ನಮಸ್ಕಾರ್ ಜೀ,
ಭಾರತದ ಪ್ರಗತಿಯ ಚಾಲಕ ಶಕ್ತಿಯಾಗಿರುವ ಕೈಗಾರಿಕೋದ್ಯಮದ ಎಲ್ಲಾ ದಿಗ್ಗಜರಿಗೆ ಮತ್ತು ಸಿ.ಐ.ಐ.ಯ ಎಲ್ಲಾ ಸದಸ್ಯರಿಗೆ ಶುಭಾಶಯಗಳು!. ಕಾರ್ಯಕ್ರಮದಲ್ಲಿ ಹಾಜರಿರುವ ಕೇಂದ್ರ ಸಂಪುಟದ ನನ್ನ ಹಿರಿಯ ಸಹೋದ್ಯೋಗಿಗಳೇ, ಸಿ.ಐ.ಐ.ಯ ಅಧ್ಯಕ್ಷ ಶ್ರೀ ಟಿ.ವಿ.ನರೇಂದ್ರನ್, ಕೈಗಾರಿಕೋದ್ಯಮದ ಎಲ್ಲಾ ನಾಯಕರೇ ಮತ್ತು ಹಲವು ದೇಶಗಳ ರಾಜತಾಂತ್ರಿಕರೇ, ವಿವಿಧ ದೇಶಗಳಲ್ಲಿ ಭಾರತದ ರಾಯಭಾರಿಗಳೇ, ಮಹಿಳೆಯರೇ ಮತ್ತು ಮಹನೀಯರೇ!.
ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇಂದಿನ ಸಭೆ ಬಹಳ ಮುಖ್ಯವಾದುದು. ಸರಕಾರ ಮತ್ತು ಭಾರತದ ಕೈಗಾರಿಕೋದ್ಯಮದ ನಡುವೆ ಇಂತಹ ಬಿಕ್ಕಟ್ಟಿನ ಸಮಯದಲ್ಲಿಯೂ ಸಹಭಾಗಿತ್ವ ಹೆಚ್ಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ದೇಶಕ್ಕೆ ಯಾವಾಗ ಮತ್ತು ಏನೇನೆಲ್ಲ ಅವಶ್ಯವೋ ಅದನ್ನು ಉದ್ಯಮ ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ಕೊಡುಗೆಯಾಗಿ ನೀಡಿದೆ. ಮುಖಗವಸುಗಳಿಂದ ಹಿಡಿದು, ಪಿ.ಪಿ.ಇ., ವೆಂಟಿಲೇಟರು, ಲಸಿಕೆಗಳು ಹೀಗೆ ಎಲ್ಲ ರೀತಿಯ ಕೊಡುಗೆಗಳನ್ನೂ ಅದು ಒದಗಿಸಿದೆ. ಉದ್ಯಮದ ಮತ್ತು ಸಂಘಟನೆಯ ಎಲ್ಲಾ ಸ್ನೇಹಿತರೂ ಭಾರತದ ಬೆಳವಣಿಗೆ ಕಥಾನಕದ ಪ್ರಮುಖ ಭಾಗವಾಗಿದ್ದಾರೆ. ನಿಮ್ಮ ಪ್ರಯತ್ನಗಳ ಫಲವಾಗಿ ಭಾರತದ ಆರ್ಥಿಕತೆ ಈಗ ಮತ್ತೆ ಚುರುಕುಗೊಂಡಿದೆ. ಈಗಿನ ದಿನ ಮಾನಗಳಲ್ಲಿ ಸಿ.ಇ.ಒ. ಅವರಿಂದ ಹೊಸ ಅವಕಾಶಗಳ ಬಗ್ಗೆ ಒಂದೇ ಒಂದು ಹೇಳಿಕೆ ಅಥವಾ ವರದಿ ಇಲ್ಲದ ದಿನ ಇರಲಾರದು. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ದಾಖಲೆ ಉದ್ಯೋಗಾವಕಾಶಗಳಿಗೆ ನೇಮಕ ಮಾಡುತ್ತಿರುವ ಬಗ್ಗೆಯೂ ನಾವು ವರದಿಗಳನ್ನು ನೋಡುತ್ತಿದ್ದೇವೆ. ಇದು ಡಿಜಿಟೈಸೇಶನ್ ನ ಫಲಿತಾಂಶ ಮತ್ತು ದೇಶದಲ್ಲಿಯ ಬೇಡಿಕೆಯ ಬೆಳವಣಿಗೆಯ ಫಲಿತಾಂಶ. ಈಗ ನಾವು ನಮ್ಮ ಗುರಿಗಳತ್ತ ಈ ಹೊಸ ಅವಕಾಶಗಳನ್ನು ಬಳಸಿಕೊಂಡು ದುಪ್ಪಟ್ಟು ವೇಗದಲ್ಲಿ ಸಾಗಬೇಕು.
