Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಎನ್.ಎ.ಟಿ.ಆರ್.ಐ.ಪಿ. ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಮೋಟಾರು ವಾನಹ ಪರೀಕ್ಷೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಮೂಲಸೌಕರ್ಯ ಯೋಜನೆ (ಎನ್.ಎ.ಟಿ.ಆರ್.ಐ.ಪಿ.)ಗೆ 3727.30 ಕೋಟಿ ರೂಪಾಯಿಗಳ ಪರಿಷ್ಕತ ಅಂದಾಜಿಗೆ ತನ್ನ ಅನುಮೋದನೆ ನೀಡಿದೆ. ಭಾರತದಲ್ಲಿ ಜಾಗತಿಕ ಪರೀಕ್ಷಾ ಕೇಂದ್ರ ಸ್ಥಾಪಿಸುವ ಭಾರತ ಸರ್ಕಾರದ ಮಹತ್ವದ ಉಪಕ್ರಮದಲ್ಲಿ

ಎನ್.ಎ.ಟಿ.ಆರ್.ಐ.ಪಿ. ಅಡಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವುದನ್ನು ಆ ಅನುಮೋದನೆಯು ಖಾತ್ರಿಪಡಿಸುತ್ತದೆ. ಪೂರ್ಣ ಪ್ರಮಾಣದ ಪರೀಕ್ಷಾ ಮತ್ತು ದೃಢೀಕರಣ ಕೇಂದ್ರಗಳು ವಾಹನ ಕೈಗಾರಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸುತ್ತವೆ. ಈ ಜಾಗಗಳು ಉತ್ತರದ ಐಸಿಎಟಿ –ಮನೇಸರ್ ಆಟೋ ಕ್ಲಸ್ಟರ್, ಹರಿಯಾಣ ಮತ್ತು ದಕ್ಷಿಣ ಆಟೋ ಕ್ಲಸ್ಟರ್ ನ ಜಿಎಆರ್ಸಿ – ಒರಗಂಡಮ್, ಚೆನ್ನೈ, ತಮಿಳುನಾಡು ಮತ್ತು ಪುಣೆಯ ಎಆರ್.ಎ.ಐನಲ್ಲಿರುವ ಹಾಲಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದು ಮತ್ತು ಪಶ್ಚಿಮ ಆಟೋ ಕ್ಲಸ್ಟರ್ ನ ಮಹಾರಾಷ್ಟ್ರದ ಅಹ್ಮದ್ ನಗರದ ವಿಆರ್ ಡಿಇಯಲ್ಲಿವೆ.

ಎನ್.ಎ.ಟಿ.ಆರ್.ಐ.ಪಿ. ಯೋಜನೆಗೆ ಅಗತ್ಯವಿರುವುದು:

· ಭಾರತವು ವಾಹನ ವಿಶೇಷಣಗಳ ಸುಸಂಗತತೆ ಕುರಿತ ವಿಶ್ವಸಂಸ್ಥೆಯ ನಿಯಂತ್ರಣಕ್ಕೆ 1998ರ ಡಬ್ಲ್ಯುಪಿ -29 ಅಡಿ ಅಂಕಿತ ಹಾಕಿರುವ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆ, ಪರಿಸರ ಸಂರಕ್ಷಣೆ ಇತ್ಯಾದಿಗಳ ಖಾತ್ರಿಗಾಗಿ ಭಾರತದಲ್ಲಿ ಮೋಟಾರು ವಾಹನಗಳ ಕಾರ್ಯಾಚರಣೆ ಮತ್ತು ಪರೀಕ್ಷೆ, ವಿನ್ಯಾಸ, ಉತ್ಪಾದನೆ, ಮತ್ತು ಜಾಗತಿಕವಾದ ಉತ್ತಮ ಪದ್ಧತಿಗಳ ಅಳವಡಿಕೆ ಮಾಡಿಕೊಳ್ಳಲು.
· 2016-26 ಆಟೋಮೇಟಿವ್ ಮಿಷನ್ ಯೋಜನೆಗೆ ಬೆಂಬಲ ನೀಡಲು, ಮುಂದಿನ 10 ವರ್ಷಗಳ ಅವಧಿಯಲ್ಲಿ ಒಟ್ಟಾರೆ ರಫ್ತು ಪ್ರಮಾಣವನ್ನು ಶೇಕಡ 35-40ರಷ್ಟು ಏರಿಕೆ ಮಾಡುವ ಗುರಿಯೊಂದಿಗೆ ಭಾರತೀಯ ಆಟೋಮೇಟಿವ್ ಮತ್ತು ಸಮರ್ಥ ಉತ್ಪಾದಕರನ್ನು ಜಾಗತಿಕವಾಗಿ ಸಮರ್ಥಗೊಳಿಸಲು.

