Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಿಟೋರಿಯಾದಲ್ಲಿನ ಭಾರತ- ದಕ್ಷಿಣ ಆಫ್ರಿಕಾ ವಾಣಿಜ್ಯ ಸಭೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆ (8 ಜುಲೈ 2016)

ಪ್ರಿಟೋರಿಯಾದಲ್ಲಿನ ಭಾರತ- ದಕ್ಷಿಣ ಆಫ್ರಿಕಾ ವಾಣಿಜ್ಯ ಸಭೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆ (8 ಜುಲೈ 2016)

ಪ್ರಿಟೋರಿಯಾದಲ್ಲಿನ ಭಾರತ- ದಕ್ಷಿಣ ಆಫ್ರಿಕಾ ವಾಣಿಜ್ಯ ಸಭೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆ (8 ಜುಲೈ 2016)


ದಕ್ಷಿಣ ಆಫ್ರಿಕಾ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಜಾಕೋಬ್ ಜುಮಾ ಅವರೇ,
ಅಂತಾರಾಷ್ಟ್ರೀಯ ಬಾಂಧವ್ಯ ಮತ್ತು ಸಹಕಾರದ ಮಾನ್ಯ ಸಚಿವರೇ,
ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಮಾನ್ಯ ಸಚಿವರೇ,
ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಕೈಗಾರಿಕೆಗಳ ನಾಯಕರೇ,
ಮಹಿಳೆಯರೇ ಮತ್ತು ಮಾನ್ಯರೇ!

ನಾನು ಇಂದು ನಿಮ್ಮೊಂದಿಗೆ ಇರುವುದಕ್ಕೆ ಸಂತೋಷ ಪಡುತ್ತೇನೆ.
ಭಾರತ-ದಕ್ಷಿಣ ಆಫ್ರಿಕಾ ಬಾಂಧವ್ಯ ಇತಿಹಾಸದಲ್ಲಿ ಭದ್ರ ಬುನಾದಿ ಹಾಕಿವೆ.
·         ನಾವಿಬ್ಬರೂ ಒಟ್ಟಿಗೆ ನಿರ್ದಿಷ್ಟ ಸ್ಥಾನದ ಬಗ್ಗೆ ನಿರ್ದೇಶಿತರಾಗಿದ್ದೇವೆ.
·       ನಾವು ಕನಸುಗಳೊಂದಿಗೂ ಜೊತೆಯಲ್ಲೇ ಸಾಗಿದ್ದೇವೆ.
ನಮ್ಮ ಇತಿಹಾಸ ಹಲವು ಸಮಾನ ಅಧ್ಯಾಯಗಳನ್ನು ಒಳಗೊಂಡಿದೆ.
ಹೋರಾಟ ಮತ್ತು ತ್ಯಾಗದಿಂದ, ನಾವು ಇತಿಹಾಸದ ಪಠ್ಯವನ್ನೇ ಬದಲಾಯಿಸಿದ್ದೇವೆ.
ಈ ಪ್ರಕ್ರಿಯೆಯಲ್ಲಿ, ಅದೃಷ್ಟವಶಾತ್,
ನಮಗೆ ಶ್ರೇಷ್ಠ ನಾಯಕರ ಮಾರ್ಗದರ್ಶನ ದೊರೆತಿದೆ, ಅದರಲ್ಲಿ ಮಾನವತೆಯ ಕಿರಣ ಕಂಡಿದೆ

ಸ್ನೇಹಿತರೇ,
ನೆಲ್ಸನ್ ಮಂಡೇಲಾ ಮತ್ತು ಮಹಾತ್ಮಾ ಗಾಂಧಿ ಅವರಂಥ ನಮ್ಮ ನಾಯಕರು, ನಮಗೆ ರಾಜಕೀಯ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ.
ಈಗ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡುವ ಸಮಯ ಬಂದಿದೆ.
ಹೀಗಾಗಿ, ನಮ್ಮ ಸಂಬಂಧಗಳು ನಮ್ಮ ಜನರ ಆಕಾಂಕ್ಷೆಗಳನ್ನು ಪೂರೈಸಲು ನಮ್ಮ ಸಾಮಾನ್ಯ ಆಕಾಂಕ್ಷೆಗಳ ಮೇಲೆ ನಿಂತಿವೆ.
·        ಪ್ರತೀಕೂಲತೆಯಲ್ಲೂ ನಾವು ಸ್ನೇಹಿತರಾಗಿದ್ದೇವೆ;
·        ಈಗ ನಾವು ಅವಕಾಶಗಳಲ್ಲಿ ಹೊಣೆಯನ್ನು(ಫ್ರಾಂಚೈಸ್) ನಿರ್ವಹಿಸಬೇಕು.

ನಮ್ಮ ಶ್ರೇಷ್ಠ ನಾಯಕರ ಆಶೀರ್ವಾದದೊಂದಿಗೆ, ಎರಡೂ ರಾಷ್ಟ್ರಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದೇವೆ.
ಬ್ರಿಕ್ಸ್ ಆರ್ಥಿಕತೆಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ಎರಡೂ ಪ್ರಮುಖ ರಾಷ್ಟ್ರಗಳಾಗಿವೆ.
ನಮ್ಮ ದೇಶದ ಜನರು ಮತ್ತು ವಿಶ್ವದ ಜನತೆ ಬಹು ದೊಡ್ಡ ನಿರೀಕ್ಷೆಗಳೊಂದಿಗೆ ನಮ್ಮತ್ತ ನೋಡುತ್ತಿದ್ದಾರೆ.
ನಾವು ಈ ಅವಳಿ ನಿರೀಕ್ಷೆಗಳ ಈಡೇರಿಕೆಗೆ ಕೈಜೋಡಿಸಬಹುದಾಗಿದೆ.
ನಾವು ಈ ಎಲ್ಲಾ ಸಾಧ್ಯ ಕ್ಷೇತ್ರಗಳಲ್ಲಿ ಅತ್ಯಂತ ಸಕ್ರಿಯ ಮತ್ತು ಫಲಪ್ರದವಾದ ಮಾತುಕತೆ ನಡೆಸಿರುವುದು ಸಂತೋಷದ ವಿಷಯವಾಗಿದೆ.
ಈ ಪ್ರಕ್ರಿಯೆಯಲ್ಲಿ ಇಲ್ಲಿರುವ ಸಭಿಕರೂ ಮಹತ್ವದ ಭಾಗವಾಗಿದ್ದಾರೆ.
ಸ್ನೇಹಿತರೇ,
ನಾನು ಈ ರಾಷ್ಟ್ರಕ್ಕೆ ಭೇಟಿ ನೀಡಲು ಸ್ವಲ್ಪ ತಡ ಮಾಡಿದ್ದೇನೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ.
ಆದಾಗ್ಯೂ, ಅಧ್ಯಕ್ಷ ಜುಮಾ ಮತ್ತು ನಾನು ಕಳೆದ ಎರಡು ವರ್ಷಗಳಲ್ಲಿ ಹಲವು ಬಾರಿ ಭೇಟಿಯಾಗಿದ್ದೇವೆ.
ದಕ್ಷಿಣ ಆಫ್ರಿಕಾವು ಭಾರತದ ಪ್ರಮುಖ ವಾಣಿಜ್ಯ ಮತ್ತು ಹೂಡಿಕೆ ಪಾಲುದಾರ.
ಕಳೆದ ಹತ್ತು ವರ್ಷಗಳಲ್ಲಿ, ನಮ್ಮ ದ್ವಿಪಕ್ಷೀಯ ವಾಣಿಜ್ಯ ಬಹುತೇಕ ಶೇ.380ರಷ್ಟು ವೃದ್ಧಿಯಾಗಿದೆ.
ಹೂಡಿಕೆಯ ವಿಷಯವೂ ಉಜ್ವಲವಾಗಿದೆ.
ಎರಡೂ ಕಡೆಗಳಿಂದ ಹೂಡಿಕೆ ನಿರಂತರವಾಗಿ ಹರಿಯುತ್ತಿದೆ.
150ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ದಕ್ಷಿಣ ಆಫ್ರಿಕಾದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
ಅದೇ ರೀತಿ ದಕ್ಷಿಣ ಆಫ್ರಿಕಾದ ಹಲವು ಕಂಪನಿಗಳು ಕೂಡ ಭಾರತದಲ್ಲಿ ಉತ್ತಮ ಕಾರ್ಯ ಮಾಡುತ್ತಿವೆ.
ಆದಾಗ್ಯೂ,
ಅದರ ವ್ಯಾಪ್ತಿ ಪ್ರಚಂಡವಾಗಿದೆ.
ಸಾಮರ್ಥ್ಯವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಏಕೆಂದರೆ, ಎರಡೂ ದೇಶಗಳು ತಮ್ಮ ಮೂಲಭೂತ ಆರ್ಥಿಕತೆಯನ್ನು ಬಲಪಡಿಸುತ್ತಿವೆ.
ಹೀಗಾಗಿ, ನಾವು ನಮ್ಮ ಜನರ ಸೇವೆ ಮಾಡಲು ಮತ್ತು ನಮ್ಮ ಅಗತ್ಯಗಳನ್ನು ಪೂರ್ಣಗೊಳಿಸಲು ನಮ್ಮ ವಾಣಿಜ್ಯ ಬುಟ್ಟಿಯಲ್ಲಿ ವಿವಿಧ್ಯತೆಯ ಮಾರ್ಗಗಳತ್ತ ನೋಡಬೇಕಿದೆ.
ವಿವಿಧ ಅಂಶಗಳಾದ್ಯಂತ ಮತ್ತು ವೇದಿಕೆಗಳಲ್ಲಿನ ನಮ್ಮ ಸಕ್ರಿಯ ಪಾಲುದಾರಿಕೆ ಅಂಥ ಸಾಧ್ಯ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ.