ಸ್ನೇಹಿತರೇ,
ಸಿ.ಐ.ಐ.ಯ ಈ ಸಭೆ 75 ನೇ ಸ್ವಾತಂತ್ರ್ಯ ದಿನಾಚರಣೆಯ ಮಧ್ಯದಲ್ಲಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಡೆಯುತ್ತಿದೆ. ಭಾರತದ ಉದ್ಯಮಕ್ಕೆ ಹೊಸ ದೃಢ ಸಂಕಲ್ಪಗಳನ್ನು ಕೈಗೊಳ್ಳಲು ಮತ್ತು ಗುರಿಗಳನ್ನು ನಿಗದಿ ಮಾಡಲು ಬಹು ದೊಡ್ಡ ಅವಕಾಶ ಇದು. ಆತ್ಮ ನಿರ್ಭರ ಭಾರತ ಅಭಿಯಾನದ ಯಶಸ್ಸಿನ ಬಹಳ ದೊಡ್ಡ ಜವಾಬ್ದಾರಿ ಭಾರತೀಯ ಕೈಗಾರಿಕೋದ್ಯಮದ ಮೇಲಿದೆ. ಮತ್ತು ನಾನು ನಿಮಗೆ ಹೇಳಲಿಚ್ಛಿಸುತ್ತೇನೆ– ಸರಕಾರ ನಿಮ್ಮೊಂದಿಗೆ ಇದೆ ಮತ್ತು ನಿಮ್ಮ ಪ್ರತೀ ಪ್ರಯತ್ನದ ಜೊತೆ ಸರಕಾರ ಇದೆ ಎಂಬುದಾಗಿ. ದೇಶದ ಸಾಮರ್ಥ್ಯದಲ್ಲಿ ನಿರ್ಮಾಣವಾಗಿರುವ ವಿಶ್ವಾಸ ಮತ್ತು ದೇಶದ ಬೆಳವಣಿಗೆಗಾಗಿ ಇಂದು ಸೃಷ್ಟಿಸಲಾಗಿರುವ ಪರಿಸರದ ಪೂರ್ಣ ಪ್ರಯೋಜನವನ್ನು ಭಾರತೀಯ ಕೈಗಾರಿಕೋದ್ಯಮ ಕೈಗೆತ್ತಿಕೊಳ್ಳಬೇಕು. ಕಳೆದ ಕೆಲವು ವರ್ಷಗಳಲ್ಲಿ ಸರಕಾರದ ಚಿಂತನೆ ಮತ್ತು ಧೋರಣೆಯಲ್ಲಿ ಬದಲಾವಣೆಯಾಗಿರುವುದನ್ನು ಅಥವಾ ಸರಕಾರಿ ವ್ಯವಸ್ಥೆಯ ಕಾರ್ಯವೈಖರಿಯಲ್ಲಿ ಬದಲಾವಣೆ ಆಗಿರುವುದನ್ನು ನೀವು ನೋಡಿರಬಹುದು ಮತ್ತು ಅನುಭವಿಸಿರಬಹುದು. ಇಂದಿನ ನವಭಾರತ ಸಿದ್ಧವಾಗಿದೆ ಮತ್ತು ಅದು ಹೊಸ ಜಗತ್ತಿನೊಂದಿಗೆ ಮುನ್ನಡೆಯಲು ತಯಾರಾಗಿದೆ. ಭಾರತ, ಒಂದು ಕಾಲದಲ್ಲಿ ವಿದೇಶೀ ಹೂಡಿಕೆಯ ಬಗ್ಗೆ ಕಳವಳ ಹೊಂದಿತ್ತು. ಅದೀಗ ಎಲ್ಲಾ ರೀತಿಯ ಹೂಡಿಕೆಯನ್ನು ಸ್ವಾಗತಿಸುತ್ತಿದೆ. ಭಾರತದ ತೆರಿಗೆ ನೀತಿಗಳು ಹಿಂದೆ ಹೂಡಿಕೆದಾರರಲ್ಲಿ ನಿರಾಸಕ್ತಿಯನ್ನು ಮೂಡಿಸುತ್ತಿದ್ದವು, ಈಗ ಅವುಗಳು ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಸಾಂಸ್ಥಿಕ ತೆರಿಗೆ ಮತ್ತು ಮುಖರಹಿತ ತೆರಿಗೆ ವ್ಯವಸ್ಥೆಯಾಗಿ ಪರಿಗಣಿಸಲ್ಪಟ್ಟಿವೆ
ಜನರನ್ನು ಕಾನೂನುಗಳ ಮತ್ತು ದಾಖಲೆಗಳ ತೊಡಕಿನಲ್ಲಿ ಸಿಲುಕಿಸುವಂತಹ ಅಧಿಕಾರಶಾಹಿಯೊಂದಿಗೆ ಗುರುತಿಸಲ್ಪಟ್ಟಿದ್ದ ಭಾರತ ಈಗ ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣಗಳ ಶ್ರೇಯಾಂಕದಲ್ಲಿ ಬಹಳ ದೊಡ್ದ ನೆಗೆತವನ್ನು ಮಾಡುತ್ತಿದೆ. ವರ್ಷಗಳ ಕಾಲ ಕಾರ್ಮಿಕರು ಮತ್ತು ಉದ್ಯಮಗಳು ನೂರಾರು ಕಾಯ್ದೆಗಳ ಜಾಲದಲ್ಲಿ ಸಿಲುಕಿಹಾಕಿಕೊಂಡಂತಹ ಸ್ಥಿತಿ ಇತ್ತು. ಇಂದು ಡಜನ್ನುಗಟ್ಟಲೆ ಕಾರ್ಮಿಕ ಕಾನೂನುಗಳು 4 ಕಾರ್ಮಿಕ ಸಂಹಿತೆಯಡಿ ತರಲ್ಪಟ್ಟಿವೆ. ಒಂದು ಕಾಲದಲ್ಲಿ ಕೃಷಿಯನ್ನು ಬರೇ ಜೀವನೋಪಾಯವಾಗಿ ಪರಿಗಣಿಸಲಾಗುತ್ತಿತ್ತು, ಈಗ ರೈತರನ್ನು ದೇಶದ ಮಾರುಕಟ್ಟೆ ಮತ್ತು ವಿದೇಶದ ಮಾರುಕಟ್ಟೆಗೆ ನೇರವಾಗಿ ಬೆಸೆಯುವ ಕೆಲಸವನ್ನು ಕೃಷಿ ವಲಯದ ಚಾರಿತ್ರಿಕ ಸುಧಾರಣೆಗಳ ಮೂಲಕ ಮಾಡಲಾಗುತ್ತಿದೆ. ಇದರ ಫಲವಾಗಿ ಭಾರತವು ದಾಖಲೆ ಎಫ್.ಡಿ.ಐ. ಮತ್ತು ಎಫ್.ಪಿ.ಐ.ಯನ್ನು ಪಡೆಯುತ್ತಿದೆ. ದೇಶದ ವಿದೇಶೀ ವಿನಿಮಯ ಮೀಸಲು ಕೂಡಾ ಸಾರ್ವಕಾಲಿಕ ಗರಿಷ್ಟ ಮಟ್ಟದಲ್ಲಿದೆ.
