ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಪ್ರಾಯೋಜಿತ ಯೋಜನೆಗಳ (ಸಿಎಸ್.ಎಸ್ ಗಳು)ನ್ನು ತರ್ಕಬದ್ಧಗೊಳಿಸುವ ಕುರಿತ ಮುಖ್ಯಮಂತ್ರಿಗಳ ಉಪ ಗುಂಪಿನ ಪ್ರಮುಖ ಶಿಫಾರಸುಗಳಿಗೆ ತನ್ನ ಅನುಮೋದನೆ ನೀಡಿದೆ. ಉಪ ಗುಂಪು 66 ಸಿ.ಎಸ್.ಎಸ್.ಗಳನ್ನು ಪರಿಶೀಲಿಸಿತು ಮತ್ತು ಸಿ.ಎಸ್.ಎಸ್.ಗಳ ಸಂಖ್ಯೆ ಸಾಮಾನ್ಯವಾಗಿ 30 ಮೀರಬಾರದು ಎಂದು ಶಿಫಾರಸು ಮಾಡಿತು. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಉಪ ಗುಂಪಿನ್ನು ಪ್ರತಿನಿಧಿಸುವ ರಾಜ್ಯಗಳಲ್ಲಿ ಅಷ್ಟೇ ಅಲ್ಲ ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೂಡ ಕೇಂದ್ರ ಸಚಿವಾಲಯಗಳು/ಇಲಾಖೆಗಳೊಂದಿಗೆ ಪ್ರಾದೇಶಿಕ ಸಮಾಲೋಚನೆ ಮತ್ತು ಸಭೆ ಮೂಲಕ ಒಮ್ಮತ ಮೂಡಿದೆ.
ಸಿ.ಎಸ್.ಎಸ್.ಗಳ ತರ್ಕಬದ್ಧಗೊಳಿಸುವುದು ನಿರ್ದಿಷ್ಟ ಮಧ್ಯಪ್ರವೇಶಗಳೊಂದಿಗೆ ಸಂಪನ್ಮೂಲದ ಗರಿಷ್ಠ ಬಳಕೆಯ ಖಾತ್ರಿ ಒದಗಿಸುತ್ತದೆ. ಇದು ಯಾವ ಗುಂಪುಗಳನ್ನು ಗುರಿಯಾಗಿಸಿಕೊಂಡಿದೆಯೋ ಅವರಿಗೆ ವಿಸ್ತೃತ ಸೌಲಭ್ಯ ತಲುಪುವ ಖಾತ್ರಿಯನ್ನೂ ಒದಗಿಸುತ್ತದೆ.
2015ರ ಫೆಬ್ರವರಿ 8ರಂದು ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಕೈಗೊಂಡ ನಿರ್ಧಾರದ ಅನುಸರಣೆಗಾಗಿ ಈ ಉಪ ಗುಂಪು ರಚಿಸಲಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯಗಳು /ಕೇಂದ್ರಾಂಡಳಿತ ಪ್ರದೇಶಗಳ ನಡುವೆ ಉದ್ಭವಿಸುವ ಸಮಸ್ಯೆಗಳನ್ನು ಬಗೆಹರಿಸುವುದು ಮತ್ತು ನಾವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಮುನ್ನೋಟ 22ರ ಗುರಿಗಳ ಸಾಕಾರಕ್ಕಾಗಿ ಸಹಕಾರ ಒಕ್ಕೂಟ ವ್ಯವಸ್ಥೆ ಅಡಿ ಟೀಮ್ ಇಂಡಿಯಾ ಆಗಿ ದುಡಿಯುವುದು ಈ ಉಪ ಗುಂಪಿನ ಪ್ರಧಾನ ಮಾರ್ಗದರ್ಶಿ ನೀತಿಯಾಗಿದೆ. ಈ ಮುನ್ನೋಟದ ಉದ್ದೇಶಗಳು ವಿಸ್ತಾರವಾಗಿ: (ಎ) ಎಲ್ಲ ನಾಗರಿಕರಿಗೂ ಸಮಾನವಾಗಿ ಮತ್ತು ಗೌರವ ಮತ್ತು ಆತ್ಮಾಭಿಮಾನದಿಂದ ಜೀವಿಸುವುದರ ಖಾತ್ರಿ ಒದಗಿಸುವಂತಹಗ ಮೂಲಭೂತವಾದ ಸೌಲಭ್ಯಗಳನ್ನು ಒದಗಿಸುವುದು, ಮತ್ತು (ಬಿ) ಪ್ರತಿಯೊಬ್ಬ ನಾಗರಿಕರಿಗೂ ಆಕೆಯ/ಆತನ ಸಂಪೂರ್ಣ ಸಾಮರ್ಥ್ಯದ ಸಾಕಾರಕ್ಕೆ ಸೂಕ್ತ ಅವಕಾಶ ಒದಗಿಸುವುದು.
