ಈ ಅಂತರ್ಜಾಲ ತಾಣದಲ್ಲಿ ದಾಖಲಿಸಲಾಗಿರುವ ಯಾವುದೇ ಮಾಹಿತಿಯನ್ನು ಉಚಿತವಾಗಿ ಪುನರ್ ಬಳಕೆ ಮಾಡಿಕೊಳ್ಳಬಹುದು. ಆದರೆ ಈ ಮಾಹಿತಿಯನ್ನು ನಿಖರವಾಗಿ ಮರು ಬಳಕೆ ಮಾಡಬೇಕು ಮತ್ತು ಇದನ್ನು ವ್ಯತಿರಿಕ್ತವಾಗಿ ಅಥವಾ ತಪ್ಪುತಿಳಿವಳಿಕೆ ಮೂಡಿಸುವಂತೆ ಬಳಸಬಾರದು. ಎಲ್ಲೆಲ್ಲಿ ಈ ಮಾಹಿತಿಯನ್ನು ಪ್ರಕಟಿಸಲಾಗುತ್ತದೆಯೋ ಅಥವಾ ಇತರರಿಗೆ ನೀಡಲಾಗುತ್ತದೆಯೋ ಅಂಥ ಸಂದರ್ಭದಲ್ಲಿ ಆಕರದ ಉಲ್ಲೇಖವನ್ನು ಎದ್ದುಕಾಣುವಂತೆ ಹಾಕಬೇಕು. ಆದಾಗ್ಯೂ ಮೂರನೇ ವ್ಯಕ್ತಿಯ ಹಕ್ಕುಸ್ವಾಮ್ಯಕ್ಕೆ ಬರುತ್ತದೆಂದು ಗುರುತಿಸಲಾದ ಯಾವುದೇ ಮಾಹಿತಿಯನ್ನು ಬಳಸಲು ಅವಕಾಶ ಇರುವುದಿಲ್ಲ. ಅಂಥ ಮಾಹಿತಿಯನ್ನು ಮರು ಬಳಕೆ ಮಾಡುವ ಮುನ್ನ ಇಲಾಖೆಯಿಂದ/ಹಕ್ಕುಸ್ವಾಮ್ಯ ಹೊಂದಿರುವ ವ್ಯಕ್ತಿಯಿಂದ ಪೂರ್ವಾನುಮತಿ ಪಡೆಯುವುದು ಅತ್ಯಗತ್ಯವಾಗಿರುತ್ತದೆ.
ಖಾಸಗಿತನದ ನೀತಿ
Tಈ ಅಂತರ್ಜಾಲ ತಾಣ ನಾವು ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸಲು ಅವಕಾಶ ನೀಡುವಂಥ (ಅಂದರೆ ಹೆಸರು, ದೂರವಾಣಿ ಸಂಖ್ಯೆ ಅಥವಾ ಇ-ಮೇಲ್ ವಿಳಾಸ) ಯಾವುದೇ ನಿರ್ದಿಷ್ಟ ವೈಯಕ್ತಿಕ ಮಾಹಿತಿಯನ್ನು ತಂತಾನೇ ಪಡೆಯುವುದಿಲ್ಲ, ಆದರೆ ನೀವು ನಮ್ಮ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿದಾಗ ನಿಮ್ಮ ವೈಯಕ್ತಿಕ ಮಾಹಿತಿ ಅಂದರೆ ಹೆಸರು ಅಥವಾ ವಿಳಾಸ ಇತ್ಯಾದಿಯನ್ನು ನಮಗೆ ನೀಡುವ ಆಯ್ಕೆಯನ್ನು ಮಾಡಿದಲ್ಲಿ ನಾವು ಅದನ್ನು ನಿಮ್ಮ ಮಾಹಿತಿಯ ಕೋರಿಕೆಯನ್ನು ಪೂರೈಸಲು ಮಾತ್ರವೇ ಬಳಸುತ್ತೇವೆ. ಮಾನ್ಯ ಪ್ರಧಾನಮಂತ್ರಿಗಳೊಂದಿಗೆ ಸಂವಾದ ನಡೆಸುವ ವಿಭಾಗ ಬಳಸಲು, ಈ ಅಂತರ್ಜಾಲ ತಾಣದಲ್ಲಿ ಬಳಕೆದಾರರ ನೋಂದಣಿ ಅವಶ್ಯಕವಾಗಿದೆ. ಹೀಗೆ ಪಡೆಯಲಾದ ಮಾಹಿತಿಯನ್ನು ಸಂವಾದ ಒದಗಿಸಲು ಬಳಸಲಾಗುತ್ತದೆ.