ಸ್ನೇಹಿತರೇ,
ನವ ಭಾರತದ ಚಿಂತನಾಕ್ರಮ ಏನು ಎಂಬುದರ ಬಗ್ಗೆ ನಾನು ನಿಮಗೆ ಒಂದು ಉದಾಹರಣೆ ಕೊಡಲು ಇಚ್ಛಿಸುತ್ತೇನೆ. ವಿದೇಶದಿಂದ ಬಂದಿರುವುದು ಅದು ಏನೇ ಇದ್ದರೂ ಉತ್ಕೃಷ್ಟವಾದುದು ಎಂಬ ಭಾವನೆ ಇತ್ತು. ಈ ಮಾನಸಿಕತೆಯ ಪರಿಣಾಮ ಏನು ಎಂಬುದನ್ನು ನಿಮ್ಮಂತಹ ಉದ್ಯಮದ ಹಿರಿಯರು ತಿಳಿದುಕೊಂಡಿರುವಿರಿ. ನಮ್ಮ ಬ್ರಾಂಡ್ ಗಳು, ಬಹಳ ವರ್ಷಗಳ ಕಠಿಣ ಪರಿಶ್ರಮದಿಂದಾಗಿ ನಿರ್ಮಾಣ ಮಾಡಲ್ಪಟ್ಟಂತಹವು ವಿದೇಶೀ ಹೆಸರುಗಳ ಅಡಿಯಲ್ಲಿ ಪ್ರವರ್ತಿಸಲ್ಪಡುತ್ತಿದ್ದವು. ಇಂದು ಈ ಪರಿಸ್ಥಿತಿ ತ್ವರಿತವಾಗಿ ಬದಲಾಗುತ್ತಿದೆ. ಇಂದು ಭಾರತೀಯ ಉತ್ಪಾದಿತ ಉತ್ಪನ್ನಗಳ ಜೊತೆ ದೇಶವಾಸಿಗಳು ಭಾವನಾತ್ಮಾವಾಗಿ ಬೆಸೆಯಲ್ಪಟ್ಟಿದ್ದಾರೆ. ಕಂಪೆನಿಯು ಭಾರತದ್ದಾಗಿರಬೇಕು ಎಂಬ ಅಗತ್ಯವೇನೂ ಇಲ್ಲ. ಆದರೆ ಇಂದು ಪ್ರತಿಯೊಬ್ಬ ಭಾರತೀಯರೂ ಭಾರತೀಯ ನಿರ್ಮಿತ ಉತ್ಪಾದನೆಗಳನ್ನು ನೆಚ್ಚಿಕೊಳ್ಳುತ್ತಿದ್ದಾರೆ. ದೇಶವು ಈಗ ತನ್ನ ಮನಸ್ಸನ್ನು ಬದಲಾಯಿಸಿಕೊಂಡಿದೆ ಮತ್ತು ಈಗ ಕೈಗಾರಿಕೋದ್ಯಮವು ತನ್ನ ನೀತಿ ಮತ್ತು ವ್ಯೂಹವನ್ನು ಅದಕ್ಕನುಗುಣವಾಗಿ ಸಿದ್ಧಮಾಡಿಕೊಳ್ಳಬೇಕಾಗಿದೆ. ಇದು ನಿಮಗೆ ಆತ್ಮ ನಿರ್ಭರ ಭಾರತ ಅಭಿಯಾನದಲ್ಲಿ ಮುನ್ನಡೆಯಲು ಬಹಳ ಸಹಾಯ ಮಾಡಲಿದೆ.