ಸ್ನೇಹಿತರೇ,
ಭಾರತೀಯ ಕಂಪನಿಗಳಿಗೆ ದಕ್ಷಿಣ ಆಫ್ರಿಕಾ ಈ ಖಂಡದಲ್ಲಿ ಮನೆಯಂತಿದೆ.
ಹಲವು ಭಾರತೀಯ ಪ್ರಮುಖ ಕಂಪನಿಗಳು ಇಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿವೆ.
ಅವರು ಇಲ್ಲಿ ವಿಸ್ತೃತ ಶ್ರೇಣಿಯ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.
ಹಲವು ಭಾರತೀಯ ಸಿ.ಇ.ಓ.ಗಳು ಇಲ್ಲಿ ನಮ್ಮೊಂದಿಗಿದ್ದಾರೆ.
ಅವರ ವಾಣಿಜ್ಯ ಈ ದೇಶದ ಸಾಮಾಜಿಕ- ಆರ್ಥಿಕ ಪರಿವರ್ತನೆಗೆ ಕಾರಣವಾಗಬೇಕು ಎಂದು ನಾನು ಅವರಿಗೆ ನಾನು ಸಲಹೆ ಮಾಡುತ್ತೇನೆ.
ನಾನು ಭಾರತಕ್ಕೆ ಮೂರು ಪಿ ಗಳ ಬಗ್ಗೆ ಪ್ರತಿಪಾದಿಸುತ್ತೇನೆ.
(ಪಬ್ಲಿಕ್ ಸೆಕ್ಟಾರ್ (ಸಾರ್ವಜನಿಕ ವಲಯ), ಪ್ರೈವೇಟ್ ಸೆಕ್ಟಾರ್ (ಖಾಸಗಿ ವಲಯ) ಮತ್ತು ಪೀಪಲ್ಸ್ ಪಾರ್ಟಿಸಿಪೇಷನ್ (ಸಾರ್ವಜನಿಕರ ಪಾಲುದಾರಿಕೆ)
ನಾನು ವೈಯಕ್ತಿಕ ವಲಯದ ಬಗ್ಗೆಯೂ ಒತ್ತು ನೀಡುತ್ತೇನೆ.
ಅದು ಇಲ್ಲಿಗೂ ಅನ್ವಯಿಸುತ್ತದೆ.
ಕೌಶಲ ಅಭಿವೃದ್ಧಿ ಮತ್ತು ಸಮುದಾಯದ ಸಬಲೀಕರಣ ನಿಮ್ಮ ವಾಣಿಜ್ಯ ಯೋಜನೆಗಳ ಕೇಂದ್ರವಾಗಬೇಕು.
ಆಫ್ರಿಕಾದ ಮಾನವತೆಯ ಸ್ಫೂರ್ತಿ, ಉಬುಂಟು, ನಿಮ್ಮ ವಾಣಿಜ್ಯ ಸಿದ್ಧಾಂತದಲ್ಲಿ ಪ್ರತಿಫಲಿಸಬೇಕು.
ಇದು ನಮ್ಮ ತತ್ವಕ್ಕೆ ಸಮನಾಗಿದೆ.
ಸರ್ವೇ ಭವಂತು ಸುಖಿನಃ
ಇದಕ್ಕಾಗಿಯೇ ಮಹಾತ್ಮಾ ಗಾಂಧಿ ಅವರೂ ಹೋರಾಡಿದ್ದು.
ನಾವು ಪೋಷಣೆಯಲ್ಲಿ ಸದಾ ನಂಬಿಕೆ ಇಟ್ಟಿದ್ದೇವೆ ಶೋಷಣೆಯಲ್ಲಿ ಅಲ್ಲ.
ಉತ್ತೇಜನಕಾರಿ ಅಂಶವೆಂದರೆ ನಮ್ಮ ವ್ಯಾಪಾರ ಚಟುವಟಿಕೆಗಳು ಒಮ್ಮುಖವಾಗಿಲ್ಲ.
ದಕ್ಷಿಣ ಆಫ್ರಿಕಾದ ಕಂಪನಿಗಳು ಕೂಡ ಭಾರತದಲ್ಲಿ ಸಕ್ರಿಯವಾಗಿವೆ.
ಹಲವರು ತಮ್ಮ ಅಸ್ತಿತ್ವ ತೋರಿದ್ದಾರೆ.
ನಾವು ನಿಮ್ಮ ಜ್ಞಾನದಿಂದ ಕಲಿತಿದ್ದೇವೆ ಮತ್ತು ನಿಮ್ಮ ನಾವಿನ್ಯ ಉತ್ಪನ್ನಗಳ ಲಾಭವನ್ನೂ ಪಡೆದಿದ್ದೇವೆ.