ವೈಯಕ್ತಿಕವಾಗಿ ಗುರುತಿಸಬಹುದಾದಂಥ ಯಾವುದೇ ಮಾಹಿತಿಯನ್ನು ನಾವು ಯಾವುದೇ ಮೂರನೇ ವ್ಯಕ್ತಿಗೆ (ಖಾಸಗಿ/ಸಾರ್ವಜನಿಕ) ಮಾರಾಟ ಮಾಡುವುದಾಗಲೀ ಅಥವಾ ಹಂಚಿಕೊಳ್ಳುವುದಾಗಲೀ ಮಾಡುವುದಿಲ್ಲ. ಈ ತಾಣಕ್ಕೆ ಒದಗಿಸಲಾಗುವ ಯಾವುದೇ ಮಾಹಿತಿಯನ್ನು ಕಳೆಯದಂತೆ, ದುರ್ಬಳಕೆ ಆಗದಂತೆ, ಅನಧಿಕೃತವಾಗಿ ಪ್ರವೇಶಕ್ಕೆ ಅವಕಾಶ ಇಲ್ಲದಂತೆ ಅಥವಾ ಬಹಿರಂಗಪಡಿಸದಂತೆ, ಬದಲಾವಣೆ ಮಾಡದಂತೆ ಅಥವಾ ನಾಶವಾಗದಂತೆ ಸಂರಕ್ಷಿಸಲಾಗುವುದು.
ನಾವು ಬಳಕೆದಾರರ ಬಗ್ಗೆ ಕೆಲವು ಮಾಹಿತಿಯನ್ನು ಕಲೆಹಾಕುತ್ತೇವೆ, ಅಂದರೆ, ಇಂಟರ್ನೆಟ್ ಪ್ರೋಟೋಕಾಲ್ (ಐಪಿ) ವಿಳಾಸ, ಡೊಮೈನ್ ಹೆಸರು, ಬ್ರೌಸರ್ ವಿಧ, ಕಂಪ್ಯೂಟರ್ ನ ಆಪರೇಟಿಂಗ್ ಸಿಸ್ಟಮ್, ಭೇಟಿಕೊಟ್ಟ ಸಮಯ ಮತ್ತು ದಿನಾಂಕ, ಅವರು ಭೇಟಿಕೊಟ್ಟ ಪುಟಗಳು. ನಮ್ಮ ಅಂತರ್ಜಾಲ ತಾಮಕ್ಕೆ ನಾಶ ಮಾಡುವ ಪ್ರಯತ್ನ ಕಂಡು ಬಾರದ ಹೊರತು ನಾವು ಈ ವಿಳಾಸಗಳನ್ನು ವ್ಯಕ್ತಿಗಳನ್ನು ಗುರುತಿಸುವುದಕ್ಕೆ ನಂಟು ಬೆಳೆಸುವ ಪ್ರಯತ್ನ ಮಾಡುವುದಿಲ್ಲ.