4. ಉಪ ಗುಂಪಿನ ಪ್ರಮುಖ ಶಿಫಾರಸುಗಳು ಈ ಕೆಳಗಿನಂತಿವೆ:
ಎ) ಯೋಜನೆಗಳ ಸಂಖ್ಯೆ: ಒಟ್ಟು ಯೋಜನೆಗಳ ಸಂಖ್ಯೆ 30ನ್ನು ಮೀರಬಾರದು.
b) ಯೋಜನೆಗಳ ವರ್ಗೀಕರಣ: ಹಾಲಿ ಇರುವ ಸಿ.ಎಸ್.ಎಸ್.ಗಳನ್ನು ಪ್ರಮುಖ ಮತ್ತು ಐಚ್ಛಿಕ ಯೋಜನೆ ಎಂದು ವಿಭಾಗಿಸುವುದು.
i. ಪ್ರಮುಖ ಯೋಜನೆಗಳು: ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮವನ್ನು ಒಳಗೊಂಡು ರಾಜ್ಯ ಮತ್ತು ಕೇಂದ್ರ ಒಗ್ಗೂಡಿ ಟೀಮ್ ಇಂಡಿಯಾ ಸ್ಫೂರ್ತಿಯಲ್ಲಿ ಕೆಲಸ ಮಾಡುವಂಥ ಯೋಜನೆಗಳ ಮೇಲೆ ಸಿ.ಎಸ್.ಎಸ್. ಗಮನ.
ii. ಪ್ರಮುಖವಾದುದರಲ್ಲೇ ಪ್ರಮುಖವಾದ ಯೋಜನೆಗಳು: ಸಾಮಾಜಿಕ ರಕ್ಷಣೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆ ಪ್ರಮುಖವಾದ್ದರಲ್ಲೇ ಪ್ರಮುಖವನ್ನು ರೂಪಿಸುತ್ತದೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ಲಭ್ಯವಿರುವ ನಿಧಿಯನ್ನು ಮೊದಲು ತುಂಬುತ್ತದೆ.
iii. ಐಚ್ಛಿಕ ಯೋಜನೆಗಳು: ಇದು ರಾಜ್ಯಗಳು ತಾವು ಅನುಷ್ಠಾನಗೊಳಿಸಲು ಇಚ್ಛಿಸುವ ಯೋಜನೆಗಳಾಗಿವೆ. ಈ ಯೋಜನೆಗಳಿಗೆ ಹಣವನ್ನು ಹಣಕಾಸು ಸಚಿವಾಲಯದಿಂದ ಭಾರಿ ಮೊತ್ತದ ರೂಪದಲ್ಲಿ ಮಂಜೂರು ಮಾಡಲಾಗುತ್ತದೆ.
ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮ ಪಟ್ಟಿಗೆ ಅನುಗುಣವಾಗಿ ಕೇಂದ್ರ ಪ್ರಾಯೋಜಿತ ಯೋಜನೆಗಳ ಪಟ್ಟಿ:
SI.No.