ಈ ಎರಡೂ ರಾಷ್ಟ್ರಗಳ ಅಭಿವೃದ್ಧಿ ಮತ್ತು ಪ್ರಗತಿಗೆ ದಕ್ಷಿಣ ಆಫ್ರಿಕಾದ ವಾಣಿಜ್ಯ ತಜ್ಞತೆ ಮತ್ತು ಭಾರತದ ಸಾಮರ್ಥ್ಯ ಪರಸ್ಪರರಿಗೆ ಪೂರಕವಾಗಿರಬೇಕು;
ಸ್ನೇಹಿತರೇ,
ಕಳೆದ ಎರಡು ವರ್ಷಗಳಲ್ಲಿ ನಾವು ಆರ್ಥಿಕತೆಯನ್ನು ಸರಿದಾರಿಗೆ ತರಲು ಎಲ್ಲ ರಂಗಗಳಲ್ಲೂ ಕಷ್ಟ ಪಟ್ಟು ದುಡಿಯುತ್ತಿದ್ದೇವೆ.
ನಮಗೆ ನಮ್ಮ ಶ್ರಮ ಮತ್ತು ಪ್ರಾಮಾಮಿಕ ಕಾರ್ಯಕ್ಕೆ ಪ್ರೋತ್ಸಾಹದಾಯಕ ಫಲಿತಾಂಶವೇ ಸಿಕ್ಕಿದೆ.
ಇಂದು, ಭಾರತ ಜಾಗತಿಕ ಆರ್ಥಿಕತೆಯಲ್ಲಿ ಹೊಳೆಯುತ್ತಿರುವ ನಕ್ಷತ್ರವಾಗಿದೆ.
ನಾವು ಜಾಗತಿಕ ಪ್ರಗತಿಯ ಚಾಲನಾ ಶಕ್ತಿಯಾಗಿ ಕಾಣುತ್ತಿದ್ದೇವೆ.
ಭಾರತವು ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲೂ, ನಾವು ಶೇ.7.6ರ ಜಿಡಿಪಿಯನ್ನು ದಾಖಲಿಸಿದ್ದೇವೆ.
ವಿಶ್ವ ಬ್ಯಾಂಕ್, ಐ.ಎಂ.ಎಫ್ ಮತ್ತು ಇತರ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ಇನ್ನೂ ಉತ್ತಮ ಪ್ರಗತಿಯನ್ನು ಅಂದಾಜು ಮಾಡಿವೆ.
ಅದಷ್ಟೇ ಅಲ್ಲ, 2014-15ರಲ್ಲಿ ಭಾರತವು  ಜಾಗತಿಕ ಪ್ರಗತಿಗೆ ಶೇ. 12.5 ಕೊಡುಗೆ ನೀಡಿದೆ.
ಜಾಗತಿಕ ಪ್ರಗತಿಗೆ ಭಾರತದ ಕೊಡುಗೆ ವಿಶ್ವ ಆರ್ಥಿಕತೆಯ ತನ್ನ ಪಾಲಿಗಿಂತ ಶೇಕಡ 68ರಷ್ಟು ಹೆಚ್ಚಾಗಿದೆ.
ಈ ವರ್ಷದ ಎಫ್.ಡಿ.ಐ. ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಶ್ರೇಣೀಕರಣ ಸಂಸ್ಥೆ ಮೂಡಿ, ನಮ್ಮ ಮೇಕ್ ಇನ್ ಇಂಡಿಯಾ ಯಶಸ್ಸನ್ನು ಒತ್ತಿ ಹೇಳುವಾಗ ಹೇಳಿರುವ ಪ್ರಕಾರ ಎಫ್.ಡಿ.ಐ. ಹರಿವು, 2016ರಲ್ಲಿ ಸಾರ್ವಕಾಲಿಕ ಹೆಚ್ಚಳವಾಗಿದೆ.
ಮೇಕ್ ಇನ್ ಇಂಡಿಯಾ ಭಾರತ ಹಿಂದೆ ಹೊಂದಿದ್ದಕ್ಕಿಂತ ದೊಡ್ಡ ಬ್ರಾಂಡ್ ಆಗಿದೆ.
ದೇಶದ ಒಳಗೆ ಮತ್ತು ದೇಶದ ಹೊರಗೆ ಇದು ಜನತೆಯ, ಸಂಸ್ಥೆಗಳ, ಕೈಗಾರಿಕೆಗಳ, ವಾಣಿಜ್ಯ, ಮಾಧ್ಯಮ ಮತ್ತು ರಾಜಕೀಯ ನಾಯಕರ ಕಲ್ಪನೆಯನ್ನು ಸೆರೆಹಿಡಿದಿದೆ,
ಮೇಕ್ ಇನ್ ಇಂಡಿಯಾ ಕಸರತ್ತಿನ ಭಾಗವಾಗಿ, ನಾವು ಸುಲಭವಾಗಿ ವಾಣಿಜ್ಯ ನಡೆಸುವುದಕ್ಕೆ ಒತ್ತು ನೀಡಿದ್ದೇವೆ.
ನಾವು ಪರವಾನಗಿ ಪ್ರಕ್ರಿಯೆಯನ್ನು ಸರಳಗೊಳಿಸಲು  ನಿರ್ಣಾಯಕ ಕ್ರಮ ಕೈಗೊಂಡಿದ್ದೇವೆ ಮತ್ತು  ಪರವಾನಗಿಗಳು,ಆದಾಯ, ಮತ್ತು ನಿರೀಕ್ಷಣೆಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ತರ್ಕಬದ್ಧಗೊಳಿಸಿದ್ದೇವೆ.
