ಇಂಡಿಯನ್ ಆರ್ಥೊಡಾಕ್ಸ್ ಚರ್ಚ್ (ಭಾರತೀಯ ಕಡು ಸಂಪ್ರದಾಯನಿಷ್ಠ ಚರ್ಚ್)ನ ಪರಮೋಚ್ಚ ಮುಖ್ಯಸ್ಥ ಮೊರಾನ್ ಮಾರ್ ಬೆಸೆಲಿಯೊಸ್ ಮಾರ್ಥೊಮಾ ಪೌಲಸ್-2 ಅವರ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಪಾರ ದುಃಖ ಮತ್ತು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ, “ಮೊರಾನ್ ಮಾರ್ ಬೆಸೆಲಿಯೊಸ್ ಮಾರ್ಥೊಮಾ ಪೌಲಸ್-2 ಅವರ ನಿಧನದಿಂದ ಅತೀವ ದುಃಖ ಉಂಟಾಗಿದೆ. ಸೇವೆ ಮತ್ತು ಸಹಾನುಭೂತಿಯ ಶ್ರೀಮಂತ ಪರಂಪರೆಯನ್ನು ಅವರು ಬಿಟ್ಟುಹೋಗಿದ್ದಾರೆ. ದುಃಖ ಮತ್ತು ಶೋಕದ ಈ ಸಂದರ್ಭದಲ್ಲಿ ಆರ್ಥೊಡಾಕ್ಸ್ ಚರ್ಚ್ ನ ಸದಸ್ಯರೆಲ್ಲರ ಜತೆ ನಾನು ದುಃಖ ಹಂಚಿಕೊಳ್ಳುತ್ತೇನೆ, ಚಿರ ಶಾಂತಿ ನೆಲೆಸಲಿ” ಎಂದು ಅವರು ಸಂತಾಪ ಸೂಚಿಸಿದ್ದಾರೆ.
***
Saddened by the passing away of His Holiness Moran Mar Baselios Marthoma Paulos II, the Supreme Head of Indian Orthodox Church. He leaves behind a rich legacy of service and compassion. In this hour of grief, my thoughts are with the members of the Orthodox Church. RIP.
— Narendra Modi (@narendramodi) July 12, 2021