ನೀವು ಗಮನ ಹರಿಸಬೇಕಾದ ಇನ್ನೊಂದು ಸಂಗತಿ ಇದೆ. ಅದೆಂದರೆ ಭಾರತದ ಜನರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿದೆ. ಈ ವಿಶ್ವಾಸವನ್ನು ನಾವು ಎಲ್ಲಾ ವಲಯಗಳಲ್ಲಿಯೂ ಕಾಣಬಹುದು. ಇತ್ತೀಚೆಗೆ ಒಲಿಂಪಿಕ್ಸ್ ನಲ್ಲಿ ನೀವಿದನ್ನು ಗಮನಿಸಿರಬಹುದು. ಇಂದು ಭಾರತದ ಯುವಜನತೆ ಯಾವುದೇ ಕ್ಷೇತ್ರವನ್ನು ಆಯ್ದುಕೊಳ್ಳಲು ಹಿಂಜರಿಯುವುದಿಲ್ಲ. ಅವರು ಕಠಿಣ ಪರಿಶ್ರಮ ಹಾಕುತ್ತಾರೆ. ಅಪಾಯಗಳನ್ನು ಎದುರಿಸುತ್ತಾರೆ ಮತ್ತು ಫಲಿತಾಂಶಗಳನ್ನು ತರುತ್ತಾರೆ. “ಹೌದು ನಾವು ಈ ಸ್ಥಳಕ್ಕೆ ಸೇರಿದವರು” ಎಂಬುದು ಇಂದು ನಮ್ಮ ಯುವ ಜನತೆಯ ಭಾವನೆಯಾಗಿದೆ. ಇಂದು ಇದೇ ವಿಶ್ವಾಸ ಭಾರತದ ನವೋದ್ಯಮಗಳಲ್ಲಿಯೂ ಕಾಣಬಹುದಾಗಿದೆ.ಇಂದು ಬೃಹತ್ ಕಂಪೆನಿಗಳು ನವಭಾರತದ ಗುರುತಾಗುತ್ತಿವೆ. 7-8 ವರ್ಷಗಳ ಹಿಂದೆ ಭಾರತದಲ್ಲಿ 3-4 ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಬೃಹತ್ ಉದ್ದಿಮೆಗಳಿದ್ದವು, ಇಂದು ಅವುಗಳ ಸಂಖ್ಯೆ ಭಾರತದಲ್ಲಿ 60ಕ್ಕೇರಿದೆ. ಇವುಗಳಲ್ಲಿ 21 ಬೃಹತ್ ಕಂಪೆನಿಗಳು (ಯೂನಿಕಾರ್ನ್) ಕಳೆದ ಕೆಲವು ತಿಂಗಳ ಅವಧಿಯಲ್ಲಿ ತಲೆ ಎತ್ತಿವೆ. ನೀವು ಈ ಬಗ್ಗೆ ಗಮನಿಸಿರಬಹುದು ಮತ್ತು ಈ ಯೂನಿಕಾರ್ನ್ ಗಳು ವಿವಿಧ ವಲಯಗಳಲ್ಲಿ ಮೂಡಿ ಬರುತ್ತಿವೆ. ಆರೋಗ್ಯ ತಂತ್ರಜ್ಞಾನದಲ್ಲಿ ಮೂಡಿ ಬರುತ್ತಿರುವ ಯೂನಿಕಾರ್ನ್ ಗಳು ಮತ್ತು ಸಾಮಾಜಿಕ ವಾಣಿಜ್ಯದಲ್ಲಿ ಮೂಡಿ ಬರುತ್ತಿರುವ ಯೂನಿಕಾರ್ನ್ ಗಳು ಭಾರತದಲ್ಲಿ ಪ್ರತಿಯೊಂದು ಹಂತದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಚಿಸುತ್ತವೆ. ವ್ಯಾಪಾರೋದ್ಯಮದಲ್ಲಿ ಅಪಾಯಗಳನ್ನು ಎದುರಿಸುವ ಪ್ರವೃತ್ತಿ ಮತ್ತು ತಮ್ಮದೇ ಸಾಮರ್ಥ್ಯದ ಮೇಲೆ ಬೆಳೆಯುವ ಪ್ರವೃತ್ತಿ ನಿರಂತರವಾಗುತ್ತಿದೆ. ಈ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಕೂಡಾ ನಮ್ಮ ನವೋದ್ಯಮಗಳ ಮಹತ್ವಾಕಾಂಕ್ಷೆ ಬಹಳ ಉನ್ನತ ಮಟ್ಟದಲ್ಲಿತ್ತು. ಭಾರತೀಯ ನವೋದ್ಯಮಗಳಿಗೆ ಹೂಡಿಕೆ ಮಾಡುವುದಕ್ಕೂ ಹೂಡಿಕೆದಾರರ ಪ್ರತಿಕ್ರಿಯೆ ಹಿಂದೆಂದಿಗಿಂತಲೂ ಬಹಳ ಉತ್ತಮವಾಗಿತ್ತು.
ದಾಖಲೆ ಪ್ರಮಾಣದಲ್ಲಿ ನವೋದ್ಯಮಗಳ ಪಟ್ಟಿ ಆಗುತ್ತಿರುವುದು ಭಾರತೀಯ ಕಂಪೆನಿಗಳ ಮತ್ತು ಭಾರತೀಯ ಮಾರುಕಟ್ಟೆಯ ನವ ಮನ್ವಂತರದ ಆರಂಭ. ಭಾರತವು ಅಸಾಮಾನ್ಯ ಅವಕಾಶಗಳನ್ನು ಹೊಂದಿದೆ ಮತ್ತು ಅಲ್ಲಿ ಬೆಳವಣಿಗೆಗೆ ಅದ್ಭುತ ಅವಕಾಶಗಳಿವೆ ಎಂಬುದಕ್ಕೆ ಇದು ಇನ್ನೊಂದು ಸಾಕ್ಷಿ.