ಕುಕೀಸ್ ನೀತಿ
ಕುಕಿ ಎಂಬುದು ಅಂತರ್ಜಾಲ ತಾಣದಲ್ಲಿ ಮಾಹಿತಿ ಪಡೆಯಲು ನೀವು ಅದನ್ನು ತೆರೆದಾಗ ನಿಮ್ಮ ಬ್ರೌಸರ್ ಗೆ ಕಳುಹಿಸಲಾಗುವ ತಂತ್ರಾಂಶದ ಕೋಡ್ ನ ಒಂದು ತುಣುಕು. ಒಂದು ಕುಕಿ ನಿಮ್ಮ ಕಂಪ್ಯೂಟರ್ ನಲ್ಲಿ ಅಥವಾ ಮೊಬೈಲ್ ನಲ್ಲಿ ಸಾಮಾನ್ಯ ಟೆಕ್ಸ್ಟ್ ಫೈಲ್ ರೂಪದಲ್ಲಿ ವೆಬ್ ಸೈಟ್ ಸರ್ವರ್ ನಿಂದ ಸೇವ್ ಆಗುತ್ತದೆ ಮತ್ತು ಕೇವಲ ಆ ಸರ್ವರ್ ಮಾತ್ರವೇ ಆ ಕುಕಿಯ ಮಾಹಿತಿಯನ್ನು ರಿಟ್ರೈವ್ ಮಾಡಲು ಅಥವಾ ಓದಲು ಶಕ್ತವಾಗಿರುತ್ತದೆ. ಕುಕೀಸ್ ಗಳನ್ನು ನೀವು ನಿಮ್ಮ ಆದ್ಯತೆಗಳನ್ನು ಶೇಖರಿಸಿಡಲು ಪರಿಣಾಮಕಾರಿಯಾಗಿ ಪುಟಗಳ ಮಧ್ಯೆ ಸಂಚರಿಸಲು, ಮತ್ತು ಸಾಮಾನ್ಯವಾಗಿ ಒಂದು ಅಂತರ್ಜಾಲ ತಾಣದಲ್ಲಿ ನಿಮ್ಮ ಅನುಭವವನ್ನು ಉತ್ತಮಪಡಿಸಲು ಅವಕಾಶ ನೀಡುತ್ತವೆ.
ನಾವು ನಮ್ಮ ಅಂತರ್ಜಾಲ ತಾಣದಲ್ಲಿ ಈ ಕೆಳಗಿನ ಕುಕಿಗಳನ್ನು ಉಪಯೋಗಿಸಿದ್ದೇವೆ:-
1. ನೀವು ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿದಾಗ ಬ್ರೌಸಿಂಗ್ ಮಾದರಿಗಳ ಮೇಲೆ ನಿಗಾ ಇಡಲು ವಿಶ್ಲೇಷಿತ ಕುಕಿಗಳು ಅನಾಮಧೇಯವಾಗಿ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಅನ್ನು ನೆನಪಿನಲ್ಲಿಟ್ಟುಕೊಳ್ಳುತ್ತವೆ.
2. ಸೇವಾ ಕುಕಿಗಳು ನಿಮ್ಮ ನೋಂದಣಿ ಮತ್ತು ಲಾಗಿನ್ ವಿವರ, ಸೆಟ್ಟಿಂಗ್ ನ ಆದ್ಯತೆಗಳು ಮತ್ತು ನೀವು ಭೇಟಿ ನೀಡುವ ಪುಟಗಳ ಮೇಲೆ ಗಮನವಿಡುವ ಮೂಲಕ ನಮಗೆ ನಮ್ಮ ವೆಬ್ ಸೈಟ್ ಸಮರ್ಥವಾಗಿ ಕಾರ್ಯ ನಿರ್ವಹಿಸಲು ನೆರವು ನೀಡುತ್ತವೆ.
3. ನಿರಂತರವಲ್ಲದ ಕುಕಿಗಳು ಎ,ಕೆ.ಎ. ಪ್ರತಿ ಸೆಷನ್ ಕುಕಿಗಳಾಗಿರುತ್ತವೆ. ಪ್ರತಿ ಸೆಷನ್ ಕುಕಿಗಳು ತಾಂತ್ರಿಕ ಉದ್ದೇಶವನ್ನು ಈಡೇರಿಸುತ್ತವೆ. ಅಂದರೆ ತಡೆರಹಿತವಾಗಿ ಈ ಅಂತರ್ಜಾಲತಾಣದಲ್ಲಿ ಪುಟಗಳನ್ನು ತೆರೆಯಲು ನೆರವಾಗುತ್ತವೆ. ಈ ಕುಕಿಗಳು ಬಳಕೆದಾರರ ಯಾವುದೇ ಖಾಸಗಿ ಮಾಹಿತಿಯನ್ನು ಪಡೆದುಕೊಳ್ಳುವುದಿಲ್ಲ ಮತ್ತು ನೀವು ನಮ್ಮ ವೆಬ್ ಸೈಟ್ ನಿಂದ ತೆರಳಿದ ತಕ್ಷಣವೇ ಅವು ಡಿಲಿಟ್ ಆಗುತ್ತವೆ. ಈ ಕುಕಿಗಳು ಶಾಶ್ವತವಾಗಿ ದತ್ತಾಂಶವನ್ನು ದಾಖಲು ಮಾಡಿಕೊಳ್ಳುವುದಿಲ್ಲ ಮತ್ತು ಅವುಗಳು ನಿಮ್ಮ ಕಂಪ್ಯೂಟರ್ ನ ಯಂತ್ರಾಂಶ ಸ್ಮರಣಕೋಶದಲ್ಲಿ ಉಳಿದುಕೊಳ್ಳುವುದಿಲ್ಲ. ಈ ಕುಕಿಗಳು ಕೇವಲ ಸ್ಮರಣೆಯಲ್ಲಿ ಉಳಿಯುತ್ತವೆ ಮತ್ತು ಅವು ಸಕ್ರಿಯವಾದ ಬ್ರೌಸಿಂಗ್ ವೇಳೆಯಲ್ಲಿ ಮಾತ್ರವೇ ಲಭ್ಯವಾಗುತ್ತವೆ. ಮತ್ತೆ ನೀವು ಬ್ರೌಸರ್ ಅನ್ನು ಮುಚ್ಚುತ್ತಿದ್ದಂತೆಯೇ ಕುಕಿಗಳು ಕಣ್ಮರೆ ಆಗುತ್ತವೆ.
ಹೆಚ್ಚುವರಿಯಾಗಿ ನೀವು ಮನಗಾಣಬೇಕಾದ ಅಂಶವೆಂದರೆ, ನೀವು pmindia.gov.in/pmindia.nic.in ವಿಭಾಗಗಳಿಗೆ ಭೇಟಿ ನೀಡಿದಾಗ ನೀವು ಅಲ್ಲಿ ಲಾಗ್ ಇನ್ ಆಗಬೇಕಾಗುತ್ತದೆ ಅಥವಾ ಬಳಕೆದಾರರ ಇಚ್ಛಾನುಸಾರವಾಗಿರುತ್ತವೆ. ಆಗ ನೀವು ಕುಕಿಗಳನ್ನು ಒಪ್ಪಿಕೊಳ್ಳಬಹುದಾಗಿರುತ್ತದೆ. ನೀವು ನಿಮ್ಮ ಬ್ರೌಸರ್ ನಲ್ಲಿ ಕುಕಿಗಳನ್ನು ತಿರಸ್ಕರಿಸಿ ಎಂಬ ಆಯ್ಕೆ ಮಾಡಿಕೊಂಡಿದ್ದಲ್ಲಿ ಆಗ ನಮ್ಮ ವೆಬ್ ಸೈಟ್ ನ ಕೆಲವು ವಿಭಾಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರಬಹುದು.
ಹೈಪರ್ಲಿಂಕಿಂಗ್ ನೀತಿ
ವೆಬ್ ಸೈಟ್/ಪೋರ್ಟಲ್ ಗಳ ಹೊರ ಸಂಪರ್ಕ
ಈ ಅಂತರ್ಜಾಲ ತಾಣದ ಹಲವೆಡೆ ನೀವು ಅನ್ಯ ವೆಬ್ ಸೈಟ್ ಗಳ/ಪೋರ್ಟಲ್ ಗಳ ಸಂಪರ್ಕವನ್ನು ನೋಡುತ್ತೀರಿ. ಈ ಸಂಪರ್ಕಗಳನ್ನು ನಿಮ್ಮ ಅನುಕೂಲಕ್ಕಾಗಿ ಅಳವಡಿಸಲಾಗಿದೆ. ಹೀಗೆ ಸಂಪರ್ಕ ನೀಡಲಾಗಿರುವ ವೆಬ್ ಸೈಟ್ ನಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಯಾವುದೇ ಜವಾಬ್ದಾರಿ ಇರುವುದಿಲ್ಲ ಮತ್ತು ಅದರಲ್ಲಿ ಪ್ರಕಟವಾಗಿರುವ ಅಭಿಪ್ರಾಯಗಳಿಗೆ ಸಹಮತವನ್ನು ವ್ಯಕ್ತಪಡಿಸುವ ಅಗತ್ಯವೂ ಇರುವುದಿಲ್ಲ. ಆ ಸಂಪರ್ಕ ಇದೆ ಎಂದ ಮಾತ್ರಕ್ಕೆ ಅಥವಾ ಈ ವೆಬ್ ತಾಣದಲ್ಲಿ ಅಳವಡಿಸಲಾಗಿದೆ ಎಂಬ ಕಾರಣಕ್ಕೆ ಅದಕ್ಕೆ ಯಾವುದೇ ರೀತಿಯಲ್ಲಿ ನಮ್ಮ ಸಹಮತವಿದೆ ಎಂದು ಅರ್ಥೈಸಿಕೊಳ್ಳುವಂತಿಲ್ಲ. ಈ ಲಿಂಕ್ ಗಳು ಎಲ್ಲ ಸಮಯದಲ್ಲೂ ಕೆಲಸ ಮಾಡುತ್ತವೆ ಎಂಬ ಖಾತ್ರಿಯನ್ನು ನಾವು ನೀಡುವುದಿಲ್ಲ ಮತ್ತು ಸಂಪರ್ಕಿತ ತಾಣಗಳ ಮೇಲೆ ನಮಗೆ ಯಾವುದೇ ರೀತಿಯ ನಿಯಂತ್ರಣ ಇರುವುದಿಲ್ಲ.
