂ.ಬಿ.ಎ, ಎಂ.ಸಿ.ಎ, ಮತ್ತು ಎ.ಐ.ಸಿ.ಟಿ.ಇ/ಯುಜಿಸಿ ಮಾನ್ಯತೆ ಪಡೆದ ಇತರ ತತ್ಸಮಾನ ತಾಂತ್ರಿಕ ವೃತ್ತಿಪರ ಕೋರ್ಸ್ ಗಳಿಗೆ ದೊರೆಯುತ್ತದೆ. ಕರ್ತವ್ಯದ ಸ್ವರೂಪದ ಕಾರಣಗಳಿಗಾಗಿ ಮಡಿದ ಯೋಧರ ವಿಧವೆಯರ ಮಕ್ಕಳಿಗೆ ಮತ್ತು ವಿಧವೆಯರಿಗೆ ಯಾವುದೇ ಶ್ರೇಣಿಯ ನಿರ್ಬಂಧವಿಲ್ಲದೆ ಮೇಲೆ ತಿಳಿಸಲಾದ (ಬಿ) ಮತ್ತು (ಸಿ) ಅನ್ವಯಿಸುತ್ತದೆ. ಈ ಯೋಜನೆಯು ಎಲ್ಲ ಅರೆ ಸೇನಾ ಪಡೆಗಳ ಮಕ್ಕಳಿಗೂ ವಿಸ್ತರಿಸಲಾಗಿದೆ. ಈ ಯೋಜನೆಯಡಿ 4000 ಹೊಸ ವಿದ್ಯಾರ್ಥಿ ವೇತನವನ್ನು ಪ್ರತಿವರ್ಷ ರಕ್ಷಣಾ ಸಚಿವಾಲಯ ನಿಯಂತ್ರಿಸುವ ಪಡೆಗಳ ಮಾಜಿ ಯೋಧರ ಮಕ್ಕಳಿಗೂ ನೀಡಲಾಗುತ್ತದೆ, ಗೃಹ ವ್ಯವಹಾರಗಳ ಸಚಿವಾಲಯ ನಿಯಂತ್ರಿಸುವ ಪಡೆಗಳ ಮಕ್ಕಳಿಗೆ 910 ಹೊಸ ವಿದ್ಯಾರ್ಥಿ ವೇತನ ಮತ್ತು ರೈಲ್ವೆ ಸಚಿವಾಲಯ ನಿಯಂತ್ರಿಸುವ ಪಡೆಗಳ ಯೋಧರ ಮಕ್ಕಳಿಗೆ 90 ಹೊಸ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಆದಾಗ್ಯೂ, 2015-2016ರ ಶೈಕ್ಷಣಿಕ ವರ್ಷದಿಂದ ಹೊಸ ವಿದ್ಯಾರ್ಥಿ ವೇತನದ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ರಕ್ಷಣಾ ಸಚಿವಾಲಯ ನಿಯಂತ್ರಿಸುವ ಪಡೆಗಳ ಮಾಜಿ ಯೋಧರ ಮಕ್ಕಳಿಗೆ 5500ಕ್ಕೆ, ಗೃಹ ಸಚಿವಾಲಯ ನಿಯಂತ್ರಿಸುವ ಪಡೆಗಳ ಯೋಧರ ಮಕ್ಕಳಿಗೆ 2000ಕ್ಕೆ ಮತ್ತು ರೈಲ್ವೆ ಸಚಿವಾಲಯ ನಿಯಂತ್ರಿಸುವ ಪಡೆಗಳ ಯೋಧರ ಮಕ್ಕಳಿಗೆ 150ಕ್ಕೆ ಹೆಚ್ಚಳ ಮಾಡಲಾಗಿದೆ. ಪ್ರಾರಂಭದಲ್ಲಿ ವಿದ್ಯಾರ್ಥಿವೇತನ ದರವು ಮಾಸಿಕ ರೂ. 1250 ಗಂಡು ಮಕ್ಕಳಿಗೆ ಮತ್ತು ರೂ. 1500 ಹೆಣ್ಣುಮಕ್ಕಳಿಗೆ ಇದೆ. ವಾರ್ಷಿಕ ವಿದ್ಯಾರ್ಥಿ ವೇತನದ ದರಗಳನ್ನು ಪರಿಷ್ಕರಿಸಲಾಗಿದ್ದು ಮಾಸಿಕ ಬಾಲಕರಿಗೆ 2000ರೂ., ಮತ್ತು ಬಾಲಕಿಯರಿಗೆ 2250ರೂ. ನೀಡಲಾಗುತ್ತದೆ.
2. ಸಿಬ್ಬಂದಿಯ ಮತ್ತು ಅವರ ಕುಟುಂಬದವರ ಉಪಯೋಗಕ್ಕಾಗಿ ವಿವಿಧ ಕಲ್ಯಾಣ ಚಟುವಟಿಕೆಗಳನ್ನು ಕೈಗೊಳ್ಳಲು ಎಸ್.ಪಿ.ಜಿ. ಕುಟುಂಬಗಳ ಕಲ್ಯಾಣ ನಿಧಿಗೆ ವಾರ್ಷಿಕ 15 ಲಕ್ಷ ರೂಪಾಯಿಗಳ ಅನುದಾನವನ್ನು ಎನ್.ಡಿ.ಎಫ್.ನಿಂದ ಮಂಜೂರು ಮಾಡಲಾಗುತ್ತದೆ.
3. ರಕ್ಷಣಾ ಇಲಾಖೆಯ ವಾರ್ಷಿಕವಾಗಿ ಧನಸಹಾಯವನ್ನು ಮೂರು ರಕ್ಷಣಾ ಸೇವೆಗಳ (ಭೂಪಡೆ , ನೌಕಾಪಡೆ ಮತ್ತು ವಾಯುಪಡೆಯ) ಮತ್ತು ಕೋಸ್ಟ್ ಗಾರ್ಡ್ ನ ವೈಯಕ್ತಿಕ ಪುಸ್ತಕಗಳಿಗೆ ಮತ್ತು ಇತರ ಓದುವ ವಸ್ತುಗಳನ್ನು ಖರೀದಿಸಲು ಬಿಡುಗಡೆ ಮಾಡಲಾಗುತ್ತದೆ. ಅಸ್ತಿತ್ವದಲ್ಲಿರುವ ಮಾನ್ಯತೆಯು ಭೂಪಡೆಗೆ ರೂ .55 ಲಕ್ಷ, ವಾಯುಪಡೆಗೆ ರೂ .37 ಲಕ್ಷ, ರೂ. 32 ಲಕ್ಷ ನೌಕಾಪಡೆ ಮತ್ತು ಕೋಟ್ ಗಾರ್ಡ್ ಒಟ್ಟು ರೂ. 2.50 ಲಕ್ಷ ರೂ. 2017-18ರ ಹಣಕಾಸು ವರ್ಷಕ್ಕೆ 126.50 ಲಕ್ಷದ ಇತ್ತೀಚಿನ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
(11.07.2024 ರಂದು ಕೊನೆಯದಾಗಿ ಅಪ್ ಡೇಟ್ ಮಾಡಲಾಗಿದೆ )