ಸ್ನೇಹಿತರೇ,
ಇಂದು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಇರುವ ಉತ್ಸಾಹ ತ್ವರಿತವಾಗಿ ಸುಧಾರಣೆಗಳನ್ನು ತರಲು ಸರಕಾರಕ್ಕೆ ಪ್ರೇರಣೆ ನೀಡುತ್ತಿದೆ. ನಾವು ಜಾರಿಗೆ ತಂದಿರುವ ಸುಧಾರಣೆಗಳು ಸುಲಭದ ನಿರ್ಧಾರಗಳಲ್ಲ. ಅವುಗಳು ಸರಳ ಬದಲಾವಣೆಗಳಲ್ಲ. ಈ ಸುಧಾರಣೆಗಳಿಗೆ ಬಹಳ ಧೀರ್ಘ ಕಾಲದಿಂದ, ದಶಕಗಳಿಂದ ಬೇಡಿಕೆಗಳಿದ್ದವು, ಪ್ರತಿಯೊಬ್ಬರೂ ಅವುಗಳ ಅಗತ್ಯವನ್ನು ಒತ್ತಿ ಹೇಳುತ್ತಿದ್ದರು. ಅಲ್ಲಿ ಬಹಳ ಚರ್ಚೆಯಾಗುತಿತ್ತು. ಆದರೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿರಲಿಲ್ಲ. ಯಾಕೆಂದರೆ ಬದಲಾವಣೆಗಳನ್ನು ತರುವುದು ಬಹಳ ಕಷ್ಟ ಎಂದು ನಂಬಲಾಗಿತ್ತು. ಆದರೆ ನೀವು ನೋಡಿದ್ದೀರಿ, ಅಂತಹ ನಿರ್ಧಾರಗಳನ್ನು ನಾವು ಪೂರ್ಣವಾಗಿ ದೃಢ ನಿರ್ಧಾರದಿಂದ ಹೇಗೆ ಅನುಷ್ಟಾನಕ್ಕೆ ತಂದಿದ್ದೇವೆ ಎಂಬುದನ್ನು. ಈ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿಯೂ, ಸುಧಾರಣೆಗಳ ಪ್ರಕ್ರಿಯೆ ಮುಂದುವರೆದಿದೆ. ಈ ನಿರ್ಧಾರಗಳ ಜೊತೆ ದೇಶವು ಹೇಗೆ ನಿಂತಿದೆ ಎಂಬುದನ್ನೂ ನೀವು ನೋಡಿದ್ದೀರಿ. ವಾಣಿಜ್ಯ ಬಳಕೆಯ ಕಲ್ಲಿದ್ದಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಖಾಸಗಿ ರಂಗದ ಪಾಲುದಾರಿಕೆಯನ್ನು ಮುಕ್ತವಾಗಿ ಉತ್ತೇಜಿಸಲಾಗುತ್ತಿದೆ. ರಕ್ಷಣಾ ವಲಯದಲ್ಲಿಯೂ ದೊಡ್ಡ ಸುಧಾರಣೆಗಳನ್ನು ಆರಂಭಿಸಲಾಗಿದೆ, ಬಾಹ್ಯಾಕಾಶ ಮತ್ತು ಅಣುಶಕ್ತಿ ವಲಯದಲ್ಲಿಯೂ ಖಾಸಗಿ ವಲಯಕ್ಕೆ ಅವಕಾಶ ನೀಡಲಾಗಿದೆ. ಇಂದು ಖಾಸಗಿಯವರಿಗೆ ಕಾರ್ಯತಂತ್ರೇತರ ಮತ್ತು ವ್ಯೂಹಾತ್ಮಕ ವಲಯಗಳಲ್ಲಿಯೂ ಅವಕಾಶಗಳನ್ನು ನೀಡಲಾಗುತ್ತಿದೆ. ಸರಕಾರ ತನ್ನ ನಿಯಂತ್ರಣವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸಿದೆ. ಈ ಎಲ್ಲ ಕಷ್ಟದ ನಿರ್ಧಾರಗಳು ಇಂದು ಸಾಧ್ಯವಾಗಿರುವುದಕ್ಕೆ ಕಾರಣ, ದೇಶವು ತನ್ನ ಖಾಸಗಿ ವಲಯದಲ್ಲಿ ನಂಬಿಕೆ ಇಟ್ಟಿರುವುದು ಮತ್ತು ನಿಮ್ಮೆಲ್ಲರಲ್ಲಿ ನಂಬಿಕೆ ಇಟ್ಟಿರುವುದು. ನಿಮ್ಮ ಕಂಪೆನಿಗಳು (ಖಾಸಗಿ) ಈ ವಲಯಗಳಲ್ಲಿ ಸಕ್ರಿಯವಾಗಿರುವುದರಿಂದ, ಅವುಗಳ ಸಾಧ್ಯತೆ ಕೂಡಾ ಹೆಚ್ಚುತ್ತದೆ. ನಮ್ಮ ಯುವಜನತೆ ಗರಿಷ್ಠ ಅವಕಾಶಗಳನ್ನು ಪಡೆಯುತ್ತಾರೆ ಮತ್ತು ಅನ್ವೇಷಣೆಯ ಹೊಸ ಯುಗ ಆರಂಭಗೊಳ್ಳಲಿದೆ.