· ಭಾರತೀಯ ವಾಹನಗಳನ್ನು ಸುರಕ್ಷತೆಯಲ್ಲಿ ಜಾಗತಿಕ ಗುಣಮಟ್ಟಕ್ಕೆ ಸಮನಾಗಿಸಲು (ಯು.ಎನ್. ಬ್ರಸಿಲಿಯಾ ನಿರ್ಣಯದ ಅನುಸಾರವಾಗಿ), ಅತಿ ಹೆಚ್ಚಿನ ಸಂಖ್ಯೆಯ ಸಾವು ಮತ್ತು ರಸ್ತೆ ಅಪಘಾತ ಕಡಿಮೆ ಮಾಡಲು (2015ರಲ್ಲಿ ಅನುಕ್ರಮವಾಗಿ 1.46 ಲಕ್ಷದಿಂದ 5.01 ಲಕ್ಷ).
· ಒಇಎಮ್ ಗಳು ಮತ್ತು ಬಿಡಿಭಾಗ ಮಾರಾಟದ ಬಳಿಕ ಎರಡೂ ವಿಚಾರಗಳಲ್ಲಿ ಎಂ.ಎಸ್.ಎಂ.ಇ.ಗಳಿಗೆ ವಾಹನ ಬಿಡಿಭಾಗಗಳ ಅಭಿವೃದ್ಧಿ ಮತ್ತು ಪ್ರಮಾಣೀಕರಣಕ್ಕೆ ನೆರವಾಗಲು.

ಅಗತ್ಯವಾದ ಅಂಶಗಳಲ್ಲಿ ಪವರ್ ಟ್ರೈನ್ ಗಾಗಿ ವಿಶ್ವದರ್ಜೆಯ ಪ್ರಯೋಗಾಲಯಗಳು, ಪ್ಯಾಸಿವ್ ಸುರಕ್ಷತೆ ಪರೀಕ್ಷೆಗಳು 1 (ಅಪ್ಪಳಿಸುವ ಪರೀಕ್ಷೆಗಳೂ ಸೇರಿದಂತೆ), ತಂತ್ರಜ್ಞಾನ ಸಾಬೀತುಪಡಿಸುವ ಹಳಿಗಳು (ಇಂಡೋರ್ ಹೈ ಸ್ಪೀಡ್ ಟ್ರ್ಯಾಕ್ ಸೇರಿದಂತೆ),, ಆಯಾಸ ಮತ್ತು ಪ್ರಮಾಣೀಕರಣ, ವಿದ್ಯುತ್ಕಾಂತೀಯ ಹೊಂದಾಣಿಕೆ ಪರೀಕ್ಷೆಗಳು, ಶಬ್ದ ಕಂಪನ ಮತ್ತು ಒರಟುತನ ಪರೀಕ್ಷೆಗಳು ಸಿಎಡಿ ಮತ್ತು ಸಿಎಮ್ಇ ಮತ್ತು ಇನ್ಫೋಟ್ರಾನಿಕ್ಸ್ ಸೇರಿವೆ. ಹಲವು ಪ್ರಯೋಗಾಲಯಗಳು ಈಗಾಗಲೇ ಕಾರ್ಯಪ್ರವೃತ್ತವಾಗಿವೆ. ಈ ಮೂಲಸೌಕರ್ಯಗಳು ಮೇಕ್ ಇನ್ ಇಂಡಿಯಾ ಉದ್ದೇಶ ಜಾರಿಗೆ ಮತ್ತು ಮೋಟಾರು ವಾಹನಗಳಿಗೆ ಸಂಬಂಧಿಸಿದ ಉತ್ಪನ್ನಗಳು ವಿಶ್ವದರ್ಜೆಯ ಖಾತ್ರಿ ಪಡಿಸಲು ವಾಹನ ಮತ್ತು ಬಿಡಿಭಾಗ ಉತ್ಪಾದಕರಿಗೆ ದೇಶದಲ್ಲಿ ಅಭಿವೃದ್ಧಿಪಡಿಸಿ ಮತ್ತು ಪ್ರಮಾಣ ಪತ್ರ ಪಡೆಯಲು ಅವಕಾಶ ನೀಡುತ್ತದೆ.

ಎನ್.ಎ.ಟಿ.ಆರ್.ಐ.ಪಿ. ಕೇಂದ್ರಗಳನ್ನು ಸ್ಥಳೀಯವಾಗಿ ಮತ್ತು ಜಾಗತಿಕ ಸ್ಪರ್ಧಾತ್ಮಕವಾಗಿ ಮಾಡಲು ಮತ್ತು ಅವುಗಳನ್ನು ಸ್ಥಾಪಿತ ಆಟೋ ಹಬ್ ಗಳೊಂದಿಗೆ ಸಂಪೂರ್ಣವಾಗಿ ಸೇರ್ಪಡೆ ಮಾಡಲು ಆ ಮೂಲಕ ಭಾರತೀಯ ಕೈಗಾರಿಕೆಯನ್ನು ವಿಶ್ವದರ್ಜೆ ಮತ್ತು ರಫ್ತು ಸ್ಪರ್ಧಾತ್ಮಕನಾಗಿ ಮಾಡುವುದರೊಂದಿಗೆ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೂ ಒತ್ತು ನೀಡುವುದಾಗಿದೆ. ಈ ಕೆಳಗೆ ವಾಹನ ಸಂಬಂಧಿತ ಗ್ರಾಹಕರ ನೆಲೆ ಮತ್ತು ಒದಗಿಸುವ ಸೇವೆಗಳ ಸಾರಾಂಶ ನೀಡಲಾಗಿದೆ,

