Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

“ರಿಯೊಗಾಗಿ ಓಟ”ಕ್ಕೆ ಪ್ರಧಾನಮಂತ್ರಿ ಹಸಿರು ನಿಶಾನೆ – ದೇಶಕ್ಕಾಗಿ ಅವರ ಅತ್ಯುತ್ತಮ ಕೊಡುಗೆ ನೀಡಲು ಕ್ರೀಡಾಪಟುಗಳಿಗೆ ಕರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿಂದು “ರಿಯೋಗಾಗಿ ಓಟ”ಕ್ಕೆ ಹಸಿರು ನಿಶಾನೆ ತೋರಿದರು.

ಭಾರತದ ಸಂಭವನೀಯ ಪ್ರತಿ ಕ್ರೀಡಾಪಟುವೂ ರಿಯೋ ಒಲಿಂಪಿಕ್ ನಲ್ಲಿ ದೇಶಕ್ಕಾಗಿ ಆಕೆಯ ಅಥವಾ ಆತನ ಸ್ಥಾನವನ್ನು ಗಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತಾರೆ ಎಂದು ಹೇಳಿದರು. ಭಾರತೀಯ ಅಥ್ಲೀಟ್ ಗಳು ಇಡೀ ವಿಶ್ವದಾದ್ಯಂತ ಇರುವ ಜನರ ಹೃದಯ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದ್ದಾರೆ ಮತ್ತು ವಿಶ್ವಕ್ಕೆ ಭಾರತ ಏನು ಎಂಬುದನ್ನು ತೋರಿಸುತ್ತಾರೆ ಎಂದು ಹೇಳಿದ್ದಾರೆ.

2020ರ ಟೋಕಿಯೋ ಒಲಿಂಪಿಕ್ಸ್ ಗೆ ಇಂದಿನಿಂದಲೇ ಸಜ್ಜಾಗುವಂತೆ ದೇಶಕ್ಕೆ ಕರೆ ನೀಡಿದ ಅವರು, ಪ್ರತಿಯೊಂದು ಜಿಲ್ಲೆಯೂ ತನ್ನ ಜಿಲ್ಲೆಯಿಂದ ಕನಿಷ್ಠ ಒಬ್ಬರು ಮುಂದಿನ ಬಾರಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವಂತೆ ಖಾತ್ರಿ ಪಡಿಸಬೇಕು ಎಂದು ಹೇಳಿದರು.

ಈ ಬಾರಿ ಸಂಭವನೀಯ ಅಥ್ಲೀಟ್ ಗಳನ್ನು ಮುಂಚಿತವಾಗಿಯೇ ಕಳುಹಿಸಲಾಗುತ್ತಿದೆ. ಹೀಗಾಗಿ ಅವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಅನುವಾಗುತ್ತದೆ ಎಂದರು.

ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಎಲ್ಲ ಅಥ್ಲೀಟ್ ಗಳಿಗೂ ಅವರು ಶುಭ ಕೋರಿದರು.. “ಕ್ರೀಡೆ ಜೀವನದ ಅಗತ್ಯವಾಗಿದೆ. ಪ್ರತಿಯೊಬ್ಬರೂ ಆಡಬೇಕು, ಮಿಂಚಬೇಕು.,” ಎಂದು ಪ್ರಧಾನಿ ಹೇಳಿದ್ದಾರೆ.

ಬಳಿಕ ಪ್ರಧಾನಮಂತ್ರಿಯವರು ಒಲಿಂಪಿಕ್ ಕರಪತ್ರ ಬಿಡುಗಡೆ ಮಾಡಿದರು ಮತ್ತು ರಿಯೋಗಾಗಿ ಓಟಕ್ಕೆ ಹಸಿರು ನಿಶಾನೆ ತೋರಿದರು.

AKT/SH