ನಾನು ಇನ್ನು ಕೆಲವು ಸೂಚಕಗಳ ಬಗ್ಗೆ ಮಾತನಾಡುವುದಾದರೆ:
·        ಭಾರತವು ಸತತವಾಗಿ ಆಕರ್ಷಕ ಹೂಡಿಕೆ ತಾಣ ಎಂದು ಹಲವು ಜಾಗತಿಕ ಸಂಸ್ಥೆಗಳಿಂದ ಶ್ರೇಣೀಕೃತವಾಗಿದೆ.
·         ಸುಲಭವಾಗಿ ವ್ಯಾಪಾರ ಮಾಡುವ ತಾಣಗಳ ಪೈಕಿ ನಾವು ವಿಶ್ವಬ್ಯಾಂಕ್ ನ ಇತ್ತೀಚಿನ ಪಟ್ಟಿಯಲ್ಲಿ 12 ಶ್ರೇಣಿ ಜಿಗಿದಿದ್ದೇವೆ.
·        ಭಾರತ ಹೂಡಿಕೆಯ ಆಕರ್ಷಣೆಯಲ್ಲಿ ಕೂಡ ಯು.ಎನ್.ಸಿ.ಟಿ.ಎ.ಡಿ. ಶ್ರೇಣಿಕರಣದಲ್ಲಿ ಸುಧಾರಣೆ ಕಂಡಿದೆ.
·       ಈವರೆಗೆ 15ನೇ ಸ್ಥಾನದಲ್ಲಿದ್ದ ಅದು ಗ 9ನೇ ಸ್ಥಾನಕ್ಕೇರಿದೆ.
·        ವಿಶ್ವ ಆರ್ಥಿಕ ಸಂಘಟನೆಯ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿಯೂ ಭಾರತ 16 ಸ್ಥಾನ ಮೇಲೇರಿದೆ.
ನಮ್ಮ ನೀತಿ ಮತ್ತು ಪದ್ಧತಿಗಳ ಧನಾತ್ಮಕ ಪರಿಣಾಮದ ಕಾರಣದಿಂದ, ನಮ್ಮ ವಿಶ್ವಾಸ ಹೆಚ್ಚಳವಾಗಿದೆ.
ಇದು ನಮಗೆ ನಮ್ಮ ಪ್ರಕ್ರಿಯೆಗಳನ್ನು ಇನ್ನಷ್ಟು ಸರಳೀಕರಿ, ವಾಣಿಜ್ಯ ನಡೆಸಲು ಸುಗಮ ತಾಣ ಮಾಡುವಲ್ಲಿ ಉತ್ತೇಜನ ನೀಡಿದೆ.
ಕಲ್ಪನೆಗಳನ್ನು ಮೂಡಿಸಿ ಮತ್ತು ಉದ್ದಿಮೆಯಾಗಿ ಅಭಿವೃದ್ಧಿ ಪಡಿಸಲು ನಾವಿನ್ಯಪೂರ್ಣವಾದ ನವೋದ್ಯಮ ಭಾರತ ( ಸ್ಟಾರ್ಟ್ ಅಪ್ ಇಂಡಿಯಾ) ಕಾರ್ಯಕ್ರಮವನ್ನು ಆರಂಭಿಸಿದ್ದೇವೆ.
ಈ ಎಲ್ಲವೂ ಉದ್ಯೋಗ ಮಾರುಕಟ್ಟೆಯ ವಿಸ್ತರಣೆಗೆ ಉತ್ತಮ ಪರಿಣಾಮ ಬೀರಿವೆ ಮತ್ತು ಜನತೆಯ ಖರೀದಿಸುವ ಶಕ್ತಿಯನ್ನು ಹೆಚ್ಚಿಸಿದೆ.
ಇದು ಅಂತಿಮವಾಗಿ ಭಾರತವನ್ನು ಉತ್ತಮ ಗುಣಮಟ್ಟದ ಜೀವನ ನಡೆಸುವ ತಾಣವಾಗಿ  ಮತ್ತು ಅತ್ಯುನ್ನತ ಜೀವನ ಗುಣಮಟ್ಟದ ತಾಣವಾಗಿ ಮಾಡುತ್ತಿದೆ.
ನಾವು ನಮ್ಮ ಪ್ರಗತಿಯನ್ನು ಸಮಗ್ರ ಮತ್ತು ಗ್ರಾಮೀಣ ಹಾಗೂ ನಗರ ಸಮುದಾಯಗಳೆರಡಕ್ಕೂ ತಲುಪುವ ಖಾತ್ರಿಗೊಳಿಸಿದ್ದೇವೆ.