ಇತರ ವೆಬ್ ಸೈಟ್/ ಪೋರ್ಟಲ್ ಗಳಲ್ಲಿ ಪ್ರಧಾನಮಂತ್ರಿಗಳ ಕಾರ್ಯಾಲಯದ ಅಂತರ್ಜಾಲ ತಾಣಕ್ಕೆ ಸಂಪರ್ಕ
ಈ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿರುವ ಮಾಹಿತಿಯ ಪುಟಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವುದಕ್ಕೆ ನಮ್ಮ ಯಾವುದೇ ಆಕ್ಷೇಪ ಇರುವುದಿಲ್ಲ. ಇದಕ್ಕೆ ಪೂರ್ವಾನುಮತಿಯ ಅಗತ್ಯವೂ ಇರುವುದಿಲ್ಲ. ಆದಾಗ್ಯೂ ನೀವು ಲಿಂಕ್ ಹಾಕಿರುವ ಬಗ್ಗೆ ನಮಗೆ ತಿಳಿಸಿದಲ್ಲಿ, ಏನಾದರೂ ಬದಲಾವಣೆ ಅಥವಾ ಹೆಚ್ಚಿನ ಮಾಹಿತಿ ಅಳವಡಿಸಿದಾಗ ನಿಮಗೆ ತಿಳಿಸಲು ಸಹಕಾರಿಯಾಗುತ್ತದೆ. ಅಲ್ಲದೆ ನಾವು ನಮ್ಮ ವೆಬ್ ಸೈಟ್ ಗಳು ನಿಮ್ಮ ತಾಣದ ಫ್ರೇಮ್ನೊಳಗೆ ತೆರೆದುಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ. ಈ ವೆಬ್ ತಾಣಕ್ಕೆ ಸೇರಿದ ಪುಟಗಳು ಬಳಕೆದಾರರ ಕಂಪ್ಯೂಟರ್ ನಲ್ಲಿ ಹೊಸದಾಗಿ ತೆರೆದುಕೊಂಡ ಬ್ರೌಸರ್ ನ ವಿಂಡೋದಲ್ಲಿಯೇ ಲೋಡ್ ಆಗಬೇಕು
ಷರತ್ತುಗಳು ಹಾಗೂ ನಿಬಂಧನೆಗಳು
ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಕೇಂದ್ರ ಪ್ರಧಾನ ಮಂತ್ರಿಗಳ ಕಾರ್ಯಾಲಯ ನೀಡಿರುವ ಮಾಹಿತಿಯನ್ನು ಆಧರಿಸಿ ಈ ಅಂತರ್ಜಾಲ ತಾಣವನ್ನುವಿನ್ಯಾಸಗೊಳಿಸಿದೆ.
