ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತ ಸರ್ಕಾರದ ಗಣಿ ಸಚಿವಾಲಯ ಮತ್ತು ಅರ್ಜೆಂಟೀನಾ ಗಣರಾಜ್ಯದ ಉತ್ಪಾದಕ ಅಭಿವೃದ್ಧಿ ಸಚಿವಾಲಯದ ಗಣಿಗಾರಿಕೆ ನೀತಿ ಇಲಾಖೆಯ ನಡುವಿನ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಅನುಮೋದನೆ ನೀಡಿದೆ.
ಈ ಒಪ್ಪಂದವು, ಖನಿಜ ಸಂಪನ್ಮೂಲ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನವನ್ನು ಒದಗಿಸುತ್ತದೆ.
ಲಿಥಿಯಂನ ಹೊರತೆಗೆಯುವಿಕೆ, ಗಣಿಗಾರಿಕೆ ಮತ್ತು ಪ್ರಯೋಜನ ಹೆಚ್ಚಳ ಸೇರಿದಂತೆ ಖನಿಜಗಳ ಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಸಹಕಾರದಂತಹ ಚಟುವಟಿಕೆಗಳನ್ನು ಬಲಪಡಿಸುವುದು; ಪರಸ್ಪರ ಲಾಭಕ್ಕಾಗಿ ಮೂಲ ಲೋಹಗಳು, ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳ ಕ್ಷೇತ್ರದಲ್ಲಿ ಜಂಟಿ ಉದ್ಯಮವನ್ನು ರೂಪಿಸುವ ಸಾಧ್ಯತೆಗಳು; ತಾಂತ್ರಿಕ ಮತ್ತು ವೈಜ್ಞಾನಿಕ ಮಾಹಿತಿಯ ವಿನಿಮಯ ಮತ್ತು ವಿಚಾರಗಳು ಮತ್ತು ಜ್ಞಾನದ ವಿನಿಮಯ; ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ; ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಅಭಿವೃದ್ಧಿಯ ಉತ್ತೇಜನ ಒಪ್ಪಂದದ ಉದ್ದೇಶಗಳಾಗಿವೆ.
***