ಸ್ನೇಹಿತರೇ,
ನಮ್ಮ ಕೈಗಾರಿಕೋದ್ಯಮದಲ್ಲಿ ದೇಶದ ನಂಬಿಕೆಯ ಫಲ ಇದು. ಇಂದು ವ್ಯಾಪಾರೋದ್ಯಮಕ್ಕೆ ಹಾಗು ಜೀವನಕ್ಕೆ ಅನುಕೂಲಕರ ತಾಣವಾಗಿ ನಮ್ಮಲ್ಲಿಯ ಸ್ಥಿತಿ ಸುಧಾರಿಸುತ್ತಿದೆ. ಕಂಪೆನಿಗಳ ಕಾಯ್ದೆಯಲ್ಲಿ ತಂದ ಸುಧಾರಣೆಗಳು ಇದಕ್ಕೆ ಬಹಳ ದೊಡ್ಡ ಉದಾಹರಣೆ. ಇಂದು ಹಲವಾರು ಪ್ರಸ್ತಾವಗಳನ್ನು ಕ್ರಿಮಿನಲ್ ವ್ಯಾಪ್ತಿಯಿಂದ ತೆಗೆದು ಹಾಕಲಾಗಿದೆ. ಅವುಗಳು ನಮ್ಮ ಉದ್ಯಮಿಗಳಿಗೆ ಬಹಳ ದೊಡ್ಡ ತಲೆನೋವಾಗಿದ್ದವು. ಅದೇ ರೀತಿ ಎಂ.ಎಸ್.ಎಂ.ಇ. ವಲಯವನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಿಂದ ಆ ವಲಯ ಕೆಲವು ನಿರ್ಬಂಧಗಳಿಂದ ಮುಕ್ತವಾಗಲಿದೆ. ರಾಜ್ಯ ಮಟ್ಟದ ಸುಧಾರಣೆಗಳಿಗೂ ವಿಶೇಷ ಒತ್ತನ್ನು ನೀಡಲಾಗಿದೆ. ರಾಜ್ಯಗಳನ್ನು ಕೂಡಾ ಸಹಭಾಗಿಗಳನ್ನಾಗಿ ಮಾಡಲಾಗಿದೆ ಮತ್ತು ಅವುಗಳಿಗೆ ಹೆಚ್ಚುವರಿ ವ್ಯಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಭಾರತೀಯ ನಿರ್ಮಿತ ವಸ್ತುಗಳ ಜೊತೆಗೆ ದೇಶವು ಪಿ.ಎಲ್.ಐ. ಯೋಜನೆಗಳನ್ನು ಅನುಷ್ಟಾನಿಸಲು ತೊಡಗಿದೆ. ಉದ್ಯೋಗ ಮತ್ತು ರಫ್ತನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಸರಕಾರ ಯಾವುದೇ ಮುಲಾಜಿನಲ್ಲಿ ಕಾರ್ಯನಿರ್ವಹಿಸಬೇಕಾದ ಸ್ಥಿತಿ ಇಲ್ಲದೇ ಇರುವುದರಿಂದ ಇಂದು ಈ ಎಲ್ಲಾ ಸುಧಾರಣೆಗಳು ಅನುಷ್ಠಾನಗೊಳ್ಳುತ್ತಿವೆ. ನಮಗೆ ಸುಧಾರಣೆಗಳು ಬದ್ಧತೆಯ ಪ್ರತೀಕವಾಗಿವೆ. ಈಗ ಕೂಡಾ ನಮ್ಮ ಸುಧಾರಣೆಗಳ ವೇಗ ಅದೇ ಸ್ಥಿತಿಯಲ್ಲಿದೆ. ಈ ಸಂಸತ್ ಅಧಿವೇಶನದಲ್ಲಿ ಇಂತಹ ಹಲವು ವಿಧೇಯಕಗಳನ್ನು ಅಂಗೀಕರಿಸಲಾಗಿದೆ, ಅವು ಈ ಪ್ರಯತ್ನಗಳಿಗೆ ಇನ್ನಷ್ಟು ವೇಗವನ್ನು ಒದಗಿಸಿ ಕೊಡಲಿವೆ. ಫ್ಯಾಕ್ಟರಿಂಗ್ ನಿಯಂತ್ರಣ ತಿದ್ದುಪಡಿ ವಿಧೇಯಕ ಸಣ್ಣ ವ್ಯಾಪಾರೋದ್ಯಮಕ್ಕೆ ಬೆಂಬಲ, ನೆರವು ಪಡೆಯಲು ಸಹಾಯ ಮಾಡಲಿದೆ. ಠೇವಣಿ ವಿಮಾ ಮತ್ತು ಮುಂಗಡ ಗ್ಯಾರಂಟಿ ಕಾರ್ಪೋರೇಶನ್ ತಿದ್ದುಪಡಿ ವಿಧೇಯಕ ಸಣ್ಣ ಠೇವಣಿದಾರರ ಹಿತ ಕಾಯಲಿದೆ. ಇತ್ತೀಚೆಗೆ ನಾವು ಹಿಂದಿನ ತಪ್ಪುಗಳನ್ನು, ಪೂರ್ವಾನ್ವಯಗೊಂಡ ತೆರಿಗೆ ನಿರ್ಣಯದ ವಿಧಾನವನ್ನು ತೆಗೆದು ಹಾಕುವ ಮೂಲಕ ಸರಿಪಡಿಸಿದ್ದೇವೆ. ಇದನ್ನು ಉದ್ಯಮ ವಲಯ ಮೆಚ್ಚಿಕೊಂಡ ರೀತಿಯಿಂದ ನನಗೆ ಖಚಿತವಾಗಿ ಗೊತ್ತಾಗಿದೆ, ಇದರಿಂದ ಉದ್ಯಮ ಮತ್ತು ಸರಕಾರದ ನಡುವಣ ನಂಬಿಕೆ ಇನ್ನಷ್ಟು ಹೆಚ್ಚಾಗುತ್ತದೆ ಎಂಬುದಾಗಿ.