ಕೇಂದ್ರ ಪ್ರಾಯೋಜಿತ ಯೋಜನೆಗಳ ಹೆಸರು (ಸಿಎಸ್ಎಸ್ ಗಳು)
(A)
ಮುಖ್ಯದಲ್ಲೇ ಮುಖ್ಯವಾದ ಯೋಜನೆಗಳು
1
ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ
2
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
3
ಪರಿಶಿಷ್ಟ ಜಾತಿಯ ಅಭಿವೃದ್ಧಿಗೆ ಪ್ರಧಾನ ಯೋಜನೆ
4
ಪರಿಶಿಷ್ಟ ವರ್ಗದ ಅಭಿವೃದ್ಧಿಗೆ ಪ್ರಧಾನ ಯೋಜನೆ
5
ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪ್ರಧಾನ ಯೋಜನೆ
6
ಹಿಂದುಳಿದ ವರ್ಗದವರ, ದಿವ್ಯಾಂಗಿಗಳ ಮತ್ತು ಇತರ ದುರ್ಬಲ ಗುಂಪಿನ ಅಭಿವೃದ್ಧಿಗೆ ಪ್ರಧಾನ ಯೋಜನೆ
(B)
ಪ್ರಮುಖ ಯೋಜನೆಗಳು
7
ಹಸಿರು ಕ್ರಾಂತಿ (ಕೃಷಿ ಉನ್ನತಿ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ)
8
ಶ್ವೇತ ಕ್ರಾಂತಿ (ಪಶು ಸಂಗೋಪನೆ ಮತ್ತು ಹೈನುಗಾರಿಕೆ)
9
ನೀಲಿ ಕ್ರಾಂತಿ (ಸಮಗ್ರ ಮೀನುಗಾರಿಕೆ ಅಭಿವೃದ್ಧಿ)
10
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ
a
ಎಲ್ಲ ಕ್ಷೇತ್ರಕ್ಕೂ ನೀರು
b
ಪ್ರತಿ ಹನಿ ಹೆಚ್ಚು ಇಳುವರಿ
c
ಸಂಘಟಿತ ಜಲಾಶ್ರಯ ಅಭಿವೃದ್ಧಿ ಯೋಜನೆ
d
ತ್ವರಿತ ನೀರಾವರಿ ಸೌಲಭ್ಯ ಮತ್ತು ಪ್ರವಾಹ ನಿರ್ವಹಣೆ ಕಾರ್ಯಕ್ರಮ
11
ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ (PMGSY)
12
ಪ್ರಧಾನಮಂತ್ರಿ ವಸತಿ ಯೋಜನ (PMAY)
a
PMAY-ಗ್ರಾಮೀಣ
b
PMAY-ನಗರ
13
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಅಭಿಯಾನ
14
ಸ್ವಚ್ಛ ಭಾರತ ಅಭಿಯಾನ (ಎಸ್.ಬಿ.ಎಂ.)
ಎಸ್.ಬಿ.ಎಂ – ಗ್ರಾಮೀಣ
b
ಎಸ್.ಬಿ.ಎಂ- ನಗರ
15
ರಾಷ್ಟ್ರೀಯ ಆರೋಗ್ಯ ಅಭಿಯಾನ(NHM)
a
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ
b
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ
c
ಪ್ರದೇಶ ಆರೋಗ್ಯ ರಕ್ಷಣೆ ಕಾರ್ಯಕ್ರಮ
d
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಮಾನವ ಸಂಪನ್ಮೂಲ
e
ರಾಷ್ಟ್ರೀಯ ಆಯುಷ್ ಅಭಿಯಾನ
16
ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ (ಈ ಮುನ್ನ ಇದು RSBY)
17
ರಾಷ್ಟ್ರೀಯ ಶಿಕ್ಷಣ ಅಭಿಯಾನ (NEM)
a
ಸರ್ವ ಶಿಕ್ಷಣ ಅಭಿಯಾನ
b
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ
c
ಶಿಕ್ಷಕರ ತರಬೇತಿ ಮತ್ತು ವಯಸ್ಕರ ಶಿಕ್ಷಣ
d
ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ
18
ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ
19
ಸಂಘಟಿತ ಮಕ್ಕಳ ಅಭಿವೃದ್ಧಿ ಸೇವೆಗಳು
a
ಅಂಗನವಾಡಿ ಸೇವೆಗಳು
b
ರಾಷ್ಟ್ರೀಯ ಪೌಷ್ಟಿಕ ಅಭಿಯಾನ
c
ಹೆರಿಗೆ ಸೌಲಭ್ಯ ಕಾರ್ಯಕ್ರಮ
d
ಅಪ್ರಾಪ್ತ ವಯಸ್ಕ ಬಾಲಕಿಯರಿಗೆ ಯೋಜನೆ
e
ಇಂಟಿಗ್ರೇಟೆಡ್ ಮಕ್ಕಳ ಸಂರಕ್ಷಣೆ ಯೋಜನೆ
f
ರಾಷ್ಟ್ರೀಯ ಶಿಶುವಿಹಾರ ಯೋಜನೆ
20
ಮಹಿಳೆಯರ ಸಬಲೀಕರಣ ಮತ್ತು ಸಂರಕ್ಷಣೆ ಅಭಿಯಾನ, (ಹೆಣ್ಣು ಮಕ್ಕಳನ್ನು ರಕ್ಷಿಸಿ- ಹೆಣ್ಣು ಮಕ್ಕಳನ್ನು ಓದಿಸಿ, ಒನ್ ಸ್ಟಾಪ್ ಸೆಂಟರ್, ಮಹಿಳಾ ಸಹಾಯವಾಣಿ, ವಸತಿನಿಲಯ, ಸ್ವಾಧಾರ ಗೃಹ, ಲಿಂಗ ಆಧಾರದ ಆಯವ್ಯಯ ಇತ್ಯಾದಿ)
21
ರಾಷ್ಟ್ರೀಯ ಜೀವನೋಪಾಯ ಅಭಿಯಾನ (NLM)
a
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ
b
ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ
22
ಉದ್ಯೋಗ ಮತ್ತು ಕೌಶಲ ಅಭಿವೃದ್ಧಿ
a
ಉದ್ಯೋಗ ಸೃಜನ ಕಾರ್ಯಕ್ರಮ
b
ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ
23
ಪರಿಸರ, ಅರಣ್ಯ ಮತ್ತು ವನ್ಯಜೀವಿ (EFWL)
a
ಹಸಿರು ಭಾರತ ರಾಷ್ಟ್ರೀಯ ಕಾರ್ಯಕ್ರಮ
b
ಸಂಘಟಿತ ವನ್ಯಜೀವಿ ಆವಾಸಸ್ಥಾನಗಳ ಅಭಿವೃದ್ಧಿ
c
ನೈಸರ್ಗಿಕ ಸಂಪನ್ಮೂಲ ಮತ್ತು ಪರಿಸರ ವ್ಯವಸ್ಥೆಯ ಸಂರಕ್ಷಣೆ
d
ರಾಷ್ಟ್ರೀಯ ನದಿ ಸಂರಕ್ಷಣೆ ಕಾರ್ಯಕ್ರಮ
24
ನಗರ ಪುನರುತ್ಥಾನ ಅಭಿಯಾನ (ಅಮೃತ್ ಮತ್ತು ಸ್ಮಾರ್ಟ್ ಸಿಟಿ ಯೋಜನೆ)
25
ಪೊಲೀಸ್ ಪಡೆಗಳ ಆಧುನೀಕರಣ (ಭದ್ರತೆ ಕುರಿತ ವೆಚ್ಚಗಳೂ ಸೇರಿದಂತೆ)
26
ನ್ಯಾಯಾಂಗಕ್ಕೆ ಮೂಲಸೌಕರ್ಯ ಸೌಲಭ್ಯ (ಗ್ರಾಮ ನ್ಯಾಯಾಲಯ ಮತ್ತು ಇ – ನ್ಯಾಯಾಲಯ ಸೇರಿ
(C)
ಐಚ್ಛಿಕ ಯೋಜನೆಗಳು
27
ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ
28
ಶ್ಯಾಮ್ ಪ್ರಸಾದ್ ಮುಖರ್ಜಿ ರುರ್ಬನ್ ಅಭಿಯಾನ
ಹಣಕಾಸು ನಿಧಿಯ ಸ್ವರೂಪ ಈ ಕೆಳಗಿನಂತೆ ಇರುತ್ತದೆ:
ಪ್ರಮುಖವಾದ್ದರಲ್ಲೇ ಪ್ರಮುಖಯೋಜನೆಗಳು:
ಹಾಲಿ ಇರುವ ಪ್ರಮುಖವಾದುದರಲ್ಲೇ ಪ್ರಮುಖ ಯೋಜನೆಗಳ ನಿಧಿ ಸ್ವರೂಪವೇ ಮುಂದುವರಿಯುತ್ತದೆ
ಪ್ರಮುಖ ಯೋಜನೆಗಳು:
(a) 8 ಈಶಾನ್ಯ ರಾಜ್ಯಗಳು ಮತ್ತು 3 ಹಿಮಾಲಯ ರಾಜ್ಯಗಳಿಗೆ: ಕೇಂದ್ರ: ರಾಜ್ಯ: 90:10
(b) ಇತರ ರಾಜ್ಯಗಳಿಗೆ: ಕೇಂದ್ರ: ರಾಜ್ಯ:60:40
(c) ಕೇಂದ್ರಾಡಳಿತ ಪ್ರದೇಶಗಳಿಗೆ (ಶಾಸಕಾಂಗ ಇಲ್ಲದ): ಕೇಂದ್ರ 100% ಮತ್ತು ಶಾಸಕಾಂಗ ಇರುವುದಕ್ಕೆ ಹಾಲಿ ನಿಧಿ ವ್ಯವಸ್ಥೆ ಮುಂದುವರಿಯುತ್ತದೆ.
