ಎಲ್ಲ ಗೌರವಾನ್ವಿತ ಧಾರ್ಮಿಕ ಗುರುಗಳೇ ಮತ್ತು ನಿತ್ಯ ಪ್ರಾತಃಸ್ಮರಣೀಯರಾದ ಸಂತರೇ ಮತ್ತು ಇಲ್ಲಿ ನೆರೆದಿರುವ ಸಮಸ್ತ ಭಾವಿಕ ಭಕ್ತರೇ,
ಎಲ್ಲರಿಗೂ ಪ್ರೇರಣೆಯಾಗಿರುವ ಪೂಜನೀಯ ಮಹಂತ ಅವೈದ್ಯನಾಥ ಜೀ ಮಹಾರಾಜ್ ಅವರ ಪ್ರತಿಮೆಯನ್ನು ಅನಾವರಣ ಮಾಡುವ ಮತ್ತು ನಿಮ್ಮೆಲ್ಲರ ಆಶೀರ್ವಾದವನ್ನು ಪಡೆಯುವ ಸೌಭಾಗ್ಯ ಇಂದು ನನಗೆ ದೊರೆತಿದೆ. ಗೋರಖ್ಪುರದ ಈ ಮಣ್ಣು ವಿಶಿಷ್ಠತೆಯನ್ನು ಹೊಂದಿದೆ. ಭಗವಾನ್ ಬುದ್ಧ, ಮಹಾವೀರ ಅಥವಾ ಕಬೀರರೊಂದಿಗೆ ಇದಕ್ಕೆ ನಂಟಿದೆ. ಇದರೊಂದಿಗೆ ಒಂದಲ್ಲಾ ಒಂದು ರೀತಿಯಲ್ಲಿ ಇವರೆಲ್ಲರೂ ಬಾಂಧವ್ಯವನ್ನು ಹೊಂದಿದ್ದಾರೆ. ಗುರು ಗೋರಕ್ಷಾನಾಥ್ ಜೀ (ಗೋರಖ್ ನಾಥ್ ಜೀ) ಅವರ ಶ್ರೇಷ್ಠ ಸಂಪ್ರದಾಯ, ಒಬ್ಬ ವ್ಯಕ್ತಿಯ ಉನ್ನತಿಯಷ್ಟೇ ಅಲ್ಲ, ಬದಲಾಗಿ ವ್ಯಕ್ತಿಯ ಉನ್ನತಿಯ ಜೊತೆಜೊತೆಗೆ ಸಮಾಜದ ಉನ್ನತಿಯ ಮಹಾನ್ ದೃಷ್ಟಿಕೋನವನ್ನು ಹೊಂದಿದೆ.
ಹಲವು ಬಾರಿ ಕೆಲವು ತೊಂದರೆಗಳು ಅಥವಾ ತೊಡಕುಗಳು ನಿಧಾನವಾಗಿ ಸಂಪ್ರದಾಯದಲ್ಲಿ ಆರಂಭವಾಗಿ, ಅವು ಸಮಾಜದಲ್ಲಿ ದೀರ್ಘಕಾಲ ಉಳಿದುಬಿಡುತ್ತವೆ. ಆದಾಗ್ಯೂ, ಸಂಪ್ರದಾಯದ ಆದರ್ಶ ಹಾಗೂ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲನೆ ಮಾಡಿದಾಗ, ಸಂಪ್ರದಾಯವನ್ನು ಸಂದರ್ಭಾನುಸಾರವಾದ ಒತ್ತಡದಿಂದ ಮುಕ್ತಗೊಳಿಸಲು ಸಾಧ್ಯವಾಗುತ್ತದೆ. ಗುಜರಾತ್ ನ ಹಲವು ಪ್ರದೇಶಗಳಲ್ಲಿ ಗೋರಖ್ ನಾಥ್ ಜೀ ಅವರು ಆರಂಭಿಸಿದ ಸಂಪ್ರದಾಯಗಳು ನಂಟು ಹೊಂದಿವೆ. ಗುಜರಾತ್ ನಲ್ಲಿದ್ದಾಗ ಒಮ್ಮೆ ನಾನು ಮಹಂತ ಅವೈದ್ಯನಾಥ ಜೀ ಅವರೊಂದಿಗೆ ಕುಳಿತಿದ್ದೆ, ನಾನು ರಾಜಕೀಯದಲ್ಲಿ ಸಕ್ರಿಯನಾಗುವುದಕ್ಕಿಂತ ಮೊದಲಿನಿಂದಲೂ ನನಗೆ ಅವರೊಂದಿಗೆ ಸಂಪರ್ಕವಿತ್ತು. ಇಡೀ ವ್ಯವಸ್ಥೆಯ ಸಂಚಲನ ಹೇಗೆ ನಡೆಯುತ್ತದೆ, ನೀತಿ ನಿಯಮಗಳ ಪಾಲನೆ ಹೇಗೆ ಆಗುತ್ತದೆ, ಈ ಸಂಪ್ರದಾಯದಿಂದ ಹೊರಬಂದ ಸಂತರು, ವಿಶ್ವದ ಎಲ್ಲೇ ಇರಲಿ, ಅವರ ಪೂರ್ಣ ಮಾಹಿತಿಯನ್ನು ಹೇಗೆ ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ, ಅವರಿಗೆ ಆರ್ಥಿಕ ಸಂಕಷ್ಟ ಎದುರಾದಾಗ, ಅವರಿಗೆ ಹೇಗೆ ನೆರವು ತಲಪಿಸಲಾಗುತ್ತದೆ. ಈ ವ್ಯವಸ್ಥೆ ಹೇಗೆ ವ್ಯವಸ್ಥಿತ ಮಾರ್ಗದಲ್ಲಿ ಸಾಗುತ್ತದೆ, ಎಂಬುದನ್ನು ನಾನು ಅವರಿಂದ ಕೇಳಿ ತಿಳಿದುಕೊಂಡೆ,
ದೀರ್ಘ ಕಾಲದಿಂದ ಗೋರಖ್ ನಾಥ್ ಸಂಪ್ರದಾಯ ಯಶಸ್ವಿಯಾಗಿ ಜೀವಂತಿಕೆಯನ್ನು ಉಳಿಸಿಕೊಂಡಿದೆ, ಮತ್ತು ಈ ಪೀಠದಲ್ಲಿ ಕುಳಿತುಕೊಳ್ಳಲು ಯಾರು ಯಾರಿಗೆ ಸೌಭಾಗ್ಯ ದೊರೆತಿದೆಯೋ ಅವರೆಲ್ಲರೂ ಇದಕ್ಕಾಗಿ ಉತ್ತಮ ಕೊಡುಗೆ ನೀಡಿರುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನೇ ತೆಗೆದುಕೊಳ್ಳಿ ಅಥವಾ ಸ್ವಾತಂತ್ರ್ಯೋತ್ತರದಲ್ಲಿ ಸಾಮಾಜಿಕ ಪುನರ್ ನಿರ್ಮಾಣದ ಸವಾಲನ್ನೇ ತೆಗೆದುಕೊಳ್ಳಿ, ಮಹಂತ ಅವೈದ್ಯನಾಥ ಜೀ ಅವರು ಈ ಎರಡೂ ಹಂತದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಜಾಪ್ರಭುತ್ವದ ನೆಲೆಯಲ್ಲಿ ಯಾತ್ರಾಸ್ಥಳದ ಕೇಂದ್ರದ ಮೂಲಕ ಅವರು ತಮ್ಮ ಬದುಕಿಗೆ ಹೊಸ ಆಯಾಮವನ್ನೂ ಸೇರಿಸಿಕೊಂಡು ಅವರು ತಮ್ಮ ದೃಷ್ಟಿಕೋನದ ಮೂಲಕ ಸಾಮಾಜಿಕ ಕಳಕಳಿಯ ಕಿಡಿ ಹಚ್ಚಿಸಿದರು. ಮತ್ತು ಆ ಮೂಲಕ ಶ್ರೀಸಾಮಾನ್ಯರಿಗೆ ಪರಿವರ್ತನೆಯ ಪರಿಸ್ಥಿತಿಯ ಲಾಭ ದೊರಕುವಂತೆ ಮಾಡಿದರು. ಈ ದೃಷ್ಟಿಕೋನವು ಇಂದಿಗೂ ಅವರ ಶಿಷ್ಯ ಯೋಗಿ ಆದಿತ್ಯನಾಥ ಜೀ ಅವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಭಾರತದ ಎಲ್ಲ ಸಂತ ಸಂಪ್ರದಾಯ, ಮಠಗಳು ಮತ್ತು ಆಕರಗಳು (ಧಾರ್ಮಿಕ ಕಾಯಗಳು) ಕೆಲವೊಮ್ಮೆ ವಿಶಿಷ್ಠವಾಗಿ ಮತ್ತು ಹೊರಗಿನಿಂದ ವೈರುಧ್ಯದಿಂದ ಕಾಣುತ್ತವೆ. ಆದಾಗ್ಯೂ ಈ ಎಲ್ಲರ ನಡುವೆ ಮೂಲಸ್ವರೂಪದಲ್ಲಿ ಸಮಾನವಾದ ಒಂದು ಅಂಶ ಇದೆ. ಅದೇನೆಂದರೆ, ಹಸಿದ ವ್ಯಕ್ತಿ ಅಥವಾ ಬಡವನೊಬ್ಬ ಇವರ ದ್ವಾರದ ಬಳಿ ಬಂದರೆ, ಆತ ಹಸಿವಿನಿಂದ ಮರಳುವುದಿಲ್ಲ. ಆ ಸಂತನ ಬಳಿ ಏನಿದೆಯೋ ಇಲ್ಲವೋ ಆದರೂ, ಆತ ಗುಡಿಸಿಲಿನಲ್ಲೇ ಕುಳಿತಿದ್ದರೂ, ಆತ ಭಕ್ತರನ್ನು ಕೇಳುವ ಮೊದಲ ಪ್ರಶ್ನೆ “ನೀವು ಪ್ರಸಾದ ಸ್ವೀಕರಿಸಲು ಇಚ್ಛಿಸುತ್ತೀರಾ (ದೇವರ ನೇವೇದ್ಯಕ್ಕೆ ಇಟ್ಟದ್ದು)?” ಈ ಮಹಾನ್ ಸಂಪ್ರದಾಯಗಳು, ಸಮಾಜದ ಬಗೆಗಿನ ಒಂದು ಸೂಕ್ಷ್ಮ ಸಂವೇದನೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ಆ ಕಾರಣಕ್ಕಾಗಿಯೇ ಆ ಸಂಪ್ರದಾಯಗಳು ನಮಗೆ ನಮ್ಮ ಬದುಕು ಮತ್ತು ವ್ಯವಸ್ಥೆಯನ್ನು ಮತ್ತೊಬ್ಬರ ಒಳಿತಿಗಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಲು ಪ್ರೇರಣೆ ನೀಡುತ್ತವೆ. ಮತ್ತು ಇದು ನಮ್ಮ ಭಾರತದ ಸನಾತನ ಸಂಪ್ರದಾಯಯ ಯಶಸ್ಸಿನ ಮಂತ್ರವಾಗಿದೆ. ಮತ್ತು ಪ್ರಸಕ್ತ ಸನ್ನಿವೇಶದಲ್ಲೂ ಅದು ತನ್ನ ದೀರ್ಘಕಾಲೀನ ಪ್ರಸ್ತುತತೆಯನ್ನು ಸಾಬೀತುಪಡಿಸಿರುವುದಕ್ಕೆ ಸಾಕ್ಷಿಯಾಗಿದೆ.
