ಕೋವಿಡ್-19 ಸಾಂಕ್ರಾಮಿಕದಂತಹ ಯಾವುದೇ ತುರ್ತು ಅಥವಾ ವಿಪತ್ತನ್ನು ಎದುರಿಸಲು ಮತ್ತು ಸಂತ್ರಸ್ತರಿಗೆ ಪರಿಹಾರ ವಸ್ತುಗಳನ್ನು ಒದಗಿಸಲು ಮೀಸಲಾದ ನಿಧಿಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು,ಮತ್ತು ಪೀಡಿತರಿಗೆ ಪರಿಹಾರವನ್ನು ಒದಗಿಸುವ ಹೆಸರಿನಲ್ಲಿ ಸಾರ್ವಜನಿಕ ಚ್ಯಾರಿಟೇಬಲ್ ಟ್ರಸ್ಟ್ ‘ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ ನಿಧಿ (ಪಿಎಂ ಕೇರ್ಸ್ ಫಂಡ್ )’ ಸ್ಥಾಪಿಸಲಾಗಿದೆ. ಪಿಎಂ ಕೇರ್ಸ್ ಫಂಡ್ ಅನ್ನು ಸಾರ್ವಜನಿಕ ಚ್ಯಾರಿಟೇಬಲ್ ಟ್ರಸ್ಟ್ ಆಗಿ ನೋಂದಾಯಿಸಲಾಗಿದೆ. ಪಿಎಂ ಕೇರ್ಸ್ ಫಂಡ್ನಟ್ರಸ್ಟ್ ಡೀಡ್ ಅನ್ನು ನೋಂದಣಿ ಕಾಯಿದೆ, 1908 ರ ಅಡಿಯಲ್ಲಿ 27ನೇ ಮಾರ್ಚ್, 2020 ರಂದು ನವದೆಹಲಿಯಲ್ಲಿ ನೋಂದಾಯಿಸಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ ಆನ್ಲೈನ್ನಲ್ಲಿ ದೇಣಿಗೆ ನೀಡಲು.
ಉದ್ದೇಶ:
ಈ ನಿಧಿಯ ಉದ್ದೇಶವು ಮಾನವೀಯ ನೆರವು ಅಥವಾ ಪರಿಹಾರ ಸೌಲಭ್ಯಗಳು ಮತ್ತು ಆರೋಗ್ಯ-ನೆರವು ಅಥವಾ ಔಷಧೀಯ ಸೌಲಭ್ಯಗಳ ಒದಗಿಸುವಿಕೆ ಅಥವಾ ನಿರ್ವಹಣೆ ಸೇರಿದಂತೆ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಅಥವಾ ಯಾವುದೇ ಇತರ ತುರ್ತು, ವಿಪತ್ತು ಅಥವಾ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಧಿ ಅಥವಾ ನಿರ್ವಹಣೆ, ವಿಪತ್ತು ಅಥವಾ ಸಾಂಕ್ರಾಮಿಕ ಸಮಯದಲ್ಲಿ ಇತರ ಅಗತ್ಯ ಮೂಲಸೌಕರ್ಯ, ಇತರ ಸಹಾಯವನ್ನು ಒದಗಿಸುವುದು.
ಈ ನಿಧಿಯ ಹಣದ ಮೂಲಕ ಸಂತ್ರಸ್ತ ಜನರಿಗೆ ಹಣಕಾಸಿನ ನೆರವು ನೀಡಲು, ಹಣವನ್ನು ನೀಡಲು ಅಥವಾ ತಲುಪಲು ಟ್ರಸ್ಟಿಗಳ ಮಂಡಳಿಯು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಪಿಎಂ ಕೇರ್ ಫಂಡ್ಗಳನ್ನು ಮೇಲಿನವುಗಳಿಗೆ ಹೊಂದಿಕೆಯಾಗದ ಯಾವುದೇ ಇತರ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ.
ಟ್ರಸ್ಟ್ ಸ್ಥಾಪನೆ:
ಪ್ರಧಾನಮಂತ್ರಿಯವರು ಪಿಎಂ ಕೇರ್ಸ್ ನಿಧಿಯ ಪದನಿಮಿತ್ತ ಅಧ್ಯಕ್ಷರಾಗಿದ್ದಾರೆ ಮತ್ತು ಭಾರತ ಸರ್ಕಾರದ ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಸಚಿವರು ನಿಧಿಯ ಪದನಿಮಿತ್ತ ಟ್ರಸ್ಟಿಗಳಾಗಿದ್ದಾರೆ.
ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷರು (ಪ್ರಧಾನಿ) ಮೂರು ಟ್ರಸ್ಟಿಗಳನ್ನು ಟ್ರಸ್ಟಿಗಳ ಮಂಡಳಿಗೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ, ಅವರು ಸಂಶೋಧನೆ, ಆರೋಗ್ಯ, ವಿಜ್ಞಾನ, ಸಮಾಜಕಾರ್ಯ, ಕಾನೂನು, ಸಾರ್ವಜನಿಕ ಆಡಳಿತ ಮತ್ತು ಲೋಕೋಪಕಾರ ಕ್ಷೇತ್ರಗಳಲ್ಲಿ ಪ್ರಖ್ಯಾತ ವ್ಯಕ್ತಿಗಳಾಗಿರಬೇಕು.