ಈ ಅಂತರ್ಜಾಲ ತಾಣದಲ್ಲಿ ಹಾಕಲಾಗಿರುವ ಮಾಹಿತಿಗೆ ಸಂಬಂಧಿಸಿದಂತೆ ನಿಖರತೆಯ ಖಾತ್ರಿಗಾಗಿ ಎಲ್ಲ ಅಗತ್ಯ ಪ್ರಯತ್ನಗಳನ್ನು ಮಾಡಲಾಗಿದೆ ಆದರೂ ಇದನ್ನು ಕಾನೂನಿನ ಹೇಳಿಕೆ ಎಂದು ಅಥವಾ ಯಾವುದೇ ಕಾನೂನಾತ್ಮಕ ಉದ್ದೇಶಕ್ಕೆ ಬಳಸುವಂತಿಲ್ಲ. ಯಾವುದೇ ದ್ವಂದ್ವ ಅಥವಾ ಅನುಮಾನ ಇದ್ದಲ್ಲಿ ಅಂತರ್ಜಾಲ ಬಳಕೆದಾರರು ಮಾಹಿತಿಯನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ ಮತ್ತು/ಅಥವಾ ಅನ್ಯ ಮೂಲ(ಗಳಿಂದ) ಪರಿಶೀಲನೆ/ಖಾತ್ರಿ ಪಡಿಸಿಕೊಳ್ಳಬೇಕು, ಮತ್ತು ಸೂಕ್ತ ವೃತ್ತಿಪರ ಸಲಹೆ ಪಡೆದುಕೊಳ್ಳಬೇಕು.
ಯಾವುದೇ ಸಂದರ್ಭದಲ್ಲೂ ಪ್ರಧಾನಮಂತ್ರಿಗಳ ಕಾರ್ಯಾಲಯ ಈ ಅಂತರ್ಜಾಲತಾಣದ ಬಳಕೆ ಅಥವಾ ಬಳಕೆಯ ಹಾನಿಯಿಂದ ಉದ್ಭವಿಸಬಹುದಾದ ಯಾವುದೇ ರೀತಿಯ ನಷ್ಟ, ವೆಚ್ಚ, ಮಿತಿಯಿಲ್ಲದ, ಪರೋಕ್ಷ ಅಥವಾ ಸಾಂದರ್ಭಿಕ ಹಾನಿ ಅಥವಾ ನಷ್ಟ ಅಥವಾ ಯಾವುದೇ ವೆಚ್ಚ ಅಥವಾ ಇನ್ನಾವುದೇ ರೀತಿಯ ತೊಂದರೆಗೆ ಜವಾಬ್ದಾರರಾಗಿರುವುದಿಲ್ಲ.
ಈ ನಿಯಮಗಳು ಮತ್ತು ಷರತ್ತುಗಳನ್ನು ಭಾರತೀಯ ಕಾನೂನು ಮತ್ತು ಆಡಳಿತಕ್ಕೆ ಬಾಧ್ಯವಾಗಿ ರಚಿತವಾಗಿರುತ್ತದೆ. ಈ ನಿಯಮಗಳು ಮತ್ತು ಷರತ್ತುಗಳ ಅಡಿಯಲ್ಲಿ ಉದ್ಭವಿಸುವ ಯಾವುದೇ ವಿವಾದ ಭಾರತದ ನ್ಯಾಯಾಲಯಗಳ ವ್ಯಾಪ್ತಿಗೆ ಮಾತ್ರವೇ ಒಳಪಟ್ಟಿರುತ್ತದೆ.