ನಾವು ಪ್ರಮುಖ ಮತ್ತು ಸಾಮಾಜಿಕ ವಲಯಗಳಲ್ಲಿ ಮುಂದಿನ ಪೀಳಿಗೆಯ ಮೂಲಸೌಕರ್ಯದತ್ತ ಹೆಜ್ಜೆಯನ್ನು ಹಾಕಿದ್ದೇವೆ.
ಸ್ನೇಹಿತರೆ,
ನಮ್ಮ ಎರಡೂ ದೇಶಗಳ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು ಬಹುತೇಕ ಒಂದೇ ಆಗಿವೆ.
ಅಭಿವೃದ್ಧಿಯ ಗಾಲಿಗಳನ್ನು ಮತ್ತೆ ಶೋಧಿಸುವ ಅಗತ್ಯವಿಲ್ಲ ಎಂಬುದು ನನ್ನ ಸಲಹೆ.
ನಮ್ಮ ಎರಡೂ ದೇಶಗಳು ಅನನ್ಯವಾಗಿ ಒಬ್ಬರಿಗೊಬ್ಬರು ಪೂರಕವಾಗಿವೆ.
ಉದಾಹರಣೆಗೆ:
ಪ್ರಕೃತಿ ನಮ್ಮಿಬ್ಬರಿಗೂ  ಉದಾರಿಯಾಗಿದೆ.
ನಮ್ಮಲ್ಲಿ ಅಗಾಧ ಪ್ರಾಕೃತಿಕ ಸಂಪನ್ಮೂಲವಿದೆ.
ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮತ್ತು ಸುಸ್ಥಿರವಾಗಿ ಅದನ್ನು ಶ್ರೀಸಾಮಾನ್ಯನ ಕಲ್ಯಾಣಕ್ಕೆ ಬಳಸುವ ಅಗತ್ಯವಿದೆ.
ನಾವು ಈ ವಿಚಾರದಲ್ಲಿ ಒಬ್ಬರನ್ನೊಬ್ಬರು ನೋಡಿ ಕಲಿಯಬಹುದಾಗಿದೆ.
ಅದರಲ್ಲೂ ನಾವು ನಿಮ್ಮ ವಿಶ್ವದರ್ಜೆಯ ಗಣಿ ಕಂಪನಿಗಳೊಂದಿಗೆ ಬೆರೆಯಲು ಇಚ್ಛಿಸುತ್ತೇವೆ.
ಅವುಗಳಲ್ಲಿ ಕೆಲವು ಈಗಾಗಲೇ ಭಾರತದಲ್ಲಿ ಸಕ್ರಿಯವಾಗಿವೆ.
ಆದರೆ ನಾವು ಈ ವಿಚಾರದಲ್ಲಿ ಕಾರ್ಯತಂತ್ರಾತ್ಮಕ ಕಾರ್ಯಕ್ರಮವನ್ನು ಬಯಸುತ್ತೇವೆ.
ಕ್ಷೇತ್ರದಲ್ಲಿನ ನಮ್ಮ ಆಸಕ್ತಿ ಏಕಮುಖವಾದ್ದಲ್ಲ. ಎರಡನೆಯದಾಗಿ ಹವಾಮಾನ ಬದಲಾವಣೆಯ ಸವಾಲು ಮತ್ತು ತ್ವರಿತ ಗತಿಯ ಅಭಿವೃದ್ಧಿ ನಮ್ಮ ಎರಡೂ ದೇಶಗಳಿಗೆ ಸವಾಲಾಗಿದೆ.
ನಾವಿಬ್ಬರೂ ಶುದ್ಧ ಮತ್ತು ಹಸಿರು ಹಾದಿಯಲ್ಲಿನ ಪ್ರಗತಿಗೆ ಬದ್ಧರಾಗಿದ್ದೇವೆ.
ಅದೇ ವೇಳೆ, ನಮಗೆ ಇಂಧನ ಮೂಲಗಳೂ ಬೇಕಾಗಿವೆ.
ಹಲವು ರಾಷ್ಟ್ರಗಳ ನೆರವಿನೊಂದಿಗೆ, ನಾವು ಅಂತಾರಾಷ್ಟ್ರೀಯ ಸೌರ ಸಹಯೋಗ ರೂಪಿಸಿದ್ದೇವೆ.
ನಾವು ಈ ವೇದಿಕೆಯ ಲಾಭವನ್ನು ಪಡೆದು ಉತ್ಕೃಷ್ಟಗೊಳಿಸಿಕೊಳ್ಳುತ್ತೇವೆ ಎಂಬ ವಿಶ್ವಾಸ ನನಗಿದೆ.
ನಮ್ಮ ಎರಡೂ ದೇಶಗಳು ವಿರುದ್ಧ ಋತುಮಾನದ ಅನನ್ಯ ಲಾಭವನ್ನು ಪಡೆದಿವೆ.
ಭಾರತದಲ್ಲಿ ಮಾವಿನ ಕಾಲ ಅಥವಾ ಬೇಸಿಗೆ ಇದ್ದಾಗ, ಇಲ್ಲಿ ಚಳಿಗಾಲವಾಗಿರುತ್ತದೆ. ಇಲ್ಲಿ ಬೇಸಿಗೆ ಇದ್ದಾಗ ಅಲ್ಲಿ ಚಳಿಗಾಲ ಇರುತ್ತದೆ.