ಟ್ರಸ್ಟಿಯಾಗಿ ನೇಮಕಗೊಂಡ ಯಾವುದೇ ವ್ಯಕ್ತಿ ವಿಶ್ವಾಸಾರ್ಹ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕು.
ಇತರೆ ವಿವರಗಳು:
ನಿಧಿಯು ಸಂಪೂರ್ಣವಾಗಿ ವ್ಯಕ್ತಿಗಳು/ಸಂಸ್ಥೆಗಳಿಂದ ಸ್ವಯಂಪ್ರೇರಿತ ಕೊಡುಗೆಗಳನ್ನು ಒಳಗೊಂಡಿರುತ್ತದೆ ಮತ್ತು ಯಾವುದೇ ಬಜೆಟ್ ಬೆಂಬಲವನ್ನು ಪಡೆಯುವುದಿಲ್ಲ. ಮೇಲೆ ತಿಳಿಸಿದ ಉದ್ದೇಶಗಳನ್ನು ಪೂರೈಸಲು ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ.
ಪಿಎಂ ಕೇರ್ಸ್ ಫಂಡ್ಗೆ ದೇಣಿಗೆಗಳು ಆದಾಯ ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ 100% ವಿನಾಯಿತಿಗಾಗಿ 80G ಪ್ರಯೋಜನಗಳಿಗೆ ಅರ್ಹತೆ ಪಡೆಯುತ್ತವೆ.ಪಿಎಂ ಕೇರ್ಸ್ ನಿಧಿಗೆ ದೇಣಿಗೆಗಳನ್ನು ಕಂಪನಿಗಳ ಕಾಯಿದೆ, 2013 ರ ಅಡಿಯಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ ಆರ್) ವೆಚ್ಚವಾಗಿ ಪರಿಗಣಿಸಲು ಅರ್ಹತೆ ಪಡೆಯುತ್ತದೆ.
ಪಿಎಂ ಕೇರ್ಸ್ ಫಂಡ್ ಎಫ್ಸಿಆರ್ಎ ಅಡಿಯಲ್ಲಿ ವಿನಾಯಿತಿ ಪಡೆದಿದೆ ಮತ್ತು ವಿದೇಶಿ ದೇಣಿಗೆ ಸ್ವೀಕರಿಸಲು ಪ್ರತ್ಯೇಕ ಖಾತೆಯನ್ನು ತೆರೆಯಲಾಗಿದೆ. ಇದು ಪಿಎಂ ಕೇರ್ಸ್ ಫಂಡ್ಗೆ ವಿದೇಶದಲ್ಲಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ದೇಣಿಗೆ ಮತ್ತು ಕೊಡುಗೆಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಇದು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂಎನ್ ಆರ್ ಎಫ್) ಸಂಬಂಧಿಸಿದಂತೆ ಸ್ಥಿರವಾಗಿದೆ. ಪಿಎಂಎನ್ ಆರ್ ಎಫ್ ಸಹ 2011 ರಿಂದ ಸಾರ್ವಜನಿಕ ಟ್ರಸ್ಟ್ ಆಗಿ ವಿದೇಶಿ ಕೊಡುಗೆಗಳನ್ನು ಸ್ವೀಕರಿಸಿದೆ.
2020-21ರ ಅವಧಿಯಲ್ಲಿ ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ 7013.99 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ
2019-20 | ರಸೀದಿಯನ್ನು ನೋಡಿ [ 39KB ] | 3076.62 |
2020-21 | ರಸೀದಿಯನ್ನು ನೋಡಿ [ 294KB ] | 10990.17 |
2021-22 | ರಸೀದಿಯನ್ನು ನೋಡಿ [ 1018KB ] | 9131.94 |
2022-23 | ರಸೀದಿಯನ್ನು ನೋಡಿ [ 519KB ] | 6723.06 | ವರ್ಷ | ರಶೀದಿ ಮತ್ತು ಪಾವತಿ ಖಾತೆಗಳನ್ನು ವೀಕ್ಷಿಸಿ | ಒಟ್ಟು ಮೊತ್ತ (ತಾಜಾ ಕೊಡುಗೆಗಳು, ಬಡ್ಡಿ ಆದಾಯ) (ರೂ.ಕೋಟಿಯಲ್ಲಿ) |
---|
ಖಾತೆಯ ಹೆಸರು: ಪಿಎಂ ಕೇರ್ಸ್
ಖಾತೆ ಸಂಖ್ಯೆ: 2121PM20202
ಐ.ಎಫ್.ಎಸ್. ಸಿ.ಕೋಡ್: SBIN0000691
UPI: pmcares@sbi
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,
ನವದೆಹಲಿ ಮುಖ್ಯ ಶಾಖೆ