ಈ ಅಂತರ್ಜಾಲತಾಣದಲ್ಲಿ ಅಳವಡಿಸಲಾಗಿರುವ ಮಾಹಿತಿಗಳು ಸರ್ಕಾರೇತರ/ಖಾಸಗಿ ಸಂಸ್ಥೆಗಳು ಸೃಷ್ಟಿಸಿದ ಮತ್ತು ನಿರ್ವಹಿಸುತ್ತಿರುವ ಮಾಹಿತಿಯ ಹೈಪರ್ಟೆಕ್ಸ್ಟ್ ಸಂಪರ್ಕ ಅಥವಾ ಪಾಯಿಂಟರ್ ಗಳನ್ನು ಒಳಗೊಂಡಿವೆ. ಈ ಮಾಹಿತಿಯ ಸಂಪರ್ಕಗಳನ್ನು ಪ್ರಧಾನಮಂತ್ರಿಗಳ ಕಾರ್ಯಾಲಯವು ಕೇವಲ ನಿಮ್ಮ ಅನುಕೂಲಕ್ಕಾಗಿ ಹಾಗೂ ಮಾಹಿತಿಗಾಗಿ ಮಾತ್ರ ನೀಡಿದೆ. ನೀವು ಯಾವಾಗ ಹೊರಗಿನ ಅಂತರ್ಜಾಲ ತಾಣಗಳ ಲಿಂಕ್ ಆಯ್ಕೆ ಮಾಡುತ್ತೀರೋ ಆಗ ನೀವು ಪ್ರಧಾನಮಂತ್ರಿಗಳ ಕಾರ್ಯಾಲಯದ ವೆಬ್ ಸೈಟ್ ನಿಂದ ಹೊರ ಹೋಗುತ್ತೀರಿ ಮತ್ತು ಆ ಹೊರ ಅಂತರ್ಜಾಲ ತಾಣದ ಪ್ರಾಯೋಜಕರು/ಮಾಲೀಕರ ಖಾಸಗಿತನ ಮತ್ತು ಭದ್ರತಾ ನೀತಿಗೆ ಅನುಗುಣವಾಗಿರುತ್ತೀರಿ. ಎಲ್ಲ ಸಮಯದಲ್ಲೂ ಆ ಹೊರ ಸಂಪರ್ಕಗಳ ಪುಟಗಳು ಲಭ್ಯವಾಗುತ್ತವೆ ಎಂಬ ಖಾತ್ರಿಯನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯ ನೀಡುವುದಿಲ್ಲ. ಸಂಪರ್ಕಿತ ಅಂತರ್ಜಾಲ ತಾಣದಲ್ಲಿನ ಹಕ್ಕುಸ್ವಾಮ್ಯದ ವಿಷಯಗಳ ಬಳಕೆಗೆ ಪ್ರಧಾನಮಂತ್ರಿಗಳ ಕಾರ್ಯಾಲಯ ಅಧಿಕಾರ ನೀಡುವುದಿಲ್ಲ. ಬಳಕೆದಾರರು ಅಂಥ ಅನುಮತಿಗಾಗಿ ಸಂಪರ್ಕದ ಅಂತರ್ಜಾಲತಾಣದ ಮಾಲೀಕರಿಗೆ ಮನವಿ ಸಲ್ಲಿಸಲು ಸಲಹೆ ನೀಡುತ್ತದೆ. ಪ್ರಧಾನಮಂತ್ರಿಗಳ ಕಾರ್ಯಾಲಯವು ಸಂಪರ್ಕಿತ ವೆಬ್ ಸೈಟ್ ಭಾರತ ಸರ್ಕಾರದ ಅಂತರ್ಜಾಲ ಮಾರ್ಗಸೂಚಿಗಳ ಅನುಸರಣೆಯ ಖಾತರಿ ನೀಡುವುದಿಲ್ಲ.
ಪ್ರಾದೇಶಿಕ ಭಾಷಾ ನೀತಿ
ಈ ಪೋರ್ಟಲ್ ನಲ್ಲಿ ಹಾಕಲಾಗಿರುವ ಪ್ರಾದೇಶಿಕ ಭಾಷೆಗಳ ಮಾಹಿತಿ ವಿಷಯದಲ್ಲಿ ನಿಖರತೆಯನ್ನು ಕಾಯ್ದುಕೊಳ್ಳಲು ಸರ್ವ ಪ್ರಯತ್ನ ಮಾಡಲಾಗಿದೆಯಾದರೂ, ಅದನ್ನು ಕಾನೂನಿನ ಹೇಳಿಕೆ ಎಂದು ಪರಿಗಣಿಸುವಂತಿಲ್ಲ ಅಥವಾ ಯಾವುದೇ ಕಾನೂನು ಉದ್ದೇಶಕ್ಕೆ ಬಳಸುವಂತಿಲ್ಲ. ಪ್ರಾದೇಶಿಕ ಭಾಷೆಯ ವಿಷಯದಲ್ಲಿ ವ್ಯತ್ಯಾಸವಿದ್ದಲ್ಲಿ ನೀವು ಇಂಗ್ಲಿಷ್ ನ ಮೂಲ ಮಾಹಿತಿ ಪರಿಶೀಲಿಸಬಹುದಾಗಿದೆ. ಭಾಷೆಯಲ್ಲಿ ಯಾವುದೇ ಲೋಪ ಇದ್ದಲ್ಲಿ, ನೀವು ಆನ್ ಲೈನ್ ಫೀಡ್ ಬ್ಯಾಕ್ ಫಾರಂ ಮೂಲಕ ನಮಗೆ ವರದಿ ಮಾಡಬಹುದು.