ನಾವು ನಮ್ಮ ದೇಶದ ಹಣ್ಣು, ತರಕಾರಿ ಮತ್ತು ಇತರ ಬೇಗ ಹಾಳಾಗುವ ವಸ್ತುಗಳನ್ನು ಮಾರುಕಟ್ಟೆಗೊಳಿಸಲು ಈ ಭೌಗೋಳಿಕವಾದ ಲಾಭವನ್ನು ಪಡೆಯಬೇಕಿದೆ.
ಅತಿ ದೊಡ್ಡ ದೇಶೀಯ ಮಾರುಕಟ್ಟೆಯಾದ ಭಾರತವು ನಿಮ್ಮ ಆಹಾರ ಸಂಸ್ಕರಣಾ ಕೈಗಾರಿಕೆಗೆ ದೊಡ್ಡ ಅವಕಾಶವನ್ನೇ ನೀಡುತ್ತದೆ.
ಈ ಕ್ಷೇತ್ರದಲ್ಲಿನ ನಮ್ಮ ಸಹಯೋಗ ನಮ್ಮ ರೈತರಿಗೆ ಮತ್ತು ಹಳ್ಳಿಗಳಿಗೆ ಬೆಲೆ ತಂದುಕೊಡಲಿದೆ.
ನಾವು ಭಾರತದಲ್ಲಿ ಮೂಲಸೌಕರ್ಯದ ಮೇಲೆ ಮಹತ್ವಾಕಾಂಕ್ಷೆಯಿಂದ ಕೆಲಸ ಮಾಡುತ್ತಿದ್ದೇವೆ.
ಸ್ವಾತಂತ್ರ್ಯದ ದಿನಗಳಿಂದಲೂ ಬಾಕಿ ಇದ್ದ ಸವಾಲುಗಳನ್ನು  ಈಗ ತ್ವರಿತವಾಗಿ ಪೂರ್ಣಗೊಳಿಸಲಾಗುತ್ತದೆ.
ನಾವಿಬ್ಬರೂ ಸೇರಿ ಈ ಕಂದಕ ಮುಚ್ಚಲು ದೊಡ್ಡ ಕಾರ್ಯ ಮಾಡಬಹುದಾಗಿದೆ.
ಭಾರತವು ತಂತ್ರಜ್ಞಾನ ಮತ್ತು ಕೌಶಲದಲ್ಲಿ ನಿಮಗೆ ಸಹಾಯ ಮಾಡಲು ಸೂಕ್ತವಾಗಿದೆ.
ಈ ಕ್ಷೇತ್ರದಲ್ಲಿ ಪ್ರಯತ್ನಗಳು ಈಗಾಗಲೇ ಸಾಗಿವೆ.
ಕಳೆದ ವರ್ಷ ನವ ದೆಹಲಿಯಲ್ಲಿ ನಡೆದ ಭಾರತ ಆಫ್ರಿಕಾ ವೇದಿಕೆಯ ಶೃಂಗದಲ್ಲಿ ನಾವು ಮುಂದಿನ 5 ವರ್ಷಗಳಲ್ಲಿ 50 ಸಾವಿರ ಆಫ್ರಿಕನ್ನರಿಗೆ ಭಾತದಲ್ಲಿ  ತರಬೇತಿ ಮತ್ತು ಶಿಕ್ಷಣ ನೀಡುವ ನಿರ್ಧಾರ ಮಾಡಿದೆವು.
ಇವು ಕೇವಲ ಕೆಲವು ಉದಾಹರಣೆ ಮಾತ್ರ.
ನಾವು ಹಲವು ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಬಹುದಾಗಿದೆ.
·        ರಕ್ಷಣೆಯಿಂದ ಡೈರಿವರೆಗೆ
·        ಯಂತ್ರಾಂಶದಿಂದ ತಂತ್ರಾಂಶದವರೆಗೆ
·        ಔಷಧದಿಂದ ವೈದ್ಯಕೀಯ ಪ್ರವಾಸೋದ್ಯಮದವರೆಗೆ
·        ಮೃಧು ಕೌಶಲದಿಂದ ವಿಜ್ಞಾನ ಮತ್ತು ತಂತ್ರಜ್ಞಾನದವರೆಗೆ
ನಮಗೆ ಅವಕಾಶಗಳಿವೆ.
ಭಾರತವು ಇಂದು ಅತ್ಯಂತ ಮುಕ್ತ ಆರ್ಥಿಕತೆಯಾಗಿದೆ.
ನಾವು ಸಾಕಷ್ಟು ವಲಯಗಳಲ್ಲಿ ಮತ್ತು ಸಾಧ್ಯವಾದ ಎಲ್ಲ ಮಾರ್ಗದಲ್ಲಿ ನಮ್ಮ ಎಫ್.ಡಿ.ಐ. ಆಡಳಿತವನ್ನು ಉದಾರೀಕರಿಸಿದ್ದೇವೆ.
