ಪಾರದರ್ಶಕತೆ ಮತ್ತು ಹೊಣೆಗಾರಿಕೆ ಎಂಬುದು ಯಾವುದೇ ಜನಪರ ಸರ್ಕಾರದ ಎರಡು ಪ್ರಮುಖ ಮೂಲೆಗಲ್ಲುಗಳಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಂಬಿದ್ದಾರೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆಗಳು ಜನರನ್ನು ಸರ್ಕಾರದ ಹತ್ತಿರಕ್ಕೆ ತರುವುದಲ್ಲದೆ ಅವರನ್ನು ಸಮಾನರನ್ನಾಗಿ ಮಾಡಿ, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಭಾಗವನ್ನಾಗಿ ಮಾಡುತ್ತದೆ. ದಾಖಲೆಯ ನಾಲ್ಕು ಅವಧಿಗೆ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದ ನರೇಂದ್ರ ಮೋದಿ ಅವರು ಮುಕ್ತ ಮತ್ತು ಪಾದರ್ಶಕ ಆಡಳಿತಕ್ಕೆ ಬದ್ಧರಾಗಿದ್ದಾರೆ.
ನಿಯಮಗಳು ಮತ್ತು ನೀತಿಗಳನ್ನು ಅವರು ಹವಾನಿಯಂತ್ರಿತ ಕೊಠಡಿಯಲ್ಲಿ ರೂಪಿಸಲಿಲ್ಲ ಬದಲಾಗಿ ಜನರ ಮಧ್ಯೆ ರೂಪಿಸಿದ್ದಾರೆ. ಕರಡು ನೀತಿಗಳನ್ನು ಅಂತರ್ಜಾಲ ತಾಣಗಳಲ್ಲಿ ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ ಮತ್ತು ಪ್ರತಿಕ್ರಿಯೆಗಲನ್ನು ಪಡೆದಿದ್ದಾರೆ. ಇದೇ ವೇಳೆ ಗರೀಬ್ ಕಲ್ಯಾಣ ಮೇಳದಂಥ ಉಪಕ್ರಮಗಳಿಂದ ಅಭಿವೃದ್ಧಿಯ ಫಲ ನೇರವಾಗಿ ಯಾವುದೇ ತಡೆ ಇಲ್ಲದೆ ಬಡವರಿಗೆ ತಲುಪುವಂತೆ ಮಾಡಿದ್ದಾರೆ. ಮತ್ತೊಂದು ಉದಾಹರಣೆ ಎಂದರೆ ಒಂದು ದಿನದ ಆಡಳಿತ. ಇದು ನಾಗರಿಕರಿಗೆ ನಿಗದಿತ ಕಾಲಮಿತಿಯೊಳಗೆ ಇ -ಆಡಳಿತ ನೆರವಿನಿಂದ ಸೇವೆಯ ಖಾತ್ರಿ ಒದಗಿಸುವುದಾಗಿದೆ. ಎಲ್ಲಾ ಸರ್ಕಾರಿ ಅಥವಾ ನಾಗರಿಕ ಸೇವೆಗಳನ್ನು ನಾಗರಿಕ ಸನ್ನದಿನಡಿಯಲ್ಲಿ ಸೇರ್ಪಡೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಪಾರದರ್ಶಕತೆಯ ಬಲವಾದ ನಂಬಿಕೆಯೊಂದಿಗೆ ತಮ್ಮ ಬದ್ಧತೆಯನ್ನು ಅವರು ಪ್ರದರ್ಶಿಸಿದ್ದರಿಂದಲೇ ಭಾರತದ ಜನತೆಗೆ ಜನ ಕೇಂದ್ರಿತ ಮತ್ತು ಪಾರದರ್ಶಕ ಆಡಳಿತದ ಯುಗ ಆರಂಭವಾಗಿದೆ.