ಸ್ನೇಹಿತರೇ,
ರಾಷ್ಟ್ರದ ಹಿತಾಸಕ್ತಿಗಾಗಿ ಭಾರೀ ಅಪಾಯವನ್ನು ಕೈಗೆತ್ತಿಕೊಳ್ಳುವ ಸರಕಾರ ದೇಶದಲ್ಲಿದೆ. ಹಲವಾರು ವರ್ಷಗಳ ಕಾಲ ಜಿ.ಎಸ್.ಟಿ. ಜಾರಿಗೆ ಬರದೆ ಬಾಕಿಯಾಗಿದ್ದುದನ್ನು ನೀವು ಸ್ಮರಿಸಿಕೊಳ್ಳಬಹುದು. ರಾಜಕೀಯ ಅಪಾಯಗಳನ್ನು ಎದುರಿಸುವ ಧೈರ್ಯವನ್ನು ಹಿಂದಿನ ಸರಕಾರ ಮಾಡದೇ ಇದ್ದುದು ಇದಕ್ಕೆ ಕಾರಣ. ನಾವು ಜಿ.ಎಸ್.ಟಿ.ಯನ್ನು ಜಾರಿಗೆ ತಂದಿರುವುದು ಮಾತ್ರವಲ್ಲ, ನಾವು ದಾಖಲೆ ಜಿ.ಎಸ್.ಟಿ. ಸಂಗ್ರಹಕ್ಕೆ ಸಾಕ್ಷಿಯಾಗಿದ್ದೇವೆ. ನಾನು ಇಂತಹ ಹಲವು ಉದಾಹರಣೆಗಳ ಲೆಕ್ಕ ಕೊಡಬಲ್ಲೆ. ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕುವ ಮತ್ತು ಪ್ರತೀ ಗಡಿ ಮಿತಿಯನ್ನು ಹಿಂದಕ್ಕೆ ಸರಿಸುವ, ಅದನ್ನು ವಿಸ್ತರಿಸುವ ಸರಕಾರ ಇಂದು ನಿಮ್ಮ ಮುಂದಿದೆ. ಇಂದಿನ ಸರಕಾರ ಭಾರತೀಯ ಕೈಗಾರಿಕೋದ್ಯಮವನ್ನು ಬಲಪಡಿಸಲು ನಿಮ್ಮಲ್ಲಿ ಸಲಹೆಗಳನ್ನು ಕೇಳುತ್ತಿದೆ.
ಸ್ನೇಹಿತರೇ,
ನಮ್ಮ ಪೂರ್ವಜರು ಹೇಳಿದ್ದಾರೆ– नैकं चक्रं परिभ्रमति, ಅಂದರೆ ಕಾರು ಒಂದೇ ಚಕ್ರದೊಂದಿಗೆ ಓಡಲಾರದು. ಎಲ್ಲಾ ಚಕ್ರಗಳೂ ಸರಿಯಾಗಿ ಚಲಿಸುತ್ತಿರಬೇಕಾಗುತ್ತದೆ. ಆದುದರಿಂದ ಕೈಗಾರಿಕೋದ್ಯಮವೂ ಅಪಾಯಗಳನ್ನು ಎದುರಿಸುವ ಸಹಜ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಆತ್ಮ ನಿರ್ಭರ ಭಾರತದ ನಿರ್ಧಾರವನ್ನು ಕಾರ್ಯಗತ ಮಾಡಲು ನಾವು ಹೊಸ ಮತ್ತು ಕಠಿಣ ಹಾದಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ದೇಶ ಕೂಡಾ ಕೈಗಾರಿಕೆಗಳಿಂದ ಹೂಡಿಕೆ ಮತ್ತು ಉದ್ಯೋಗಾವಕಾಶ ಹೆಚ್ಚಳ ತ್ವರಿತವಾಗಿ ಆಗಬೇಕು ಎಂಬ ನಿರೀಕ್ಷೆಗಳನ್ನು ಹೊಂದಿದೆ. ಸಾರ್ವಜನಿಕ ರಂಗದ ಹೆಜ್ಜೆ ಗುರುತುಗಳನ್ನು ಕಡಿಮೆ ಮಾಡಲು ಮತ್ತು ಅದನ್ನು ತರ್ಕಬದ್ಧಗೊಳಿಸಲು ಹೊಸ ಪಿ.ಎಸ್.ಇ. ನೀತಿಯ ಮೂಲಕ ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕೈಗಾರಿಕೋದ್ಯಮ ಕೂಡಾ ತನ್ನ ಕಡೆಯಿಂದ ಗರಿಷ್ಠ ಉತ್ಸಾಹ ಮತ್ತು ಶಕ್ತಿಯನ್ನು ತೋರ್ಪಡಿಸಬೇಕಾಗಿದೆ.