ನಾವು ನಮ್ಮ ನಿಯಮಗಳನ್ನು ತರ್ಕಬದ್ಧಗೊಳಿಸಿದ್ದೇವೆ ಮತ್ತು ವಾಣಿಜ್ಯ ಸ್ಥಾಪನೆ ಮತ್ತು ಅದರ ವೃದ್ಧಿಗೆ ಸರಳೀಕರಿಸಿದ್ದೇವೆ.
ಸ್ನೇಹಿತರೆ,
ನನ್ನ ಮಾತು ಮುಗಿಸುವ ಮುನ್ನ, ನಾನು ನಮ್ಮ ಪಾಲುದಾರಿಕೆಗೆ ಸಾಂಸ್ಥಿಕ ವ್ಯಾಪ್ತಿ ನೀಡಿದ್ದೇವೆ ಎಂದು ಹೇಳಲು ಬಯಸುತ್ತೇನೆ.
ನಮ್ಮ ಬ್ರಿಕ್ಸ್ ವಾಣಿಜ್ಯ ಕಾರ್ಯಕ್ರಮಗಳು ಮತ್ತು ಸಿ.ಇ.ಓ. ವೇದಿಕೆಯು ನಮ್ಮ ಪಾಲುದಾರಿಕೆಯನ್ನು ವಿಸ್ತರಿಸಲು ಮತ್ತು ಉತ್ಕೃಷ್ಟಗೊಳಿಸಲು ನೆರವಾಗಿದೆ.
ಇಂದು, ಭಾರತ ದಕ್ಷಿಣ ಆಫ್ರಿಕಾ ಸಿಇಓ ವೇದಿಕೆಯ ಮೂರನೇ ಸಭೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ.
ನಾವು ನಿಮ್ಮ ಶಿಫಾರಸುಗಳನ್ನು ಗೌರವಿಸುತ್ತೇವೆ ಮತ್ತು ಅದನ್ನು ಅಳವಡಿಸಿಕೊಳ್ಳಲು ಮುಂದಾಗುತ್ತೇವೆ.
ನಿರಂತರವಾಗಿ ವಾಣಿಜ್ಯದ ಉದ್ದೇಶಕ್ಕೆ ಓಡಾಡುವವರಿಗೆ 10 ವರ್ಷಗಳ ಬ್ರಿಕ್ಸ್ ವೀಸಾ ನೀಡಿದ ದಕ್ಷಿಣ ಆಫ್ರಿಕಾ ಸರ್ಕಾರಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆ.
ಭಾರತದ ಕೈಗಾರಿಕೆಗಳು ಈ ನಡೆಯಿಂದ ಪ್ರೋತ್ಸಾಹಿತವಾಗಿವೆ.
ಈ ವರ್ಷ ಫೆಬ್ರವರಿಯಲ್ಲಿ, ನಾವು ದಕ್ಷಿಣ ಆಫ್ರಿಕಾಕ್ಕೆ ಇ ವೀಸಾ ಕಾರ್ಯಕ್ರಮ ಆರಂಭಿಸಿದ್ದೇವೆ.
ಇದು ಅಲ್ಪಾವಧಿಯ ಪ್ರವಾಸಿಗರಿಗೆ ಮತ್ತು ವಾಣಿಜ್ಯ ಉದ್ದೇಶದ ಪ್ರಯಾಣಿಕರಿಗೆ ಅನ್ವಯಿಸುತ್ತದೆ.
ನೀವು ನಿಮ್ಮ ಮನೆಯಲ್ಲಿಯೇ ಕುಳಿತು ನಿಮ್ಮ ಇ ಮೇಲ್ ಮೂಲಕ ಭಾರತಕ್ಕೆ ವೀಸಾ ಪಡೆಯಬಹುದು, ಮತ್ತು ಅದೂ ಉಚಿತವಾಗಿ!
ಸ್ನೇಹಿತರೆ,
·       ಮತ್ತೊಮ್ಮೆ ನಾವು ಕೈಜೋಡಿಸೋಣ;
·       ನಾವು ಮತ್ತೊಮ್ಮೆ ಒಗ್ಗೂಡಲು ಬದ್ಧರಾಗೋಣ;
·       ಇದು ಬಡತನದ ಶತ್ರುವಿನ ವಿರುದ್ಧದ ಹೋರಾಟಕ್ಕೆ ಅಗತ್ಯವಾಗಿದೆ.;
·       ಇದು ಹೆಚ್ಚು ಸಾವಾಲಿನದೂ ಆಗಿದೆ.;
·       ಆದರೆ ನಾವು ಯಶಸ್ಸು ಸಾಧಿಸಲೇಬೇಕು;
·      ಮತ್ತು ಇದೊಂದೇ ನಮ್ಮ ಶ್ರೇಷ್ಠ ನಾಯಕರಿಗೆ ನಾವು ನೀಡುವ ನೈಜ ಗೌರವ.

ಧನ್ಯವಾದಗಳು