(ಅ) ಗ್ರಾಹಕರಿಗೆ ಸೇವೆ ಒದಗಿಸುವ ವರ್ಗಗಳು:

ನಾಲ್ಕು ಚಕ್ರದ ವಾಹನಗಳ ಉತ್ಪಾದಕರು/ವಾಣಿಜ್ಯ ವಾಹನಗಳ ಉತ್ಪಾದಕರು/ಮೂರು ಚಕ್ರದ ವಾಹನಗಳ ಉತ್ಪಾದಕರು/ದ್ವಿಚಕ್ರ ವಾಹನಗಳ ಉತ್ಪಾದಕರು/ಕಟ್ಟಡ ನಿರ್ಮಾಣ ಉಪಕರಣಗಳ ವಾಹನ ಉತ್ಪಾದಕರು/ಕೃಷಿ ಉಪಕರಣ (ಟ್ಯ್ರಾಕ್ಟರ್) ಉತ್ಪಾದಕರು/ಇ-ರಿಕ್ಷಾ ಉತ್ಪಾದಕರು/ಬಸ್ ಕವಚ ಉತ್ಪಾದಕರು/ಸಿ.ಎನ್.ಜಿ.-ಎಲ್.ಪಿ.ಜಿ. ಕಿಟ್ ರೆಟ್ರೋಫಿಲ್ಟರ್/ವಾಹನ ಮತ್ತು ವಾಹನೇತರ ಎಂಜಿನ್ ಉತ್ಪಾದಕರು/ಡಿಜಿ ಸೆಟ್ ಉತ್ಪಾದಕರು/ವಾಹನ ಬಿಡಿಭಾಗ ತಯಾರಕರು.

(b) ಒದಗಿಸುವ ಸೇವೆಗಳು:

i. ಸಿ.ಎಂ.ವಿ.ಆರ್. 1989 ರೀತ್ಯ ಎಚ್.ಇ.ವಿ. /ಇನಿ/ಡೀಸೆಲ್/ಗ್ಯಾಸೋಲೈನ್/ಸಿ.ಎನ್.ಜಿ./ಎಲ್.ಪಿ.ಜಿ. ಇತ್ಯಾದಿ ಸೇರಿದಂತೆ ವಿವಿಧ ವರ್ಗಗಳ ವಾಹನಗಳ ಪ್ರಮಾಣೀಕರಣ.

ii. ಸಿಎಂವಿಆರ್ -1989 ಮತ್ತು ಸಂಬಂಧಿತ ಐ.ಎಸ್. /ಎ.ಐ.ಎಸ್. ರೀತ್ಯ ವಾಹನಗಳ ಸೂಚಿತ ಬಿಡಿಭಾಗಗಳ ಪ್ರಮಾಣೀಕರಣ.

iii. ಇತರ ಅಧಿಕೃತ ಸಂಸ್ಥೆಗಳ ಸಹಯೋಗದಲ್ಲಿ ಭಾರತೀಯ ಉತ್ಪಾದಕರಿಗೆ ಯೂರೋಪ್/ದಕ್ಷಿಣ ಆಫ್ರಿಕಾ/ಮಲೇಷಿಯಾ/ಇಂಡೋನೇಷಿಯಾ/ಬ್ರೆಜಿಲ್ ಇತ್ಯಾದಿ ರಾಷ್ಟ್ರಗಳಿಗೆ ವಾಹನ ಮತ್ತು ಅದರ ಬಿಡಿಭಾಗಗಳಿಗೆ ರಫ್ತು ಪ್ರಮಾಣೀಕರಣ.

iv. ವಾಹನ ಕೈಗಾರಿಕೆಗಳು, ಓಇಎಂಗಳು ಮತ್ತು ಬಿಡಿಭಾಗಗಳಿಗೆ ಎರಡಕ್ಕೂ, ಅವುಗಳ ಉತ್ಪನ್ನ ಅಭಿವೃದ್ಧಿ ಅಗತ್ಯಗಳಿಗೆ ಅಭಿವೃದ್ಧಿಯ ಪರೀಕ್ಷೆ,

v. ವಾಹನೋದ್ಯಮಗಳಿಗೆ ನಿರ್ದಿಷ್ಟ ಉತ್ಪನ್ನ ಅಭಿವೃದ್ಧಿ ಯೋಜನೆಗಳ ಜಾರಿ.

vi. ಅಭಿವೃದ್ಧಿಯಾದ ವಾಹನಗಳು/ ಪ್ಲೀಟ್ ಪರೀಕ್ಷೆ, ಕಾರ್ಯಕ್ಷಮತೆಯ ಮೌಲ್ಯಮಾಪನ ಮತ್ತು ಸಹಿಷ್ಣುತೆ ಪರೀಕ್ಷೆ.

vii. ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು.

viii. ಹೊಸ ನಿಯಂತ್ರಣ ಚೌಕಟ್ಟಿಗಾಗಿ ದತ್ತಾಂಶ ಸಂಗ್ರಹಣೆ.

***

AKT/VBA/SH