ದೇಶವು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೊಡ್ಡ ಹೆಜ್ಜೆಯೊಂದನ್ನು ಇಟ್ಟಿದೆ. ಶಾಲೆಗಳಿಂದ ಹಿಡಿದು ಕೌಶಲ್ಯಗಳು, ಸಂಶೋಧನೆವರೆಗೆ ಹೊಸ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಅದು ಹಾದಿಯನ್ನು ರೂಪಿಸಿದೆ. ಅದರಲ್ಲಿ ಉದ್ಯಮಕ್ಕೂ ಕ್ರಿಯಾತ್ಮಕ ಪಾತ್ರವಿದೆ. ನಾವು ಬಹಳ ಗಂಭೀರವಾಗಿ ಕೆಲಸ ಮಾಡಬೇಕಾಗಿದೆ. ಸಂಶೋಧನೆಯಲ್ಲಿ ಹೂಡಿಕೆ ಹಾಗು ಅಭಿವೃದ್ಧಿಯ ನಿಟ್ಟಿನಲ್ಲಿ ವಿಶೇಷ ಗಮನ ಕೊಡಬೇಕಾಗಿದೆ. ಆತ್ಮ ನಿರ್ಭರ ಭಾರತಕ್ಕಾಗಿ ನಾವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಮ್ಮ ಹೂಡಿಕೆಯನ್ನು ಹಲವು ಪಟ್ಟು ಹೆಚ್ಚಿಸಬೇಕಾಗಿದೆ. ಮತ್ತು ಇದು ಸರಕಾರವೊಂದರಿಂದಲೇ ಸಾಧ್ಯವಾಗುವಂತಹದಲ್ಲ. ಇದಕ್ಕೆ ಕೈಗಾರಿಕಾ ಸಹಭಾಗಿತ್ವ ಬಹಳ ದೊಡ್ಡ ಪ್ರಮಾಣದಲ್ಲಿ ಬೇಕು. ನಮ್ಮ ಗುರಿ ಬ್ರಾಂಡ್ ಇಂಡಿಯಾವನ್ನು ಬಲಪಡಿಸುವಂತಹದು. ದೇಶಕ್ಕೆ ಸಮೃದ್ಧಿಯನ್ನುಂಟು ಮಾಡುವುದು ಮತ್ತು ಗೌರವ ಲಭಿಸುವಂತೆ ಮಾಡುವುದು ನಮ್ಮ ಗುರಿ. ಈ ಗುರಿಯನ್ನು ಸಾಧಿಸಲು ನಾವು ನಮ್ಮ ಸಹಭಾಗಿತ್ವವನ್ನು ಬಲಪಡಿಸಬೇಕು. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಿಮ್ಮ ಎಲ್ಲಾ ಸಲಹೆಗಳನ್ನು ಗಮನಿಸಲು ನಾನು ಸದಾ ಲಭ್ಯನಿರುತ್ತೇನೆ. ಸ್ವಾತಂತ್ರ್ಯದ ಈ ಅಮೃತ ಮಹೋತ್ಸವ ಸಂದರ್ಭದಲ್ಲಿ ನಿಮಗೆಲ್ಲರಿಗೂ ಹೊಸ ದೃಢ ಸಂಕಲ್ಪಗಳನ್ನು ಮಾಡಲು ಪ್ರೇರಣೆ ದೊರೆಯಲಿ. ಮತ್ತು ನೀವೆಲ್ಲರೂ ಬದ್ಧತೆಯಿಂದ ಹಾಗು ಹೊಸ ಶಕ್ತಿ, ಸ್ಥೈರ್ಯದೊಂದಿಗೆ ಮುಂದೆ ಬರುವಂತಾಗಲಿ!.ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು!. ಧನ್ಯವಾದಗಳು.
ಘೋಷಣೆ: ಇದು ಪ್ರಧಾನ ಮಂತ್ರಿಯವರ ಭಾಷಣದ ಸರಿ ಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
Addressing the #CIIAnnualSession2021. Watch. https://t.co/HU8zczBL6g
— Narendra Modi (@narendramodi) August 11, 2021
CII की ये बैठक इस बार 75वें स्वतंत्रता दिवस के माहौल में, आज़ादी के अमृत महोत्सव के बीच हो रही है।
— PMO India (@PMOIndia) August 11, 2021
ये बहुत बड़ा अवसर है, भारतीय उद्योग जगत के नए संकल्पों के लिए, नए लक्ष्यों के लिए।
आत्मनिर्भर भारत अभियान की सफलता का बहुत बड़ा दायित्व, भारतीय उद्योगों पर है: PM @narendramodi
आज का नया भारत, नई दुनिया के साथ चलने के लिए तैयार है, तत्पर है।
— PMO India (@PMOIndia) August 11, 2021
जो भारत कभी विदेशी निवेश से आशंकित था, आज वो हर प्रकार के निवेश का स्वागत कर रहा है: PM @narendramodi
एक समय था जब हमें लगता था कि जो कुछ भी विदेशी है, वही बेहतर है।
— PMO India (@PMOIndia) August 11, 2021
इस psychology का परिणाम क्या हुआ, ये आप जैसे industry के दिग्गज भलीभांति समझते हैं।
हमारे अपने brand भी, जो हमने सालों की मेहनत के बाद खड़े किए थे, उनको विदेशी नामों से ही प्रचारित किया जाता था: PM @narendramodi
आज स्थिति तेज़ी से बदल रही है।
— PMO India (@PMOIndia) August 11, 2021
आज देशवासियों की भावना, भारत में बने प्रॉडक्ट्स के साथ है।
कंपनी भारतीय हो, ये जरूरी नहीं, लेकिन आज हर भारतीय, भारत में बने प्रॉडक्ट्स को अपनाना चाहता है: PM @narendramodi
आज भारत के युवा जब मैदान में उतरते हैं, तो उनमें वो हिचक नहीं होती।
— PMO India (@PMOIndia) August 11, 2021
वो मेहनत करना चाहते हैं, वो रिस्क लेना चाहते हैं, वो नतीजे लाना चाहते हैं।
Yes, We belong to this place- ये भाव आज हम अपने युवाओं में देख रहे हैं।
इसी प्रकार का आत्मविश्वास आज भारत के Startups में है: PM
हमारी industry पर देश के विश्वास का ही नतीजा है कि आज ease of doing business बढ़ रहा है, और ease of living में इजाफा हो रहा है।
— PMO India (@PMOIndia) August 11, 2021
Companies act में किए गए बदलाव इसका बहुत बड़ा उदाहरण हैं: PM @narendramodi
आज देश में वो सरकार है जो राष्ट्र हित में बड़े से बड़ा risk उठाने के लिए तैयार है।
— PMO India (@PMOIndia) August 11, 2021
GST तो इतने सालों तक अटका ही इसलिए क्योंकि जो पहले सरकार में वो political risk लेने की हिम्मत नहीं जुटा पाए।
हमने न सिर्फ GST लागू किया बल्कि आज हम record GST collection होते देख रहे हैं: PM