ನಮ್ಮ ದೇಶದಲ್ಲಿ ಎಲ್ಲ ಸಂಪ್ರದಾಯಗಳೂ ಕಾಲಾನುಕ್ರಮದಲ್ಲಿ ಬದಲಾಗಿವೆ. ಯಾವ ಯಾವ ಸಂದರ್ಭದಲ್ಲಿ ಅಗತ್ಯ ಕಂಡು ಬಂದಿದೆಯೋ ಆಗ ಅವು ತಮ್ಮ ಮುಕ್ತ ಬಾಹುಗಳಲ್ಲಿ ವಿಜ್ಞಾನವನ್ನು ಅಪ್ಪಿಕೊಂಡಿವೆ. ಸಾಮಾಜಿಕ ದೃಷ್ಟಿಕೋನದಲ್ಲಿ ಅವರು ಬದಲಾವಣೆಯನ್ನು ಸ್ವಾಗತಿಸಿವೆ. ಮತ್ತು, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಹಲವು ಸಂತರು ಮತ್ತು ಶ್ರೀಗಳು, ಇತ್ತೀಚೆಗೆ ತಮ್ಮನ್ನು ತಾವು ಸ್ವಚ್ಛ ಭಾರತದಂಥ ಸಾಮಾಜಿಕ ಅಭಿಯಾನದಲ್ಲಿ ತೊಡಗಿಸಿಕೊಂಡಿರುವುದನ್ನು ನಾನು ನೋಡಿದ್ದೇನೆ. ಹಲವು ಸಂತರು ಶೌಚಾಲಯ ನಿರ್ಮಾಣದ ಪ್ರಚಾರದಲ್ಲಿ ತೊಡಗಿದ್ದು, ತಮ್ಮ ಭಕ್ತರಿಗೆ ಕೂಡ ಹಾಗೆ ಮಾಡುವಂತೆ ಉತ್ತೇಜನ ನೀಡುತ್ತಿದ್ದಾರೆ ಎಂದು ನಾನು ಕೇಳಲ್ಪಟ್ಟಿದ್ದೇನೆ. ಮಹಿಳೆಯರು ಗೌರವಯುತವಾಗಿ ಬದುಕಲು ಅನುವಾಗುವಂತೆ ಅವರು ನಮ್ಮ ತಾಯಂದಿರ ಮತ್ತು ಸೋದರಿಯರ ಗೌರವ ರಕ್ಷಣೆ ಮಾಡುವಂತೆ ಜನರಲ್ಲಿ ಹೃದಯಪೂರ್ವಕವಾಗಿ ಮನವಿ ಮಾಡುತ್ತಿದ್ದಾರೆ ಎಂಬುದನ್ನೂ ನಾನು ಕೇಳಿದ್ದೇನೆ.
ಬಡವರಲ್ಲೇ ಬಡವರಿಗೆ ತಮ್ಮ ಕೈಲಾದ ನೆರವು ನೀಡುವ ಸಲುವಾಗಿ ಹಲವು ಸಂತರು ನೇತ್ರ ಶಸ್ತ್ರಚಿಕಿತ್ಸೆ ಶಿಬಿರಗಳನ್ನು ನಡೆಸುತ್ತಿರುವುದನ್ನೂ ನಾನು ನೋಡಿದ್ದೇನೆ. ಹಲವು ಸಂತರು ಪ್ರಾಣಿಗಳನ್ನು ಆರೋಗ್ಯವಾಗಿ ಇಡಲು ತಮ್ಮನ್ನು ಸಮರ್ಪಿಸಿಕೊಂಡಿರುವುದನ್ನೂ ನಾನು ಗಮನಿಸಿದ್ದೇನೆ. ಅದು ಶಿಕ್ಷಣವಿರಲಿ, ಆರೋಗ್ಯವಿರಲಿ, ಅಥವಾ ಸೇವೆಯೇ ಇರಲಿ, ಜೀವನದ ಪ್ರತಿ ರಂಗದಲ್ಲೂ, ನಮ್ಮ ಸಂತ ಸಂಪ್ರದಾಯ ಇಂದು ಒಂದಲ್ಲಾ ಒಂದು ಮಾರ್ಗದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತದೆ.