ಐಚ್ಛಿಕ ಯೋಜನೆಗಳು:
a) 8 ಈಶಾನ್ಯ ರಾಜ್ಯಗಳು ಮತ್ತು 3 ಹಿಮಾಲಯ ರಾಜ್ಯಗಳಿಗೆ: ಕೇಂದ್ರ: ರಾಜ್ಯ: 80:20
b) ಇತರ ರಾಜ್ಯಗಳಿಗೆ: ಕೇಂದ್ರ: ರಾಜ್ಯ:50:50
c) ಕೇಂದ್ರಾಡಳಿತ ಪ್ರದೇಶಗಳಿಗೆ: (i) (ಶಾಸಕಾಂಗ ಇಲ್ಲದ) – ಕೇಂದ್ರ100%
(ii) ಶಾಸಕಾಂಗ ಇರುವ ಕೇಂದ್ರಾಡಳಿತ ಪ್ರದೇಶಗಳು: ಕೇಂದ್ರ: ಯುಟಿ:80:20
ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳಿಗೆ ನಮ್ಯತೆ ಮತ್ತು ನಮ್ಯ -ನಿಧಿ:
ಎ) ಸಿಎಸ್ ಎಸ್ ವಿನ್ಯಾಸಗೊಳಿಸುವಾಗ ಕೇಂದ್ರ ಸಚಿವಾಲಯಗಳು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್ ಕೆ ವಿ ವೈ) ಅಡಿ ಲಭ್ಯವಿರುವಂತೆ ರಾಜ್ಯಗಳಿಗೆ ಕಾರ್ಯಕ್ರಮಗಳ ಆಯ್ಕೆಯ ವಿಚಾರದಲ್ಲಿ ನಮ್ಯತೆಯನ್ನು ಅನುಮತಿಸುತ್ತವೆ.
ಬಿ) ಅದಕ್ಕಿಂತ ಮಿಗಿಲಾಗಿ ಪ್ರತಿ ಯೋಜನೆ ಅಡಿಯಲ್ಲಿ ಮಾಡಲಾಗುವ ಒಟ್ಟಾರೆ ಹಂಚಿಕೆಯಲ್ಲಿ ರಾಜ್ಯಗಳಿಗೆ ಪ್ರತಿ ಸಿ.ಎಸ್.ಎಸ್.ಗೆ ಲಭ್ಯವಿರುವ ನಮ್ಯ ನಿಧಿಗಳನ್ನು ಪ್ರಸಕ್ತ ಇರುವ ಶೇ.10ರ ಮಟ್ಟದಿಂದ ಶೇ.25ಕ್ಕೆ ಮತ್ತು ಕೇಂದ್ರಾಂಡಳಿತ ಪ್ರದೇಶಕ್ಕೆ ಶೇ.30ಕ್ಕೆ ಹೆಚ್ಚಿಸಲಾಗುತ್ತಿದೆ. ಇದು ರಾಜ್ಯಗಳ/ಯುಟಿಗಳ ವೈಯಕ್ತಿಕ ಅಗತ್ಯಕ್ಕೆ ಪೂರಕವಾಗಿ ಉತ್ತಮವಾಗಿ ಯೋಜನೆ ಅನುಷ್ಠಾನಕ್ಕೆ ಸಹಕಾರಿಯಾಗುತ್ತದೆ.
AD/VBA/SH