ಕೋವಿಡ್-19 ಸಾಂಕ್ರಾಮಿಕದಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ನೆರವಾಗಲು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಕುರಿತು ಇಂದು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕೋವಿಡ್ ಸಾಂಕ್ರಾಮಿಕದಿಂದ ಸಂತ್ರಸ್ತರಾಗಿರುವ ಮಕ್ಕಳಿಗೆ ಪ್ರಧಾನಿಯವರು ಹಲವಾರು ಸೌಲಭ್ಯಗಳನ್ನು ಘೋಷಿಸಿದರು.
ಕ್ರಮಗಳನ್ನು ಘೋಷಿಸಿ ಮಾತನಾಡಿದ ಪ್ರಧಾನಿಯವರು, ಮಕ್ಕಳು ದೇಶದ ಭವಿಷ್ಯ, ಮಕ್ಕಳನ್ನು ಬೆಂಬಲಿಸಲು ಮತ್ತು ರಕ್ಷಿಸಲು ದೇಶವು ಎಲ್ಲವನ್ನು ಮಾಡುತ್ತದೆ, ಇದರಿಂದ ಅವರು ಶಕ್ತಿಶಾಲಿ ನಾಗರಿಕಾಗಿ ಬೆಳೆಯುತ್ತಾರೆ ಮತ್ತು ಉಜ್ವಲ ಭವಿಷ್ಯವನ್ನು ಪಡೆಯುತ್ತಾರೆ ಎಂದರು. ಇಂತಹ ಸಮಯದಲ್ಲಿ ನಮ್ಮ ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ಅವರಲ್ಲಿ ಉಜ್ವಲ ಭವಿಷ್ಯದ ಭರವಸೆ ಮೂಡಿಸುವುದು ಸಮಾಜವಾಗಿ ನಮ್ಮ ಕರ್ತವ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಕೋವಿಡ್ 19 ರ ಕಾರಣದಿಂದಾಗಿ ಇಬ್ಬರೂ ಪೋಷಕರು ಅಥವಾ ಪಾಲಕರು / ದತ್ತು ಪಡೆದ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ‘ಮಕ್ಕಳಿಗಾಗಿ ಪಿಎಂ–ಕೇರ್ಸ್’ ಯೋಜನೆಯಡಿ ಬೆಂಬಲಿಸಲಾಗುತ್ತದೆ. ಕೋವಿಡ್-19 ವಿರುದ್ಧ ಭಾರತದ ಹೋರಾಟವನ್ನು ಬೆಂಬಲಿಸುವ ಪಿಎಂ–ಕೇರ್ಸ್ ನಿಧಿಗೆ ಉದಾರವಾಗಿ ಕೊಡುಗೆಗಳನ್ನು ನೀಡಿರುವುದರಿಂದ ಈ ಕ್ರಮಗಳನ್ನು ಘೋಷಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಮಗುವಿನ ಹೆಸರಿನಲ್ಲಿ ನಿಶ್ಚಿತ ಠೇವಣಿ:
ಪ್ರತಿ ಮಗುವಿಗೆ 18 ವರ್ಷ ದಾಟಿದಾಗ 10 ಲಕ್ಷ ರೂ.ಗಳ ಮೂಲಧನ ಸೃಷ್ಟಿಸಲು ಪಿಎಂ ಕೇರ್ಸ್ ವಿಶೇಷವಾಗಿ ವಿನ್ಯಾಸಗೊಳಿಸಿದ ಯೋಜನೆಯ ಮೂಲಕ ಕೊಡುಗೆ ನೀಡಲಿದೆ. ಈ ಮೂಲಧನವನ್ನು:
ಶಾಲಾ ಶಿಕ್ಷಣ: 10 ವರ್ಷದೊಳಗಿನ ಮಕ್ಕಳಿಗೆ
ಶಾಲಾ ಶಿಕ್ಷಣ: 11-18 ವರ್ಷದ ಮಕ್ಕಳಿಗೆ
ಉನ್ನತ ಶಿಕ್ಷಣಕ್ಕೆ ನೆರವು:
ಆರೋಗ್ಯ ವಿಮೆ
***
Supporting our nation’s future!
— Narendra Modi (@narendramodi) May 29, 2021
Several children lost their parents due to COVID-19. The Government will care for these children, ensure a life of dignity & opportunity for them. PM-CARES for Children will ensure education & other assistance to children. https://t.co/V3LsG3wcus