ಭಾರತವನ್ನು ಆಧುನಿಕ ಮತ್ತು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಲಕ್ಷಾಂತರ ಸಂತರು, ಸಾವಿರಾರು ಸಂಪ್ರದಾಯಗಳು ಮತ್ತು ನೂರಾರು ಮಠಗಳು ಮುಂದೆ ಬಂದು ನಮ್ಮ ಪ್ರಜೆಗಳಿಗೆ ಉತ್ತಮ ಮೌಲ್ಯಗಳನ್ನು ಬೆಳೆಸಲು ಮಹತ್ವದ ಪಾತ್ರ ವಹಿಸುವ ಅಗತ್ಯವಿದೆ. ಇದನ್ನು ಹಲವರು ಈಗಾಗಲೇ ಮಾಡುತ್ತಿದ್ದಾರೆ. ಇದು ಭಾರತದ ಉತ್ತಮ ಭವಿಷ್ಯಕ್ಕೆ ಶುಭ ಸಂಕೇತವಾಗಿದೆ.
ಮಹಂತ ಅವೈದ್ಯನಾಥ ಜೀ ಅವರ ಜೀವನದ ಪ್ರತಿಯೊಂದು ಕ್ಷಣವೂ ಸಮಾಜದ ನೋವು ನಲಿವಿಗೆ ಸಮರ್ಪಣೆಯಾಗಿತ್ತು. ಅವರು ಅದರ ಬಗ್ಗೆ ಆಳವಾದ ಕಳಕಳಿಯನ್ನು ಹೊಂದಿದವರಾಗಿದ್ದರು ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಸಾಧ್ಯ ಪ್ರಯತ್ನಗಳನ್ನೂ ಮಾಡುತ್ತಿದ್ದರು. ಉತ್ತಮ ಕಾರ್ಯ ಮಾಡುವವರನ್ನು ಉತ್ತೇಜಿಸುವುದು ಮತ್ತು ಪುರಸ್ಕರಿಸುವುದು ಅವರು ಜೀವನದುದ್ದಕ್ಕೂ ನಡೆಸಿದ ಕಾರ್ಯವಾಗಿತ್ತು. ಇಂದು ಅಂಥ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಅನಾವರಣ ಮಾಡುವ ಮತ್ತು ಅವರಿಗೆ ಪುಷ್ಪ ನಮನ ಸಲ್ಲಿಸುವ ಸೌಭಾಗ್ಯ ನನಗೆ ದೊರೆತಿದೆ. ಇದು ತಪೋಭೂಮಿಯಾಗಿದೆ, ಅಖಂಡ ಜ್ಯೋತಿಯ ಭೂಮಿಯಾಗಿದೆ, ನಿರಂತರ ಸ್ಫೂರ್ತಿಯ ನೆಲವಾಗಿದೆ, ಈ ಎಲ್ಲ ವೈಶಿಷ್ಯ್ಟಗಳ ಹಾಗೂ ಗೋರಖ್ ನಾಥ ಮಂದಿರದ ಈ ನೆಲಕ್ಕೆ ಮತ್ತು ನಿಮ್ಮೆಲ್ಲರಿಗೂ ವಂದಿಸುವ ಮೂಲಕ ನಾನು ನನ್ನ ಭಾಷಣವನ್ನು ಮುಗಿಸುತ್ತೇನೆ.
ಎಲ್ಲರಿಗೂ ಧನ್ಯವಾದಗಳು
My association with Mahant Avaidyanath ji goes back to the time when I was not in active politics. Heard from him the work done here: PM
— PMO India (@PMOIndia) July 22, 2016
Our saints and seers, they are very noble and have always been compassionate towards society and the poor: PM @narendramodi
— PMO India (@PMOIndia) July 22, 2016
I have seen how so many saints and seers have immersed themselves towards furthering cleanliness and building toilets: PM @narendramodi
— PMO India (@PMOIndia) July 22, 2016