ವಿಷಯ ಮಾಹಿತಿಯ ನಿಖರತೆ, ಪರಿಪೂರ್ಣತೆ, ಉಪಯುಕ್ತತೆಗೆ ಸಂಬಂಧಿಸಿದಂತೆ ಎನ್.ಐ.ಸಿ. ಯಾವುದೇ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವುದಿಲ್ಲ. ಯಾವುದೇ ಸಂದರ್ಭದಲ್ಲಿ ಸರ್ಕಾರ ಅಥವಾ ಎನ್.ಐ.ಸಿ. ಈ ಪೋರ್ಟಲ್ ನ ಮಾಹಿತಿಯ ಬಳಕೆ ಅಥವಾ ದತ್ತಾಂಶದ ಬಳಕೆ ಲೋಪದಿಂದ ಆಗಬಹುದಾದ ಮಿತಿ ಇಲ್ಲದ, ಪರೋಕ್ಷ ಅಥವಾ ಸಾಂದರ್ಭಿಕ ನಷ್ಟ ಅಥವಾ ಹಾನಿ, ಅಥವಾ ಯಾವುದೇ ವೆಚ್ಚ, ನಷ್ಟ ಅಥವಾ ಹಾನಿ ಸೇರಿದಂತೆ ಯಾವುದೇ ವೆಚ್ಚ, ನಷ್ಟ ಅಥವಾ ಹಾನಿಗೆ ಜವಾಬ್ದಾರಿ ಆಗಿರುವುದಿಲ್ಲ.
ಡಿಸ್ಕ್ಲೈಮರ್
ಪ್ರಧಾನಮಂತ್ರಿಗಳ ಕಾರ್ಯಾಲಯದ ಈ ಅಂತರ್ಜಾಲ ತಾಣವನ್ನು ಮಾಹಿತಿಗಾಗಿ ಮಾತ್ರ ನಿರ್ವಹಣೆ ಮಾಡಲಾಗುತ್ತಿದೆ. ಈ ಅಂತರ್ಜಾಲ ತಾಣದಲ್ಲಿ ನಿಖರ ಮತ್ತು ಇತ್ತೀಚಿನವರೆಗಿನ ಮಾಹಿತಿಯನ್ನು ಅಳವಡಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆಯಾದರೂ, ಈ ತಾಣದಲ್ಲಿ ಹಾಕಲಾಗಿರುವ ಸುತ್ತೋಲೆಗಳನ್ನು ಬಳಕೆ ಮಾಡಿಕೊಳ್ಳುವ ಅಧಿಕಾರಿಗಳು ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಅನುಮಾನ ಬಂದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಕಾರ್ಯಾಲಯದೊಂದಿಗೆ ಸಂಪರ್ಕ ಇಟ್ಟುಕೊಳ್ಳುವಂತೆ ಸಲಹೆ ಮಾಡಲಾಗಿದೆ. ಒಂದೊಮ್ಮೆ ಈ ತಾಣದಲ್ಲಿ ಹಾಕಲಾದ ಯಾವುದೇ ಸುತ್ತೋಲೆಯ ಮಾಹಿತಿಯಲ್ಲಿ ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ವಿತರಿಸಲಾದ ಮುದ್ರಿತ ಪ್ರತಿಯಲ್ಲಿ ಏನಾದರೂ ವೈರುಧ್ಯಗಳು ಕಂಡುಬಂದಲ್ಲಿ, ಮುದ್ರಿತ ಪ್ರತಿಯಲ್ಲಿರುವ ಅಂಶದ ಮೇಲೆ ಅವಲಂಬಿತವಾಗಲು ಮತ್ತು ಈ ವಿಷಯವನ್ನು ಪ್ರಧಾನಮಂತ್ರಿಗಳ ಕಾರ್ಯಾಲಯದ ಗಮನಕ್ಕೆ ತರಲು ಸೂಚಿಸಲಾಗಿದೆ.